ಕಾರ್ಣಿಕ ಶಕ್ತಿ ಹೊಂದಿರುವ ದೇವಸ್ಥಾನಗಳಿವು-ಇಲ್ಲಿ ಪುರುಷರಿಗೆ ಪ್ರವೇಶವಿಲ್ಲ!

Posted By: Arshad
Subscribe to Boldsky

ಧಾರ್ಮಿಕ ಸ್ಥಳಗಳೆಂದರೆ ದೇವರ ಆವಾಸಸ್ಥಾನ, ಭಕ್ತಿ ಹಾಗೂ ಧನಾತ್ಮಕ ಶಕ್ತಿ ಹರಿಯುವ ಸ್ಥಳ. ಈ ಆಲಯಗಳ ಒಳಪ್ರವೇಶ ಪಡೆದು ಕೇವಲ ಕೆಲವು ಕ್ಷಣಗಳ ಕಾಲ ದೇವರ ದರ್ಶನ ಪಡೆಯಲು ಗಂಟೆಗಟ್ಟಲೇ ತಾಳ್ಮೆಯಿಂದ ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ಈ ದರ್ಶನದಿಂದ ಜೀವನವೇ ಪಾವನವಾದ ತೃಪ್ತಿ ದೊರಕುತ್ತದೆ.

ಈ ದೇವಸ್ಥಾನಗಳ ಹೆಸರು ಕೇಳಿದರೆಯೇ ಮನದಲ್ಲಿ ಭಯ ಭಕ್ತಿ ಮೂಡುತ್ತದೆ

ಆದರೆ ಕೇವಲ ಪುರುಷ ಅಥವಾ ಮಹಿಳೆಯಾಗಿದ್ದ ಕಾರಣಕ್ಕೆ ಮಂದಿರವೊಂದಕ್ಕೆ ನಿಮಗೆ ಪ್ರವೇಶಾವಕಾಶ ನಿರಾಕರಿಸಿದರೆ? ಈ ವಿಶಾಲ ಭಾರತದಲ್ಲಿ ಕೆಲವು ಮಂದಿರಗಳಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ, ಹಾಗೂ ಕೆಲವು ಮಂದಿರಗಳಲ್ಲಿ ಪುರುಷರಿಗೆ ಪ್ರವೇಶ ನಿಷಿದ್ಧ. ಬನ್ನಿ, ಪುರುಷರಿಗೆ ಕೆಲವು ವಿಶೇಷ ಸಂದರ್ಭಗಳಲ್ಲಿ ಪ್ರವೇಶ ಅವಕಾಶವಿಲ್ಲದ ಇಂತಹ ಆರು ಮಂದಿರಗಳ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲಾಗಿದೆ...

ಅಟ್ಟುಕಾಲ್ ಮಂದಿರ

ಅಟ್ಟುಕಾಲ್ ಮಂದಿರ

ಕೇರಳದಲ್ಲಿರುವ ಅಟ್ಟುಕಾಲ್ ಭಗವತಿ ಮಂದಿರಕ್ಕೆ ಪೊಂಗಲ್ ಹಬ್ಬದ ಆಚರಣೆಯಲ್ಲಿ ಭಾಗವಹಿಸಲು ಲಕ್ಷಾಂತರ ಮಹಿಳೆಯರು ಆಗಮಿಸುತ್ತಾರೆ. ಇದು ವಿಶ್ವದ್ದಲ್ಲಿಯೇ ಅತ್ಯಧಿಕ ಸಂಖ್ಯೆಯಲ್ಲಿ ಕೇವಲ ಮಹಿಳೆಯರು ಮಾತ್ರವೇ ಧಾರ್ಮಿಕ ಕಾರ್ಯಕ್ಕೆ ಆಗಮಿಸುವ ಮಂದಿರವಾಗಿದೆ. ಈ ವಿವರ ಗಿನ್ನಿಸ್ ದಾಖಲೆಯನ್ನೂ ಪಡೆದಿದೆ. ಈ ಹಬ್ಬ ಒಟ್ಟು ಹತ್ತು ದಿನಗಳ ಕಾಲ ನಡೆಯುತ್ತದೆ. ಈ ಅವಧಿಯಲ್ಲಿ ಪುರುಷರಿಗೆ ಈ ಮಂದಿರದಲ್ಲಿ ಪ್ರವೇಶ ನಿಷಿದ್ಧವಾಗಿದೆ.

 ಚಕ್ಕುಲತ್ತುಕಾವು ಮಂದಿರ

ಚಕ್ಕುಲತ್ತುಕಾವು ಮಂದಿರ

ಕೇರಳದಲ್ಲೇ ಇರುವ, ಭಗವತಿದೇವಿಗೇ ಮುಡಿಪಾಗಿರುವ ಇನ್ನೊಂದು ಮಂದಿರವೂ ಇದೆ. ಪ್ರತಿ ವರ್ಷದ ಡಿಸೆಂಬರ್ ತಿಂಗಳ ಮೊದಲ ಶುಕ್ರವಾರವನ್ನು 'ಧನು' ಎಂದು ಕರೆಯಲಾಗುತ್ತದೆ. ಈ ಪವಿತ್ರ ದಿನದಂದು ವಾರ್ಷಿಕ 'ನಾರಿ ಪೂಜೆ'ಯೂ ನಡೆಯುತ್ತದೆ. ಈ ಪೂಜೆಯಲ್ಲಿ ಭಾಗವಹಿಸಲು ಇಚ್ಛಿಸುವ ಮಹಿಳೆಯರು ಈ ದಿನಕ್ಕೂ ಹತ್ತುದಿನಗಳಿಂದಲೇ ಉಪವಾಸ ಆಚರಿಸಿಕೊಂಡು ಬಂದು ಹತ್ತನೆಯ ದಿನ ಮಂದಿರಕ್ಕೆ ಆಗಮಿಸುತ್ತಾರೆ. ಈ ಪೂಜೆಯಲ್ಲಿ ದೇವಸ್ಥಾನದ ಪೂಜಾರಿಗಳು ಈ

ಮಹಿಳೆಯರ ಕಾಲುಗಳನ್ನು ತೊಳೆದು ಪೂಜೆಯನ್ನು ಸಂಪನ್ನಗೊಳಿಸುತ್ತಾರೆ. ಈ ಅವಧಿಯಲ್ಲಿಯೂ ಈ ಮಂದಿರಕ್ಕೆ ಪೂಜಾರಿಗಳ ಹೊರತಾಗಿ ಇತರ ಪುರುಷರಿಗೆ ಪ್ರವೇಶ ನಿಷಿದ್ಧವಾಗಿದೆ.

ಕೆಟ್ಟ ಚಟಗಳನ್ನು ಓಡಿಸಿ, ಮಹಿಳೆಯರನ್ನು ಆರಾಧಿಸುವ ದೇಗುಲವಿದು!

ಸಂತೋಷಿ ಮಾ

ಸಂತೋಷಿ ಮಾ

ಈ ದೇವಸ್ಥಾನಕ್ಕೆ ಭೇಟಿ ನೀಡುವ ವಿವಾಹಿತ ಹಾಗೂ ಅವಿವಾಹಿತ ಮಹಿಳೆಯರು 'ಸಂತೋಷಿ ಮಾ ವ್ರತ'ವನ್ನು ತಪ್ಪದೇ ಕೈಗೊಳ್ಳುತ್ತಾರೆ. ಈ ವ್ರತದ ಅವಧಿಯಲ್ಲಿ ಹುಳಿಯಾದ ಹಣ್ಣುಗಳನ್ನು ಉಪ್ಪಿನಕಾಯಿಯನ್ನು ತಿನ್ನುವಂತಿಲ್ಲ. ಈ ವ್ರತವನ್ನು ಆಚರಿಸುವ ಮಹಿಳೆಯರ ಪತಿಯರೂ ಈ ದೇವಸ್ಥಾನವನ್ನು ಪ್ರವೇಶಿಸಬಹುದಾದರೂ ವ್ರತದ ಆಚರಣೆಯಲ್ಲಿ ಇವರಿಗೆ ಏನೂ ಪಾತ್ರವಿರುವುದಿಲ್ಲ.

ಬ್ರಹ್ಮದೇವರ ಮಂದಿರ

ಬ್ರಹ್ಮದೇವರ ಮಂದಿರ

ರಾಜಸ್ಥಾನದ ಪುಷ್ಕರ್ ನಗರದಲ್ಲಿರುವ ಈ ಮಂದಿರ ಬ್ರಹ್ಮದೇವರಿಗೆ ಮುಡಿಪಾದ ಪ್ರಮುಖ ದೇವಾಲಯವಾಗಿದೆ. ಈ ಮಂದಿರದಲ್ಲಿ ಕೇವಲ ಅವಿವಾಹಿತ ಪುರುಷರಿಗೆ ಮಾತ್ರವೇ ಪ್ರವೇಶವಿದ್ದು ವಿವಾಹಿತ ಪುರುಷರಿಗೆ ಪ್ರವೇಶ ನಿಷಿದ್ಧವಾಗಿದೆ. ಹಿಂದೂ ಚಂದ್ರಮಾನ ಕ್ಯಾಲೆಂಡರ್ ನ ಕಾರ್ತಿಕ ಪೂರ್ಣಿಮೆಯಂದು ಬ್ರಹ್ಮದೇವರಿಗೆ ವಿಶೇಷ ಪೂಜೆಯನ್ನು ಇಲ್ಲಿ ಸಲ್ಲಿಸಲಾಗುತ್ತದೆ.

ಭಗತಿಮಾ ದೇವಾಲಯ

ಭಗತಿಮಾ ದೇವಾಲಯ

ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ಈ ದೇವಾಲಯ ಪಾರ್ವತಿದೇವಿಗೆ ಮುಡಿಪಾಗಿದೆ. ಶಿವನನ್ನು ತನ್ನ ಪತಿಯನ್ನಾಗಿ ಪಡೆಯಲು ಪಾರ್ವತಿ ಈ ಸ್ಥಳದಲ್ಲಿ ಕಠಿಣ ತಪಸ್ಸು ಮಾಡಿದ್ದಳು ಎಂದು ಹೇಳಲಾಗುತ್ತದೆ. ಆದ್ದರಿಂದ ಈ ದೇವಾಲಯದಲ್ಲಿ ಕೇವಲ ಮಹಿಳೆಯರಿಗೆ ಮಾತ್ರವೇ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.

ಮಾತಾ ದೇವಾಲಯ

ಮಾತಾ ದೇವಾಲಯ

ಬಿಹಾರದ ಮುಜಪ್ಪರ್ ಪುರದಲ್ಲಿರುವ ಈ ದೇವಾಲಯದಲ್ಲಿ ವಿಶೇಷ ಸಂದರ್ಭಗಳಲ್ಲಿ ಕೇವಲ ಮಹಿಳೆಯರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಅಷ್ಟೇ ಅಲ್ಲ, ಈ ಅವಧಿಯಲ್ಲಿ ಮಂದಿರದ ಪೂಜಾರಿಗಳೂ ಪ್ರವೇಶಿಸುವಂತಿಲ್ಲ.

All Image Source

For Quick Alerts
ALLOW NOTIFICATIONS
For Daily Alerts

    English summary

    Indian Temples Where Men Are NOT Allowed

    Temple is a place where we all find peace and God, but what happens when you are not allowed to get inside a temple based on your gender? There are certain temples where women are not allowed to step inside the temple premises and then there are those temples too where men are NOT allowed to enter. Check out these unique 6 temples and their details, where men are strictly not allowed to enter.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more