For Quick Alerts
ALLOW NOTIFICATIONS  
For Daily Alerts

ಗಿನ್ನೆಸ್ ದಾಖಲೆ ಮಾಡಿದ ತಮಾಷೆಯ ಸಂಗತಿಗಳು!

By manu
|

ಗಿನ್ನೆಸ್ ದಾಖಲೆ ಎಂದರೆ ಮನಸ್ಸಿನಲ್ಲಿ ಪ್ರಪಂಚದಲ್ಲಿ ಕೆಲವರು ಮಾತ್ರ ಮಾಡುವ ದಾಖಲೆಗಳು ಎಂಬ ಕಲ್ಪನೆ ಮನಸ್ಸಿನಲ್ಲಿ ಮೂಡುತ್ತದೆ. ಹಾಗೆಂದು ಮಹೋನ್ನತವಾದುದನ್ನು ಮಾತ್ರ ಸಾಧಿಸಿದರೆ ಈ ದಾಖಲೆಗಳು ನಿಮ್ಮ ಸ್ವಂತವಾಗುವುದಿಲ್ಲ. ವಿಚಿತ್ರವಾದ ಕೆಲಸಗಳನ್ನು ಸಹ ಮಾಡುವುದರಿಂದ ದಾಖಲೆಗಳು ನಿಮ್ಮದಾಗಬಹುದು ಬಾಟಲಿಗಳನ್ನು ಒಡೆಯುವುದು, ಕುಡಿಯುವುದು ಅಷ್ಟೇ ಏಕೆ ಉದ್ದವಾದ ಉಗುರು ಮತ್ತು ಮೀಸೆ ಬೆಳೆಸಿ ಗಿನ್ನೀಸ್ ದಾಖಲೆಗೆ ಪಾತ್ರರಾದವರಿದ್ದಾರೆ. ಅದಕ್ಕಾಗಿಯೇ ವಿಚಿತ್ರವಾದ, ತಮಾಷೆಯಾದ, ಅಪರೂಪವಾದ ವಸ್ತುಗಳು ಮತ್ತು ವ್ಯಕ್ತಿಗಳು ಸಹ ದಾಖಲೆಗೆ ಭಾಜನರಾಗಿದ್ದಾರೆ.

ಈ ದಾಖಲೆಯನ್ನು 1955 ರಲ್ಲಿ ಸ್ಥಾಪಿಸಲಾಯಿತು. ವಿಶ್ವದಲ್ಲಿ ದಾಖಲೆ ಮಾಡಬೇಕು ಎಂದುಕೊಂಡು ಒಂದು ಸೃಜನಾತ್ಮಕ ಆಲೊಚನೆಯಿಂದ ಯಾರೇ ಮುಂದೆ ಬಂದರು, ಅವರಿಗೆ ಒಂದು ವೇದಿಕೆಯನು ನೀಡುತ್ತಾ ಬಂದಿದೆ. ಹಾಗಾಗಿ ನೀವು ಈ ದಾಖಲೆಗಳಲ್ಲಿ ಹೆಚ್ಚೆಚ್ಚಾಗಿ ತಮಾಷೆಯ ದಾಖಲೆಗಳನ್ನು ನೀವು ನೋಡುತ್ತಿರುತ್ತೀರಿ. ಬನ್ನಿ ಆ ದಾಖಲೆಗಳು ಯಾವುವು ಎಂದು ನಾವು ನೋಡಿಕೊಂಡು ಬರೋಣ....

Strange Guinness World Records Ever Set

ಬಾಯಿಯಲ್ಲಿ ಅತ್ಯಧಿಕ ಸ್ಟ್ರಾಗಳನ್ನು ಇರಿಸಿಕೊಂಡ
ಬಾಯಿಯಲ್ಲಿ ಅತ್ಯಧಿಕ ಸ್ಟ್ರಾಗಳನ್ನು ಇರಿಸಿಕೊಂಡ ದಾಖಲೆ ನೀವು ಓದಿದ್ದು ಸತ್ಯ, ಇದು ಸಹ ಒಂದು ದಾಖಲೆಯೇ.ಸೈಮನ್ ಎಲ್ಮೋರ್ ಎಂಬ ವ್ಯಕ್ತಿಯು 10 ಸೆಕೆಂಡಿನಲ್ಲಿ 400 ಸ್ಟ್ರಾಗಳನ್ನು ತನ್ನ ಬಾಯಿಯಲ್ಲಿ ಇರಿಸಿಕೊಂಡು ಈ ದಾಖಲೆಯನ್ನು ಸೃಷ್ಟಿಸಿದನು.

ಅತಿ ದೊಡ್ಡ ತಲೆ ದಿಂಬಿನ ಯುದ್ಧ!
ಇದು ನಿಜಕ್ಕೂ ತಮಾಷೆಯೆನಿಸುವುದಿಲ್ಲವೇನು! ಸುಮಾರು 6,261 ಸ್ಪರ್ಧಿಗಳು ಅಮೆರಿಕಾದಲ್ಲಿ ಜುಲೈ 21, 2015 ರಂದು "ಮೈ ಪಿಲ್ಲೋ" ಎಂಬ ಸಂಸ್ಥೆ ನಡೆಸಿದ ಅಪರೂಪದ ಸ್ಪರ್ಧೆಯಲ್ಲಿ ಪಾಲ್ಗೊಂಡು ಈ ದಾಖಲೆ ಬರೆದರು.

ಪಾದದಿಂದ ಬಾಣ ಬಿಡುವ ದಾಖಲೆ
ಪಾದದಿಂದ ಅತಿ ದೂರದ ಗುರಿಗೆ ಬಾಣ ಬಿಟ್ಟು ದಾಖಲೆ ನಿರ್ಮಿಸಿದವರು ನ್ಯಾನ್ಸಿ ಸಿಯೆಫ್‌ಕರ್. ಈಕೆ 6.09 ಮೀಟರ್ (20 ಅಡಿ) ದೂರಕ್ಕೆ ಬಾಣವನ್ನು ಬಿಟ್ಟು ದಾಖಲೆ ಬರೆದರು.

ತೊಡೆಗಳಿಂದ ಮೂರು ಕಲ್ಲಂಗಡಿ ಹಣ್ಣು ಜಜ್ಜಿ ದಾಖಲೆ!

ಇದು ನಿಜಕ್ಕೂ ತಮಾಷೆಯ ಪರಮಾವಧಿ, ಆದರೆ ಇದರಿಂದ ಒಂದು ದಾಖಲೆ ನಿರ್ಮಾಣವಾಯಿತು. ಇಟಲಿಯ ಒಲ್ಗಾ ಲಿಯಶ್ಚುಕ್, ಮಿಲಾನ್‌ನಲ್ಲಿರುವ ಮೀಡಿಯಾಸೆಟ್ ಸ್ಟುಡಿಯೋದಲ್ಲಿ 14.65 ಸೆಕೆಂಡಿನಲ್ಲಿ ಮೂರು ಕಲ್ಲಂಗಡಿ ಹಣ್ಣನ್ನು ತೊಡೆಗಳಿಂದಲೆ ಪುಡಿಗಟ್ಟಿ ದಾಖಲೆಯನ್ನು ಬರೆದರು.

ವಿಶ್ವದ ಅತ್ಯಂತ ಶ್ರೀಮಂತ ಬೆಕ್ಕು
ಅಬ್ಬಬ್ಬಾ, ಇದು ನಿಜವೇ? ನಿಜ ಸ್ವಾಮಿ. ಬೆನ್ ರಿಯಾ ಎಂಬ ಮಾಲೀಕನು ತನ್ನ ಮುದ್ದಿನ ಬೆಕ್ಕು ಬ್ಲಾಕೀಗೆ ಸುಮಾರು 12.5 ಮಿಲಿಯನ್ ಡಾಲರ್ ಹಣವನ್ನು ನೀಡಿದನಂತೆ. ಈತ ತನ್ನ ಮೂರು ಬೆಕ್ಕುಗಳಿಗೆ ಸಮಾನವಾಗಿ ತನ್ನ ಆಸ್ತಿಯನ್ನು ಹಂಚಿ, ದತ್ತಿ ಸಂಸ್ಥೆಗಳಿಗೆ ನೀಡಿದನಂತೆ. ಜೊತೆಗೆ ತನ್ನ ಬೆಕ್ಕುಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಷರತ್ತನ್ನು ಸಹ ವಿಧಿಸಿದನಂತೆ.

ಒಂದು ನಿಮಿಷದಲ್ಲಿ ಅತಿ ಹೆಚ್ಚು ಟಾಯ್ಲೆಟ್ ಸೀಟ್ ಪುಡಿ ಮಾಡಿ ದಾಖಲೆ
ಒಂದು ನಿಮಿಷದಲ್ಲಿ ಅತಿ ಹೆಚ್ಚು ಟಾಯ್ಲೆಟ್ ಸೀಟ್ ಪುಡಿ ಮಾಡಿ ದಾಖಲೆ ಬರೆದವರು ಕೆವಿನ್ ಶೆಲ್ಲಿ. ಅದು ಇವರು ಮುರಿದಿದ್ದು ಬರೋಬ್ಬರಿ 46 ಸೀಟ್‌ಗಳನ್ನು, ಅವು ಮರದ್ದು ಎಂಬುದು ಇನ್ನೂ ವಿಶೇಷ. ಇನ್ನೂ ವಿಶೇಷ ಎಂದರೆ ಪುಡಿ ಮಾಡಿದ್ದು, ತಲೆಯಿಂದ!. ನಿಜಕ್ಕು ಇದು ದಾಖಲೆಯೇ ಬಿಡಿ.

ಅತಿ ಹೆಚ್ಚು ಜನ ಪ್ಯಾನ್ ಕೇಕ್‌ಗಳನ್ನು ಏಕಕಾಲಕ್ಕೆ ಮೇಲೆ ಎಸೆದು ದಾಖಲೆ
ಇದು ಒಂದು ಬಗೆಯ ವಿಚಿತ್ರ ದಾಖಲೆ. 890 ಜನರು ಫೆಬ್ರವರಿ 15, 2012 ರಂದು ಒಂದುಗೂಡಿ ಈ ದಾಖಲೆ ಬರೆದರು. ಈ ಕಾರ್ಯಕ್ರಮಕ್ಕೆ ಆನ್‌ಲೈನ್ ಮೂಲಕ ಭಾಗವಹಿಸುವವರನ್ನು ಕರೆಯಲಾಗಿತ್ತು. 1500 ಜನರು ಇದಕ್ಕೆ ನೋಂದಾಯಿಸಿಕೊಂಡಿದ್ದರು, ಬಂದಿದ್ದು ಮಾತ್ರ 930 ಜನ. ಈ ದಾಖಲೆಯನ್ನು ಗಂಭೀರವಾಗಿ ತೆಗೆದುಕೊಂಡು ಮೇಲ್ವಿಚಾರಣೆ ಮಾಡಲಾಗಿತ್ತು. ಹಾಗಾಗಿ ಭಾಗವಹಿಸಿದವರಲ್ಲಿ 40 ಜನ ಸರಿಯಾದ ಸಮಯಕ್ಕೆ ಕೇಕ್ ಅನ್ನು ಮೇಲೆ ಎಸೆಯಲಿಲ್ಲ ಮತ್ತು ಕೇಕ್ ಅನ್ನು ಕೆಳಕ್ಕೆ ಬೀಳಿಸಿದರು ಎಂದು ಪರಿಗಣಿಸಿ, ಅವರನ್ನು ದಾಖಲೆಯಿಂದ ಹೊರಗೆ ಇಡಲಾಯಿತು!.

English summary

Strange Guinness World Records Ever Set

When it is about "Guinness World Records", one can expect anything to be entitled in this. From the bizarre stuff to breaking bottles, anything that makes a fast record makes it to this book. It is said that Guinness World Records is a no stranger to strangest things that have been recorded, as it captures the most bizarre and crazy things that are happening around. Find out about these interesting world records that can shock you and make you go What The... Check 'em out.
X
Desktop Bottom Promotion