For Quick Alerts
ALLOW NOTIFICATIONS  
For Daily Alerts

ಅಚ್ಚರಿ ಜಗತ್ತು: 'ಕೆಚಪ್' ಪ್ರಿಯರು ಓದಲೇಬೇಕಾದ ಲೇಖನವಿದು...

By Manu
|

ಹೋಟೆಲ್ ಹೋಗಿ ಏನಾದರೂ ಕುರುಕುರು ತಿಂಡಿ ತಿನ್ನಬೇಕೆಂದು ಅನಿಸಿದಾಗ ಫ್ರೆಂಚ್ ಫ್ರೈ ತೆಗೆದುಕೊಳ್ಳುತ್ತೇವೆ. ಆರೋಗ್ಯದ ಬಗ್ಗೆ ಕಾಳಜಿ ಇರುವವರು ಸ್ಯಾಂಡ್‌ವಿಚ್ ಸೇವಿಸಬಹುದು. ಹೀಗೆ ಹಲವಾರು ರೀತಿಯ ತಿಂಡಿಗಳು ನಮ್ಮ ಆಯ್ಕೆಗೆ ಸಿಗುತ್ತದೆ. ಇಂತಹ ತಿಂಡಿಗಳೊಂದಿಗೆ ಟೊಮೆಟೋ ಕೆಚಪ್ ನೀಡುತ್ತಾರೆ.

ಇಂತಹ ತಿಂಡಿಗಳನ್ನು ಕೆಚಪ್ ಜೊತೆ ಸೇವಿಸಿದರೆ ಅದರ ಸ್ವಾದವು ಒಳ್ಳೆಯದಾಗಿರುತ್ತದೆ. ಟೊಮೆಟೋ ಕೆಚಪ್ ಅನ್ನು ನೀವು ಎಷ್ಟೋ ಸಲ ಸೇವಿಸಿರಬಹುದು. ಅದು ನಿಮ್ಮ ಶರ್ಟ್ ಮೇಲೆ ಬಿದ್ದು ಕಲೆ ಕೂಡ ಆಗಿರಬಹುದು. ಆದರೆ ಕೆಚಪ್ ಅನ್ನು ಮೊದಲ ಸಲ ಹೇಗೆ ಕಂಡು ಹಿಡಿದರು ಎಂದು ಯಾವತ್ತಾದರೂ ಯೋಚಿಸಿದ್ದೀರಾ?

ಕೆಚಪ್ ಬಗ್ಗೆ ನೀವು ತಿಳಿಯಬೇಕಾಗಿರುವ ಕೆಲವೊಂದು ವಿಷಯಗಳನ್ನು ಈ ಲೇಖನದಲ್ಲಿ ನಾವು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ. ಇದಕ್ಕೆ ಬಳಸುವ ನಿಜವಾದ ಸಾಮಗ್ರಿಗಳು ಮತ್ತು ಅದು ಬಾಟಲಿ ತುಂಬುವ ತನಕ ಪ್ರತಿಯೊಂದನ್ನು ನಿಮಗೆ ಹೇಳಿಕೊಡಲಿದ್ದೇವೆ. ಕೆಚಪ್ ಬಗೆಗಿನ ಕೆಲವೊಂದು ವಿಷಯಗಳು ಇನ್ನೂ ಹೆಚ್ಚಿನವರಿಗೆ ತಿಳಿದಿಲ್ಲ. ವ್ಯಕ್ತಿಯೊಬ್ಬ ಸರಾಸರಿಯಾಗಿ ಮೂರು ಬಾಟಲಿ ಕೆಚಪ್ ಅನ್ನು ಸೇವಿಸುತ್ತಾರೆ ಕೆಚಪ್ ಬಗ್ಗೆ ಇರುವ ಇನ್ನಷ್ಟು ವಿಷಯಗಳನ್ನು ನೀವು ಇಲ್ಲಿ ತಿಳಿಯಿರಿ.

ಮೊದಲು ಟೊಮೆಟೊ ಬಳಸುತ್ತಿರಲಿಲ್ಲ

ಮೊದಲು ಟೊಮೆಟೊ ಬಳಸುತ್ತಿರಲಿಲ್ಲ

ಕೆಚಪ್ ಆರಂಭವಾದಾಗ ಅದರ ತಯಾರಿಕೆಗೆ ಟೊಮೆಟೊವನ್ನು ಬಳಸುತ್ತಾ ಇರಲಿಲ್ಲ. ಹಿಂದೆ ಕೆಚಪ್ ಅನ್ನು ಅಂಚೋವಿ, ಸಿಂಪಿ, ಲಿಂಬೆ ಹಾಗೂ ಅಕ್ರೋಡದಿಂದ ತಯಾರಿಸಲಾಗುತ್ತಿತ್ತು. ಇವುಗಳಿಂದ ತಯಾರಿಸಿರುವ ಕೆಚಪ್ ಅನ್ನು ಯಾವತ್ತಾದರೂ ಸೇವಿಸಿದ್ದೀರಾ?

ಅಡುಗೆಗೆ ಮಾತ್ರ ಬಳಸಲಾಗುತ್ತಿತ್ತು

ಅಡುಗೆಗೆ ಮಾತ್ರ ಬಳಸಲಾಗುತ್ತಿತ್ತು

ಕೆಚಪ್ ಎನ್ನುವುದು ಮೊದಲು ಕೇವಲ ಮಸಾಲೆಯಾಗಿತ್ತು. ಬಟಾಣಿ, ಮೀನು, ಮಾಂಸ ಹಾಗೂ ಕೋಳಿಯ ಪದಾರ್ಥಗಳಿಗೆ ಸ್ವಾದವನ್ನು ಉಂಟುಮಾಡಲು ಕೆಚಪ್ ಅನ್ನು ಬಳಸಲಾಗುತ್ತಿತ್ತು.

ಕೆಚಪ್ ಶಮನಕಾರಿ

ಕೆಚಪ್ ಶಮನಕಾರಿ

ಕೆಚಪ್ ಅನ್ನು ಕೆಲವೊಂದು ಚಿಕಿತ್ಸೆಗಳಿಗೂ ಬಳಸಲಾಗುತ್ತಿತ್ತು. ಯಕೃತ್ ನಲ್ಲಿರುವ ಪಿತ್ತರಸವನ್ನು ಖಾಲಿ ಮಾಡಿ ಕರುಳಿನ ಮೂಲಕ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ಇದನ್ನು ಬಳಸಲಾಗುತ್ತಿತ್ತು.

ಕ್ಯಾನ್ಸರ್ ತಡೆಯುವುದು

ಕ್ಯಾನ್ಸರ್ ತಡೆಯುವುದು

ಇದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುವುದು ಮಾತ್ರವಲ್ಲದೆ ಹೃದಯಕ್ಕೂ ತುಂಬಾ ಒಳ್ಳೆಯದು ಮತ್ತು ಕೆಲವೊಂದು ರೀತಿಯ ಕ್ಯಾನ್ಸರ್ ಅನ್ನು ಇದು ತಡೆಗಟ್ಟುತ್ತದೆ.

ಲೋಹಗಳ ಪಾಲಿಶ್ ಮಾಡಿ

ಲೋಹಗಳ ಪಾಲಿಶ್ ಮಾಡಿ

ಕೆಚಪ್ ನಿಂದ ಲೋಹವನ್ನು ಪಾಲಿಶ್ ಮಾಡುವುದಾ ಎಂದು ನೀವು ಮೂಗಿನ ಮೇಲೆ ಕೈ ಇಡಬಹುದು. ಆದರೆ ಕೆಚಪ್ ನಲ್ಲಿರುವ ಟೊಮೆಟೊ ಮತ್ತು ವಿನೇಗರ್ ನಿಂದಾಗಿ ಯಾವುದೇ ಲೋಹಗಳನ್ನು ಪಾಲಿಶ್ ಮಾಡಬಹುದು.

English summary

Must Know Facts About Ketchup

Here, in this article, we are about to share some of the most interesting facts about ketchup that you should know. From the actual ingredients with what it started to what it has evolved to this day, you'll be surprised to know of how the bottle of ketchup has evolved.
Story first published: Tuesday, September 27, 2016, 19:55 [IST]
X
Desktop Bottom Promotion