Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮಣಿಕಟ್ಟಿನಲ್ಲಿರುವ ರೇಖೆಗಳು -ಎಷ್ಟಿವೆ? ಏನು ಹೇಳುತ್ತವೆ?
ಸಾಮಾನ್ಯವಾಗಿ ಹಸ್ತಸಾಮುದ್ರಿಕೆಯನ್ನು ಗಮನಿಸುವವರು ಹಸ್ತದ ರೇಖೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಆದರೆ ನಮ್ಮ ಹಸ್ತ ಮಡಚುವಲ್ಲಿ ಅಂದರೆ ವಾಚು ಕಟ್ಟಿಕೊಳ್ಳುವ ಭಾಗದಲ್ಲಿ ಅಡ್ಡಲಾಗಿ ಕೆಲವು ರೇಖೆಗಳಿದ್ದು ಇವೂ ಸಹಾ ಹಲವು ಸಂಗತಿಗಳನ್ನು ಪ್ರಚುರಪಡಿಸುತ್ತವೆ. Rascette lines ಎಂದು ಕರೆಯಲ್ಪಡುವ ಈ ರೇಖೆಗಳು ವ್ಯಕ್ತಿಯ ಆರೋಗ್ಯ, ಉನ್ನತಿ ಮತ್ತು ಖ್ಯಾತಿಯನ್ನು ಪ್ರಕಟಿಸುತ್ತವೆ. ಅಚ್ಚರಿ, ಕುತೂಹಲ ಕೆರಳಿಸುವ ಎಡಗೈ ಹಸ್ತದಲ್ಲಿ ಮೂಡುವ ರೇಖೆ!
ಇಲ್ಲಿ ಎಷ್ಟು ರೇಖೆಗಳಿವೆ ಎಂಬ ಮಾಹಿತಿ ಆಯಸ್ಸನ್ನು ತಿಳಿಸುತ್ತವೆ. ಅಂದರೆ ಹೆಚ್ಚು ಗೆರೆಗಳಿದ್ದಷ್ಟೂ ಆಯಸ್ಸು ಹೆಚ್ಚು. ಹಸ್ತದಿಂದ ಪ್ರಾರಂಭಿಸಿದಂತೆ ಮೊದಲ ರೇಖೆ 23 ರಿಂದ 28 ವಯಸ್ಸನ್ನು ಪ್ರತಿನಿಧಿಸಿದರೆ ಎರಡನೆಯ ರೇಖೆ 46 ರಿಂದ 56 ವಯಸ್ಸನ್ನು ಪ್ರತಿನಿಧಿಸುತ್ತದೆ. ಕೈ ಬೆರಳಿನ ಉದ್ದವನ್ನು ಪರಿಗಣಿಸಿ, ಭವಿಷ್ಯವನ್ನು ನಿರ್ಧರಿಸಿ!
ಮೂರನೆಯ ರೇಖೆ 69 ರಿಂದ 84 ವರ್ಷ ವಯಸ್ಸನ್ನು ಪ್ರತಿನಿಧಿಸುತ್ತದೆ. ನಾಲ್ಕನೆಯ ರೇಖೆ 84ರ ನಂತರದ ಆಯಸ್ಸನ್ನು ಪ್ರತಿನಿಧಿಸುತ್ತದೆ. ಹೆಚ್ಚಿನವರಲ್ಲಿ ಎರಡು ಗೆರೆಗಳು ಸ್ಪಷ್ಟವಾಗಿ ಮೂಡಿದ್ದು ಮೂರನೆಯ ಗೆರೆ ನಸುವಾಗಿರುತ್ತದೆ. ಆದರೆ ಹಿರಿವಯಸ್ಸಿನವರಲ್ಲಿ ನಾಲ್ಕು ಗೆರೆಗಳನ್ನು ಕಾಣಬಹುದು...

ಅತಿ ಹೆಚ್ಚಿನ ಪ್ರಾಮುಖ್ಯತೆ ಇರುವ ಮೊದಲ ರೇಖೆ
ಪ್ರಥಮ ಗೆರೆ ಸ್ಪಷ್ಟವಾಗಿ ಮತ್ತು ಚರ್ಮ ಸರಳರೇಖೆಯಲ್ಲಿ ಮಡಿಕೆ ಹೊಂದಿದ್ದರೆ ಈ ವ್ಯಕ್ತಿ ಉತ್ತಮ ಆರೋಗ್ಯ ಮತ್ತು ದೇಹದಾರ್ಢ್ಯತೆಯನ್ನು ಹೊಂದಿರುವವರೆಂದು ಹಸ್ತಸಾಮುದ್ರಿಕರು ಗುರುತಿಸುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅತಿ ಹೆಚ್ಚಿನ ಪ್ರಾಮುಖ್ಯತೆ ಇರುವ ಮೊದಲ ರೇಖೆ
ಒಂದು ವೇಳೆ ಈ ರೇಖೆ ಅಸ್ಪಷ್ಟವಾಗಿದ್ದು ಸರಳರೇಖೆಯಲ್ಲಿಲ್ಲದೇ ತುಂಡುತುಂಡಾಗಿರುವಂತಿದ್ದರೆ ಈ ವ್ಯಕ್ತಿ ತನ್ನ ಆರೋಗ್ಯದ ಬಗ್ಗೆ ವಹಿಸುವ ನಿಷ್ಕಾಳಜಿಯನ್ನು ಪ್ರಕಟಿಸುತ್ತದೆ.

ಮಹಿಳೆಯರ ಮೊದಲ ರೇಖೆ ಆರೋಗ್ಯದ ಏರುಪೇರು ತಿಳಿಸುತ್ತದೆ
ಒಂದು ವೇಳೆ ಮಹಿಳೆಯರ ಹಸ್ತದ ಮೊದಲ ರೇಖೆ ಪರಿಪೂರ್ಣವಾಗಿರದೇ ಕಮಾನಿನಂತೆ ಬಾಗಿ ಮಧ್ಯದಲ್ಲಿ ಹಸ್ತದೊಳಗೆ ಹೋಗಿದ್ದರೆ ಅಥವಾ ನಡುವೆ ತುಂಡುತುಂಡಾಗಿದ್ದರೆ ಇದು ಸ್ತ್ರೀರೋಗದ ಇರುವಿಕೆಯ ಲಕ್ಷಣವಾಗಿದೆ.

ಪುರುಷರ ಹಸ್ತದ ಮೊದಲ ರೇಖೆ ಕಮಾನಿನಂತೆ ಬಗ್ಗಿದ್ದರೆ
ಒಂದು ವೇಳೆ ಪುರುಷರ ಹಸ್ತದ ಮೊದಲ ರೇಖೆ ಕಮಾನಿನಂತೆ ಬಾಗಿದ್ದು ಮಧ್ಯದಲ್ಲಿ ಹಸ್ತದೊಳಗೆ ಸಾಗಿದ್ದರೆ ಅಥವಾ ನೇರವಾಗಿರದೇ ತುಂಡುತುಂಡಾಗಿದ್ದರೆ ಇದು ಪ್ರಾಸ್ಟೇಟ್ ಗ್ರಂಥಿಯ ತೊಂದರೆ, ನಪುಂಸಕತ್ವ, ಮೂತ್ರನಾಳದ ಸೋಂಕು ಮೊದಲಾದವುಗಳನ್ನು ಸೂಚಿಸುತ್ತವೆ.

ಎರಡನೆಯ ರೇಖೆ ಉನ್ನತಿಯ ಸಂಕೇತ
ಎರಡನೆಯ ರೇಖೆ ಸ್ಪಷ್ಟವಾಗಿದ್ದು ನೇರವಾಗಿ ಅಡ್ಡಲಾಗಿದ್ದರೆ ಇದು ಅಭಿವೃದ್ದಿ, ಉನ್ನತಿ ಮತ್ತು ಖ್ಯಾತಿಯ ಸಂಕೇತವಾಗಿದೆ. ತುಂಡುತುಂಡಾಗಿರುವ ರೇಖೆ ಜೀವನದಲ್ಲಿ ವೈಫಲ್ಯವನ್ನು ಬಿಂಬಿಸುತ್ತದೆ.

ಮೂರನೆಯ ರೇಖೆ ಆಯಸ್ಸಿನ ಸಂಕೇತ
ಮೂರನೆಯ ರೇಖೆ ಸ್ಪಷ್ಟವಾಗಿದ್ದರೆ ಆರೋಗ್ಯ ಉತ್ತಮವಾಗಿದ್ದು ಇನ್ನಷ್ಟು ಕಾಲ ಬಾಳಬಹುದಾದ ಸಾಧ್ಯತೆಗಳನ್ನು ತಿಳಿಸುತ್ತದೆ.

ನಾಲ್ಕನೆಯ ರೇಖೆ ಶತಾಯಸ್ಸಿನ ಸಂಕೇತ
ನಾಲ್ಕನೆಯ ರೇಖೆ ಅತಿ ಹಿರಿಯ ವಯಸ್ಸನ್ನು ಪ್ರತಿನಿಧಿಸುತ್ತಿದ್ದು ಇದು ಸ್ಪಷ್ಟವಾಗಿದ್ದಷ್ಟೂ ಶತಾಯುಶಿಗಳಾಗುವ ಸಾಧ್ಯತೆ ಹೆಚ್ಚಾಗಿದೆ. ಸಾಮಾನ್ಯವಾಗಿ ಈ ರೇಖೆ ಮೂರನೆಯ ರೇಖೆಗೆ ಸಮಾನಾಂತರವಾಗಿರುತ್ತದೆ.



Click it and Unblock the Notifications
