For Quick Alerts
ALLOW NOTIFICATIONS  
For Daily Alerts

ವಿಶ್ವ ಚಹಾ ದಿನಾಚರಣೆ-ಚಹಾದ ಕುರಿತ ಇಂಟರೆಸ್ಟಿಂಗ್ ಸಂಗತಿ

By Manu
|

ಚಹಾ ಎಂದ ಕೂಡಲೇ ಎಲ್ಲರಿಗೂ ಒಂದು ಹಿತವಾದ ಅನುಭವದ ನೆನಪಾಗುತ್ತದೆ. ಎಲ್ಲರ ಜೀವನದಲ್ಲೂ ಒಂದಲ್ಲಾ ಒಂದು ರೀತಿಯಲ್ಲಿ ತಮ್ಮದೇ ಆದ ಚಹಾ ಸವಿದ ಅನೇಕ ಅನುಭವಗಳಾಗಿರುತ್ತದೆ. ಬೆಳಗ್ಗೆ ಎದ್ದ ಕೂಡಲೇ ಹೆಚ್ಚಿನವರಿಗೆ ಚಹಾ ಇಲ್ಲದಿದ್ದರೆ ಅಂದಿನ ಕೆಲಸವೇ ಆಗುವುದಿಲ್ಲವೆಂಬಂತೆ ಇತ್ತೀಚಿನ ದಿನಗಳಲ್ಲಿ ಚಹಾ ತನ್ನದೇ ಆದ ಪ್ರಾತಿನಿಧ್ಯವನ್ನು ಹೊಂದುತ್ತಿದೆ. ಹಿಂದಿನ ಕಾಲದಲ್ಲಿ ವಿಶೇಷ ಸಂದರ್ಭಗಳಲ್ಲಿ ಅಥವಾ ವಿಶೇಷ ಅತಿಥಿಗಳು ಆಗಮಿಸಿದಲ್ಲಿ ಚಹಾವನ್ನು ನೀಡಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅದೊಂದು ದೈನಂದಿನ ಆರೋಗ್ಯಕರ ಪಾನೀಯವಾಗಿ ಮಾರ್ಪಟ್ಟಿದೆ. ಈಗಂತೂ ಚಹಾ ಸಿಗದ ಪ್ರದೇಶವೇ ನಿಮಗೆ ಕಾಣಸಿಗುವುದಿಲ್ಲ. ಮನೆಯಿಂದ ಹೊರಗೆ ಒಂದು ಸುತ್ತು ಹಾಕಿದರೆ ಸಾಕು ಅನೇಕ ರುಚಿರುಚಿಯ ವಿವಿಧ ವೈವಿಧ್ಯದ ಚಹಾ ನೀಡುವ ಅಂಗಡಿಗಳನ್ನು ನೀವು ಕಾಣಬಹುದು.

Interesting Facts About Tea That You May Not Know

ಅದರಲ್ಲೂ ಹೆಚ್ಚು ರುಚಿಯಾದ ಮತ್ತು ವೈವಿಧ್ಯತೆಯ ಚಹಾ ಸಿಗುವ ಜಾಗದಲ್ಲಂತೂ ನೀವು ಚಹಾ ಸವಿಯಲು ಸಾಲಿನಲ್ಲಿ ನಿಂತು ಕಾಯಬೇಕು. ಹೀಗೆ ದಿನಕಳೆದಂತೆ ಚಹಾದ ಬೇಡಿಕೆಯೂ ಹೆಚ್ಚುತ್ತಿದೆ. ಒಮ್ಮೆ ಬೆಂಗಳೂರಿಗೆ ಹೊಸದಾಗಿ ಬಂದಾಗ ಮಾಗಡಿ ರಸ್ತೆಯಲ್ಲಿರುವ ಹಟ್ಟಿ ಕಾಫಿ ಎಂಬ ಅಂಗಡಿಯನ್ನು ಗಮನಿಸಿದೆ. ಅಲ್ಲಿ ವಿವಿಧ ಚಹಾಗಳ ಪಟ್ಟಿಯನ್ನೇ ಹಾಕಲಾಗಿತ್ತು. ಅದೇನೇ ಇರಲಿ ಸಿಂಪಲ್ ಆಗಿ ಚಹಾ ಆರ್ಡರ್ ಮಾಡೋಣ ಎಂದು ಒಳಹೋದರೆ, ಚಹಾಗಾಗಿ ಕಾದು ನಿಂತ ಗ್ರಾಹಕರ ದೊಡ್ಡ ಸಾಲೇ ಇದೆ...! ಇದನ್ನು ನೋಡಿದ ಮೇಲಂತೂ ಇಲ್ಲಿ ಚಹಾ ಸವಿಯಲೇಬೇಕೆಂದು ನಿರ್ಧರಿಸಿ, ಸಾಲಿನಲ್ಲಿ ನಿಂತು ಚಹಾ ಸ್ವೀಕರಿಸಿದೆ. ಅಬ್ಬಾ, ನಿಜಕ್ಕೂ ಅದು ಸವಿಯಲು ಅದ್ಭುತವಾಗಿತ್ತು. ನಂತರ ಆ ಮಾರ್ಗದಲ್ಲಿ ಹೋದಾಗಲೆಲ್ಲ ಅಲ್ಲಿನ ಚಹಾವನ್ನು ಸವಿಯದೇ ಹಿಂದಿರುಗಲು ಮನಸ್ಸಾಗುವುದಿಲ್ಲ. ನೀವು ಚಹಾ ಪ್ರಿಯರೇ? ಈ 10 ಅಂಶಗಳನ್ನು ಗಮನಿಸಿ ನೋಡಿ

ಇತ್ತೀಚೆಗೆ ಭಾರತದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಚಾಯ್ ಪೇ ಚರ್ಚಾ ಅಥವಾ ಚಹಾ ಸವಿಯುತ ಸಂವಾದ ಎಂಬ ವಿನೂತನ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದು, ದೇಶಾದ್ಯಂತ ಭಾರೀ ಪ್ರಶಂಸೆಗೆ ಒಳಗಾಗಿದೆ. ಇಲ್ಲಿಯೂ ಸಹ ಚಹಾವನ್ನು ಸಂವಾದಕ್ಕೆ ಆಯ್ಕೆಮಾಡಿರುವುದು ನಿಜಕ್ಕೂ ಗಮನಾರ್ಹ ಸಂಗತಿ. ಅಷ್ಟಕ್ಕೂ, ಚಹಾದ ಬಗ್ಗೆ ಇಷ್ಟೊಂದು ಸಂಗತಿಗಳನ್ನು ನಿಮಗೇಕೆ ನೀಡುತ್ತಿದ್ದೇವೆ ಎಂದು ಆಲೋಚಿಸುತ್ತಿದ್ದೀರಾ? ಹೌದು, ಡಿಸೆಂಬರ್ ಮಾಸದ 15ನೇ ತಾರೀಖನ್ನು ವಿಶ್ವ ಚಹಾ ದಿನವೆಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಈ ಸಂಪ್ರದಾಯವು 2005 ರಿಂದ ಚಹಾ ಉತ್ಪಾದಿಸುವ ರಾಷ್ಟ್ರಗಳಾದ ಚೀನಾ ಮತ್ತು ಭಾರತ ದೇಶಗಳು ಪ್ರಾರಂಭಿಸಿದವು. ಅಂದಿನಿಂದ ಈ ದಿನವನ್ನು ವಿಶ್ವ ಚಹಾ ದಿನವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈಗಂತೂ ಅನೇಕ ರೀತಿಯ ದುಬಾರಿ ಚಹಾ ವಿಧಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುತ್ತಿವೆ. ನೀವು ಚಹಾ ಬಗ್ಗೆ ತಿಳಿದಿರದ ಕೆಲವು ಸಂಗತಿಗಳನ್ನು ಈ ತಾಣದಲ್ಲಿ ನಿಮಗಾಗಿ ನೀಡುತ್ತಿದ್ದೇವೆ, ಮುಂದೆ ಓದಿ... ಸ್ವಾದಿಷ್ಟವಾದ ಹತ್ತು ವೈವಿಧ್ಯಮಯ ಹಸಿರು ಚಹಾದ ವೈಶಿಷ್ಟ್ಯವೇನು?

1. ಪ್ರಪಂಚದಲ್ಲೇ ಚಹಾ ಪಾನೀಯವು ಎರಡನೇ ಹೆಚ್ಚು ಸೇವಿಸುವ ಸಾಮಾನ್ಯ ಪಾನೀಯವೆಂದು ತಿಳಿದುಬಂದಿದೆ. ಇದು ಹೆಚ್ಚು ಎಲ್ಲರೂ ಬಳಸುವ ನೀರು ಮಿಶ್ರಿತ ಪಾನೀಯವಾಗಿ ಸವಿಯಲಾಗುತ್ತಿದೆ.
2. ಚಹಾ ಚೀನಾದ ಒಂದು ಸಾಮಾನ್ಯ ಪರಿಕಲ್ಪನೆ. ಇದು ಮೊಟ್ಟಮೊದಲ ಬಾರಿಗೆ 1400ರ ಕಾಲದಲ್ಲಿ ಚೀನಾದ ದೊರೆಯೊಬ್ಬ ಬಳಸಲು ಪ್ರಾರಂಭಿಸಿದನು.
3. ಇನ್ನೊಂದು ಮುಖ್ಯವಾದ ಸಂಗತಿಯೆಂದರೆ ಚಹಾದಲ್ಲಿ ಎರಡು ಬಗೆಯ ವಿಧಗಳಿವೆ. ಒಂದು ಚೀನಾದಲ್ಲಿ ಹೆಚ್ಚು ಸಾಮಾನ್ಯವಾಗಿ ಬಳಸುವ ಚಹಾ ಆಗಿದ್ದು, ಮತ್ತೊಂದು ಭಾರತದ ಗುಡ್ಡ ಪ್ರದೇಶಗಳಾದ ಅಸ್ಸಾಂ ಮತ್ತು ಡಾರ್ಜಿಲಿಂಗ್‌ ನಲ್ಲಿ ಬೆಳೆಯುವಂತಹ ಚಹಾ ಗಿಡಗಳು.
4. ಆದರೆ ಚಹಾಗಳಲ್ಲಿ ಮೂಲತ: 6 ವಿಧದ ಮಾದರಿಗಳಿವೆ. ಕಪ್ಪು, ಬಿಳಿ, ಹಸಿರು, ಹಳದಿ, ಊಲೂಂಗ್ ಚಹಾ ಹಾಗೂ ಚೀನಾದಲ್ಲಿ ಸಾಮಾನ್ಯವಾಗಿ ಬಳಸುವ ಪ್ಯೂರ್ ಚಹಾ.


5. ಈ ಎಲ್ಲಾ ವಿಧಗಳು ಒಂದೇ ಗಿಡದಿಂದ ಬಂದರೂ ಸಹ ಅದರ ಸಂಸ್ಕರಣ ವಿಧಾನಗಳು ಬೇರೆ ಬೇರೆಯಾಗಿ ಅದರ ರುಚಿಗಳು ವಿಭಿನ್ನತೆಯಿಂದ ಕೂಡಿರುತ್ತದೆ.
6. ಚಹಾ ಮೊಗ್ಗಿನಿಂದ ಬಿಳಿ ಚಹಾವನ್ನು ತಯಾರಿಸಲಾಗುತ್ತದೆ. ಇದನ್ನು ಹೆಚ್ಚು ಸಂಸ್ಕರಿಸುವುದಿಲ್ಲ. ಈ ರೀತಿಯ ಚಹಾದಲ್ಲಿ ಹೆಚ್ಚು ಉತ್ಕರ್ಷಣ ನಿರೋಧಕ ಸತ್ವವಿರುತ್ತದೆ.
7. ಸಾಮಾನ್ಯವಾಗಿ ಹಸಿರು ಚಹಾ ಎಲೆಗಳನ್ನು ಚಳಿಗಾಲದಲ್ಲಿ ಕೊಯ್ಲುಮಾಡುವುದಿಲ್ಲ. ಏಕೆಂದರೆ ಚಳಿಗಾಲದಲ್ಲಿ ಇದರಲ್ಲಿ ಉತ್ಕರ್ಷಣ ಶಕ್ತಿ ಹೆಚ್ಚಾಗಿದ್ದು, ಬೇಸಿಗೆ ಬಂದ ಮೇಲೆ ಹೆಚ್ಚು ಕೊಯ್ಲುಮಾಡಲಾಗುತ್ತದೆ.
8. ಹಳದಿ ಚಹಾ ಕೂಡ ಒಂದು ಮಟ್ಟಕ್ಕೆ ಉತ್ಕರ್ಷಣ ರಹಿತವಾದದ್ದು, ಆದರೆ ಅದರ ಸಂಸ್ಕರಣ ಪದ್ಧತಿಯು ಕೊಂಚ ಭಿನ್ನವಾಗಿದೆ.
9. ಕಪ್ಪು ಚಹಾ ಅಥವಾ ಬ್ಲ್ಯಾಕ್ ಟೀ ಪ್ರಪಂಚದಲ್ಲಿ ಹೆಚ್ಚು ಬಳಸುವ ಚಹಾ ವಿಧಾನವಾಗಿದ್ದು, ಪ್ರಬಲವಾದ ಆಸ್ವಾದವಿರುವ ಗುಣಕ್ಕೆ ಇದು ಹೆಸರುವಾಸಿ.

10. ಊಲೂಂಗ್ ಎಂಬುದು ಒಂದು ಮಾದರಿಯ ಚಹಾ ಆಗಿದ್ದು, ಅದೂ ಸಹ ಹಸಿರು ಚಹಾ ವಿಧದಲ್ಲೇ ಒಳಗೊಂಡಿರುತ್ತದೆ. ಈ ವಿಧಾನದಲ್ಲಿ ದೊಡ್ಡ ದೊಡ್ಡ ಚಹಾ ಎಲೆಗಳನ್ನು ಕಿತ್ತು, ಅದರಿಂದ ಚಹಾ ಮಾಡುತ್ತಾರೆ. ಆದರೆ ಇದರಲ್ಲಿ ಶೇಖಡಾ 70 ರಷ್ಟು ಮಾತ್ರ ಭಾಗಶ: ಸಂಸ್ಕರಿಸುತ್ತಾರೆ.
11. ಪ್ಯೂರ್ ಎಂಬುದು ಒಂದು ವಿಶಿಷ್ಟ ಮಾದರಿಯ ಚಹಾ ಆಗಿದ್ದು, ಇದನ್ನು ಚೀನಾದಲ್ಲಿ ಮದ್ಯದಂತೆ ಸವಿಯಲು ತಯಾರಿಸಲಾಗುತ್ತಿದ್ದು, ಇದು ಚೀನಾ ಚಹಾ ಎಂದೇ ಪ್ರಸಿದ್ಧಿಯಾಗಿದೆ. ಈ ಪದ್ಧತಿಯಲ್ಲಿ ಚಹಾವನ್ನು ಕೇಕ್ ಮಾದರಿಯಲ್ಲಿ ಸಂಗ್ರಹಿಸಿಡಲಾಗುತ್ತದೆ. ಕೆಲವು ವರ್ಷಗಳ ನಂತರ ಅದರ ರುಚಿ ಹೆಚ್ಚಾಗಿ ಸ್ವಾದದ ರೀತಿಯೂ ಸಹ ವಿಭಿನ್ನವಾಗುತ್ತದೆ. ಈ ಮಾದರಿಯು ಪ್ರಪಂಚದಲ್ಲೇ ಅತೀ ದುಬಾರಿ ಚಹಾ ಮಾದರಿಯಾಗಿದೆ.
12. ಇನ್ನೂ ಹೆಚ್ಚಿನ ದುಬಾರಿ ಚಹಾ ಅಂದರೆ ಕೀಟಗಳಿಂದ ಮತ್ತು ಪಾಂಡಾದಿಂದ ತಯಾರಿಸಿದ ಚಹಾ. ಇದು ಚೀನಾದಲ್ಲಿ ಹೆಚ್ಚು ಪ್ರಚಲಿತ ಪದ್ಧತಿಯಾಗಿದೆ. ಇವು ಚಹಾ ಬಗೆಗಿನ ವಿಶಿಷ್ಟವಾದ ಕೆಲವು ಸಂಗತಿಗಳಾಗಿದ್ದು, ಈ ಸುದ್ದಿಯೊಂದಿಗೆ ಆನಂದದಿಂದ ಚಹಾ ಸವಿಯಿರಿ. ನಿಮಗೆಲ್ಲರಿಗೂ ವಿಶ್ವ ಚಹಾ ದಿನಾಚರಾಣೆಯ ಶುಭಾಶಯಗಳು.
English summary

Interesting Facts About Tea That You May Not Know

Coming from one of the largest tea drinking nations of the world, we might think we know all the facts about tea. But some things about this popular beverage may still surprise you. The 15th of December is celebrated as World Tea Day. This tradition was started since 2005 in many of the tea producing countries like China and India.
Story first published: Monday, December 14, 2015, 23:00 [IST]
X
Desktop Bottom Promotion