For Quick Alerts
ALLOW NOTIFICATIONS  
For Daily Alerts

  ಅಚ್ಚರಿ ಜಗತ್ತು: ನಿದ್ದೆ ಮಾಡುವುದರಲ್ಲಿ ಈ ಪ್ರಾಣಿಗಳು ನಂ.1...

  By Manu
  |

  ಚಿಂತೆ ಇಲ್ಲದವನಿಗೆ ಸಂತೆಯಲ್ಲಿಯೂ ನಿದ್ದೆ ಎಂಬುದೊಂದು ಗಾದೆ. ಸಾಮಾನ್ಯವಾಗಿ ಪ್ರಾಣಿಗಳಿಗೆ ತಮ್ಮ ಹೊಟ್ಟೆಪಾಡಿನ ಹೊರತಾಗಿ ಬೇರೆ ಚಿಂತೆ ಇರುವುದಿಲ್ಲವಾದುದರಿಂದ ಇವು ಸುಖವಾಗಿಯೇ ನಿದ್ದೆ ಮಾಡುತ್ತವೆ. ಕೆಲವೊಮ್ಮೆ ಬೀದಿ ಬದಿಯಲ್ಲಿ ಗೌಜಿ ಗದ್ದಲದ ನಡುವೆಯೂ ಸುಖವಾಗಿ ನಿದ್ದೆ ಮಾಡುವ ನಾಯಿ ಬೆಕ್ಕುಗಳನ್ನು ನೋಡಿದಾಗ ನಿದ್ದೆಯ ಮಟ್ಟಿಗೆ ಇವು ಅದೃಷ್ಟಶಾಲಿಗಳು ಎಂದು ಹೊಟ್ಟೆಕಿಚ್ಚು ಪಡುವಂತಾಗುತ್ತದೆ. ಬುದ್ಧಿಶಕ್ತಿಯಲ್ಲಿ ಮನುಷ್ಯರಿಗೇ ಸವಾಲೆಸೆಯುವ ಪ್ರಾಣಿ, ಪಕ್ಷಿಗಳು

  ವಾಸ್ತವವಾಗಿ ಮನುಷ್ಯರನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ಪ್ರಾಣಿಗಳೆಲ್ಲವೂ ತಮ್ಮ ವೇಳಾಪಟ್ಟಿಯ ಪ್ರಕಾರ ನಿರುಮ್ಮಳವಾಗಿ ನಿದ್ರಿಸುತ್ತವೆ. ಅದೇ ಮನುಷ್ಯರಿಗೆ ನಿತ್ಯದ ಹಲವು ಒತ್ತಡಗಳು ಹಲವಾರು ರೀತಿಯಲ್ಲಿ ನಿದ್ದೆಯನ್ನು ಬಾಧಿಸುತ್ತವೆ. ಶ್‌...ಎಚ್ಚರಿಕೆ! ಬಹಳ ಖತರ್ನಾಕ್ ಪ್ರಾಣಿಗಳಿವು....

  ಇಂದಿನ ಲೇಖನದಲ್ಲಿ ವಿವಿಧ ಪ್ರಾಣಿಗಳು ಯಾವ ರೀತಿಯಲ್ಲಿ ಮಲಗುತ್ತವೆ, ಯಾವ ಪ್ರಾಣಿ ಅತಿ ಹೆಚ್ಚು ಕಾಲ ನಿದ್ರಿಸುತ್ತದೆ ಅಥವಾ ಅತಿ ಕಡಿಮೆ ಕಾಲ ನಿದ್ರಿಸುತ್ತದೆ ಎಂಬ ಅಚ್ಚರಿಯ ಮಾಹಿತಿಗಳನ್ನು ನೀಡಲಾಗಿದೆ.. ಮುಂದೆ ಓದಿ.. 

   ಕಾಡುಪಾಪ

  ಕಾಡುಪಾಪ

  ದಿನದ ಅತಿ ಹೆಚ್ಚು ಕಾಲ ಮಲಗುವ ಪ್ರಾಣಿ ಎಂದರೆ ಕಾಡುಪಾಪ ಅಥವಾ ಕೊವಾಲಾ ಕರಡಿ. ಈ ಪ್ರಾಣಿ ದಿನದ ಇಪ್ಪತ್ತೆರಡು ಗಂಟೆ ಕಾಲ ನಿದ್ರಿಸಬಲ್ಲುದು. ಅಂದರೆ ದಿನದ 91.7%ರಷ್ಟು ಕಾಲ!

  ಬೃಹತ್ ಆರ್ಮಡಿಲ್ಲೋ (Giant Armadillo)

  ಬೃಹತ್ ಆರ್ಮಡಿಲ್ಲೋ (Giant Armadillo)

  ಕೆಲವೊಮ್ಮೆ ಇಡಿಯ ದಿನ, ಕೆಲವೊಮ್ಮೆ ಮುಕ್ಕಾಲು ದಿನ ಮಲಗುವ ಈ ಪ್ರಾಣಿಯ ಸರಾಸರಿ ಮಲಗುವ ಸಮಯ ದಿನಕ್ಕೆ 18.1 ಗಂಟೆಗಳು, ಅಂದರೆ 75.4% ರಷ್ಟು ಸಮಯ. ಏಕೆ ಹೊಟ್ಟೆಕಿಚ್ಚಾಯಿತೇ?

  ಒಪ್ಪೋಸಮ್

  ಒಪ್ಪೋಸಮ್

  ಒಂದು ವೇಳೆ ಮುಳ್ಳುಹಂದಿಯ ಮುಳ್ಳುಗಳನ್ನು ನಿವಾರಿಸಿ ಇದಕ್ಕೆ ಬಿಳಿನರಿಯ ಮುಖ ತೊಡಿಸಿದರೆ ಹೇಗಿರುತ್ತದೆಯೋ ಹಾಗೇ ಕಾಣುವ ಓಪ್ಪೋಸಮ್ ಸಹಾ ದಿನದ ಹದಿನೆಂಟು ಗಂಟೆ ನಿದ್ರಿಸುತ್ತದೆ. ಅಂದರೆ ದಿನದ 70% ಸಮಯ.

  ಲೆಮೂರ್

  ಲೆಮೂರ್

  ಮಂಗನ ದೇಹ, ಮುಖವಾಡ ತೊಟ್ಟ ಬೆಕ್ಕು ಮತ್ತು ಪಟ್ಟೆ ಪಟ್ಟೆಯ ಬಾಲ ಹೊಂದಿರುವ ಲೆಮೂರ್ ಸಹಾ ದಿನದ ಹದಿನಾರು ಗಂಟೆ ಮಲಗುತ್ತದೆ.

  ಅಳಿಲು

  ಅಳಿಲು

  ದಿನವಿಡೀ ಚೂಟಿಯಾಗಿ ಓಡಾಡುವ ಪುಟ್ಟ ಅಳಿಲು ಸಹಾ ದಿನದ 14.9 ಗಂಟೆ ಅಂದರೆ 62% ರಷ್ಟು ಸಮಯವನ್ನು ಮಲಗಿಯೇ ಕಳೆಯುತ್ತದೆ. ಅಂದರೆ ಅಳಿಲ ಸೇವೆ ಸಲ್ಲಿಸಲು 38% ಸಮಯ ಮಾತ್ರ ಉಳಿದಂತಾಯಿತು.

  ಹ್ಯಾಮ್ಸ್ಟರ್

  ಹ್ಯಾಮ್ಸ್ಟರ್

  ಪುಟ್ಟ ಗಿನಿಪಿಗ್ ನಂತಿರುವ ಇಲಿಯ ಜಾತಿಗೆ ಸೇರಿದ ಹ್ಯಾಮ್ಸ್ಟರ್ ಸಹಾ ದಿನದ ಹದಿನಾಲ್ಕು ಗಂಟೆ ಸತತವಾಗಿ ಮಲಗುತ್ತದೆ. ಇದು ಇಷ್ಟೊಂದು ಮುದ್ದಾಗಿರಲು ಇದೇ ಕಾರಣವಿರಬಹುದು.

  ಸಿಂಹ

  ಸಿಂಹ

  ಕಾಡಿನ ರಾಜ ಸಿಂಹವೂ ದಿನದಲ್ಲಿ ಹದಿಮೂರು ಗಂಟೆ ನಿದ್ರಿಸುತ್ತದೆ. ಕಾಡಿನ ರಾಜನಾದರೂ ಬೇಟೆಯಾಡುವುದು ಕಡಿಮೆ, ಸಿಂಹಿಣಿಯೇ ಬೇಟೆಯಾಡಿ ತಂದ ಅಹಾರವನ್ನು ತಿಂದು ಮತ್ತೆ ಮಲಗುತ್ತದೆ. ಮತ್ತೆ, ಕಾಡಿನ ರಾಜ ದಿನವಿಡೀ ಕಾಡು ಸುತ್ತುತ್ತಿದ್ದರೆ ರಾಜ ಎನ್ನಲಾಗುತ್ತದೆಯೇ?

   

  English summary

  Animals & Their Sleeping Patterns!

  Here, in this article, we are about to share the list of animals that sleep for the longest and also about those animals that sleep the least. Check the list below, as we're sure you are going to envy them for the number of hours that they can actually sleep, read on.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more