'ತಿರುಪತಿ ಲಡ್ಡು' ಬಗ್ಗೆ ನೀವು ತಿಳಿದಿರದ ಇಂಟರೆಸ್ಟಿಂಗ್ ಸಂಗತಿಗಳು

By: Arshad
Subscribe to Boldsky

ಯಾವುದೇ ದೇವಾಲಯದಲ್ಲಿ ಪೂಜೆಯ ಬಳಿಕ ಪ್ರಸಾದವನ್ನು ನೀಡಲಾಗುತ್ತದೆ. ಆದರೆ ಆಂಧ್ರ ಪ್ರದೇಶದ ತಿರುಪತಿಯಲ್ಲಿರುವ ತಿರುಮಲ ದೇವರ ದೇವಸ್ಥಾನದಲ್ಲಿ ಪ್ರಸಾದದ ರೂಪದಲ್ಲಿ ನೀಡಲಾಗುವ ಲಾಡು ವಿಶಿಷ್ಟವಾಗಿದ್ದು ಅತಿ ಹೆಚ್ಚಿನ ಕುತೂಹಲಕಾರಿಯೂ ಆಗಿದೆ. ತಿರುಪತಿ ಲಡ್ಡು ಎಂದೇ ವಿಶ್ವವಿಖ್ಯಾತವಾಗಿರುವ ಈ ಲಾಡುವನ್ನು ನೀಡಲಾಗುತ್ತಿರುವುದು ಇಂದು ನಿನ್ನೆಯಿಂದಲ್ಲ, ಬದಲಿಗೆ 2ನೇ ಆಗಸ್ಟ್, 1715 ರಂದು ಮೊದಲ ಬಾರಿಗೆ ಈ ಲಾಡುವನ್ನು ಪ್ರಸಾದರೂಪದಲ್ಲಿ ನೀಡಲಾಯಿತು, ಅಂದರೆ ಈ ಲಾಡುವಿಗೆ ಈಗ ಭರ್ತಿ ಮುನ್ನೂರು ವರ್ಷದ ಇತಿಹಾಸವಿದೆ! 

ವೆಂಕಟೇಶ್ವರ ದೇವರ ಮೂರ್ತಿಯ ಕೆಲವೊಂದು ರಹಸ್ಯಗಳು

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋದವರು ಲಾಡು ಇಲ್ಲದೇ ಬಂದರೆ ಈ ಯಾತ್ರೆ ಅಪೂರ್ಣವಾದಂತೆ. ಅಷ್ಟಕ್ಕೂ ವಿಶ್ವದ ಅತಿ ಶ್ರೀಮಂತ ದೇವಾಲಯವಾಗಿರುವ ಈ ದೇವಸ್ಥಾನದ ಲಾಡು ಕೂಡಾ ಅಷ್ಟೇ ಶ್ರೀಮಂತ! ಅಷ್ಟೇ ಅಲ್ಲ, ಇದನ್ನು ಪಡೆಯಲು ಪೂಜೆಯ ಬಳಿಕ ಟೋಕನ್ ಪಡೆದು ಗಂಟೆಗಟ್ಟಲೇ ಸರತಿಯಲ್ಲಿ ನಿಂತ ಬಳಿಕವೇ ದೊರಕುವಷ್ಟು ಬೇಡಿಕೆ. ಅದರಲ್ಲೂ ಬ್ರಹ್ಮೋತ್ಸವ ಎಂಬ ವಿಶೇಷ ಪೂಜೆಯ ಬಳಿಕ ಈ ಲಾಡುವಿಗೆ ಇನ್ನಿಲ್ಲದಷ್ಟು ಬೇಡಿಕೆ ಬರುತ್ತದೆ ಹಾಗೂ ಟನ್ನುಗಟ್ಟಲೇ ಲಾಡು ಕ್ಷಣಗಳಲ್ಲಿಯೇ ಖಾಲಿಯಾಗುತ್ತದೆ. ಬನ್ನಿ, ಈ ಅದ್ಭುತ ಲಾಡುವಿನ ಬಗ್ಗೆ ಕೆಲವು ಮಾಹಿತಿಗಳನ್ನು ಅರಿಯೋಣ.... 

2009ರಲ್ಲಿ ಹಕ್ಕುಮಾನ್ಯತೆ ಅಥವಾ ಪೇಟೆಂಟ್ ಅನ್ನು ಹೊಂದಿದೆ

2009ರಲ್ಲಿ ಹಕ್ಕುಮಾನ್ಯತೆ ಅಥವಾ ಪೇಟೆಂಟ್ ಅನ್ನು ಹೊಂದಿದೆ

ಮುನ್ನೂರು ವರ್ಷಗಳಿಂದ ಸತತವಾಗಿ ಲಾಡುಗಳನ್ನು ದೇವರ ಪ್ರಸಾದದ ರೂಪದಲ್ಲಿ ನೀಡುತ್ತಿರುವ ತಿರುಮಲ ದೇವಸ್ಥಾನ ಈ ಲಾಡುಗಳನ್ನು ತಯಾರಿಸಿ ವಿತರಿಸುವ ಹಕ್ಕುಮಾನ್ಯತೆ ಅಥವಾ ಪೇಟೆಂಟ್ ಅನ್ನು 2009ರಲ್ಲಿ ಪಡೆದುಕೊಂಡಿದೆ. ಅಂದರೆ ಈ ಲಾಡುಗಳನ್ನು ತಯಾರಿಸಿ ವಿತರಿಸುವ ಅಥವಾ ಮಾರುವ ಹಕ್ಕನ್ನು ಪಡೆದುಕೊಂಡಿದೆ.

ಪ್ರತಿದಿನ ಸರಿಸುಮಾರು ಒಂದೂವರೆ ಲಕ್ಷದಷ್ಟು ಲಡ್ಡುಗಳು ತಯಾರಿಸುತ್ತಾರೆ

ಪ್ರತಿದಿನ ಸರಿಸುಮಾರು ಒಂದೂವರೆ ಲಕ್ಷದಷ್ಟು ಲಡ್ಡುಗಳು ತಯಾರಿಸುತ್ತಾರೆ

ಪ್ರತಿ ದಿನ ಈ ದೇವಸ್ಥಾನದಲ್ಲಿ ಒಂದೂವರೆ ಲಕ್ಷದಷ್ಟು ಲಡ್ಡುಗಳು ತಯಾರಾಗಿ ಭಕ್ತರಿಗೆ ವಿತರಿಸಲ್ಪಡುತ್ತವೆ. ಅಂದರೆ ಪ್ರತಿದಿನ ಈ ದೇವಸ್ಥಾನಕ್ಕೆ ಭೇಟಿ ನೀಡುವ ಸರಿಸುಮಾರು ಐವತ್ತು ಸಾವಿರದಷ್ಟು ಭಕ್ತರು ಸರಾಸರಿ ಮೂರು ಲಾಡುಗಳನ್ನು ಕೊಂಡೊಯ್ಯುತ್ತಾರೆ. ಅದರಲ್ಲಿ ಒಂದು ಲಾಡು ಪೂಜೆಯ ಪ್ರಸಾದದ ರೂಪದಲ್ಲಿ ಉಚಿತವಾಗಿರುತ್ತದೆ.

ಲಡ್ಡುಗೆ ಸಕತ್ ಬೇಡಿಕೆ

ಲಡ್ಡುಗೆ ಸಕತ್ ಬೇಡಿಕೆ

ಆದರೆ ಪ್ರತಿ ಭಕ್ತನೂ ಸರಾಸರಿ ತನ್ನೊಂದಿಗೆ ನಾಲ್ಕೈದು ಲಾಡುಗಳನ್ನು ತಪ್ಪದೇ ಕೊಂಡೊಯ್ಯುತ್ತಾರೆ. ಏಕೆಂದರೆ ಒಂದು ಲಾಡುವಿಗೆ ಯಾರ ಮನವೂ ತೃಪ್ತಿಗೊಳ್ಳುವುದಿಲ್ಲ.

ಲಡ್ಡುವಿನಿಂದ ಒಂದು ಕೋಟಿ ರೂಪಾಯಿಗೂ ಅಧಿಕ ಲಾಭ

ಲಡ್ಡುವಿನಿಂದ ಒಂದು ಕೋಟಿ ರೂಪಾಯಿಗೂ ಅಧಿಕ ಲಾಭ

ಪ್ರತಿ ಲಾಡುವಿಗೆ ಕನಿಷ್ಠ ಲಾಭ ಇರಿಸಿದರೂ ಒಟ್ಟಾರೆ ಒಂದು ವರ್ಷದಲ್ಲಿ ತಯಾರಾಗಿ ಮಾರಲ್ಪಡುವ ಲಾಡುಗಳ ಲಾಭ ಒಂದು ಕೋಟಿ ರೂಪಾಯಿಗೂ ಹೆಚ್ಚು! (ದಿನದ ಸರಾಸರಿ ಆದಾಯ 1.11 ಕೋಟಿ ರೂಪಾಯಿಗಳು)

ಚಿಕ್ಕ ಲಡ್ಡು

ಚಿಕ್ಕ ಲಡ್ಡು

ಸಾಂಪ್ರಾದಾಯಿಕ ವಿಧಾನದಲ್ಲಿಯೇ ತಯಾರಾಗುವ ಚಿಕ್ಕ ಲಾಡುವಿನ ಸರಾಸರಿ ತೂಕ 175 ಗ್ರಾಂ. ಪ್ರತಿ ಲಡ್ಡುವಿಗೆ ಇಪ್ಪತ್ತೈದು ರೂಪಾಯಿಯಂತೆ (ಅಂದಾಜು) ಮೊದಲೇ ಹಣ ಕೊಟ್ಟು ಟೋಕನ್ ಪಡೆದು ಸರದಿಯಲ್ಲಿ ಕಾಯಬೇಕು.

’ಕಲ್ಯಾಣ ಲಡ್ಡು

’ಕಲ್ಯಾಣ ಲಡ್ಡು

ಚಿಕ್ಕ ಲಡ್ಡುವಿನ ವಿಷಯ ಹೀಗಿದ್ದರೆ ಕೆಲವು ವಿಶೇಷ ಸಂದರ್ಭಗಳಲ್ಲಿ ಕೊಂಚ ದೊಡ್ಡ ಲಡ್ಡುವನ್ನು ವಿತರಿಸಲಾಗುತ್ತದೆ. 'ಕಲ್ಯಾಣ ಲಡ್ಡು' ಎಂಬ ಹೆಸರಿನ ಈ ಲಡ್ಡುಗಳ ಸರಾಸರಿ ತೂಕ ಅರ್ಧ ಕೇಜಿ. ಬೆಲೆ ನೂರು ರೂಪಾಯಿಗಳು.

ಮೂವತ್ತೆರಡು ಕೇಜಿ ತೂಕದ ಲಡ್ಡು

ಮೂವತ್ತೆರಡು ಕೇಜಿ ತೂಕದ ಲಡ್ಡು

ಆದರೆ ಇದಕ್ಕೂ ದೊಡ್ಡ ಇನ್ನೊಂದು ಲಡ್ಡುವಿದೆ. ಮೂವತ್ತೆರಡು ಕೇಜಿ ತೂಕದ, ವಿಶ್ವದ ಅತ್ಯಂತ ಭಾರವಾದ ಲಡ್ಡು ಎಂಬ ದಾಖಲೆಯನ್ನೂ ಪಡೆದಿದೆ.

’ಪೋತು’ ಎಂಬ ಬೃಹತ್ ಅಡುಗೆ ಮನೆ

’ಪೋತು’ ಎಂಬ ಬೃಹತ್ ಅಡುಗೆ ಮನೆ

ಈ ಲಾಡುಗಳನ್ನು ತಯಾರಿಸುವುದು ಅಷ್ಟು ಸುಲಭವಲ್ಲ. ಇವನ್ನು ಪರಂಪರಾಗತವಾಗಿ ತಯಾರಿಸುತ್ತಾ ಬಂದಿರುವ 'ಅರ್ಚಕ' ಎಂಬ ಪೂಜಾರಿಗಳೇ ತಯಾರಿಸುತ್ತಾರೆ. ಈ ಲಾಡುಗಳನ್ನು ತಯಾರಿಸಲೆಂದೇ ದೇವಸ್ಥಾನದ ಮಗ್ಗುಲಲ್ಲಿಯೇ 'ಪೋತು' ಎಂಬ ಬೃಹತ್ ಅಡುಗೆ ಮನೆ ಇದೆ.

ಲಾಡು ತಯಾರಿಸಲು ಬೇಕಾಗುವ ಸಾಮಾಗ್ರಿಗಳು

ಲಾಡು ತಯಾರಿಸಲು ಬೇಕಾಗುವ ಸಾಮಾಗ್ರಿಗಳು

ಪ್ರತಿದಿನದ ಲಾಡು ತಯಾರಿಸಲು ಐನೂರು ಕೇಜಿ ಕಡ್ಲೆಹಿಟ್ಟು, ಸಾವಿರ ಕೇಜಿ ಸಕ್ಕರೆ, ಮುನ್ನೂರು ಕೇಜಿ ಏಲಕ್ಕಿ, ಐನೂರು ಕೇಜಿ ಕಲ್ಲು ಸಕ್ಕರೆ, ಏಳುನೂರಾಐವತ್ತು ಕೇಜಿ ಒಣದ್ರಾಕ್ಷಿ ಮತ್ತು ಐನೂರು ಕೇಜಿ ತುಪ್ಪದ ಅಗತ್ಯವಿದೆ.

ಕಡ್ಲೆಹಿಟ್ಟು-ಸಕ್ಕರೆ-ಗೋಡಂಬಿ -ಬಾದಾಮಿಗಳ ಮಿಶ್ರಣ

ಕಡ್ಲೆಹಿಟ್ಟು-ಸಕ್ಕರೆ-ಗೋಡಂಬಿ -ಬಾದಾಮಿಗಳ ಮಿಶ್ರಣ

ಈ ಲಾಡುಗಳಲ್ಲಿ ಕಡ್ಲೆಹಿಟ್ಟು ಮತ್ತು ಸಕ್ಕರೆಗೆ ಹೊರತಾಗಿ ಗೋಡಂಬಿ ಮತ್ತು ಬಾದಾಮಿಗಳನ್ನೂ ಅಲ್ಪಪ್ರಮಾಣದಲ್ಲಿ ಮಿಶ್ರಣ ಮಾಡಲಾಗುತ್ತದೆ. ಲಾಡುವಿಗೆ ಬಳಸಲಾಗುವ ಎಲ್ಲಾ ಸಾಮಾಗ್ರಿಗಳು ಅತ್ಯುತ್ತಮ ಗುಣಮಟ್ಟದ್ದಾಗಿರುತ್ತವೆ ಹಾಗೂ ಒಣಫಲ ಮತ್ತು ಮಸಾಲೆ ಪದಾರ್ಥಗಳನ್ನು ಕೇರಳದ ಕೊಚ್ಚಿನ್ ನಗರದ ಸ್ಪೈಸ್ ಎಕ್ಸ್ ಚೇಂಜ್ ಸಂಸ್ಥೆಯಿಂದ ಹರಾಜು ಮೂಲಕ ಕೊಂಡು ತರಲಾಗುತ್ತದೆ.

ತಿರುಮಲ ವೆಂಕಟೇಶ್ವರ ದೇವರ ಮಹಿಮೆ ಗೊತ್ತೇನು?

English summary

Glorious facts about the Tirupati Ladoo

No pilgrimage to the Tirupati Temple is complete without the laddu prasad. It is the most sought after prasad type at the richest Hindu temple in the world. Pilgrims buy tokens for the prasad and collect it after prayers to Lord Tirumala. The laddu prasad sells like a hot cake during Brahmotsavam. Here are some facts about the popular Tirupati ladoo:
Subscribe Newsletter