Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ದೀಪಾವಳಿ ವಿಶೇಷ: ಈ ದೀಪಾವಳಿಗೆ ಅದೃಷ್ಟವನ್ನೇ ಖರೀದಿಸಿ!
ದೀಪಾವಳಿ ಹಬ್ಬ ಬಂತೆಂದರೆ ಸಾಕು. ಪ್ರತಿಯೊಬ್ಬರು ಏನಾದರೂ ಖರೀದಿ ಮಾಡಲು ಬಯಸುವರು. ಮನೆಗೆ ಬೇಕಾದ ಸಾಮಗ್ರಿ ಅಥವಾ ತಮ್ಮ ಸ್ವಂತ ಉಪಯೋಗಕ್ಕೆ ಬಳಸುವಂತಹ ಸಾಮಗ್ರಿಗಳನ್ನು ಹೆಚ್ಚಿನವರು ದೀಪಾವಳಿ ಹಬ್ಬದ ವೇಳೆ ಖರೀದಿಸುವರು.
ಆದರೆ ನಿಜವಾಗಿಯೂ ಇಂತಹ ಸಾಮಗ್ರಿಗಳು ನಿಮ್ಮ ಮನೆಗೆ ಸುಖ ಹಾಗೂ ಸಮೃದ್ಧಿ, ಅದೃಷ್ಟ ತರುತ್ತದೆಯಾ ಎಂದು ನಿಮಗೆ ತಿಳಿದಿದೆಯಾ? ಇಲ್ಲ ತಾನೇ? ಹಾಗಾದರೆ ಬೋಲ್ಡ್ ಸ್ಕೈ ಈ ಲೇಖನದಲ್ಲಿ ಈ ವರ್ಷದ ದೀಪಾವಳಿಗೆ ನೀವು ಖರೀದಿಸುವ ಸಾಮಗ್ರಿಯು ನಿಮ್ಮ ಮನೆಗೆ ಅದೃಷ್ಟ ಹಾಗೂ ಸಮೃದ್ಧಿ ತಂದುಕೊಡಲಿದೆ ಎಂದು ನಿಮಗೆ ತಿಳಿಸುವುದು. ಇದು ಹೇಗೆಂದು ನೀವು ಓದಿಕೊಳ್ಳಿ.

ನಿಮ್ಮ ವೃತ್ತಿ ಸಂಬಂಧಿಸಿದ ಏನಾದರೂ ಸಾಮಗ್ರಿ
ಈ ದೀಪಾವಳಿ ಸಂದರ್ಭದಲ್ಲಿ ನಿಮ್ಮ ವೃತ್ತಿಗೆ ಅನುಗುಣವಾಗಿ ಏನಾದರೂ ಖರೀದಿ ಮಾಡಿ. ಲೇಖಕರು ಪೆನ್ನು, ಚಿತ್ರಕಲಾವಿದರು ಬ್ರಷ್ ಮತ್ತು ಹೀಗೆ. ಈ ಹೊಸ ವಸ್ತುವನ್ನು ಪೂಜೆಯ ಸಂದರ್ಭದಲ್ಲಿ ಅಲ್ಲಿಟ್ಟುಬಿಡಿ.

ಪೊರಕೆ!
ಇದು ತುಂಬಾ ವಿಚಿತ್ರವಾಗಿ ಕಾಣಿಸಬಹುದು. ಆದರೆ ಪೊರಕೆ ಖರೀದಿಸುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ. ಇದು ಮನೆಯಲ್ಲಿರುವ ಬಡತನ ಮತ್ತು ದುಃಖವನ್ನು ಗುಡಿಸಿಹಾಕುವುದು ಎಂದು ನಂಬಲಾಗಿದೆ. ಇದು ಸಮೃದ್ಧಿ ಉಂಟು ಮಾಡಲಿದೆ.

ಎಲೆಕ್ಟ್ರಾನಿಕ್ಸ್ ಖರೀದಿಸಿ
ಎಲೆಕ್ಟ್ರಾನಿಕ್ಸ್ ನಲ್ಲಿ ಹೂಡಿಕೆ ಮಾಡಲು ಬಯಸಿದ್ದರೆ ಇದು ಸರಿಯಾದ ಸಮಯವಾಗಿದೆ. ಹೆಚ್ಚಿನ ಕಡೆಗಳಲ್ಲಿ ಎಲೆಕ್ಟ್ರಾನಿಕ್ಸ್ ಸೇಲ್ ಇದೆ. ನೀವು ಯಾವುದಾದರೂ ಎಲೆಕ್ಟ್ರಾನಿಕ್ಸ್ ಸಾಮಗ್ರಿ ಖರೀದಿಸಲು ಬಯಸಿದ್ದರೆ ಇದು ಸರಿಯಾದ ಸಮಯವಾಗಿದೆ. ಧನಾತ್ಮಕ ಶಕ್ತಿ ಪಡೆಯಲು ಮನೆಯ ಈಶಾನ್ಯ ಭಾಗದಲ್ಲಿ ಇದನ್ನು ಇಡಬೇಕು.

ಲೆಕ್ಕದ ಪುಸ್ತಕ
ಯಾವುದೇ ರೀತಿಯ ವ್ಯಾಪಾರ ಮಾಡುವವರಿಗೆ ಇದು ಒಳ್ಳೆಯ ರೀತಿ ಕೆಲಸ ಮಾಡುವುದು. ಇಂತವರು ಒಂದು ಲೆಕ್ಕ ಪುಸ್ತಕವನ್ನು ಖರೀದಿಸಿಕೊಂಡು ಲೆಕ್ಕವನ್ನು ನಿರ್ವಹಿಸಬೇಕು. ಒಳ್ಳೆಯ ಫಲಿತಾಂಶ ಪಡೆಯಲು ಇದನ್ನು ಮನೆಯ ಪಶ್ಚಿಮ ದಿಕ್ಕಿನಲ್ಲಿ ಇಡಬೇಕು.

ಬೆಳ್ಳಿ ಪಾತ್ರೆಗಳು
ಪ್ರತೀ ದೀಪಾವಳಿ ಸಂದರ್ಭದಲ್ಲಿ ಜನರು ಪಾತ್ರೆ ಖರೀದಿ ಮಾಡುವುದನ್ನು ನಾವು ನೋಡುತ್ತೇವೆ. ಈ ವರ್ಷ ದೀಪಾವಳಿಗೆ ಬೆಳ್ಳಿ ಅಥವಾ ಹಿತ್ತಾಳೆ ಪಾತ್ರೆ ಖರೀದಿ ಮಾಡಿದರೆ ಅದು ಅದೃಷ್ಟ ತರುವುದು. ಧನಾತ್ಮಕ ಶಕ್ತಿ ಬರಲು ಮನೆಯ ಪೂರ್ವ ಭಾಗದಲ್ಲಿ ಇದನ್ನು ಇಡಬೇಕು.

ಬಂಗಾರದ ನಾಣ್ಯ ಅಥವಾ ಸ್ವಸ್ತಿಕ್
ಲಕ್ಷ್ಮೀ ದೇವಿಯು ಇರುವಂತಹ ಬಂಗಾರದ ಪದಕ ಖರೀದಿಸಬೇಕೆಂದು ಬಲವಾಗಿ ನಂಬಲಾಗಿದೆ. ಬಂಗಾರದ ಪದಕ ಖರೀದಿಸುವ ಶಕ್ತಿ ನಿಮ್ಮಲ್ಲಿ ಇಲ್ಲವೆಂದಾದರೆ ಲಕ್ಷ್ಮೀ ದೇವಿಯ ಚಿತ್ರ ಖರೀದಿಸಿ ಅದನ್ನು ಹಣದ ಲಾಕರ್ ಅಥವಾ ಪರ್ಸ್ ನಲ್ಲಿ ಇಟ್ಟುಬಿಡಿ. ಇದು ಒಳ್ಳೆಯ ಅದೃಷ್ಟ ತರುವುದು.

ಶಂಖ
ಮನೆಯಲ್ಲಿ ಶಂಖ ಇಡುವುದುರಿಂದ ಅದೃಷ್ಟವು ಹೆಚ್ಚಾಗುವುದು ಎಂದು ನಂಬಲಾಗಿದೆ. ಒಳ್ಳೆಯ ರೀತಿಯಿಂದ ಇದಕ್ಕೆ ಪೂಜೆ ಮಾಡಿದರೆ ಅದರಿಂದ ಮನೆ ಮತ್ತು ಕೆಲಸದ ಸ್ಥಳದಲ್ಲಿ ಧನಾತ್ಮಕ ಶಕ್ತಿ ಬರುವುದು. ಮನೆಯಲ್ಲಿ ಶಂಖ ಇಟ್ಟು ಪೂಜಿಸಿದರೆ ಅದರಿಂದ ಹಣದ ಸಮಸ್ಯೆ ಯಾವತ್ತು ಬರುವುದಿಲ್ಲ ಮತ್ತು ಈ ದೀಪಾವಳಿಗೆ ಇದನ್ನು ಖರೀದಿಸುವುದು ತುಂಬಾ ಅದೃಷ್ಟವೆನ್ನಲಾಗಿದೆ.

ದಕ್ಷಿಣವರ್ತಿ ಶಂಖ
ಇದು ತುಂಬಾ ಅಪರೂಪ ಹಾಗೂ ಪವಿತ್ರ ಶಂಖವೆಂದು ನಂಬಲಾಗಿದೆ. ಇದು ಯಾವಾಗಲೂ ಲಕ್ಷ್ಮೀ ದೇವಿಯೊಂದಿಗೆ ಇರುತ್ತದೆ. ವಿಷ್ಣು ದೇವರು ಮತ್ತು ಲಕ್ಷ್ಮೀ ಜತೆಯಾಗಿರುವ ಹೆಚ್ಚಿನ ಚಿತ್ರಗಳಲ್ಲಿ ಅವರು ಶಂಖ ಹಿಡಿದುಕೊಂಡಿರುವುದನ್ನು ನೋಡಬಹುದು. ಶ್ರೀಮಂತರಾಗಲು ನೀವು ಮಾಡಬೇಕಾದ ಕೆಲಸವೆಂದರೆ ಪ್ರತೀ ಶುಕ್ರವಾರ ಈ ಶಂಖದೊಳಗೆ ಹಾಲು ಮತ್ತು ಗಂಗಾಜಲ ಹಾಕಬೇಕು. ಬಳಿಕ ಇದನ್ನು ಮನೆಯಿಡಿ ಚಿಮುಕಿಸಬೇಕು. ಹೀಗೆ ಮಾಡುವಂತಹವರಿಗೆ ಯಾವತ್ತೂ ಆರ್ಥಿಕ ಸಮಸ್ಯೆ ಬರುವುದಿಲ್ಲವೆಂದು ನಂಬಲಾಗಿದೆ.



Click it and Unblock the Notifications
