For Quick Alerts
ALLOW NOTIFICATIONS  
For Daily Alerts

ವಿವಿಧ ದೇಶಗಳ ರಾಷ್ಟ್ರಧ್ವಜದ ವಿನ್ಯಾಸದಲ್ಲಿ ಅಡಗಿರುವ ರಹಸ್ಯ

By Arshad
|

ಯಾವುದೇ ದೇಶದ ಧ್ವಜ ಆ ದೇಶದ ಸಂಸ್ಕೃತಿ ಮತ್ತು ಧ್ಯೇಯೋದ್ದೇಶವನ್ನು ಬಿಂಬಿಸುತ್ತದೆ. ಆದರೆ ಯಾವುದೇ ರಾಷ್ಟ್ರಧ್ವಜ ಒಂದೇ ರೂಪದಲ್ಲಿ ಅಂತಿಮರೂಪ ಪಡೆದಿರುವುದಿಲ್ಲ. ಇದಕ್ಕೂ ಮುನ್ನ ಹತ್ತು ಹಲವು ಬದಲಾವಣೆಗಳನ್ನು ಹೊಂದಿಯೇ ಬರುತ್ತದೆ. ನಮ್ಮ ಭಾರತದ ಧ್ವಜವೂ ಹತ್ತು ಹಲವು ಮಾರ್ಪಾಡುಗಳ ಬಳಿಕ ಈಗ ತ್ರಿವರ್ಣರೂಪ ಹೊಂದಿದ್ದು ಪ್ರತಿ ವರ್ಣವೂ ಸಂಕೇತವನ್ನು ಸಾರುತ್ತವೆ.

ಕೇಸರಿ ಶೌರ್ಯವನ್ನೂ, ಬಿಳಿ ಶಾಂತಿಯನ್ನೂ ಮತ್ತು ಹಸಿರು ಪ್ರಗತಿ ಮತ್ತು ಪಾವಿತ್ರ್ಯವನ್ನೂ ಬಿಂಬಿಸುತ್ತವೆ. ನಡುವಣ ಚಕ್ರ ಧರ್ಮವನ್ನು ಬಿಂಬಿಸುತ್ತದೆ. ನಮ್ಮ ದೇಶದ ಧ್ವಜ ಹೀಗೆ. ಆದರೆ ಉಳಿದ ದೇಶಗಳದ್ದು ಹೇಗೆ? ಇದರ ಮಾಹಿತಿಗಳಲ್ಲಿ ಕೆಲವು ರಹಸ್ಯಗಳು ಅಡಗಿವೆ. ಬನ್ನಿ, ಈ ಕುತೂಹಲಕರ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ....

ಉತ್ತರ ಕೊರಿಯಾ

ಉತ್ತರ ಕೊರಿಯಾ

ಇದರಲ್ಲಿರುವ ಕೆಂಪು ನಕ್ಷತ್ರ ಸಮತಾವಾದವನ್ನು ಬಿಂಬಿಸುತ್ತದೆ. ಧ್ವಜದಲ್ಲಿರುವ ಬಿಳಿ ಪಟ್ಟಿಗಳು ಪರಿಶುದ್ಧತೆಯನ್ನೂ ನೀಲಿ ಪಟ್ಟಿಗಳು ಶಾಂತಿಯನ್ನೂ ಬಿಂಬಿಸುತ್ತವೆ.

ಅರಬ್ ಸಂಯುಕ್ತ ಸಂಸ್ಥಾನ (United Arab Emirates (UAE)

ಅರಬ್ ಸಂಯುಕ್ತ ಸಂಸ್ಥಾನ (United Arab Emirates (UAE)

1971ರಲ್ಲಿ ಈ ಪ್ರದೇಶದಲ್ಲಿದ್ದ ಒಟ್ಟು ಏಳು ಸಂಸ್ಥಾನಗಳು ಒಟ್ಟುಗೂಡಿ ಒಂದು ದೇಶವಾದ ಬಳಿಕ ಈ ಧ್ವಜವನ್ನು ಲೋಕಾರ್ಪಣೆಗೊಳಿಸಲಾಯಿತು. ಬಿಳಿಬಣ್ಣ ಶಾಂತಿ ಮತ್ತು ಪ್ರಾಮಾಣಿಕತೆ ಬಿಂಬಿಸಿದರೆ ಕಪ್ಪುಬಣ್ಣ ಶತ್ರುವನ್ನು ಸೋಲಿಸುವ, ಕೆಂಪು ಬಣ್ಣ ಧೈರ್ಯ ಮತ್ತು ಹಸಿರುಬಣ್ಣ ಆಶಾವಾದ ಮತ್ತು ಶುಭಪ್ರತೀಕ್ಷೆಯನ್ನು ಬಿಂಬಿಸುತ್ತದೆ.

ಆಸ್ಟ್ರೇಲಿಯಾ

ಆಸ್ಟ್ರೇಲಿಯಾ

ವಿಶ್ವದ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಇದು ಕೇವಲ ಒಂದು ಶತಮಾನದ ನಾಗರಿಕತೆ ಹೊಂದಿದ್ದು ಇದರ ಧ್ವಜಕ್ಕೀಗ 115ರ ಸಂಭ್ರಮ. ಈ ಧ್ವಜದ ಎಡಮೇಲ್ಭಾಗದಲ್ಲಿ ಕಾಲುಭಾಗವನ್ನು ಆವರಿಸುವ ಬ್ರಿಟಿಷ್ ಧ್ವಜ ಈ ನೆಲ ಬ್ರಿಟಿಷ್ ಆಳ್ವಿಕೆಗೆ ಸೇರಿದ್ದು ಎಂದು ಸ್ಪಷ್ಟವಾಗಿ ಸಾರಿದರೆ (ಈದೇ ಕಾರಣಕ್ಕೆ ಇದಕ್ಕೆ jack union ಎಂದು ಕರೆಯುತ್ತಾರೆ) ಇದರ ಕೆಳಗೆ ಇರುವ ದೊಡ್ಡಗಾತ್ರದ ನಕ್ಷತ್ರ ಕಾಮನ್ ವೆಲ್ತ್ ಅಂದರೆ ಬ್ರಿಟಿಷರ ಆಳ್ವಿಕೆಯಲ್ಲಿದ್ದು ಈಗ ಸ್ವತಂತ್ರವಾದ ಸಂಕೇತವಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಆಸ್ಟ್ರೇಲಿಯಾ

ಆಸ್ಟ್ರೇಲಿಯಾ

ಈ ನಕ್ಷತ್ರದಲ್ಲಿ ಏಳು ಬಾಹುಗಳಿದ್ದು ಇದರಲ್ಲಿ ಆರು ಆಸ್ಟ್ರೇಲಿಯಾದ ರಾಜ್ಯ ಅಥವಾ ಸಂಸ್ಥಾನಗಳನ್ನು ಬಿಂಬಿಸುತ್ತದೆ. ಇನ್ನುಳಿದ ಐದು ನಕ್ಷತ್ರಗಳಲ್ಲಿ ನಾಲ್ಕು ಒಂದೇ ಗಾತ್ರ ಮತ್ತು ಇನ್ನೊಂದು ಚಿಕ್ಕ ಗಾತ್ರ ಹೊಂದಿದ್ದು ಆಸ್ಟ್ರೇಲಿಯಾದಲ್ಲಿದ್ದು ರಾತ್ರಿ ಆಗಸ ನೋಡಿದಾಗ ಪ್ರಮುಖ ನಕ್ಷತ್ರಗಳು ಆಗಸದಲ್ಲಿ ಹೇಗೆ ಮೂಡುತ್ತವೆಯೋ ಆ ಸ್ಥಾನಗಳಲ್ಲಿರುವಂತೆ ಮೂಡಿಸಲಾಗಿದೆ. ಇದು ಆಸ್ಟ್ರೇಲಿಯಾ ದಕ್ಷಿಣಾರ್ಧ ಗೋಳದಲ್ಲಿದೆ ಎಂಬುದನ್ನು ತಿಳಿಸುವ ವಿಧಾನವಾಗಿದೆ.

ಭಾರತ

ಭಾರತ

ರಸಪ್ರಶ್ನೆಯಲ್ಲಿ ಭಾರತದ ಧ್ವಜದಲ್ಲಿ ಎಷ್ಟು ಬಣ್ಣಗಳಿವೆ ಎಂದು ಕೇಳಿದರೆ ನೆರೆದಿದ್ದ ಅಷ್ಟೂ ಜನರು ಮೂರು ಎಂಬ ತಪ್ಪು ಉತ್ತರ ನೀಡುತ್ತಾರೆ. ವಾಸ್ತವವಾಗಿ ನಮ್ಮ ಧ್ವಜದ ತ್ರಿವರ್ಣಗಳ ನಡುವಣ ಧರ್ಮಚಕ್ರ ಕಡುನೀಲಿ ಬಣ್ಣದ್ದಾಗಿದೆ, ಆ ಪ್ರಕಾರ ನಾಲ್ಕು ಬಣ್ಣಗಳಾಯಿತು. ಕೇಸರಿ ಶೌರ್ಯವನ್ನೂ, ಬಿಳಿ ಶಾಂತಿಯನ್ನೂ ಮತ್ತು ಹಸಿರು ಪ್ರಗತಿ ಮತ್ತು ಪಾವಿತ್ರ್ಯವನ್ನೂ ಬಿಂಬಿಸುತ್ತವೆ. ನಡುವಣ ಅಶೋಕ ಚಕ್ರ ಧರ್ಮವನ್ನು ಬಿಂಬಿಸುತ್ತದೆ.

ದಕ್ಷಿಣ ಆಫ್ರಿಕಾ

ದಕ್ಷಿಣ ಆಫ್ರಿಕಾ

ಹತ್ತು ಹಲವು ಮಾರ್ಪಾಡುಗಳನ್ನು ಪಡೆದ ಬಳಿಕ ಕಡೆಗೂ 1994ರಲ್ಲಿ ದಕ್ಷಿಣ ಆಫ್ರಿಕಾ ತನ್ನದೇ ಆದ ಧ್ವಜವನ್ನು ಬಿಡುಗಡೆಗೊಳಿಸಿದೆ. ವರ್ಣನೀತಿ, ವರ್ಣದ್ವೇಶದ ದಳ್ಳುರಿಯಲ್ಲಿ ಶತಮಾನಗಳನ್ನೇ ಕಳೆದ ಈ ದೇಶ ವರ್ಣನೀತಿಯಿಂದ ಹೊರಬಂದ ಸಂಕೇತವಾಗಿ ಈ ಧ್ವಜ ಆ ದೇಶದ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಸ್ಥಾನ ವಹಿಸಿದೆ.

ದಕ್ಷಿಣ ಆಫ್ರಿಕಾ

ದಕ್ಷಿಣ ಆಫ್ರಿಕಾ

ಈ ಧ್ವಜದಲ್ಲಿಯೂ ಯೂನಿಯನ್ ಜಾಕ್ ಅಂದರೆ ಇತರ ದೇಶದ ವಸಾಹತು ಆಗಿದ್ದ ಕುರುಹನ್ನು ಕೆಂಪು ಮತ್ತು ನೀಲಿ ಬಣ್ಣಗಳು ಬಿಂಬಿಸಿದರೆ ಹಳದಿ, ಹಸಿರು ಮತ್ತು ಕಪ್ಪು ಬಣ್ಣಗಳು ಆಫ್ರಿಕನ್ ನ್ಯಾಶನಲ್ ಕಾಂಗ್ರೆಸ್ ನ ಉಪಸ್ಥಿತಿಯನ್ನು ಬಿಂಬಿಸುತ್ತವೆ. ಈ ಧ್ವಜದಲ್ಲಿ ಒಟ್ಟು ಆರು ಬಣ್ಣಗಳಿದ್ದು ವರ್ಣನೀತಿಯ ಮತ್ತು ರಾಷ್ಟ್ರದ ವಿವಿಧ ಸಂಸ್ಕೃತಿ ಮತ್ತು ಜನಾಂಗಗಳನ್ನೂ ಬಿಂಬಿಸುತ್ತವೆ.

ಚೀನಾ

ಚೀನಾ

ಪೂರ್ಣ ಕಡುಗೆಂಪು ಧ್ವಜದಲ್ಲಿ ಕೇವಲ ಐದು ನಕ್ಷತ್ರಗಳನ್ನು ಹೊಂದಿರುವ ಚೀನಾದ ಧ್ವಜದ ಕೆಂಪು ಬಣ್ಣ ಸಮತಾವಾದವನ್ನು ಬಿಂಬಿಸುತ್ತದೆ. ಐದು ನಕ್ಷತ್ರಗಳು ಚಿನ್ನದ ಬಣ್ಣದ್ದಾಗಿದ್ದು ಇದರಲ್ಲಿ ಒಂದು ಐದು ಬಾಹುಗಳ ದೊಡ್ಡ ನಕ್ಷತ್ರವಾಗಿದೆ. ಬಲಭಾಗದಲ್ಲಿ ನಾಲ್ಕು ಚಿಕ್ಕ ನಕ್ಷತ್ರಗಳು ಸುತ್ತುವರೆದು ನಿಂತಿರುವಂತಿದೆ. ದೊಡ್ಡ ನಕ್ಷತ್ರ ಎಲ್ಲರೂ ಒಂದೇ ಎಂಬ ಸಂದೇಶವನ್ನು ನೀಡಿದರೆ ಉಳಿದ ನಕ್ಷತ್ರಗಳು ನಾಡಿನ ವಿವಿಧ ಸಾಮಾಜಿಕ ಸ್ಥಾನಗಳು ಇದಕ್ಕೆ ಬದ್ದ ಎಂದು ಸೂಚಿಸುತ್ತಿವೆ.

ಬ್ರೆಜಿಲ್

ಬ್ರೆಜಿಲ್

ಈ ದೇಶದ ಧ್ವಜದಲ್ಲಿ ಸೂಕ್ಷ್ಮವಾದ ಹಲವು ಮಾಹಿತಿಗಳಿವೆ. ಹಸಿರು ಧ್ವಜದಲ್ಲಿ ಹಳದಿ ಚತುರ್ಭುಜದೊಳಗಿರುವ ಕಡುನೀಲಿ ವೃತ್ತಾಕಾರವನ್ನು ಭೂಮಿಯ ಸಮಭಾಜಕ ರೇಖೆಯ ರೂಪದಲ್ಲಿ ಒಂದು ಪಟ್ಟಿ ಹಾದು ಹೋಗಿದ್ದು ಕೆಳಗಿನ ಭಾಗದಲ್ಲಿ ಒಟ್ಟು ಇಪ್ಪತ್ತಾರು ಚಿಕ್ಕದಾದ ನಕ್ಷತ್ರಗಳಿವೆ. ಮೇಲ್ಭಾಗದಲ್ಲಿ ಮಾತ್ರ ಒಂದೇ ನಕ್ಷತ್ರವಿದ್ದು ಈ ನಕ್ಷತ್ರ ರಾಜಧಾನಿ (federal district)ಯನ್ನು ಬಿಂಬಿಸುತ್ತವೆ. ಒಟ್ಟು ಇಪ್ಪತ್ತೇಳು ನಕ್ಷತ್ರಗಳು ದೇಶದ ಇಪ್ಪತ್ತೇಳು ರಾಜ್ಯಗಳನ್ನು ಬಿಂವಿಸುತ್ತವೆ. ಅಷ್ಟೇ ಅಲ್ಲ, ರಾತ್ರಿ ಹೊತ್ತು ಈ ದೇಶದ ಆಗಸ ಹೇಗೆ ಕಾಣುತ್ತದೆಯೋ ಹಾಗೇ ಈ ನಕ್ಷತ್ರಗಳನ್ನು ಅಳವಡಿಸಲಾಗಿದೆ. ಹಳದಿ ಚತುರ್ಭುಜ ಬ್ರೆಜಿಲ್ ನ ಚಿನ್ನದ ಭಂಡಾರವನ್ನೂ, ಹಸಿರು ಬಣ್ಣ ದೇಶದ ವಿಶಾಲ ಹಸಿರಸಿರಿಯನ್ನೂ ಬಿಂಬಿಸುತ್ತವೆ. ಸಮಭಾಜಕ ಪಟ್ಟಿಯಲ್ಲಿ "Ordem e Progresso" ("Order and Progress") ಅಂದರೆ ಆದೇಶ ಮತ್ತು ಪ್ರಗತಿ ಹಸಿರು ಬಣ್ಣದಲ್ಲಿ ಎಂದೂ ಬರೆಯಲಾಗಿದೆ.

ಯುನೈಟೆಡ್ ಕಿಂಗ್ಡಂ: (ಯು.ಕೆ)

ಯುನೈಟೆಡ್ ಕಿಂಗ್ಡಂ: (ಯು.ಕೆ)

ಒಂದು ಕೂಡಿಸು ಮತ್ತು ಒಂದು ಗುಣಿಸು ಆಕಾರವನ್ನು ಹೊಂದಿರುವ ಈ ಆಕೃತಿಯನ್ನು ಯೂನಿಯನ್ ಜಾಕ್ ಎಂದು ಕರೆಯಲಾಗುತ್ತದೆ. ನೀಲಿ ಹಿನ್ನೆಲೆಯಲ್ಲಿ ಕಿರಿಯ ಕೆಂಪು ಪಟ್ಟಿ ಮತ್ತು ಅದರ ಹಿಂದೆ ಕೊಂಚ ಅಗಲವಾದ ಬಿಳಿಯ ಪಟ್ಟಿಗಳಿವೆ.

ಯುನೈಟೆಡ್ ಕಿಂಗ್ಡಂ: (ಯು.ಕೆ)

ಯುನೈಟೆಡ್ ಕಿಂಗ್ಡಂ: (ಯು.ಕೆ)

1901ರಿಂದ ಇಂಗ್ಲೆಂಡ್ ಮತ್ತು ಐರ್ಲೆಂಡಿನ ರಾಷ್ಟ್ರಧ್ವಜವಾಗಿರುವ ಯೂನಿಯನ್ ಜಾಕ್ ವಾಸ್ತವವಾಗಿ ಮೂರು ಧ್ವಜಗಳನ್ನು ಒಗ್ಗೂಡಿಸಿ ಮಾಡಿದ ರೂಪಾಂತರವಾಗಿದೆ. ಮೊದಲನೆಯದು ಇಂಗ್ಲೆಂಡಿನ ಸೆಂಟ್ ಜಾರ್ಜ್ ಕ್ರಾಸ್, ಎರಡನೆಯದು ಸ್ಕಾಟ್ಲಾಂಡಿನ ಸೆಂಟ್ ಆಂಡ್ರ್ಯೂ ಕ್ರಾಸ್ ಮತ್ತು ಮೂರನೆಯದು ಐರ್ಲೆಂಡಿನ ಸೆಂಟ್ ಪ್ಯಾಟ್ರಿಕ್ ಕ್ರಾಸ್.

ಲೆಬನಾನ್

ಲೆಬನಾನ್

ಈ ದೇಶದ ಧ್ವಜದಲ್ಲಿ ಮೇಲೆ ಕೆಳಗೆ ಎರಡು ಕೆಂಪು ಪಟ್ಟಿಗಳಿದ್ದು ನಡುವೆ ಇದಕ್ಕಿಂತ ಕೊಂಚವೇ ಹೆಚ್ಚು ಅಗಲವಾದ ಬಿಳಿ ಪಟ್ಟಿಯಿದೆ. ನಡುವೆ ಹಸಿರು ಬಣ್ಣದಲ್ಲಿ ಆ ದೇಶದಲ್ಲಿ ಹೇರಳವಾಗಿ ಬೆಳೆಯುವ ಸೇಡಾರ್ ಎಂಬ ಮರದ ಚಿತ್ರವಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಲೆಬನಾನ್

ಲೆಬನಾನ್

ಕೆಂಪುಬಣ್ಣ ರಕ್ತವನ್ನು, ಅಂದರೆ ದೇಶದ ವಿಮೋಚನೆಗಾಗಿ ಹರಿಸಿದ ರಕ್ತದ ಸಂಕೇತವಾಗಿದೆ. ಬಿಳಿಬಣ್ಣ ಮಂಜು ಮತ್ತು ಶಾಂತಿಯನ್ನು ಪ್ರತಿಪಾದಿಸುತ್ತದೆ. ಹಸಿರು ಬಣ್ಣದ ಸೇಡಾರ್ ಮರ ರಾಷ್ಟ್ರೀಯ ಸಂಕೇತವೂ ಆಗಿದ್ದು ಧ್ವಜದಲ್ಲಿ ಅಮರ್ತ್ಯತೆಯನ್ನು ಬಿಂಬಿಸುತ್ತದೆ.

English summary

World Flags and their Hidden Meanings

World Flags and their Hidden Meanings World Flags and their Hidden Meanings. Flags originated on battlefields as a means of identification and hierarchy. Over the years, they have evolved to incorporate symbols significant to the countries they represent.
X