For Quick Alerts
ALLOW NOTIFICATIONS  
For Daily Alerts

ಬುದ್ಧಿಶಕ್ತಿಯಲ್ಲಿ ಮನುಷ್ಯರಿಗೇ ಸವಾಲೆಸೆಯುವ ಪ್ರಾಣಿ, ಪಕ್ಷಿಗಳು

By Super
|

ಪ್ರಾಣಿಗಳು ಹಲವಾರು ವರ್ಷಗಳಿಂದ ಮಾನವನ ಒಡನಾಡಿಗಳಾಗಿವೆ. ಕೆಲವು ಪ್ರಾಣಿಗಳು ಎಷ್ಟು ಚೆನ್ನಾಗಿ ಬೆರೆತುಕೊಳ್ಳುತ್ತವೆ ಎಂದರೆ ಕುಟುಂಬದ ಓರ್ವ ಸದಸ್ಯನಾಗಿಯೇ ಬಿಡುತ್ತದೆ. ಉದಾಹರಣೆಗೆ ನಾಯಿ. ಎಷ್ಟೋ ಮನೆಗಳಲ್ಲಿ ನಾಯಿಗಳು ಮನೆಯ ಸದಸ್ಯರಷ್ಟೇ ಸ್ವಾತಂತ್ರ್ಯವನ್ನು ಹೊಂದಿರುತ್ತವೆ. ಇವುಗಳ ಬುದ್ಧಿಮತ್ತೆ ಕೆಲವೊಮ್ಮೆ ಚಕಿತಗೊಳಿಸುತ್ತವೆ. ವಾಸ್ತವವಾಗಿ ಈ ಜಗತ್ತಿನಲ್ಲಿ ಅತ್ಯಂತ ಬುದ್ಧಿವಂತ ಪ್ರಾಣಿ ಎಂದರೆ ಮನುಷ್ಯ. ಆ ಬಳಿಕದ ಸ್ಥಾನವನ್ನು ಯಾವ ಪ್ರಾಣಿಗಳಿಗೆ ವಹಿಸಬೇಕು ಎಂಬ ಬಗ್ಗೆ ಹಲವು ತಜ್ಞರು ತಲೆಕೆಡಿಸಿಕೊಂಡಿದ್ದಾರೆ.

ಏಕೆಂದರೆ ಪ್ರತಿ ಜೀವಿಯೂ ತನ್ನದೇ ಆದ ಬುದ್ಧಿಮತ್ತೆ ಮತ್ತು ನೈಸರ್ಗಿಕ ಶಕ್ತಿಗಳನ್ನು ಹೊಂದಿದ್ದು ಸಂದರ್ಭಾನುಸಾರ ಬಳಸಿಕೊಳ್ಳುತ್ತದೆ. ಆದರೆ ಎದುರಾದ ಸಂದರ್ಭವನ್ನು ಬುದ್ಧಿಮತ್ತೆ ಬಳಸಿ ಅದಕ್ಕೆ ಉತ್ತರ ಕಂಡುಕೊಳ್ಳುವ ಮೂಲಕ ಅತಿ ಬುದ್ಧಿವಂತ ಪ್ರಾಣಿಗಳು ಯಾವುದು ಎಂಬುದನ್ನು ಸ್ಥೂಲವಾಗಿ ಪರಿಗಣಿಸಲಾಗಿದೆ. ಈ ವಿವರಗಳು ಕುತೂಹಲಕರವಾಗಿವೆ. ಇದರಲ್ಲಿ ಪ್ರಥಮ ಸ್ಥಾನ ಯಾವ ಪ್ರಾಣಿಗೆ ಎಂದು ಕೇಳಿದರೆ ಹೆಚ್ಚಿನವರು ನಾಯಿ ಎಂಬ ಉತ್ತರ ನೀಡಬಹುದು. ಆದರೆ ನಾಯಿಗೆ ಪ್ರಥಮ ಹತ್ತರಲ್ಲಿ ಏಳನೆಯ ಸ್ಥಾನ ದೊರಕಿದೆ ಎಂದರೆ ಅಚ್ಚರಿಯಾಗದೇ? ಬನ್ನಿ, ಈ ಪಟ್ಟಿಯನ್ನು ಈಗ ಪರಾಮರ್ಶಿಸೋಣ:

ಆಕ್ಟೋಪಸ್

ಆಕ್ಟೋಪಸ್

ಸಾಗರದಾಳದಲ್ಲಿರುವ ಅಷ್ಟಬಾಹುಗಳ ರಕ್ತ ಹೀರುವ ಅಕ್ಟೋಪಸ್ ಬಗ್ಗೆ ನಾವು ತಿಳಿದುಕೊಂಡಿರುವುದು ಬಹಳ ಕಡಿಮೆ. ಏಕೆಂದರೆ ಇದು ಸಾಮಾನ್ಯವಾಗಿ ಕಂಡುಬರುವುದೂ ಇಲ್ಲ, ಯಾರೂ ಸಾಕುವುದೂ ಇಲ್ಲ. ಆದರೆ ಈ ಜೀವಿಯ ಬಗ್ಗೆ ಸಂಶೋಧನೆ ನಡೆಸಿದ ವಿಜ್ಞಾನಿಗಳಿಗೆ ಬಹಳಷ್ಟು ಮಾಹಿತಿಗಳು ದೊರಕಿವೆ. ಇವು ಆಟವಾಡಬಲ್ಲವು, ಕೆಲವು ಸುಲಭ ಸಮಸ್ಯೆಗಳನ್ನು ಬಿಡಿಸಬಲ್ಲವು. ಕೊಂಚ ಸ್ಮರಣಶಕ್ತಿಯೂ ಈ ಜೀವಿಗಿದೆ. ಅಷ್ಟೇ ಏಕೆ, ವಿಶ್ವಕಪ್ ಫುಟ್ಬಾಲ್ ವಿಜೇತ ಯಾರಾಗಬಹುದು ಎಂಬ ಭವಿಷ್ಯವನ್ನೂ ನೀಡಬಲ್ಲವು. 2010ರ ವಿಶ್ವಕಪ್ ಭವಿಷ್ಯ ಹೇಳಿದ ಪೌಲ್, ದ ಆಕ್ಟೋಪಸ್, ನೆನಪಿದೆಯೇ?

ಆನೆ

ಆನೆ

ಭೂಜೀವಿಗಳಲ್ಲಿಯೇ ಅತಿ ದೊಡ್ಡ ಗಾತ್ರ ಮತ್ತು ಗಾತ್ರಕ್ಕೆ ತಕ್ಕಂತೆ ದೊಡ್ಡ ಮೆದುಳನ್ನು ಹೊಂದಿರುವ ಜೀವಿ ಎಂದರೆ ಆನೆ. ಮಾನವರಂತೆಯೇ ಸಂಘಜೀವಿಗಳಾದ ಆನೆಗಳೂ ಬುದ್ದಿಮತ್ತೆಯಲ್ಲಿ ಹೆಚ್ಚಿನ ಕೌಶಲ್ಯ ತೋರುತ್ತದೆ. ಪಳಗಿಸಿದ ಬಳಿಕ ಆನೆಗಳು ಮನುಷ್ಯರಿಗೆ ಅತಿ ವಿಧೇಯರಾಗಿರುವ ಕಾರಣ ಹಲವು ಕಾರ್ಯಗಳಲ್ಲಿ ಮಾನವರ ಸಂಗದಲ್ಲಿವೆ. ಮಾನವರಂತೆಯೇ ಇವು ತಮ್ಮ ಸುತ್ತಮುತ್ತಲ ಪರಿಸರ ಮತ್ತು ಸಂದರ್ಭದಿಂದ ಸಾಕಷ್ಟು ಕಲಿತುಕೊಳ್ಳುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಆನೆ

ಆನೆ

ಆನೆಗಳು ಅತಿ ಬಲಯುತವಾದ ಪ್ರಾಣಿಗಳಾಗಿದ್ದರೂ ಅವುಗಳ ಇಂದ್ರಿಯಗಳಲ್ಲಿ ಕಿವಿ ಮತ್ತು ಕಾಲುಗಳಿಂದ ನೆಲದ ಕಂಪನಗಳನ್ನು ಗ್ರಹಿಸುವ ಶಕ್ತಿ ಬೇರೆಲ್ಲಾ ಪ್ರಾಣಿಗಳಿಗೆ ಮಿಗಿಲಾಗಿದೆ. ಆನೆಗಳು ಸುಮಾರು ನೂರಕ್ಕೂ ಹೆಚ್ಚಿನ ಶಬ್ದಗಳನ್ನು ಗ್ರಹಿಸಬಲ್ಲವು. ಇವು ಸಂತೋಷ, ದುಃಖ, ತುಂಟತನ ಮೊದಲಾದವುಗಳನ್ನು ಪ್ರಕಟಿಸುವ ಶಕ್ತಿ ಹೊಂದಿವೆ. ಅಂತೆಯೇ ಮದವೇರಿದಾಗ ಕೋಪ ಮತ್ತು ವಿನಾಶಕಾರಿ ಪ್ರವೃತ್ತಿಯನ್ನೂ ತೋರಬಲ್ಲವು.

ಹಂದಿ

ಹಂದಿ

ಹಂದಿಯೂ ನಾಯಿಯಂತೆಯೇ ಬುದ್ದಿವಂತ ಪ್ರಾಣಿ ಎಂದರೆ ನಂಬಲಿಕ್ಕೆ ಸಾಧ್ಯವಿಲ್ಲ. ಆದರೆ ಇದು ವಾಸ್ತವವಾಗಿದ್ದು ಇವು ಭಾವನೆ, ಸಂವೇದನೆ, ನೋವು, ಬೇಸರ ಮೊದಲಾದವುಗಳನ್ನು ಪ್ರಕಟಿಸುವ ಬುದ್ದಿಮತ್ತೆ ಹೊಂದಿದೆ. ಮನುಷ್ಯರೊಂದಿಗೆ ಇವು ಸುಲಭವಾಗಿ ಹೊಂದಿಕೊಳ್ಳುವ ಕಾರಣ ಸುಲಭವಾಗಿ ಪಳಗುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹಂದಿ

ಹಂದಿ

ವಾಸನೆ ಹಿಡಿಯುವುದರಲ್ಲಿ, ಅದರಲ್ಲೂ ವಿಶೇಷವಾಗಿ ಆಹಾರಗಳ ವಾಸನೆ ಹಿಡಿಯುವುದರಲ್ಲಿ ನಾಯಿಗಿಂತಲೂ ಹೆಚ್ಚು ಸೂಕ್ಷ್ಮಗ್ರಾಹಿಗಳಾಗಿವೆ. ಈ ಕ್ಷಮತೆಯನ್ನು ಹೆಚ್ಚಾಗಿ ಅಣಬೆ, ಮೊಟ್ಟೆ ಮೊದಲಾದವುಗಳನ್ನು ಹುಡುಕಲು ಬಳಸಲಾಗುತ್ತದೆ. ಇವು ಕೆಲವು ಸುಲಭ ವಿಡಿಯೋ ಆಟಗಳನ್ನೂ ಆಡಬಲ್ಲವು, ತಮ್ಮ ಹೆಸರನ್ನು ನೆನಪಿಟ್ಟುಕೊಳ್ಳಬಲ್ಲವು ಮತ್ತು ಕನಸನ್ನೂ ಕಾಣಬಲ್ಲವು.

ಗಿಳಿ

ಗಿಳಿ

ನಾವು ಹೇಳಿದ್ದನ್ನೇ ಮತ್ತೆ ಪುನರುಚ್ಛಿಸುವ ಬುದ್ಧಿಮತ್ತೆ ಪಡೆದಿರುವ ಗಿಳಿ ಒಂದು ಬುದ್ಧಿವಂತ ಪಕ್ಷಿಯಾಗಿದೆ. ಒಂದು ಸಂಶೋಧನೆಯ ಪ್ರಕಾರ ಆಸ್ಟ್ರೇಲಿಯಾದಲ್ಲಿ ಕಂಡುವರುವ ಕೊಕಾಟೂ ಗಿಳಿ (cockatoo Parrot) ಅತ್ಯಂತ ಹೆಚ್ಚಿನ ಬುದ್ಧಿಮತ್ತೆ ಹೊಂದಿದ್ದು ಶೇಖಡಾ ತೊಂಬತ್ತರಷ್ಟು ಅನುಕರಣೆಯಲ್ಲಿ ಸಫಲತೆ ಪಡೆಯುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಗಿಳಿ

ಗಿಳಿ

ಇದು ಮಾನವರು ಉಚ್ಛರಿಸಬಲ್ಲ ಪದಗಳನ್ನು ಉಚ್ಛರಿಸುವುದು ಮಾತ್ರವಲ್ಲದೇ ಇದನ್ನು ಅರ್ಥೈಸಿಕೊಳ್ಳಬಲ್ಲದು. ಅಷ್ಟೇ ಅಲ್ಲ, ಕೆಲವು ವಾಕ್ಯಗಳನ್ನೂ ಸ್ವತಃ ನಿರ್ಮಿಸಬಲ್ಲದು.

ಇಲಿ

ಇಲಿ

ನಾಯಿಗಿಂತಲೂ ಇಲಿಗಳು ಹೆಚ್ಚು ಬುದ್ದಿಮತ್ತೆ ಪಡೆದಿವೆ ಎಂದರೆ ಅಚ್ಚರಿಯಾಗುತ್ತದಲ್ಲವೇ? ಇದುವರೆಗೆ ಕೇವಲ ಸಂಶೋಧನೆಗಳಿಗೆ ಮುಡಿಪಾಗಿದ್ದ ಈ ಪುಟ್ಟ ಇಲಿಯೂ ಅಪಾರ ಬುದ್ದಿವಂತಿಕೆ ಹೊಂದಿದೆ ಎಂದು ಈಗ ತಿಳಿದುಬಂದಿದೆ. ಪುಕ್ಕಲುತನಕ್ಕೆ ಮೊದಲ ಹೆಸರು ಇಲಿ. ಏಕೆಂದರೆ ಯಾವುದೇ ಅಪಾಯಬಂದರೆ ಮೊತ್ತ ಮೊದಲು ಹೊರಗೆ ಓಡುತ್ತದೆ.

ಇಲಿ

ಇಲಿ

ಆದರೆ ಈ ಪುಕ್ಕಲುತನವೇ ಇದರ ಸಾಮರ್ಥ್ಯವಾಗಿದೆ. ಅಂದರೆ ಭೂಕಂಪದ ಅಲೆಗಳನ್ನು ಗ್ರಹಿಸುವ, ಇದನ್ನು ಮೊದಲೇ ಮನಗಂಡು ನೆಲದಾಳದಲ್ಲಿ ಕಳ್ಳಸುರಂಗಗಳನ್ನು ಕೊರೆದು ಪರಾರಿಯಾಗಲು ಮಾಡಿರುವ ದಾರಿಗಳು ಬುದ್ದಿಯಿಲ್ಲದೇ ಸಾಧಿಸಲು ಸಾಧ್ಯವಾಗದ ಮಾತುಗಳು

ಕುರಿ

ಕುರಿ

ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆ ಇದರ ಜೀರ್ಣಶಕ್ತಿಯ ಸಾಮರ್ಥ್ಯವನ್ನು ತೋರುತ್ತದೆ. ಆದರೆ ಕುರಿ ಒಂದು ಬುದ್ಧಿವಂತ ಪ್ರಾಣಿಯೂ ಹೌದು ಎಂದು ಬ್ರಿಟಿಷ್ ವಿಜ್ಞಾನಿಗಳು ಸಾಬೀತುಪಡಿಸಿದ್ದಾರೆ. ಇವುಗಳ ಬುದ್ದಿಮತ್ತೆ ಸಾಮಾನ್ಯವಾಗಿ ಗ್ರಹಿಕೆಗೆ ಕಂಡುಬರುವುದಿಲ್ಲ.

ಕುರಿ

ಕುರಿ

ಆದರೆ ಇದರ ಬಳಕೆ ಕುರಿ ಪಲಾಯನ ಮಾಡಲು ಬಳಸುತ್ತದೆ. ಕಾಡುಪ್ರಾಣಿ ಎರಗುವ ವೇಳೆ ಇವೆಲ್ಲವೂ ಒಂದಾಗಿ ಒಂದೇ ಗುಂಪಾಗಿ ಪ್ರಾಣಿಯಿಂದ ತಪ್ಪಿಸಿಕೊಳ್ಳುವಂತೆ ಹಠಾತ್ತಾಗಿ ದಾರಿ ಬದಲಿಸಿ ಓಡುತ್ತವೆ. ಅಲ್ಲದೇ ಇವು ಮನುಷ್ಯರ ಮತ್ತು ಇತರ ಪ್ರಾಣಿಗಳ ಮುಖವನ್ನು ನೆನಪಿಟ್ಟುಕೊಂಡು ಸ್ಪಂದಿಸುವ ಬುದ್ಧಿಮತ್ತೆಯನ್ನು ಹೊಂದಿವೆ.

ನಾಯಿ

ನಾಯಿ

ತಮಗೆ ತೊಂದರೆ ಕೊಟ್ಟ, ಅಥವಾ ತನ್ನ ಮಾಲಿಕ ಎರಗಲಿಕ್ಕೆ ಹೇಳಿದ ವ್ಯಕ್ತಿಯನ್ನು ತನ್ನ ಜೀವಮಾನವಿಡೀ ಮರೆಯದ ಸಾಮರ್ಥ್ಯ ಹೊಂದಿದೆ. ಇನ್ನೊಂದು ಅತ್ಯಂತ ಪ್ರಬಲ ಬುದ್ದಿಮತ್ತೆ ಎಂದರೆ ಸ್ಥಳವನ್ನು ಗುರುತಿಸುವುದು. ನಾಯಿಗಳು ತಾವು ಸಾಗಿದ ದಾರಿಯಲ್ಲೆಲ್ಲಾ ಮೂತ್ರ ಹೊಯ್ದು ಅದರ ವಾಸನೆಯಿಂದ ಸ್ಥಳವನ್ನು ಗುರುತಿಸುತ್ತವೆ. ಇದೇ ಶಕ್ತಿಯಿಂದ ಸುಮಾರು ಸೂರು ಕಿ.ಮೀ ವರೆಗೂ ದಾಟಿಸಿದ ನಾಯಿಗಳು ಸ್ವಸ್ಥಾನಕ್ಕೆ ಹಿಂದೆ ಬಂದ ನಿದರ್ಶನಗಳಿವೆ. ಆದರೆ ಈ ಸಾಮರ್ಥ್ಯ ನೀರಿಗೆ ಅನ್ವಯಿಸದ ಕಾರಣ ನಾಯಿಯ ಕಾಟದಿಂದ ಮುಕ್ತಿ ಪಡೆಯಬೇಕಿದ್ದರೆ ನದಿ ಅಥವಾ ನೀರಿನ ಯಾವುದೇ ಹರಿವನ್ನು ದಾಟಿಸುವುದು ಅಗತ್ಯವಾಗಿದೆ.

ನಾಯಿ

ನಾಯಿ

ಮಾನವನ ಅತ್ಯಂತ ವಿಶ್ವಾಸಾರ್ಹ ಬಂಟ ಎಂದೇ ಖ್ಯಾತಿ ಪಡೆದಿರುವ ನಾಯಿ ಅತ್ಯಂತ ವಿಧೇಯತೆ ಮತ್ತು ಸೂಚನೆಗಳನ್ನು ಪಾಲಿಸುವ ಗುಣ ಹೊಂದಿದೆ. ತಾವು ಭೇಟಿಯಾದವರ ಮುಖವನ್ನು ನೆನಪಿಟ್ಟುಕೊಂಡು ಮುಂದಿನ ಬಾರಿ ಭೇಟಿಯಾದಾಗ ಸ್ನೇಹಪರತೆಯನ್ನು ತೋರುವ ಪರಿ ನಾಯಿಗಿಂತ ಇನ್ನೊಂದು ಪ್ರಾಣಿ ತೋರಲಾರದು. ಅಲ್ಲದೇ ರೇಡಿಯೋ, ಟೀವಿಯಲ್ಲಿ ಬರುವ ಮಾಹಿತಿಗಳನ್ನೂ ಗ್ರಹಿಸಬಲ್ಲವು. ಇನ್ನೂ ಅಚ್ಚರಿಯ ವಿಷಯವೆಂದರೆ ಇವು ಸೂಕ್ಷ್ಮಗ್ರಾಹಿಗಳಾಗಿದ್ದು ಹೊಟ್ಟೆಕಿಚ್ಚು, ಪ್ರೀತಿ, ಅಸೂಯೆ ಮೊದಲಾದ ಭಾವನೆಗಳನ್ನೂ ಪ್ರಕಟಿಸಬಲ್ಲವು.

ಡಾಲ್ಫಿನ್

ಡಾಲ್ಫಿನ್

ಭೂಮಿಯಲ್ಲಿ ನಾಯಿ ಹೇಗೆಯೋ ಹಾಗೆಯೇ ಸಾಗರದಲ್ಲಿ ಮನುಷ್ಯರಿಗೆ ಅತ್ಯಂತ ಆಪ್ತವಾದ ಜಲಚರ ಎಂದರೆ ಡಾಲ್ಫಿನ್. ಮನುಷ್ಯರಿಗೆ ಉಪಕಾರಿಯಾದ ಡಾಲ್ಫಿನ್ನುಗಳನ್ನು ವಿಶ್ವದ ಯಾವುದೇ ಮೀನುಗಾರದು ಬೇಟೆಯಾಡುವುದಿಲ್ಲ. ಒಂದು ವೇಳೆ ಬಲೆಗೆ ಸಿಲುಕಿದರೂ ಬಿಡಿಸಿ ನೀರಿಗೆ ಬಿಟ್ಟುಬಿಡುತ್ತಾರೆ. ಏಕೆಂದರೆ ಸಹಸ್ರಾರು ವರ್ಷಗಳಿಂದ ಸಾಗರದಲ್ಲಿ ಅಪಘಾತಕ್ಕೆ ಈಡಾಗಿ ನೀರುಪಾಲಾದ ಮನುಷ್ಯರನ್ನು ಈ ಡಾಲ್ಫಿನ್ನುಗಳು ಉಳಿಸಿ ದಡಕ್ಕೆ ತಂದು ಮುಟ್ಟಿಸಿವೆ.

ಡಾಲ್ಫಿನ್

ಡಾಲ್ಫಿನ್

ಇವುಗಳು ಮಾನವರಂತೆಯೇ ಸಂಘಜೀವಿಗಳಾಗಿದ್ದು ನೀರಿನಲ್ಲಿದ್ದಾಗ ತಮ್ಮತಮ್ಮೊಂದಿಗೆ ವಿಶೇಷ ತರಂಗಗಳ ಮೂಲಕ ಸಂವಹನ ನಡೆಸುವ ಸಾಮರ್ಥ್ಯ ಪಡೆದಿವೆ ಹಾಗೂ ನೀರಿನಿಂದ ಮೇಲಿದ್ದಾಗ ಹಲವು ಧ್ವನಿಗಳನ್ನೂ ಮೂಡಿಸಬಲ್ಲವು. ನೋಡಲು ಸದಾ ನಗುತ್ತಲೇ ಇರುವಂತೆ ಕಾಣುವ ಡಾಲ್ಫಿನ್ನುಗಳು ಯಾವಾಗಲೂ ಮಲಗುವುದೇ ಇಲ್ಲ. ಏಕೆಂದರೆ ಇದು ಅರ್ಧದಿನ ಮೆದುಳಿನ ಅರ್ಧಭಾಗವನ್ನು ಮತ್ತು ಇನ್ನರ್ಧ ದಿನ ಉಳಿದ ಭಾಗವನ್ನು ಬಳಸುವ ಸಾಮರ್ಥ್ಯ ಹೊಂದಿದೆ. ಮನುಷ್ಯರ ಸಂಜ್ಞೆ, ಶ್ರವಣಾತೀತ ತರಂಗಗಳನ್ನು ಗ್ರಹಿಸುವ ಮೂಲಕ ಇವುಗಳಿಂದ ಅಸಾಧ್ಯಗಳನ್ನೂ ಸಾಧಿಸಬಹುದು.

ಗೋರಿಲ್ಲಾ ಮತ್ತು ಚಿಂಪಾಂಜಿಗಳು (ವಾನರಗಳು)

ಗೋರಿಲ್ಲಾ ಮತ್ತು ಚಿಂಪಾಂಜಿಗಳು (ವಾನರಗಳು)

ಮನುಷ್ಯರನ್ನು ಹೋಲುವ ಮಂಗ ಬುದ್ದಿವಂತ ಪ್ರಾಣಿ ಎಂದು ಕಂಡುಬಂದರೂ ಇತರ ಪ್ರಾಣಿಗಳಿಗೆ ಹೋಲಿಸಿದರೆ ಇದರ ಬುದ್ದಿಮತ್ತೆ ಕಡಿಮೆ. ಆದರೆ ಗೋರಿಲ್ಲಾ, ಚಿಂಪಾಂಜಿ, ಒರಾಂಗುಟಾನ್ ಮೊದಲಾದ ವಾನರಗಳು ಅಪಾರವಾದ ಬುದ್ಧಿಮತ್ತೆ ಹೊಂದಿದ್ದು ಮನುಷ್ಯರನ್ನು ಬಹುವಾಗಿ ಆಕರ್ಷಿಸಿವೆ. ಇವು ತಮ್ಮ ಅಗತ್ಯಕ್ಕೆ ತಕ್ಕಂತೆ ಉಪಕರಣಗಳನ್ನು ಬಳಸಬಲ್ಲವು. ಉದಾಹರಣೆಗೆ ಗೋರಿಲ್ಲಾದ ಪ್ರಿಯ ಆಹಾರವಾದ ಇರುವೆಗಳು ಮತ್ತು ವರಲೆಗಳು ತೂತಿನ ಒಳಗಿರುತ್ತವೆ.

ಗೋರಿಲ್ಲಾ ಮತ್ತು ಚಿಂಪಾಂಜಿಗಳು (ವಾನರಗಳು)

ಗೋರಿಲ್ಲಾ ಮತ್ತು ಚಿಂಪಾಂಜಿಗಳು (ವಾನರಗಳು)

ಚಿಂಪಾಂಜಿ ಕಡ್ಡಿಯೊಂದನ್ನು ಈ ತೂತಿನ ಒಳಗೆ ತೂರಿಸಿ ಇದಕ್ಕೆ ಹತ್ತಿಕೊಂಡ ಇರುವೆಗಳನ್ನು ತಿನ್ನುತ್ತದೆ. ಇವು ಸಹಾ ಸಂಘಜೀವಿಗಳಾಗಿದ್ದು ತಮಗೆದುರಾದ ಸಮಸ್ಯೆಗಳನ್ನು ಸಮಾಲೋಚಿಸಿಕೊಂಡು ಬಗೆಹರಿಸುವ ಸಾಮರ್ಥ್ಯ ಹೊಂದಿವೆ. ಇವು ಸಂಜ್ಞೆಗಳನ್ನು ಗುರುತಿಸುವ ಮೂಲಕ ಮನುಷ್ಯರ ಸೂಚನೆಗಳನ್ನು ಗ್ರಹಿಸಿ ಆ ಪ್ರಕಾರ ಸ್ಪಂದಿಸಬಲ್ಲವು. ಅಲ್ಲದೇ ತಮಗೆ ನೀಡಿದ ಹೆಸರು ಮತ್ತು ತಮ್ಮ ಒಡನಾಟದಲ್ಲಿದ್ದ ಮನುಷ್ಯರ ಹೆಸರನ್ನೂ ಹಲವಾರು ವರ್ಷಗಳವರೆಗೆ ನೆನಪಿಟ್ಟುಕೊಳ್ಳಬಲ್ಲವು.

ಕಾಗೆ

ಕಾಗೆ

ಯಾರೂ ಸಾಕದ, ಆದರೆ ಅತ್ಯಂತ ಬುದ್ಧಿವಂತ ಜೀವಿಯ ಪಟ್ಟ ಪಡೆದ ಕಾಗೆ ವಿಶ್ವದ ಸರಿಸುಮಾರು ಎಲ್ಲಾ ಪ್ರದೇಶಗಳಲ್ಲಿ ಕಂಡುಬರುತ್ತದೆ. ಮನುಷ್ಯರಿಗೆ ಹೆದರದ ಕಾಗೆಗಳು ಸದಾ ಆಹಾರವನ್ನು ಕದಿಯುವ ಹುನ್ನಾರದಲ್ಲಿರುತ್ತವೆ. ಈ ಕಳ್ಳ ಮನಸ್ಸೇ ಕಾಗೆಗೆ ಅತಿ ಬುದ್ದಿವಂತ ಎಂಬ ಪಟ್ಟ ದೊರಕಿಸಿದೆ. ಹೂಜಿಯ ತಳದಲ್ಲಿದ್ದ ನೀರನ್ನು ಕಾಗೆ ಹೇಗೆ ಕುಡಿಯಿತು ಎಂಬ ಕಥೆ ಎಲ್ಲಾ ಮಕ್ಕಳಿಗೆ ಗೊತ್ತು. ಇಂತಹ ಇನ್ನೂ ಹಲವಾರು ತಂತ್ರಗಳನ್ನು ಬಳಸುವ ಜಾಣ್ಮೆ ಕಾಗೆಗೆ ಇದೆ.

ಕಾಗೆ

ಕಾಗೆ

ಇದಕ್ಕೆ ಕಾರಣ ಪಕ್ಷಿಗಳಲ್ಲಿಯೇ ದೇಹದ ಗಾತ್ರದ ಅನುಪಾತದಲ್ಲಿ ಅತಿ ದೊಡ್ಡ ಮೆದುಳನ್ನು ಹೊಂದಿರುವುದು. ಇವುಗಳ ಬುದ್ದಿಮತ್ತೆಯನ್ನು ಕಂಡುಕೊಳ್ಳಲು ವಿಜ್ಞಾನಿಗಳ ಸಂಶೋಧನೆ ಏನೂ ಬೇಕಾಗಿಲ್ಲ, ಕೊಂಚ ಗಮನವಿಟ್ಟು ನೋಡಿದರೇ ಸಾಕಾಗುತ್ತದೆ. ತಮ್ಮ ಕೊಕ್ಕುಗಳಿಂದ ಒಡೆಯಲು ಸಾಧ್ಯವಿಲ್ಲದ ಒಣಫಲಗಳನ್ನು ಇವು ಕದ್ದು ರಸ್ತೆಯ ಮೇಲೆ ಎಸೆಯುತ್ತವೆ. ಇವುಗಳ ಮೇಲೆ ವಾಹನಗಳು ಹರಿದು ಇವು ಒಡೆದ ಬಳಿಕ ಹಾರಿ ಬಂದು ಒಳಗಿನ ತಿರುಳನ್ನು ತಿನ್ನುತ್ತದೆ.

ಕಾಗೆ

ಕಾಗೆ

ಸುಲಭವಾಗಿ ಒಡೆಯುವ ಫಲಗಳನ್ನು ಕಲ್ಲಿನ ಅಥವಾ ಗಟ್ಟಿ ನೆಲದ ಮೇಲೆ ಎತ್ತರದಿಂದ ಬೀಳಿಸಿ ಒಡೆದು ತಿನ್ನುತ್ತವೆ. ಇದರ ಇನ್ನೊಂದು ಸಾಮರ್ಥ್ಯವೆಂದರೆ ಇದರ ಕುತಂತ್ರಿ ಬುದ್ದಿ. ತಂಡದಲ್ಲಿ ಕೆಲಸಮಾಡುವ ಇವು ಕೋಳಿಮರಿಗಳು ಮತ್ತು ಕೋಳಿ ಜೊತೆಗಿದ್ದಾಗ ಒಂದು ಕಾಗೆ ಕೋಳಿಯ ಗಮನವನ್ನು ತನ್ನೆಡೆಗೆ ಸೆಳೆದು ಅತ್ತ ಓಡುವಂತೆ ಮಾಡಿದಾಗ ಇತ್ತ ಇದನ್ನೇ ಕಾಯುತ್ತಿದ್ದ ಬೇರೆ ಕಾಗೆಗಳು ಮರಿಗಳನ್ನು ಎಗರಿಸುತ್ತವೆ. ಇದರ ಗೂಡಿನಲ್ಲಿ ಕುತಂತ್ರದಿಂದ ಮೊಟ್ಟೆಯಿಡುವ ಕೋಗಿಲೆಯ ಹೊರತಾಗಿ ಕಾಗೆಯನ್ನು ಬೇರೆ ಯಾರೂ ಸೋಲಿಸಲು ಸಾಧ್ಯವಿಲ್ಲ. ತಮಗೆ ತೊಂದರೆ ಕೊಟ್ಟವರ ಮೇಲೆ ಎತ್ತರದಿಂದ ಉಚ್ಛಿಷ್ಟವನ್ನು ಉದುರಿಸುವ ಮೂಲಕ ಇವು ತಮ್ಮ ಕೋಪವನ್ನು ತೋರ್ಪಡಿಸುತ್ತವೆ.

English summary

Most Intelligent Animals and birds

One of the most popular category in our blog is Most 10 Animals lists.So here is another interesting one. We humans don’t own the world alone. We are masters because we are the most smartest ‘’animals’’ theoretically. These animals aren’t enough clever to be scientist but they aren’t that stupid anyways. Check out 10 Most Intelligent Animals below.
X
Desktop Bottom Promotion