For Quick Alerts
ALLOW NOTIFICATIONS  
For Daily Alerts

ನಗೆಗಡಲಲ್ಲಿ ತೇಲಿಸುವ ತಮಾಷೆಯ ಸಂಗತಿಗಳು

By Deepu
|

ನಗು ನಗುತ ನಲಿ, ನಲಿ ಎಂದು ಬಂಗಾರದ ಮನುಷ್ಯ ಚಿತ್ರದಲ್ಲಿ ಹಾಡು ಇದೆ. ನಗುವಿನ ಮಹತ್ವವನ್ನು ಹಲವರು ವಿವರಿಸಿದ್ದಾರೆ. ಮಂಕುತಿಮ್ಮನ ಕಗ್ಗದಲ್ಲಿ ಸಹ "ನಗುವು ಸಹಜ ಧರ್ಮ, ನಗಿಸುವುದು ಪರಧರ್ಮ" ಎಂದು ಹೇಳುವ ಒಂದು ಪದ್ಯ ನಗುವಿನ ಮಹತ್ವವನ್ನು ವಿವರಿಸಿದೆ. ಹೀಗೆ ನಗುವಿಗೆ ಹಲವು ವಿಧದಲ್ಲಿ ಮಹತ್ವವಿದೆ. ನಗುವನ್ನು ಉಕ್ಕಿಸುವುದು ಕಷ್ಟದ ಕೆಲಸ ಎಂದು ಹಲವರು ಹೇಳುತ್ತಾರೆ. ಹಾಸ್ಯರಸಕ್ಕೆ ನವರಸದಲ್ಲಿ ಹೆಚ್ಚಿನ ಮಹತ್ವ ಇದೆ. ಇಂತಹ ನಗುವಿನ ಬಗ್ಗೆ ಶತಮಾನಗಳಿಂದ ಹಲವಾರು ವಿಚಾರಗಳನ್ನು ಹಲವರು ಹಂಚಿಕೊಂಡಿದ್ದಾರೆ.

Funny Facts About Laughing That Will Kill You

ಇನ್ನೂ ಹಲವರು ಸಂಶೋಧನೆಯನ್ನು ನಡೆಸಿದ್ದಾರೆ. ನಗುವು ನಿಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿಡುತ್ತದೆ ಎಂಬ ಮಾತು ಅವುಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿದೆ. ಅದು ನಿಜ ನಗು ನಮ್ಮ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುವುದು ಸತ್ಯ. 15 ನಿಮಿಷಗಳ ಕಾಲ ನಿರಂತರವಾಗಿ ನಗುವ ಮೂಲಕ ನೀವು ಶೀಘ್ರವಾಗಿ ತೂಕವನ್ನು ಕಳೆದುಕೊಳ್ಳಬಹುದು ಮತ್ತು ಉತ್ತಮ ಆರೋಗ್ಯವನ್ನು ಸಹ ಪಡೆಯಬಹುದು.

ತಜ್ಞರು ನಗುವಾಗ ನಮ್ಮ ಬಾಯಿಯು ಶೀಘ್ರವಾಗಿ ಚಲಿಸುತ್ತದೆ, ಅದರ ಜೊತೆಗೆ ಇಡೀ ದೇಹವೆ ಕದಲುತ್ತದೆ. ಈ ಕದಲುವಿಕೆಯು ನಮ್ಮ ದೇಹಕ್ಕೆ ಉತ್ತಮ ಆರೋಗ್ಯವನ್ನು ತಂದುಕೊಡುತ್ತದೆ. ಏಕೆಂದರೆ ದೇಹ ಹೀಗೆ ಚಲಿಸುವಾಗ ನಮ್ಮ ರೋಗ ನಿರೋಧಕ ಶಕ್ತಿಯು ಹೆಚ್ಚುತ್ತದೆ ಮತ್ತು ನಮ್ಮ ದೇಹದ ಜೀರ್ಣಾಂಗ ಕ್ರಿಯೆಯು ಸರಾಗವಾಗಿ ಸಾಗುತ್ತದೆ ಎಂದು ಹೇಳಲಾಗುತ್ತದೆ.

ನಗುವು ಹೃದಯದ ಆರೋಗ್ಯಕ್ಕೆ ಸಹ ಒಳ್ಳೆಯದು. ಇದು ಹೃದಯಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ನಿವಾರಿಸುತ್ತದೆ. ಹಾಗಾಗಿ ಮಾನವರು ಆರೋಗ್ಯವಾಗಿ ಇರಬೇಕು ಎಂದರೆ ನಗಬೇಕು. ಇಂದು ನಾವು ನಿಮ್ಮ ಆರೋಗ್ಯವನ್ನು ಸರಿಯಾಗಿ ಇರಿಸಿಕೊಳ್ಳಲು ಸಹಾಯ ಮಾಡುವ ನಗುವಿನ ಬಗ್ಗೆ ಈ ಲೇಖನದಲ್ಲಿ ವಿವರಿಸಿದ್ದೇವೆ, ಮುಂದೆ ಓದಿ.

ಪ್ರತಿದಿನವು ನಗುವುದರಿಂದ ಲಾಭ ಇರುತ್ತದೆ. ಹಾಗೆಂದು ನಗುವುದು ವ್ಯಾಯಾಮದಂತೆ, ಬಲವಂತವಾಗಿ ಮಾಡಬೇಕು ಎಂದೇನಿಲ್ಲ. ಸಹಜವಾಗಿ ನಗುತ್ತ ಇರಿ. ನಿಮ್ಮ ಸಹಜವಾದ ನಗು ನಿಮಗೆ ಗೊತ್ತಿಲ್ಲದೆ ನಿಮ್ಮ ಜೀವನದಲ್ಲಿ ಹಲವಾರು ಪ್ರಯೋಜನಗಳನ್ನು ನೀಡುತ್ತದೆ ಎಂಬುದನ್ನು ನೀವೇ ಗ್ರಹಿಸುವಿರಿ. ಬನ್ನಿ ನಗುವಿನ ಕುರಿತಾದ ಆ ಕುತೂಹಲಕಾರಿ ವಿಚಾರಗಳನ್ನು ಒಮ್ಮೆ ತಿಳಿದುಕೊಂಡು ಬರೋಣ.

ನಗು ಎಂಬುದು ಒಂದು ಸದ್ದು. ಇದಕ್ಕೆ ಯಾವುದೇ ಭಾಷೆಯಿಲ್ಲ. ಜನರು ನಗುವಿನ ಮೂಲಕವೇ ಸಂವಹನ ನಡೆಸಬಹುದು. ಇದು ನಿಮಗೆ ವಿಚಿತ್ರ ಎನಿಸಿದರು, ಸತ್ಯ. ನಿಮ್ಮ ನಗು ಸಹ ಜನರಿಗೆ ಹಲವು ವಿಚಾರಗಳನ್ನು ಅರ್ಥ ಮಾಡಿಸುತ್ತದೆ. ಪ್ರಾಣಿ ಪ್ರಪಂಚದಲ್ಲಿ ಮನುಷ್ಯರಷ್ಟೇ ನಗುವುದಿಲ್ಲ. ನಾಯಿಗಳು ಸಹ ನಗುತ್ತವೆ ಮತ್ತು ನಾಯಿಗಳು ನಗುವುದು ಸಹ ಅವುಗಳ ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿದುಬಂದಿದೆ.

ನಗುವು ಹಲವರನ್ನು ಕೊಂದು ಹಾಕಿದೆ ಎಂಬುದು ವಿಚಿತ್ರವಾದರು ಸತ್ಯ. ನಗಲು ಆಮ್ಲಜನಕ ಹೆಚ್ಚಾಗಿ ಬೇಕಾಗುತ್ತದೆ. ಆಗ ಇದು ಶ್ವಾಸಕೋಶಗಳ ಮೇಲೆ ಹೆಚ್ಚಿನ ಹೊರೆಯನ್ನು ನೀಡುತ್ತದೆ. ನಗುವು ಹೊಟ್ಟೆನೋವನ್ನು ತರುತ್ತದೆ. ಆದ್ದರಿಂದ ಆಗಾಗ ನಗುವುದು ಒಳ್ಳೆಯದು, ಅದನ್ನು ಬಿಟ್ಟು ನಿರಂತರವಾಗಿ ನಗುವುದು ಒಳ್ಳೆಯದಲ್ಲ.

"ನೀವು ನಕ್ಕರೆ ನಿಮ್ಮೊಂದಿಗೆ ಪ್ರಪಂಚವೇ ನಗುತ್ತದೆ" ಎಂಬ ನಾಣ್ಣುಡಿ ಇದೆ. ನಿಜ ನಗುವು ಸಾಂಕ್ರಾಮಿಕವಾದುದು. ಕೆಲವೊಂದು ಅಧ್ಯಯನಗಳ ಪ್ರಕಾರ 15 ನಿಮಿಷ ನಕ್ಕರೆ ನಿಮ್ಮ ಆಯುಸ್ಸು 2 ದಿನಗಳ ಮಟ್ಟಿಗೆ ಹೆಚ್ಚಾಗುತ್ತದೆಯಂತೆ. ಇದು ನಗುವಿನಿಂದ ದೊರೆಯುವ ಒಳ್ಳೆಯ ಪ್ರಯೋಜನಗಳಲ್ಲಿ ಒಂದಾಗಿದೆ. ಹಾಗಾಗಿ ನೀವು 99 ವರ್ಷ ತುಂಬಿದರು ಸಹ ನಗುತ್ತಲೆ ಇರಿ. ನಗುವು ನಿಮ್ಮ ಆಯುಸ್ಸನ್ನು ಮತ್ತು ಆರೋಗ್ಯವನ್ನು ಕಾಪಾಡುತ್ತದೆ. ಮಕ್ಕಳು ದೊಡ್ಡವರಿಗಿಂತ ಮೂರು ಪಟ್ಟು ನಗುತ್ತಾರಂತೆ.

English summary

Funny Facts About Laughing That Will Kill You

Laughter also is good for the heart and helps to drive away all sorts of heart ailments. It is necessary for a human to laugh, in order to stay healthy and fit. Today, let's look at some of the funny facts about laughing that is mentioned in this article.
Story first published: Monday, January 11, 2016, 9:40 [IST]
X
Desktop Bottom Promotion