ಹುಟ್ಟಿದ ದಿನಾಂಕ, ವರ್ಷ, ತಿಂಗಳು ಗೊತ್ತಿದ್ದರೆ ಸಾಕು, ವ್ಯಕ್ತಿತ್ವ ತಿಳಿಯುವುದು

By: manu
Subscribe to Boldsky

ಒಬ್ಬ ವ್ಯಕ್ತಿಯ ಜನನದ ಸಮಯವು ಭವಿಷ್ಯವನ್ನು ಹೇಳುತ್ತದೆ ಎನ್ನುವುದಾದರೆ, ಜನ್ಮ ದಿನಾಂಕವೂ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ ಎನ್ನುವುದನ್ನು ನಂಬಬೇಕು. ಪ್ರತಿಯೊಬ್ಬರ ಜನ್ಮ ಸಮಯ ಹಾಗೂ ದಿನಾಂಕವೂ ವಿಭಿನ್ನವಾಗಿರುವುದರಿಂದ ಭವಿಷ್ಯ ಹಾಗೂ ವ್ಯಕ್ತಿತ್ವವೂ ವಿಶೇಷವಾಗಿರುತ್ತವೆ. ಕೆಲವು ಅಧ್ಯಯನ ಹಾಗೂ ಮೂಲಗಳು ಹೇಳುವ ಪ್ರಕಾರ ಜನ್ಮ ದಿನಾಂಕ ನಾವು ಏನೆಂಬುದನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳುತ್ತವೆ.

ಜನ್ಮ ನಕ್ಷತ್ರ- ಆಧರಿಸಿ ಹೇಳುವ 'ಸಂಖ್ಯಾಶಾಸ್ತ್ರ' 

ನಾವು ಯಾರು? ನಮ್ಮ ಪ್ರತಿಭೆ ಏನು? ನಮ್ಮ ಸಾಮರ್ಥ್ಯ ಏನು? ಎನ್ನುವುದನ್ನು ತೆರೆದಿಡುತ್ತದೆ. ನಿಜ, ನಿಮ್ಮ ಬಗ್ಗೆ ನೀವೇ ಹೆಚ್ಚು ತಿಳಿದುಕೊಳ್ಳಲು ಒಂದು ಅವಕಾಶವಿದೆ. ಅದು ಹೇಗೆ ಎನ್ನುವುದರ ಬಗ್ಗೆ ಹೆಚ್ಚು ಚಿಂತಿಸಬೇಕಿಲ್ಲ. ಈ ಕೆಳಗೆ ಹೇಳಿದಂತೆ ಮಾಡಿದರೆ ಸಾಕು. ಉದಾಹರಣೆಗೆ, ನಿಮ್ಮ ಹುಟ್ಟುಹಬ್ಬದ ದಿನಾಂಕ: ಮಾರ್ಚ್ 20, 1950 ಆಗಿದ್ದರೆ ಈ ಸಂಖ್ಯೆಯನ್ನು ಹೀಗೆ ಸೇರಿಸಬೇಕು..

3+20+1950= 1973

1+9+7+3= 20

2+0=2

ಅಂತಿಮ ಉತ್ತರವು= 2

ಹೀಗೆ ಒಂದೇ ಸಂಖ್ಯೆಯು ಕೊನೆಯಲ್ಲಿ ಬರುತ್ತದೆ. ಈ ಏಕೈಕ ಸಂಖ್ಯೆಯೇ ವ್ಯಕ್ತಿತ್ವದ ಲಕ್ಷಣವನ್ನು ಹೇಳುತ್ತವೆ. ಈ ಕೆಳಗೆ 1 ರಿಂದ 9ರ ವರೆಗಿನ ಸಂಖ್ಯೆಯ ವ್ಯಕ್ತಿತ್ವವನ್ನು ಈ ಕೆಳಗೆ ವಿವರಿಸಲಾಗಿದೆ.... 

ಸಂಖ್ಯೆ-1: ಇವರು ಅತ್ಯಂತ ಪ್ರಾಮಾಣಿಕ ಸ್ವಭಾವದವರು...

ಸಂಖ್ಯೆ-1: ಇವರು ಅತ್ಯಂತ ಪ್ರಾಮಾಣಿಕ ಸ್ವಭಾವದವರು...

ಇವರು ನೈಜತೆಯ ಸ್ವಭಾವದವರು. ಹೊಸ ಹೊಸ ಆಲೋಚನೆಗಳು ಇವರ ತಲೆಯಲ್ಲಿ ಸಂಚರಿಸುತ್ತಿರುತ್ತವೆ. ಇದು ಅವರ ನೈಸರ್ಗಿಕ ಪ್ರತಿಭೆ ಎನ್ನಬಹುದು. ತಮ್ಮದೇ ಆದ ರೀತಿಯಲ್ಲಿ ಕೆಲಸವನ್ನು ಮಾಡಿ ಮುಗಿಸುತ್ತಾರೆ. ಅತ್ಯಂತ ಪ್ರಾಮಾಣಿಕ ಸ್ವಭಾವದವರಾದ ಇವರಿಗೆ ಸ್ವಲ್ಪ ಹಠ ಹೆಚ್ಚೆಂದು ಹೇಳಬಹುದು. ಇವರು ರಾಜತಾಂತ್ರಿಕ ಕೌಶಲ್ಯವನ್ನು ಜೀವನದಲ್ಲಿ ಪ್ರಾಯೋಗಿಕವಾಗಿ ಕಲಿತಿರುತ್ತಾರೆ.

ಸಂಖ್ಯೆ-2: ಬಂಧು ಬಾಂಧವರ ಒಡನಾಟ ಇಷ್ಟಪಡುತ್ತಾರೆ

ಸಂಖ್ಯೆ-2: ಬಂಧು ಬಾಂಧವರ ಒಡನಾಟ ಇಷ್ಟಪಡುತ್ತಾರೆ

ಇವರು ಸದಾ ಬೇರೆಯವರ ಅಗತ್ಯತೆಗಳು ಹಾಗೂ ಭಾವನೆಗಳ ಬಗ್ಗೆ ಹೆಚ್ಚು ತಿಳಿದಿರುತ್ತಾರೆ. ನೈಸರ್ಗಿಕವಾಗಿ ವಿಶ್ಲೇಷಣಾ ಸಾಮರ್ಥ್ಯವನ್ನು ಹೊಂದಿದವರಾಗಿರುತ್ತಾರೆ. ಇವರು ಹೆಚ್ಚು ಕಾಲ ಏಕಾಂಗಿಯಾಗಿರಲು ಇಷ್ಟಪಡುತ್ತಾರೆ. ಯೋಗ್ಯವಾದ ಜೀವನ ನಡೆಸಲು ಸ್ನೇಹಿತರ ಮತ್ತು ಬಂಧು ಬಾಂಧವರ ಒಡನಾಟ ಇರಬೇಕೆಂದು ಬಯಸುತ್ತಾರೆ.

ಸಂಖ್ಯೆ-3: ಎಲ್ಲರೊಂದಿಗೂ ಸುಲಭವಾಗಿ ಹೊಂದಿಕೊಂಡು ಹೋಗುವ ಸ್ವಭಾವ ಇವರದ್ದು

ಸಂಖ್ಯೆ-3: ಎಲ್ಲರೊಂದಿಗೂ ಸುಲಭವಾಗಿ ಹೊಂದಿಕೊಂಡು ಹೋಗುವ ಸ್ವಭಾವ ಇವರದ್ದು

ಇವರು ಆದರ್ಶವಾದಿಗಳು. ಅತ್ಯಂತ ಸೃಜನಾತ್ಮಕ, ಸಾಮಾಜಿಕ, ಆಕರ್ಷಕ, ಪ್ರಣಯ ಭಾವ ಹೊಂದಿದವರಾಗಿರುತ್ತಾರೆ. ಎಲ್ಲರೊಂದಿಗೂ ಸುಲಭವಾಗಿ ಹೊಂದಿಕೊಂಡು ಹೋಗುವ ಸ್ವಭಾವ ಇವರದ್ದು. ಹೆಚ್ಚು ಜನಪ್ರಿಯವಾದ ವ್ಯಕ್ತಿತ್ವ ಇವರದ್ದು. ವಾಸ್ತವಿಕ ದೃಷ್ಟಿಕೋನದಿಂದ ಜಗತ್ತನ್ನು ನೋಡುತ್ತಾರೆ. ಇತರರು ಸಂತೋಷವಾಗಿರುವಂತೆ ಕಾಣಲು ಬಯಸುತ್ತಾರೆ.

ಸಂಖ್ಯೆ-4: ಮೊಂಡುತನದ ಸ್ವಭಾವವನ್ನು ತೋರುತ್ತಾರೆ

ಸಂಖ್ಯೆ-4: ಮೊಂಡುತನದ ಸ್ವಭಾವವನ್ನು ತೋರುತ್ತಾರೆ

ಇವರು ಸಂವೇದನಾ ಶೀಲರು ಮತ್ತು ಸಾಂಪ್ರದಾಯಿಕ ಪ್ರಿಯರು. ಇವರು ಸದಾ ಆದೇಶ ಮಾಡುವ ಸ್ವಭಾವದವರು. ಕೆಲವೊಮ್ಮೆ ಮೊಂಡುತನದ ಸ್ವಭಾವವನ್ನು ತೋರುತ್ತಾರೆ. ಸುಳ್ಳು ಹಾಗೂ ನಾಟಕವನ್ನು ದ್ವೇಷಿಸುತ್ತಾರೆ. ಇವರು ಸುಲಭವಾಗಿ ಹೊಂದಾಣಿಕೆ ಮಾಡಿಕೊಳ್ಳಲಾರರು.

ಸಂಖ್ಯೆ-5: ಇವರದ್ದು ಕುತೂಹಲಕಾರಿ ಸ್ವಭಾವ

ಸಂಖ್ಯೆ-5: ಇವರದ್ದು ಕುತೂಹಲಕಾರಿ ಸ್ವಭಾವ

ಇವರು ಪರಿಶೋಧಕರು ಎಂದು ಹೇಳುತ್ತಾರೆ. ಕುತೂಹಲಕಾರಿ ಸ್ವಭಾವ ಇವರದ್ದು. ಇವರು ಸದಾ ವೈವಿಧ್ಯತೆಯಿಂದ ಇರುವುದನ್ನು ಬಯಸುತ್ತಾರೆ.

ಸಂಖ್ಯೆ-6: ಸದಾ ಸಂತೋಷವಾಗಿರಲು ಇಷ್ಟಪಡುತ್ತಾರೆ

ಸಂಖ್ಯೆ-6: ಸದಾ ಸಂತೋಷವಾಗಿರಲು ಇಷ್ಟಪಡುತ್ತಾರೆ

ಆದರ್ಶವಾದಿಗಳಾದ ಇವರು ಸದಾ ಸಂತೋಷವಾಗಿರಲು ಇಷ್ಟಪಡುತ್ತಾರೆ. ಬೇರೆಯವರ ಬಗ್ಗೆ ಸೂಕ್ತ ನಿರ್ಧಾರವನ್ನು ಕೈಗೊಳ್ಳುತ್ತಾರೆ. ನಿಷ್ಠಾವಂತರಾದ ಇವರು ಉತ್ತಮ ಶಿಕ್ಷಕರು ಎಂದು ಹೇಳಬಹುದು. ಉತ್ತಮ ಸಹಾಯಕರು ಹೌದು.

ಸಂಖ್ಯೆ-7: ಜ್ಞಾನಿಗಳಾದ ಇವರು ತತ್ವಜ್ಞಾನಿಗಳಂತೆ ವರ್ತಿಸುತ್ತಾರೆ!

ಸಂಖ್ಯೆ-7: ಜ್ಞಾನಿಗಳಾದ ಇವರು ತತ್ವಜ್ಞಾನಿಗಳಂತೆ ವರ್ತಿಸುತ್ತಾರೆ!

ಇವರು ಸಂಶೋಧಕ ಸ್ವಭಾವದವರು. ಕೆಲವು ವಿಚಾರಗಳ ಬಗ್ಗೆ ಮುಕ್ತವಾಗಿ ಹೇಳಿಕೊಳ್ಳಲಾರರು. ಭಾವನೆಗಳನ್ನು ಸುಲಭವಾಗಿ ವ್ಯಕ್ತಪಡಿಸಲಾರರು. ಇವರು ಎಲ್ಲವನ್ನೂ ಪ್ರಶ್ನಿಸುವ ಸ್ವಭಾವದವರಾದರೂ, ಬೇರೆಯವರು ಇವರನ್ನು ಪ್ರಶ್ನಿಸುವುದನ್ನು ಇಷ್ಟಪಡದವರು. ಜ್ಞಾನಿಗಳಾದ ಇವರು ತತ್ವಜ್ಞಾನಿಗಳಂತೆ ವರ್ತಿಸುತ್ತಾರೆ.

ಸಂಖ್ಯೆ-8: ಇವರಿಗೆ ತಾಳ್ಮೆ ಕಡಿಮೆ!

ಸಂಖ್ಯೆ-8: ಇವರಿಗೆ ತಾಳ್ಮೆ ಕಡಿಮೆ!

ಮೊಂಡು ಸ್ವಭಾವದವರಾದ ಇವರು ಉತ್ತಮ ತೀರ್ಪುಗಾರರು ಎಂದು ಹೇಳಬಹುದು. ನಾಯಕ ಸ್ವಭಾವ ಇವರದ್ದು. ಜನರನ್ನು ವಸ್ತು ನಿಷ್ಠವಾಗಿ ಸ್ವೀಕರಿಸುತ್ತಾರೆ. ಬೇರೆಯವರು ಏನು ಹೇಳಲು ಬಯಸುತ್ತಾರೆ ಎನ್ನುವುದನ್ನು ಕೇಳುವ ತಾಳ್ಮೆ ಇರದವರು.

ಸಂಖ್ಯೆ-9: ಸಮಯಕ್ಕೆ ತಕ್ಕಂತೆ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳುವರು

ಸಂಖ್ಯೆ-9: ಸಮಯಕ್ಕೆ ತಕ್ಕಂತೆ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳುವರು

ಇವರು ಉತ್ತಮ ಪ್ರದರ್ಶನಾಕಾರರು. ನೈಸರ್ಗಿಕವಾಗಿಯೇ ಮನರಂಜನೆ ನೀಡಬಲ್ಲರು. ಉದಾರ ಸ್ವಭಾವದರಾದ ಇವರು ಇತರರ ಬಗ್ಗೆ ಕಾಳಜಿ ವಹಿಸುತ್ತಾರೆ. ಜೊತೆಗೆ ಇತರರಿಗೆ ಸಹಾಯ ಮಾಡಲು ಸದಾ ಸಿದ್ಧರಾಗಿರುತ್ತಾರೆ. ಸಮಯಕ್ಕೆ ತಕ್ಕಂತೆ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳುವರು. ಇವರು ಅದೃಷ್ಟವಂತರು ಎಂದು ಹೇಳಬಹುದು.

English summary

How Date Of Birth Defines Your Personality

It is believed that your birth number describes who you are, your talents, and even what abilities you have yet to discover about yourself. So, what better than understanding your own self, eh? Here is how you can do it by getting the actual number. Calculate your date of birth as explained below.
Story first published: Thursday, July 6, 2017, 23:42 [IST]
Subscribe Newsletter