For Quick Alerts
ALLOW NOTIFICATIONS  
For Daily Alerts

ದೇಹದ ಮೇಲಿನ ಮಚ್ಚೆ, ನಿಮ್ಮ ಜಾತಕವನ್ನೇ ಬಿಚ್ಚಿಡುತ್ತದೆ!

By Manohar
|

ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಗಳೆಲ್ಲವೂ ಒಂದು ಸಾಮಾನ್ಯ ಅಭಿಪ್ರಾಯ ಮಾತ್ರವಾಗಿದ್ದು ವಿವಿಧ ವ್ಯಕ್ತಿಗಳ ಮಚ್ಚೆ ಮತ್ತು ವ್ಯಕ್ತಿತ್ವವನ್ನು ವಿಶ್ಲೇಷಿಸಿ, ಅಭ್ಯಸಿಸಿ ಕಂಡುಕೊಂಡು ಉತ್ತರಗಳೇ ಹೊರತು ಹೀಗೇ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಸಾಮಾನ್ಯವಾಗಿ ಓರ್ವ ವ್ಯಕ್ತಿಯ ಮಚ್ಚೆ ಇರುವ ಸ್ಥಳವನ್ನು ಕಂಡವರು ಹೀಗಿದ್ದರೆ ಈ ವ್ಯಕ್ತಿ ಹೀಗೆ ಎಂಬ ಅಭಿಪ್ರಾಯ ತಳೆಯುತ್ತಾರೆ. ಸಾಮಾನ್ಯವಾಗಿ ಹುಟ್ಟುಮಚ್ಚೆಗೆ, ಅಂದರೆ ಹುಟ್ಟಿದಾಗಿನಿಂದ ಇರುವ ಮಚ್ಚೆಗೆ ವಿಶೇಷ ಮಹತ್ವವಿದೆ. ವ್ಯಕ್ತಿಯ ಚಹರೆ ಕಂಡುಕೊಳ್ಳಲು ಪಾಸ್ ಪೋರ್ಟ್ ಮೊದಲಾದ ಪ್ರಮುಖ ದಾಖಲೆಗಳಲ್ಲಿಯೂ ಈ ಮಚ್ಚೆಗಳಿಗೆ ವಿಶೇಷ ಸ್ಥಾನವಿದೆ. ಮಚ್ಚೆಯಲ್ಲಿ ಅಡಗಿದೆಯೇ ನಮ್ಮ ಭವಿಷ್ಯ?  

ಮಚ್ಚೆಗಳು ನಮ್ಮ ಚರ್ಮದಲ್ಲಿ ಕೆಲವು ಸ್ಥಳಗಳಲ್ಲಿ ದಟ್ಟವಾಗುವ ವರ್ಣದ್ರವ್ಯವೇ ಹೊರತು ಇದು ಯಾವ ಕಾಯಿಲೆಯಾಗಲೀ ಇದರಿಂದ ಯಾವುದೇ ತೊಂದರೆಯಾಗಲೀ ಇಲ್ಲ. ಕೆಲವು ಇದ್ದ ಹಾಗೇ ಇದ್ದರೆ ಕೆಲವು ವರ್ಷಗಳೆದಂತೆ ಅಗಲವಾಗುತ್ತಾ ಹೋಗುತ್ತವೆ. ಇನ್ನೂ ಕೆಲವು ವರ್ಷಗಳೆದಂತೆ ಪುಟ್ಟ ದ್ರಾಕ್ಷಿ ಹಣ್ಣಿನಂತೆ ಚರ್ಮದ ಹೊರಕ್ಕೆ ತೂಗಾಡುತ್ತಿರುತ್ತದೆ. ಕೆಲವೊಮ್ಮೆ ಮಚ್ಚೆಗಳು ಧಿಡೀರನೇ ಯಾವುದೋ ಸ್ಥಳದಲ್ಲಿ ಪ್ರತ್ಯಕ್ಷವಾಗಿ ನಿಧಾನವಾಗಿ ಬೆಳೆಯುತ್ತಾ ಹೋಗುತ್ತದೆ. ಕೆಲವೊಮ್ಮೆ ಈ ಮಚ್ಚೆಯ ಮೇಲೆ ದಟ್ಟವಾದ ಕೂದಲೂ ಬೆಳೆಯುವುದುಂಟು. ಮಚ್ಚೆಗಳ ಬಗ್ಗೆ ವಿವಿಧ ಜನರಲ್ಲಿ ವಿವಿಧ ಅಭಿಪ್ರಾಯಗಳಿವೆ.

ಬಲಗಣ್ಣಿನಲ್ಲಿ ಮಚ್ಚೆ ಇದ್ದವರು ಇಂಥವರು, ಹಣೆಯ ಮೇಲೆ ಇಂತಹವರ ಗುಣ ಹೀಗೆ ಎಂಬ ನಂಬಿಕೆ ನೂರಾರು ವರ್ಷಗಳಿಂದ ಬೆಳೆದು ಬಂದಿದೆ. ಆದರೆ ಇವು ಯಾವುವೂ ಖಚಿತವಾದ ಮಾಹಿತಿಗಳಲ್ಲ. ಒಂದೇ ತಾಯಿಯ ಅವಳಿ ಮಕ್ಕಳಲ್ಲಿಯೇ ವಿರುದ್ಧ ಗುಣಗಳಿರಬೇಕಾದರೆ ಕೇವಲ ಮಚ್ಚೆ ಇರುವ ಸ್ಥಾನ ಯಾರ ಗುಣವನ್ನೂ ಸ್ಪಷ್ಟವಾಗಿ ತಿಳಿಸಲಾರದು. ಆದರೂ ಮಚ್ಚೆ ಇರುವ ಸ್ಥಾನ ವ್ಯಕ್ತಿಯ ಗುಣವನ್ನು ಸರಿಸುಮಾರಾಗಿ ತಿಳಿಸುತ್ತದೆ ಎಂದು ಸಮೀಕ್ಷೆಗಳು ತಿಳಿಸುತ್ತವೆ. ಬನ್ನಿ, ಈ ಬಗ್ಗೆ ಹೆಚ್ಚಿನ ವಿವರಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ..

ಹುಬ್ಬಿನಲ್ಲಿರುವ ಮಚ್ಚೆ

ಹುಬ್ಬಿನಲ್ಲಿರುವ ಮಚ್ಚೆ

ಈ ವ್ಯಕ್ತಿಗಳು ಸಾಮಾನ್ಯವಾಗಿ ಕ್ರಿಯಾತ್ಮಕರಾಗಿದ್ದು ಸದಾ ಮನದಲ್ಲಿ ಹೊಸತನ್ನು ಅಥವಾ ಈಗಿರುವುದನ್ನು ಬದಲಿಸುವ ಬಗ್ಗೆ ಯೋಚಿಸುತ್ತಿರುತ್ತಾರೆ. ಇವರು ಸದಾ ಅದೃಷ್ಟ ತಮ್ಮೆಡೆಗೆ ಇರುತ್ತದೆ ಎಂದು ಭಾವಿಸಿರುತ್ತಾರೆ. ಈ ವ್ಯಕ್ತಿಗಳಿಗೆ ಸಾಮಾನ್ಯವಾಗಿ ಉತ್ತಮ ಉದ್ಯೋಗ, ತನ್ಮೂಲಕ ಧನ ಮತ್ತು ನೆಮ್ಮದಿ ಲಭಿಸಿರುತ್ತದೆ.

ಮೇಲ್ತುಟಿಯಲ್ಲಿರುವ ಮಚ್ಚೆ

ಮೇಲ್ತುಟಿಯಲ್ಲಿರುವ ಮಚ್ಚೆ

ಈ ವ್ಯಕ್ತಿಗಳು ಮಚ್ಚೆಯ ಕಾರಣದಿಂದಲೇ ಸುಲಭವಾಗಿ ಇತರರ ಗಮನವನ್ನು ಸೆಳೆಯುತ್ತಾರೆ. ತಾವು ಆಕರ್ಷಕರಾಗಿರುವ ಪ್ರಯೋಜನವನ್ನು ಅವರು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವುದನ್ನು ಕಂಡುಕೊಳ್ಳಲಾಗಿದೆ. ಇವರು ಅತಿ ಸ್ನೇಹಜೀವಿಗಳೂ ಸುಲಭವಾಗಿ ಇನ್ನೊಬ್ಬರೊಂದಿಗೆ ಹೊಂದಿಕೊಳ್ಳುವವರೂ ಆಗಿದ್ದಾರೆ. ಆದರೆ ಇವರ ಸ್ನೇಹದ ಉದ್ದೇಶ ಮಾತ್ರ ಹೆಚ್ಚಿನ ಸಂದರ್ಭದಲ್ಲಿ ಸ್ವಾರ್ಥಪರವಾಗಿರುತ್ತದೆ.

ಹಣೆಯ ಪಕ್ಕ (ಕನ್ನಡಕ ಧರಿಸಿದರೆ ಕನ್ನಡಕದ ಕಡ್ಡಿ ತಾಕುವಲ್ಲಿ)

ಹಣೆಯ ಪಕ್ಕ (ಕನ್ನಡಕ ಧರಿಸಿದರೆ ಕನ್ನಡಕದ ಕಡ್ಡಿ ತಾಕುವಲ್ಲಿ)

ಈ ಸ್ಥಳದಲ್ಲಿ ಮಚ್ಚೆ ಇರುವ ವ್ಯಕ್ತಿಗಳು ಸದಾ ಚಲನಶೀಲರಾಗಿದ್ದು ಪ್ರಯಾಣವೇ ಮುಖ್ಯವಾಗಿರುವ ಉದ್ಯೋಗಗಳಲ್ಲಿ ಸಾರ್ಧಕತೆ ಪಡೆದುಕೊಳ್ಳುತ್ತಾರೆ. ಸಾಮಾನ್ಯವಾಗಿ ಒಂದೇ ಊರಿನಲ್ಲಿ ನೆಲೆಸಲು ಇಷ್ಟಪಡದ ಇವರು ಬೇರೆ ದೇಶಕ್ಕೆ ದೇಶಾಂತರ ಹೋಗಲೂ ಪ್ರಯತ್ನಿಸುತ್ತಿರುತ್ತಾರೆ.

ಕಣ್ಣುರೆಪ್ಪೆಯ ಮೇಲಿರುವ ಮಚ್ಚೆ

ಕಣ್ಣುರೆಪ್ಪೆಯ ಮೇಲಿರುವ ಮಚ್ಚೆ

ಕಣ್ಣುಗಳ ಸೌಂದರ್ಯಕ್ಕೆ ಅವಲಕ್ಷಣವಾಗಿ ಕಾಣುವ ಈ ಮಚ್ಚೆ ಇರುವ ವ್ಯಕ್ತಿಗಳು ಬಹುಕೌಶಲ್ಯವುಳ್ಳ ವ್ಯಕ್ತಿಗಳಾಗಿರುತ್ತಾರೆ. ಇದೇ ಇವರ ಕೊರತೆಯಾಗಿದ್ದು ಯಾವುದೇ ಒಂದು ಕೌಶಲ್ಯದಲ್ಲಿ ಪರಿಣಿತಿ ಸಾಧಿಸಲು ಸಾಧ್ಯವಾಗುವುದಿಲ್ಲ. ಆದರೆ ಇನ್ನುಳಿದಂತೆ ತಮ್ಮ ಪ್ರತಿಭೆಯಿಂದಾಗಿ ಇವರು ಸುತ್ತಮುತ್ತಲ ಎಲ್ಲರಿಗೂ ಬೇಕಾದವರಾಗಿರುತ್ತಾರೆ.

ಕೆನ್ನೆಯ ಮೂಳೆಯ ಮೇಲಿರುವ ಮಚ್ಚೆ

ಕೆನ್ನೆಯ ಮೂಳೆಯ ಮೇಲಿರುವ ಮಚ್ಚೆ

ದವಡೆಯ ಮೇಲೆ ಒತ್ತಿ ನೋಡಿದರೆ ಕೆನ್ನೆಯ ಮೂಳೆ ಇರುವುದು ಅನುಭವಕ್ಕೆ ಬರುತ್ತದೆ. ಈ ಸ್ಥಳದಲ್ಲಿ ಮಚ್ಚೆ ಇರುವ ವ್ಯಕ್ತಿಗಳು ಸಾಮಾನ್ಯವಾಗಿ ಹೆಚ್ಚು ಪ್ರಭಾವಿ ವ್ಯಕ್ತಿಗಳಾಗಿದ್ದು ಸಮಾಜದಲ್ಲಿ ಹೆಚ್ಚಿನ ಮನ್ನಣೆ ಪಡೆಯುವವರಾಗಿರುತ್ತಾರೆ. ಇವರು ಸಾಮಾನ್ಯವಾಗಿ ಜನಸೇವೆ ಅಥವಾ ಜನಸಂಪರ್ಕದ ಉದ್ಯೋಗಗಳಲ್ಲಿ ಹೆಚ್ಚು ಯಶಸ್ವಿಯಾಗಿದ್ದು ದಿನಗಳೆದಂತೆ ಧನವಂತರೂ ಪ್ರಭಾವಿಗಳೂ ಆಗುತ್ತಾ ಹೋಗುತ್ತಾರೆ.

ಹಸ್ತದಲ್ಲಿರುವ ಮಚ್ಚೆ

ಹಸ್ತದಲ್ಲಿರುವ ಮಚ್ಚೆ

ಹಸ್ತದಲ್ಲಿ ಅಥವಾ ಅಂಗೈಯಲ್ಲಿ ಮಚ್ಚೆ ಇದ್ದವರನ್ನು ಅತ್ಯಂತ ಅದೃಷ್ಟವಂತರೆಂದು ಭಾವಿಸಲಾಗುತ್ತದೆ. ಏಕೆಂದರೆ ಇವರು ಹಣ ಮತ್ತು ವ್ಯಕ್ತಿಗಳನ್ನು ಹೇಗೆ ನಡೆಸಿಕೊಳ್ಳಬೇಕು ಎಂದು ಅರಿತಿರುವವರಾಗಿದ್ದು ಸಮಾಜದಲ್ಲಿ ಗಣ್ಯರೆಂದು ಗುರುತಿಸಲ್ಪಡುತ್ತಾರೆ.

ಪಾದದಲ್ಲಿರುವ ಮಚ್ಚೆ

ಪಾದದಲ್ಲಿರುವ ಮಚ್ಚೆ

ಪಾದದಲ್ಲಿ ಮಚ್ಚೆ ಇರುವ ವ್ಯಕ್ತಿಗಳ ಕಾಲಿಗೆ ಚಕ್ರ ಇರುತ್ತದೆ ಎಂಬ ನಂಬಿಕೆ ಬಹಳ ವರ್ಷಗಳಿಂದ ಬೆಳೆದುಬಂದಿದೆ. ಪಾದದ ಯಾವುದೇ ಭಾಗದಲ್ಲಿ ಅಂದರೆ ಕೆಳಭಾಗದಲ್ಲಿ ಅಥವಾ ಮೇಲ್ಭಾಗದಲ್ಲಿ, ಬೆರಳುಗಳಲ್ಲಿ ಅಥವಾ ಹಿಮ್ಮಡಿಯಲ್ಲಿ, ಬಲಪಾದ ಅಥವಾ ಎಡಪಾದ ಎಲ್ಲಿದ್ದರೂ ಇವರು ಸದಾ ಪ್ರಯಾಣಿಸುತ್ತಾ ಇರುತ್ತಾರೆ ಎಂದು ನಂಬಲಾಗಿದೆ. ಇವರು ನಾಯಕತ್ವದ ಗುಣಗಳನ್ನೂ ಸಮರ್ಥವಾಗಿ ಪ್ರದರ್ಶಿಸುವವರಾಗಿದ್ದಾರೆ.

ಹೊಟ್ಟೆ ಮತ್ತು ಸೊಂಟದಲ್ಲಿದ್ದರೆ

ಹೊಟ್ಟೆ ಮತ್ತು ಸೊಂಟದಲ್ಲಿದ್ದರೆ

ಒಂದು ಸ್ಪಷ್ಟವಾದ ಕಪ್ಪು ಮಚ್ಚೆ ಹೊಟ್ಟೆ ಅಥವಾ ಸೊಂಟದಲ್ಲಿದ್ದರೆ (ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಅನ್ವಯ) ಆ ವ್ಯಕ್ತಿ ಸಾಮಾನ್ಯವಾಗಿ ಆಸೆಬುರುಕ ಮತ್ತು ಸ್ವಾರ್ಥಿಯಾಗಿರುತ್ತಾರೆ.

 ಮುಖದಲ್ಲಿ ತುಟಿಯ ಅಕ್ಕಪಕ್ಕ ಇದ್ದರೆ

ಮುಖದಲ್ಲಿ ತುಟಿಯ ಅಕ್ಕಪಕ್ಕ ಇದ್ದರೆ

ಮುಖದಲ್ಲಿ ತುಟಿಯ ಅಕ್ಕಪಕ್ಕದಲ್ಲಿರುವ ಕಪ್ಪು ಮಚ್ಚೆ ಇರುವ ಪುರುಷರು ಸಾಮಾನ್ಯವಾಗಿ ಧನವಂತರೂ ಜೀವನದಲ್ಲಿ ಹೆಚ್ಚು ಸುಖವನ್ನನುಭವಿಸುವವರೂ ಆಗಿರುತ್ತಾರೆ. ಮಹಿಳೆಯರಲ್ಲಿ ಈ ಮಚ್ಚೆ ವಾಚಾಳಿತನ ಮತ್ತು ಅತಿ ಸೂಕ್ಷ್ಮ ಸ್ವಭಾವದವರಾಗಿರುತ್ತಾರೆ.

ಎಡಗೆನ್ನೆಯ ಮೇಲಿದ್ದರೆ

ಎಡಗೆನ್ನೆಯ ಮೇಲಿದ್ದರೆ

ಎಡಗೆನ್ನೆಯ ಮೇಲಿರುವ ಕಪ್ಪು ಮಚ್ಚೆ ಪುರುಷರಿಗೆ ಆರ್ಥಿಕವಾದ ತೊಂದರೆಗಳಿರುವುದನ್ನು ಸೂಚಿಸುತ್ತದೆ. ಮಹಿಳೆಯರಲ್ಲಿ ಈ ಗುರುತು ಅಗೋಚರ ಖಿನ್ನತೆಯನ್ನು ಬಿಂಬಿಸುತ್ತದೆ.

ಎಡಸ್ತನದ ಕೆಳಭಾಗದಲ್ಲಿದ್ದರೆ (ಪುರುಷರು-ಮಹಿಳೆಯರಿಗೆ ಸಮಾನವಾಗಿ ಅನ್ವಯ)

ಎಡಸ್ತನದ ಕೆಳಭಾಗದಲ್ಲಿದ್ದರೆ (ಪುರುಷರು-ಮಹಿಳೆಯರಿಗೆ ಸಮಾನವಾಗಿ ಅನ್ವಯ)

ಈ ಗುರುತು ನೀವು ಕೈಹಾಕಿದ ಎಲ್ಲಾ ಕೆಲಸಗಳಲ್ಲಿ ಯಶಸ್ಸನ್ನು ಸೂಚಿಸುತ್ತದೆ ಹಾಗೂ ನಿಮ್ಮ ಹಾಸ್ಯಪ್ರಜ್ಞೆಯನ್ನು ಬಿಂಬಿಸುತ್ತದೆ. ಅಂದರೆ ನೀವು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ.

ಎದೆಯ ನಡುಭಾಗದಲ್ಲಿದ್ದರೆ (ಪುರುಷರು-ಮಹಿಳೆಯರಿಗೆ ಸಮಾನವಾಗಿ ಅನ್ವಯ)

ಎದೆಯ ನಡುಭಾಗದಲ್ಲಿದ್ದರೆ (ಪುರುಷರು-ಮಹಿಳೆಯರಿಗೆ ಸಮಾನವಾಗಿ ಅನ್ವಯ)

ಈ ಗುರುತು ನಿಮಗೆ ಶುಭವನ್ನೂ, ಜೀವನದಲ್ಲಿ ಸಾಕಷ್ಟು ಧನವನ್ನೂ ತಂದುಕೊಡುವ ಸೂಚನೆಯಾಗಿದೆ.

ಗದ್ದದ ಮೇಲಿದ್ದರೆ

ಗದ್ದದ ಮೇಲಿದ್ದರೆ

ಪುರುಷರಲ್ಲಿರುವ ಈ ಗುರುತು ಆ ವ್ಯಕ್ತಿ ಅತಿ ಕೋಪಿಷ್ಟನೆಂದು ಬಿಂಬಿಸುತ್ತದೆ. ಮಹಿಳೆಯರಲ್ಲಿ ಈ ಗುರುತು ಕುಟುಂಬ ಆಕೆಯ ಆಶ್ರಯದಲ್ಲಿರುವ ಸೂಚನೆಯನ್ನು ನೀಡುತ್ತದೆ.

ಹಣೆಯ ಬಲಭಾಗದಲ್ಲಿದ್ದರೆ (ಪುರುಷರು-ಮಹಿಳೆಯರಿಗೆ ಸಮಾನವಾಗಿ ಅನ್ವಯ)

ಹಣೆಯ ಬಲಭಾಗದಲ್ಲಿದ್ದರೆ (ಪುರುಷರು-ಮಹಿಳೆಯರಿಗೆ ಸಮಾನವಾಗಿ ಅನ್ವಯ)

ಈ ಗುರುತು ನೀವು ಮಾನಸಿಕವಾಗಿ ಅತಿ ಬಲಿಷ್ಟರೆಂಬುದನ್ನು ಸೂಚಿಸುತ್ತದೆ.

ಹಣೆಯ ಎಡಭಾಗದಲ್ಲಿದ್ದರೆ

ಹಣೆಯ ಎಡಭಾಗದಲ್ಲಿದ್ದರೆ

ಈ ಗುರುತು ನಿಮ್ಮ ಜೀವನದ ಆಕಾಂಕ್ಷೆಗಳಿಗೆ ಹಲವು ಅಡ್ದಿ ಆತಂಕಗಳಿರುವುದನ್ನು ಸೂಚಿಸುತ್ತದೆ. ಅಲ್ಲದೇ ಈ ಗುರುತಿರುವವರು ಸಾಮಾನ್ಯವಾಗಿ ಹೆಚ್ಚು ಖರ್ಚು ಮಾಡುವವರಾಗಿರುತ್ತಾರೆ.

ಕೈಗಳ ಮೇಲಿದ್ದರೆ

ಕೈಗಳ ಮೇಲಿದ್ದರೆ

ಕೈಗಳ ಮೇಲಿರುವ ಮಚ್ಚೆ ಇರುವ ಪುರುಷರು ತಮ್ಮ ಹೆಚ್ಚಿನ ವೇಳೆಯನ್ನು ಮನೆಯೊಳಗೇ ಕಳೆಯುವವರಾಗಿರುತ್ತಾರೆ ಹಾಗೂ ಮಕ್ಕಳನ್ನು ನೋಡಿಕೊಳ್ಳುವಲ್ಲಿ, ಶಿಸ್ತನ್ನು ಕಾಪಾಡಿಕೊಳ್ಳುವಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಾರೆ. ಮಹಿಳೆಯಲ್ಲಿರುವ ಈ ಗುರುತು ಆಕೆ ಸ್ವತಂತ್ರಳಾಗಿರಲು ಬಯಸುವುದನ್ನೂ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಆಕಾಂಕ್ಷೆಯುಳ್ಳವಳೆಂಬುದನ್ನೂ ಸೂಚಿಸುತ್ತದೆ.

English summary

What Do Moles Tell About Your Personality

This article is purely fictitious and has no offense to anything or anyone. We're here to share some of the myths regarding moles. These moles are sometimes known to be either lucky or unlucky for a person having them. Moles are generally the benign growths that appear on the body. Read on to know more about the interesting facts about moles that define your personality.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more