For Quick Alerts
ALLOW NOTIFICATIONS  
For Daily Alerts

  ಹೆಣ್ಣನ್ನು ಅರ್ಥೈಸಿಕೊಳ್ಳಲು ಬ್ರಹ್ಮನಿಂದಲೂ ಸಾಧ್ಯವಿಲ್ಲ!

  By Deepu
  |

  ಹೆಣ್ಣಿನ ಮನಸ್ಸಿನಲ್ಲೇನಿದೆ ಎಂದು ತಿಳಿಯಲು ಋಷಿ ಮಹರ್ಷಿಗಳಿಂದಲೇ ಸಾಧ್ಯವಾಗದೇ ಹೋದಾಗ ಹುಲುಮಾನವರಾದ ನಮಗೆ ತಿಳಿಯುವುದು ಅಸಾಧ್ಯವಾದ ಮಾತು. ಆದರೆ ಸೋಲೊಪ್ಪಿಕೊಳ್ಳದ ವಿಜ್ಞಾನಿಗಳು ಈ ಬಗ್ಗೆ ಆಳವಾದ ಸಂಶೋಧನೆ ನಡೆಸಿದರೂ ಹೆಣ್ಣಿನ ಮನಸ್ಸಿನಾಳಕ್ಕೆ ಬಿಡಿ, ಮೇಲ್ಪದವರನ್ನೂ ದಾಟಲು ಸಾಧ್ಯವಾಗಿಲ್ಲ. ಹೆಣ್ಣು ಎಂದರೆ ಮಾಯೆ ಎಂದು ಪುರಾಣದಲ್ಲಿಯೇ ಹೇಳಲಾಗಿದೆ. ಶತಮಾನಗಳಿಂದಲೂ ಗಂಡಿಗೆ ಅರ್ಥವಾಗದ ಇವರ ಚಂಚಲ ಮನಸ್ಸು ಒಂದು ರಹಸ್ಯವಾಗಿಯೇ ಉಳಿದಿದೆ.

  ಅದಕ್ಕೆ ಅಲ್ಲವೇ, ಹಿರಿಯರು ಹೇಳಿದ್ದು, ನೀರಿನಲ್ಲಿ ಮೀನಿನ ಹೆಜ್ಜೆಯನ್ನಾದರೂ ಗುರುತಿಸಬಹುದು ಹೆಣ್ಣಿನ ಮನಸ್ಸಿನಲ್ಲೇನಿದೆ ಎಂದು ತಿಳಿಯಲು ಸಾಧ್ಯವಿಲ್ಲವೆಂದು. ಆದರೆ ಇಂದು ಹೆಣ್ಣಿನ ಚಲನವಲನದ ಬಗ್ಗೆ ಹಿಂದಿನ ಶತಮಾನಕ್ಕಿಂತಲೂ ಕೊಂಚ ಹೆಚ್ಚು ನಮಗೆ ಅರಿವಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಇಂದಿನ ದಿನಗಳಲ್ಲಿ ಮಹಿಳೆಯರಿಗೆ ಹಿಂದಿಗಿಂತಲೂ ದೊರೆತ ಸ್ವಾತಂತ್ಯ, ಮತ್ತು ಗಂಡಿಗೆ ಸಮನಾಗಿ ಸಮಾಜದಲ್ಲಿ ದುಡಿದು ಬಾಳುವ ಅವಕಾಶ.   ರಹಸ್ಯದ ವಿಷಯವನ್ನು ಮಹಿಳೆಯರ ಬಳಿ ಮಾತ್ರ ಹೇಳಬೇಡಿ!

  ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹೇಳಲು, ಯಾವುದೇ ಕಡ್ಡಾಯ ಬಂಧನಕ್ಕೆ ಒಳಗಾಗದೇ ಇರಲು ಕಾನೂನು ನೀಡಿರುವ ರಕ್ಷಣೆ ಮತ್ತು ಹಕ್ಕುಗಳು. ಅದು ಏನೇ ಇರಲಿ ಆದರೆ ಕೆಲವೊಮ್ಮೆ, ಹೆಂಗಸರು ಭಾವನೆಗಳನ್ನು ವ್ಯಕ್ತಪಡಿಸಿದರು ಸಹ ಗಂಡಸರು ಅದನ್ನು ಗ್ರಹಿಸಲು ವಿಫಲರಾಗುತ್ತಾರೆ. ಹೆಂಗಸರ ಮನಸ್ಸಿನಲ್ಲಿ ಏನಿರುತ್ತದೆ ಎಂದು ತಿಳಿದುಕೊಳ್ಳಲು ಆಕೆಯನ್ನು ಸೃಷ್ಟಿಸಿದ ಬ್ರಹ್ಮನಿಂದ ಸಹ ಸಾಧ್ಯವಿಲ್ಲ ಎಂದು ಗಂಡಸರು ನಂಬುತ್ತಾರೆ. ಬನ್ನಿ ಅಂತಹ ಸಂಗತಿಗಳು ಯಾವುದು ಎಂಬುದನ್ನು ಮುಂದೆ ಓದಿ....

  ಅವರಿಗೆ ಜೋಕ್‌ ಹಿಡಿಸುವುದಿಲ್ಲ!

  ಅವರಿಗೆ ಜೋಕ್‌ ಹಿಡಿಸುವುದಿಲ್ಲ!

  ಹಾಸ್ಯಕ್ಕೆ ಪ್ರತಿಕ್ರಿಯಿಸುವ ಬಗೆ ಹೆಂಗಸರು ಮತ್ತು ಗಂಡಸರಲ್ಲಿ ಬೇರೆ ಬೇರೆ ಇರುತ್ತದೆ. ಕೆಲವೊಂದಕ್ಕೆ ಅವರು ನಗುತ್ತಾರೆ, ಕೆಲವಕ್ಕೆ ಇಲ್ಲ. ಕೆಲವೊಂದು ಜೋಕ್‌ಗಳು ಅವರಿಗೆ ಹಿಡಿಸುವುದಿಲ್ಲ. ಇನ್ನೂ ಕೆಲವೊಂದು ಅವರ ಪಾಲಿಗೆ ಜೋಕ್ ರೀತಿ ಕಾಣುವುದಿಲ್ಲ. ಅಸಲಿಗೆ ಎಲ್ಲಾ ಜೋಕ್‌ಗಳಿಗೆ ನಗಬೇಕೆಂಬ ನಿಯಮವೇನೂ ಇಲ್ಲವಲ್ಲ...!

  ನೇರವಾಗಿ ವಿಷಯಕ್ಕೆ ಬರುವುದಿಲ್ಲ!

  ನೇರವಾಗಿ ವಿಷಯಕ್ಕೆ ಬರುವುದಿಲ್ಲ!

  ಹೆಂಗಸರು ನೇರವಾಗಿ ವಿಷಯಕ್ಕೆ ಬರುವುದಿಲ್ಲ. ಅವರು ಸೂಕ್ಷ್ಮವಾಗಿ ಮಾತನಾಡುತ್ತಾರೆ, ಆದರೆ ಅದನ್ನೇ ನಮ್ಮ ಗಂಡಸರು ತಪ್ಪಾಗಿ ತಿಳಿದುಕೊಳ್ಳುತ್ತಾರೆ. ಸುತ್ತಿ ಬಳಸಿ ಮಾತನಾಡುತ್ತಾರೆ ಹೆಂಗಸರು ಎಂಬ ಅಪವಾದವನ್ನು ಹೊರಿಸುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

  ನೇರವಾಗಿ ವಿಷಯಕ್ಕೆ ಬರುವುದಿಲ್ಲ!

  ನೇರವಾಗಿ ವಿಷಯಕ್ಕೆ ಬರುವುದಿಲ್ಲ!

  ಆದರೆ ಒಂದು ವಿಚಾರ ನೆನಪಿಡಿ, ನಿಮಗೆ ಇರುವ ಸಂಕೋಚ ಮತ್ತು ನಾಚಿಕೆ ಹಾಗು ಭಯದ ಹತ್ತರಷ್ಟು ಪ್ರಮಾಣ ಅವರಿಗೆ ಇರುತ್ತದೆ. ಅವರು ನೇರವಾಗಿ ಹೇಳುವುದಿಲ್ಲ, ನೀವು ಮಾತ್ರ ಸರಿಯಾಗಿ ಅರ್ಥ ಮಾಡಿಕೊಳ್ಳಿ.

  ಫ್ಯಾಷನ್ ಪ್ರೀಯರು!

  ಫ್ಯಾಷನ್ ಪ್ರೀಯರು!

  ಇದು ಮಹಿಳೆಯರ ನಕಾರಾತ್ಮಕ ಅಂಶವೆಂದು ಗಂಡಸರು ಪರಿಗಣಿಸುತ್ತಾರೆ. ಹೆಂಗಸರು ತಮ್ಮ ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ ಎಂಬುದು ಅವರ ತಕಾರಾರು. ಗಂಡಸರ ಕಣ್ಣಿಗೆ ಹೆಂಗಸರು ಚೆನ್ನಾಗಿಯೇ ಕಾಣಿಸುತ್ತಿರುತ್ತಾರೆ.

  ಫ್ಯಾಷನ್ ಪ್ರೀಯರು!

  ಫ್ಯಾಷನ್ ಪ್ರೀಯರು!

  ಆದರೂ ಅಷ್ಟೊಂದು ಅಲಂಕಾರ ಬೇಕಾ ಎಂಬುದು ಇವರಿಗೆ ಅರ್ಥವಾಗುವುದಿಲ್ಲ, ಸ್ವಾಮಿ ನಿಮಗೆ ಹೇಗೋ ಇರಬಹುದು, ಆದರೆ ನಮ್ಮ ಮನಸ್ಸಿಗೆ ತೃಪ್ತಿಯಾಗುವಂತೆ ನಾವು ಅಲಂಕಾರ ಮಾಡಿಕೊಳ್ಳುತ್ತೇವೆ ಅಷ್ಟೇ.. ಎಂಬ ಸಿದ್ಧ ಉತ್ತರ ಅವರಲ್ಲಿ ರೆಡಿಯಾಗಿರುತ್ತದೆ.

  ಚಾಕೊಲೆಟ್ ಅಂದರೆ ಪಂಚಪ್ರಾಣ..!

  ಚಾಕೊಲೆಟ್ ಅಂದರೆ ಪಂಚಪ್ರಾಣ..!

  ಗಂಡಸರಿಗೆ ಅರ್ಥವಾಗದ ಮತ್ತೊಂದು ವಿಷಯ, ಈ ಹೆಂಗಸರಿಗೆ ಚಾಕೊಲೆಟ್ ಎಂದರೆ ಏಕೆ ಅಷ್ಟು ಇಷ್ಟವೆಂಬುದು. ಹೆಂಗಸರಿಗೆ ಒತ್ತಡ ಅಧಿಕ, ಅದನ್ನು ನಿವಾರಿಸಿಕೊಳ್ಳಲು ಅವರಿಗೆ ಏನಾದರು ಬೇಕು. ಚಾಕೊಲೆಟ್ ಈ ನಿಟ್ಟಿನಲ್ಲಿ ಅವರಿಗೆ ಸಹಾಯ ಮಾಡುತ್ತದೆ. ಅಸಲಿಗೆ ಅವರು ಇಷ್ಟಪಟ್ಟು ತಿನ್ನುವುದು ಇದನ್ನೇ ಸ್ವಾಮಿ, ನೀವು ಅದನ್ನೂ ಅರ್ಥ ಮಾಡಿಕೊಳ್ಳದಿದ್ದರೆ ಹೇಗೆ?

   

  English summary

  Strange things men Don't Understand About Women

  We're all convinced that men and women are equal but apparently, there still are a lot of things about women men just don't get. Like why they ...
  Story first published: Tuesday, August 2, 2016, 10:30 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more