For Quick Alerts
ALLOW NOTIFICATIONS  
For Daily Alerts

  ಈ ರಾಷ್ಟ್ರಗಳಲ್ಲಿ ಅತ್ಯಾಚಾರಿಗಳಿಗೆ ನೀಡುವ ಶಿಕ್ಷೆ ಹೇಗಿರುತ್ತೆ ನೋಡಿ

  By Manohar
  |

  ಯಾವ ರಾಷ್ಟ್ರದಲ್ಲಿ ಹೆಣ್ಣು ಅರ್ಧರಾತ್ರಿಯಲ್ಲಿಯೂ ಸುರಕ್ಷಿತಳಾಗಿ ಹೋಗಬಲ್ಲಳೋ ಆ ರಾಷ್ಟ್ರವೇ ಅತ್ಯಂತ ಸುರಕ್ಷಿತ ಎಂದು ಒಂದು ಸುಭಾಷಿತ ಹೇಳುತ್ತದೆ. ಆದರೆ ಇದು ಮಾತ್ರ ಕನಸಾಗಿಯೇ ಉಳಿದುಕೊಂಡಿರುವುದು ಮಾತ್ರ ವಿಪರ್ಯಾಸವೇ ಸರಿ. ಅತ್ಯಾಚಾರ ಎನ್ನುವುದು ಕೇವಲ ಲೈಂಗಿಕ ದೌರ್ಜನ್ಯವಷ್ಟೇ ಅಲ್ಲ. ಹೆಣ್ಣಿನ ಮನಸ್ಸನ್ನು ಶಾಶ್ವತವಾಗಿ ಘಾಸಿ ಮಾಡಿಬಿಡುವ, ಆಕೆಯ ಜೀವನೋತ್ಸಾಹವನ್ನೆ ನಲುಗಿಸುವ ಒಂದು ಘಟನೆಯಾಗಿರುತ್ತದೆ. ಅತ್ಯಾಚಾರ ಪ್ರಕರಣ ಹೆಚ್ಚಾಗಿರುವ ವಿಶ್ವದ ಪ್ರತಿಷ್ಠಿತ ರಾಷ್ಟ್ರಗಳು

  ಇದೊಂದು ಅಮಾನವೀಯ, ಪೈಶಾಚಿಕ ಮತ್ತು ರಾಕ್ಷಸೀಯ ಕೆಲಸವಾಗಿರುತ್ತದೆ. ಇದಕ್ಕಾಗಿ ಈ ನಾಚಿಕೆಗೇಡು ಮತ್ತು ಮೃಗೀಯ ಕೆಲಸ ಮಾಡುವವರಿಗೆ ಗಂಭೀರವಾದ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಪರಸ್ಪರ ಸಹಮತವಿಲ್ಲದ ಲೈಂಗಿಕ ಕ್ರಿಯೆಯನ್ನು ದೌರ್ಜನ್ಯವೆಂದೆ ಕರೆದು, ಅದನ್ನು ಅಪರಾಧದ ಅಡಿಯಲ್ಲಿ ಪರಿಗಣಿಸಲಾಗುತ್ತದೆ ಮತ್ತು ಈ ಅಪರಾಧಕ್ಕೆ ಕಠಿಣ ಶಿಕ್ಷೆಯು ಸಹ ಇರುತ್ತದೆ.

  ಇಂದು ನಾವು ಈ ಲೇಖನದಲ್ಲಿ ಯಾವ ದೇಶಗಳು ಯಾವ ರೀತಿಯಲ್ಲಿ ಅತ್ಯಾಚಾರಿಗಳಿಗೆ ಶಿಕ್ಷೆಯನ್ನು ವಿಧಿಸುತ್ತಾರೆ ಎಂದು ತಿಳಿದುಕೊಳ್ಳೋಣ. ಕೆಲವು ದೇಶಗಳು ಅಪರಾಧಿಗಳಿಗೆ ಗುಂಡಿಟ್ಟು ಕೊಂದರೆ, ಇನ್ನೂ ಕೆಲವು ದೇಶಗಳು ನೇಣು ಗಂಬಕ್ಕೆ ಹತ್ತಿಸುತ್ತಾರೆ. ಕೆಲವೊಂದು ದೇಶಗಳು ನೆಪ ಮಾತ್ರದ ಶಿಕ್ಷೆಯನ್ನು ಸಹ ಒದಗಿಸುತ್ತವೆ. ಬನ್ನಿ ಇನ್ನು ಶಿಕ್ಷೆಗಳತ್ತ ಕಣ್ಣು ಹಾಯಿಸೋಣ.

  ಚೀನಾ

  ಚೀನಾ

  ಚೀನಾ ಅತ್ಯಾಚಾರ ಸಾಬೀತಾದರೆ, ಯಾವುದೇ ಮುಲಾಜಿಲ್ಲದೆ ನೇಣು ಶಿಕ್ಷೆಯನ್ನು ವಿಧಿಸುತ್ತದೆ. ಇನ್ನೂ ಕೆಲವರನ್ನು ಇರಿದು ಸಹ ಕೊಲ್ಲುವ ಶಿಕ್ಷೆಯನ್ನು ನೀಡಲಾಗುತ್ತದೆ. ಅದು ಅವರ ಅಪರಾಧಕ್ಕೆ ಅನುಗುಣವಾಗಿ.

  ಇರಾನ್

  ಇರಾನ್

  ಈ ದೇಶದಲ್ಲಿ ಅತ್ಯಾಚಾರಿಗಳನ್ನು ಗಲ್ಲುಗಂಬಕ್ಕೆ ಏರಿಸಲಾಗುತ್ತದೆ ಇಲ್ಲವೇ ಗುಂಡಿಟ್ಟು ಕೊಲ್ಲಲಾಗುತ್ತದೆ. ಅತ್ಯಾಚಾರಿಗಳಿಗೆ ಮರಣ ಶಿಕ್ಷೆಯನ್ನೇ ನೀಡಬೇಕು ಎಂಬುದೇ ಈ ದೇಶದ ವಾದ.

  ಅಫ್ಘಾನಿಸ್ಥಾನ

  ಅಫ್ಘಾನಿಸ್ಥಾನ

  ಈ ದೇಶದಲ್ಲಿ ಅತ್ಯಾಚಾರಿಗಳನ್ನು ನ್ಯಾಯಾಲಯದ ತೀರ್ಪು ಬಂದ ನಾಲ್ಕು ದಿನಗಳ ಒಳಗೆ ಗುಂಡಿಟ್ಟು ಕೊಲ್ಲಲಾಗುತ್ತದೆ ಅಥವಾ ನೇಣುಗಂಬಕ್ಕೆ ಏರಿಸಲಾಗುತ್ತದೆ.

  ಫ್ರಾನ್ಸ್

  ಫ್ರಾನ್ಸ್

  ಈ ದೇಶದಲ್ಲಿ ಗುಂಡಿಟ್ಟು ಕೊಲ್ಲಲಾಗುವುದಿಲ್ಲ ಅಥವಾ ಗಲ್ಲು ಗಂಬಕ್ಕೆ ಏರಿಸಲಾಗುವುದಿಲ್ಲ. ಬದಲಿಗೆ 15 ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಇದು 30 ವರ್ಷಗಳಿಗೆ ಸಹ ವಿಸ್ತರಿಸಲಾಗುತ್ತದೆ.

  ಉತ್ತರ ಕೊರಿಯಾ

  ಉತ್ತರ ಕೊರಿಯಾ

  ಈ ದೇಶದಲ್ಲಿ ಅತ್ಯಾಚಾರಿಗಳಿಗೆ ಶೀಘ್ರ ಶಿಕ್ಷೆಯನ್ನು ನೀಡಲಾಗುತ್ತದೆ. ಅಪರಾಧ ಸಾಬೀತಾದ ತಕ್ಷಣ ತಲೆಗೆ ಗುಂಡು ಹಾರಿಸಲಾಗುತ್ತದೆ ಇಲ್ಲವೇ ಮರ್ಮಾಂಗಕ್ಕೆ ಗುಂಡಿಟ್ಟು ಆರೋಪಿಯನ್ನು ಕೊಂದು ಹಾಕುತ್ತಾರೆ.

  ರಷ್ಯಾ

  ರಷ್ಯಾ

  ಈ ದೇಶದಲ್ಲಿ ಇತರೆ ದೇಶಗಳಿಗೆ ಹೋಲಿಸಿದರೆ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡಲಾಗುವುದಿಲ್ಲ. ಈ ದೇಶದಲ್ಲಿ ಅತ್ಯಾಚಾರ ಆರೋಪಿಗಳು 3 ರಿಂದ 6 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸುತ್ತಾರೆ. ಒಮ್ಮೊಮ್ಮೆ ಗಂಭೀರ ಪ್ರಕರಣಗಳಲ್ಲಿ ಇದು 10-20 ವರ್ಷಗಳಿಗೆ ವಿಸ್ತರಿಸಬಹುದು.

  ನಾರ್ವೆ

  ನಾರ್ವೆ

  ಈ ದೇಶದಲ್ಲಿ ಅತ್ಯಾಚಾರಿಯು 4-15 ವರ್ಷಗಳ ಬಂಧನದ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಇದು ಆತ ಮಾಡಿರುವ ಅಪರಾಧದ ಪ್ರಮಾಣಕ್ಕೆ ಅನುಗುಣವಾಗಿ ನಿರ್ಧಾರವಾಗುತ್ತದೆ. ಈ ದೇಶದಲ್ಲಿ ಸಹಮತವಿಲ್ಲದೆ ನಡೆಯುವ ಯಾವುದೇ ರೀತಿಯ ಲೈಂಗಿಕ ಕ್ರಿಯೆಯನ್ನು ಲೈಂಗಿಕ ದೌರ್ಜನ್ಯ ಇಲ್ಲವೇ ಅತ್ಯಾಚಾರವೆಂದೆ ಪರಿಗಣಿಸಲಾಗುತ್ತದೆ.

  ಭಾರತ

  ಭಾರತ

  ಅತ್ಯಾಚಾರ ವಿರೋಧಿ ಕಾಯ್ದೆಯು 2013 ರಲ್ಲಿ ಜಾರಿಗೊಂಡಿದೆ. ಇದು ಅತ್ಯಾಚಾರಿಗಳ ಬಗ್ಗೆ ಇದ್ದ ಎಲ್ಲಾ ಕಾನೂನುಗಳನ್ನು ಬದಲಾಯಿಸಿದೆ. ನಮ್ಮ ದೇಶದಲ್ಲಿ ಮರಣ ದಂಡನೆ ಶಿಕ್ಷೆ ಅತಿ ಅಪರೂಪ. 14 ವರ್ಷಗಳ ಶಿಕ್ಷೆಯ ನಂತರ ಆರೋಪಿಯನ್ನು ಬಿಡುಗಡೆ ಮಾಡಲಾಗುತ್ತದೆ. ಆದ್ದರಿಂದ ನಮ್ಮ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತ ಸಾಗುತ್ತಿವೆ.

   

  English summary

  How Different Countries Punish The Rapists

  Rape is something that just goes to show how inhuman some people can get. Giving severe punishment to rapists can help put an end to this shameful practice. Here, in this article, we are about to share the details of how different countries punish these demons.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more