ಎಷ್ಟು ದುಡಿದರೂ ಕೈಯಲ್ಲಿ ಹಣ ನಿಲ್ಲುವುದಿಲ್ಲವೇ? ಇಲ್ಲಿವೆ ರಹಸ್ಯ ಸೂತ್ರಗಳು

By: manu
Subscribe to Boldsky

ಹಣ ಯಾರಿಗೆ ಬೇಡ? ಅದರಲ್ಲೂ ಹೆಚ್ಚಿನ ಹಣ ಎಲ್ಲರಿಗೂ ಬೇಕು. ಜೀವನಕ್ಕೆ ಸೌಲಭ್ಯಗಳು ಅಗತ್ಯ. ಈ ಸೌಲಭ್ಯಗಳನ್ನು ಪಡೆಯಲು ಹಣವನ್ನು ಖರ್ಚು ಮಾಡಲೇಬೇಕು. ಹಣ ಹೆಚ್ಚಿದ್ದಷ್ಟೂ ಸೌಲಭ್ಯಗಳು ಹೆಚ್ಚುತ್ತವೆ ಹಾಗೂ ಉತ್ತಮ ಆಹಾರ ಮತ್ತು ಸವಲತ್ತುಗಳು ಐಷಾರಾಮಗಳೂ ಲಭ್ಯವಾಗುತ್ತವೆ.

ಮನೆಯಲ್ಲಿ ಪಾಸಿಟಿವ್ ಶಕ್ತಿ ಹೆಚ್ಚಿಸಲು ವಾಸ್ತು ಶಾಸ್ತ್ರ

ಇಂದಿನ ದಿನಗಳಲ್ಲಿ ಹಣವಿದ್ದವರಿಗೇ ಹೆಚ್ಚಿನ ಮಾನ್ಯತೆ ದೊರಕುತ್ತಿರುವುದು ನಗ್ನಸತ್ಯ. ಆದರೆ ಹಣವನ್ನು ಕೇವಲ ಕತ್ತೆಯಂತೆ ದುಡಿಯುವುದರಿಂದ ಸಂಪಾದಿಸಲು ಸಾಧ್ಯವಿಲ್ಲ. ಕೆಲವೊಮ್ಮ ಕೈ ತುಂಬಾ ಸಂಬಳ ಸಿಗುವ ಉದ್ಯೋಗ ಅಥವಾ ವಾಣಿಜ್ಯ ವಹಿವಾಟು ಇದ್ದರೂ, ತಿಂಗಳ ಕೊನೆಯಲ್ಲಿ, ಕಿಸೆ ಖಾಲಿ!, ಏಕೆಂದರೆ ಹಣ ಎಷ್ಟು ಕೈಗೆ ಸಿಗುತ್ತದೆಯೋ ಹೆಚ್ಚೂ ಕಡಿಮೆ ಅಷ್ಟೇ ಖರ್ಚೂ ಆಗಿ ಹೋಗುತ್ತದೆ. ಪರಿಣಾಮವಾಗಿ ಹಿಂದಿನ ದಿನಕ್ಕೂ ಇಂದಿಗೂ ಯಾವುದೇ ವ್ಯತ್ಯಾಸ ತೋರದಂತಾಗುತ್ತದೆ. ಇದಕ್ಕೆ ಮನೆಯ ವಾಸ್ತುಗಳು ಪ್ರಮುಖ ಕಾರಣವಾಗಿರಬಹುದು.... ಈ ನಿಟ್ಟಿನಲ್ಲಿ ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದ್ದು ನಿಮ್ಮ ಮನೆಯಲ್ಲಿಯೂ ಹಣ ಮತ್ತು ಸಮೃದ್ಧಿ ನೆಲೆಸಲು ಸಾಧ್ಯವಾಗುತ್ತದೆ..... 

ಲಕ್ಷ್ಮಿ ಕುಬೇರರ ಪಟ

ಲಕ್ಷ್ಮಿ ಕುಬೇರರ ಪಟ

ಲಕ್ಷ್ಮಿ ಕುಬೇರರ ಪಟ ಮನೆಯ ಹೊಸ್ತಿಲು ದಾಟಿ ಒಳಗೆ ಕಾಲಿಡುತ್ತಿದ್ದಂತೆ ಮೊದಲು ಕಾಣುವಂತೆ ಗೋಡೆಯಲ್ಲಿ ಲಕ್ಷ್ಮಿ ಕುಬೇರರು ಒಂದೇ ಪಟದಲ್ಲಿರುವ ಅಥವಾ ಪ್ರತ್ಯೇಕವಾದ ಎರಡು ಪಟಗಳನ್ನು ಇರಿಸಿ...ಇದರೊಂದಿಗೆ ಸ್ವಸ್ತಿಕ್ ಚಿಹ್ನೆಯ ಇನ್ನೊಂದು ಪಟವನ್ನಿರಿಸಿದರೆ ಇನ್ನೂ ಉತ್ತಮ. ಇದರಿಂದ ಮನೆಗೆ ಧನಾಗಮನ ಹೆಚ್ಚುತ್ತದೆ ಹಾಗೂ ಉಳಿಯಲು ಸಾಧ್ಯವಾಗುತ್ತದೆ.

ಲಕ್ಷ್ಮಿದೇವಿಗೆ ದಿನಾ ಪೂಜೆ ಮಾಡಿ

ಲಕ್ಷ್ಮಿದೇವಿಗೆ ದಿನಾ ಪೂಜೆ ಮಾಡಿ

ಲಕ್ಷ್ಮಿದೇವಿಯ ವಿಗ್ರಹ ಮನೆಗೆ ಬಂದ ಧನ ಉಳಿಸಿಕೊಳ್ಳುವುದು ಮತ್ತು ಇನ್ನೂ ಹೆಚ್ಚು ಹೆಚ್ಚಾಗಿ ಧನ ಆಗಮಿಸುವಂತೆ ನೋಡಿಕೊಳ್ಳಲು ಮನೆಯಲ್ಲಿ ಲಕ್ಷ್ಮಿದೇವಿಯ ವಿಗ್ರಹ ಅಥವಾ ಪಟ ನಿಮ್ಮ ಪೂಜಾಗೃಹದಲ್ಲಿದ್ದು ನಿತ್ಯವೂ ಪೂಜೆ ಮತ್ತು ಪ್ರಾರ್ಥನೆಗಳನ್ನು ಸಲ್ಲಿಸುತ್ತಿರಬೇಕು. ಇದರಿಂದ ಮನೆಗೆ ಧನ ಹೆಚ್ಚು ಆಗಮಿಸುತ್ತದೆ ಹಾಗೂ ಮನೆಯಲ್ಲಿ ನೆಮ್ಮದಿ ಸದಾ ಇರುವಂತಾಗುತ್ತದೆ.

ಪಂಚರೂಪಿ ಹನುಮಂತನ ವಿಗ್ರಹವನ್ನು ನಿತ್ಯವೂ ಪೂಜಿಸಿ

ಪಂಚರೂಪಿ ಹನುಮಂತನ ವಿಗ್ರಹವನ್ನು ನಿತ್ಯವೂ ಪೂಜಿಸಿ

ಹನುಮಂತನ ವಿಗ್ರಹ ಮನೆಯ ನೈಋತ್ಯ ದಿಕ್ಕಿನಲ್ಲಿ ಪಂಚರೂಪಿ ಹನುಮಂತನ ವಿಗ್ರಹವನ್ನು ಇರಿಸಿ ನಿತ್ಯವೂ ಪೂಜಿಸಿ. ಈ ವಿಗ್ರಹ ನಿಮ್ಮ ಮನೆಗೆ ಆಗಮಿಸುವ ಧನಾತ್ಮಕ ಶಕ್ತಿಗಳನ್ನು ಹೆಚ್ಚಿಸುತ್ತದೆ. ಅಲ್ಲದೇ ನಿಮ್ಮ ಮನೆಗೆ ಹಣ ಬರಲು ಇರುವ ಅಡ್ಡಿಗಳನ್ನು ನಿವಾರಿಸಿ ದಾರಿಯನ್ನು ಸುಗಮವಾಗಿಸುತ್ತದೆ.

ವಾಸ್ತುದೇವರ ಪಟ

ವಾಸ್ತುದೇವರ ಪಟ

ವಾಸ್ತುದೇವರ ಪಟ ಅಥವಾ ವಿಗ್ರಹವೊಂದನ್ನು ನಿಮ್ಮ ಮನೆಯ ಯಾವುದಾದರೊಂದು ಭಾಗದಲ್ಲಿ ಇರಿಸುವ ಮೂಲಕ ವಾಸ್ತುದೋಷಗಳನ್ನು ನಿವಾರಿಸಬಹುದು. ಅಲ್ಲದೇ ಮನೆಯೊಳಗಣ ಪರಿಸರದಲ್ಲಿ ಪಾವಿತ್ರ್ಯತೆ ಹಾಗೂ ಸುಖದ ವಾತಾವರಣವನ್ನು ಉಂಟುಮಾಡುತ್ತದೆ.

ಬಾಡಿದ ಹೂಗಳನ್ನು ದೇವರಿಗೆ ಹಾಕಬೇಡಿ

ಬಾಡಿದ ಹೂಗಳನ್ನು ದೇವರಿಗೆ ಹಾಕಬೇಡಿ

ಬೆಳಿಗ್ಗೆ ನೀವು ದೇವರಿಗೆ ಹೂವಿನಿಂದ ಅಲಂಕಾರ ಮಾಡಿದ ಬಳಿಕ ಸಂಜೆ ವೇಳೆ ಆ ಹೂಗಳು ಬಾಡಿ ಹೋಗುತ್ತದೆ. ಇದರಿಂದ ಸಂಜೆಯಾದ ಬಳಿಕ ಹೂವುಗಳನ್ನು ತೆಗೆಯಿರಿ. ಬಾಡಿದ ಹೂವುಗಳು ಮನೆಯಲ್ಲಿ ನಕಾರಾತ್ಮಕ ಪರಿಣಾಮ ಉಂಟು ಮಾಡುತ್ತದೆ.

ಮನೆಯ 'ಪ್ರಧಾನ ಬಾಗಿಲ' ವಾಸ್ತು ಟಿಪ್ಸ್- ಅದೃಷ್ಟವೇ ಬದಲಾಗಬಹುದು!

ದಕ್ಷಿಣ ಭಾಗದಲ್ಲಿ ತುಳಸಿ ಗಿಡ

ದಕ್ಷಿಣ ಭಾಗದಲ್ಲಿ ತುಳಸಿ ಗಿಡ

ತುಳಸಿ ಗಿಡ ತುಳಸಿ ಗಿಡವು ಹಿಂದೂಗಳಿಗೆ ತುಂಬಾ ಪವಿತ್ರವೆಂದು ಹೇಳಲಾಗುತ್ತದೆ. ತುಳಸಿ ಗಿಡವನ್ನು ಮನೆಯ ಅಂಗಳದಲ್ಲಿ ಇಡಬೇಕು. ಮನೆಯ ಒಳಗಡೆ ಅದರಲ್ಲೂ ಮನೆಯ ದಕ್ಷಿಣ ಭಾಗದಲ್ಲಿ ಇದ್ದರೆ ಅದರಿಂದ ನಿಮಗೆ ಮತ್ತು ಕುಟುಂಬಕ್ಕೆ ದೊಡ್ಡ ಸಮಸ್ಯೆಯಾಗಬಹುದು. ದಕ್ಷಿಣ ಭಾಗದಲ್ಲಿ ತುಳಸಿ ಗಿಡವಿದ್ದರೆ ಅದನ್ನು ಈಗಲೇ ಅಲ್ಲಿಂದ ತೆಗೆಯಿರಿ.

ಅದೃಷ್ಟಹೀನ ದೇವತೆ ತುಳಸಿ ಪರಮಪಾವನೆಯಾಗಿದ್ದು ಹೇಗೆ?

English summary

If you want to be rich, always keep these things in your home

Everyone desires to have lots of money --- money is probably the most important thing that is needed for survival, along with food. However, can you get rich just by hard work? Here is a list of things you should keep in your house to attract good vastu and increase the inflow of money in your house.
Subscribe Newsletter