For Quick Alerts
ALLOW NOTIFICATIONS  
For Daily Alerts

ಕುತೂಹಲ ಕೆರಳಿಸುವ 'ಸಚಿನ್‌' ಜೀವನದ ಯಶೋಗಾಥೆ

By manu
|

ಯಾವುದಾದರೊಂದು ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಸಾಧಿಸಿದವರು ನಡೆದುಬಂದ ದಾರಿಯನ್ನು ಕಂಡರೆ ಅವರು ತಾವು ನಂಬಿದ ವಿದ್ಯೆಗಾಗಿ ಇಡಿಯ ಜೀವಮಾನವನ್ನೇ ಮುಡಿಪಾಗಿರಿಸುವುದನ್ನು ಕಂಡಿದ್ದೇವೆ.

ಲತಾ ಮಂಗೇಶ್ಕರ್, ಪಂ.ಭೀಮಸೇನ ಜೋಶಿ, ಪಂ.ರವಿಶಂಕರ್, ಅಂತೆಯೇ ಕ್ರಿಕೆಟ್ ಕ್ಷೇತ್ರದಲ್ಲಿ ಸಚಿನ್ ತೆಂಡೂಲ್ಕರ್, ಅಭಿಮಾನಿಗಳ ಪಾಲಿನ ದೇವರು, ಕ್ರಿಕೆಟ್ ಲೋಕದ ಸವ್ಯಸಾಚಿ. ಹನ್ನೊಂದರ ವಯಸ್ಸಿನಲ್ಲಿಯೇ ಕ್ರಿಕೆಟ್ ಬ್ಯಾಟ್ ಕೈಗೆತ್ತಿಕೊಂಡು ಆಡಲು ಪ್ರಾರಂಭಿಸಿ ಹದಿನಾರನೇ ವಯಸ್ಸಿನಲ್ಲಿ ಅಂದರೆ 1989ನೇ ನವೆಂಬರ್ 15ರಂದು ಪಾಕಿಸ್ತಾನದ ವಿರುದ್ಧ ತನ್ನ ಚೊಚ್ಚಲ ಟೆಸ್ಟ್ ಆಡಿದ ಸಚಿನ್ ಆ ಬಳಿಕ ಹಿಂದಿರುಗಿ ನೋಡಿದ್ದೇ ಇಲ್ಲ.

ದೇಶೀಯ ಮಟ್ಟದಲ್ಲಿ ಮುಂಬೈ ತಂಡವನ್ನು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತಂಡದಲ್ಲಿ ಅನಿವಾರ್ಯ ಸ್ಥಾನ ಪಡೆದ ಇವರು ನಂತರದ ಇಪ್ಪತ್ತನಾಲ್ಕು ವರ್ಷ ಕ್ರಿಕೆಟ್ ಲೋಕದಲ್ಲಿ ಹಲವು ದಾಖಲೆಗಳನ್ನು ಬರೆದರು.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೂರು ಶತಕಗಳನ್ನು ದಾಖಲಿಸಿದ ಏಕಮಾತ್ರ ಕ್ರಿಕೆಟ್ ಆಟಗಾರ, ಏಕದಿನ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಪ್ರಥಮ ದಾಂಡಿಗ, ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ನುಗಳನ್ನು ದಾಖಲಿಸಿದ ಆಟಗಾರ, ಮೊದಲಾದವು ಇವರ ಅಪಾರ ದಾಖಲೆಗಳಲ್ಲಿ ಪ್ರಮುಖವಾದವು. ಸಚಿನ್ ತೆಂಡೂಲ್ಕರ್ ಶತಕ ಶಕ್ತಿಯ ಗುಟ್ಟುರಟ್ಟು

ಆದರೆ ಇದಕ್ಕೂ ಹೊರತಾಗಿ ಅವರ ಬಗ್ಗೆ ಇನ್ನೂ ಹಲವು ರೋಚಕ ಮಾಹಿತಿಗಳಿದ್ದು ನಿಮ್ಮನ್ನು ರೋಮಾಂಚನಗೊಳಿಸಬಹುದು. ಒಂದು ವೇಳೆ ನೀವು ಅಪ್ಪಟ ಸಚಿನ್ ಅಭಿಮಾನಿಯೇ ಆಗಿದ್ದರೆ ಈ ಮಾಹಿತಿಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದನ್ನು ಮರೆಯಬೇಡಿ. ಅವು ಯಾವುದೆಂಬ ಕುತೂಹಲ ಮೂಡಿತೇ? ಕೆಳಗಿನ ಮೂವತ್ತು ಸ್ಲೈಡ್ ಗಳನ್ನು ತಾಳ್ಮೆಯಿಂದ ನೋಡುತ್ತಾ ಹೋಗಿ, ಚಕಿತಗೊಳ್ಳಲು ಸಿದ್ಧರಾಗಿ..

ಪ್ರಥಮ ಶಾಲೆ

ಪ್ರಥಮ ಶಾಲೆ

ಸಚಿನ್ ಬಾಲಕನಾಗಿದ್ದಾಗ ಸೇರಿದ ಪ್ರಥಮ ಶಾಲೆ - ಬಾಂದ್ರಾದ ಇಂಡಿಯನ್ ಎಜುಕೇಶನ್ ಸೊಸೈಟಿಯ ನ್ಯೂ ಇಂಗ್ಲೀಷ್ ಸ್ಕೂಲ್.

ಅಂಜಲಿಯವರ ಪ್ರಥಮ ಭೇಟಿ

ಅಂಜಲಿಯವರ ಪ್ರಥಮ ಭೇಟಿ

1990ರಲ್ಲಿ ಸಚಿನ್ ಹದಿನೇಳು ವಯಸ್ಸಿನವರಾಗಿದ್ದಾಗ ಇಂಗ್ಲೆಂಡ್ ಪ್ರವಾಸದಿಂದ ಹಿಂದಿರುಗುವ ವೇಳೆ ಮುಂಬೈ ವಿಮಾನ ನಿಲ್ದಾಣದಲ್ಲಿ ತಮ್ಮ ಭಾವೀ ಪತ್ನಿ ಅಂಜಲಿಯವರನ್ನು ಪ್ರಥಮ ಬಾರಿ ಭೇಟಿಯಾದರು.

ವಿವಾಹ

ವಿವಾಹ

ಬಳಿಕ ಅವರು ತಮ್ಮ ಇಪ್ಪತ್ತೆರಡನೇ ವಯಸ್ಸಿನಲ್ಲಿ ತಮಗಿಂತ ಆರು ವರ್ಷ ಹಿರಿಯರಾದ ಡಾ.ಅಂಜಲಿಯವರನ್ನು ವಿವಾಹವಾದರು.

ಸಚಿನ್‌ರವರ ಮಾವ

ಸಚಿನ್‌ರವರ ಮಾವ

ಸಚಿನ್‌ರವರ ಮಾವ (ಅಂಜಲಿಯವರ ತಂದೆ-ಆನಂದ್ ಮೆಹ್ತಾ) ರವರು ರಾಷ್ಟ್ರೀಯ ಬ್ರಿಜ್ ಚಾಂಪಿಯನ್ ಶಿಪ್ ನಲ್ಲಿ ಏಳು ಬಾರಿ ಚಾಂಪಿಯನ್ ಆಗಿದ್ದರು

ಸಹಾರಾ ಕಪ್ ನಾಯಕತ್ವ

ಸಹಾರಾ ಕಪ್ ನಾಯಕತ್ವ

1997ರಲ್ಲಿ ಸಚಿನ್ ನಾಯಕತ್ವದದಲ್ಲಿ ಪ್ರಥಮವಾಗಿ ಗೆದ್ದ 'ಸಹಾರಾ ಕಪ್' ಸ್ಮರಣಾರ್ಥ ತಮ್ಮ ಮಗಳಿಗೆ 'ಸಾರಾ' ಎಂದು ಹೆಸರಿಟ್ಟಿದ್ದಾರೆ.

ಸಚಿನ್ ಹೆಸರಿನ ಹಿಂದಿರುವ ಸತ್ಯ

ಸಚಿನ್ ಹೆಸರಿನ ಹಿಂದಿರುವ ಸತ್ಯ

ಸಚಿನ್ ಹುಟ್ಟಿದಾಗ ಅವರ ತಂದೆ ರಮೇಶ್ ತೆಂಡೂಲ್ಕರ್ ರವರು ತಮ್ಮ ಆರಾಧ್ಯ ಸಂಗೀತ ನಿರ್ದೇಶಕರಾದ ಸಚಿನ್ ದೇವ್ ಬರ್ಮನ್ ರ ಗೌರವಾರ್ಥವಾಗಿ ತಮ್ಮ ಮಗನಿಗೂ ಸಚಿನ್ ಎಂಬ ಹೆಸರನ್ನು ಆಯ್ಕೆ ಮಾಡಿಕೊಂಡರು.

ತನ್ನ ಮೊದಲ ಪ್ಯಾಡ್‌ಗಳನ್ನು ಕಳೆದುಕೊಂಡಿದ್ದು

ತನ್ನ ಮೊದಲ ಪ್ಯಾಡ್‌ಗಳನ್ನು ಕಳೆದುಕೊಂಡಿದ್ದು

ಅಂದಿನ ದಿನಗಳಲ್ಲಿ ಬ್ಯಾಟಿಂಗ್ ಲೋಕದ ತಾರೆಯಾಗಿದ್ದ ಸುನಿಲ್ ಗಾವಸ್ಕರ್ ರವರು ಅಂದಿನ ದಿನಗಳಲ್ಲಿ ಹೆಚ್ಚಿನವರಿಗೆ ಅಲಭ್ಯವಾಗಿದ್ದ ಅತಿ ಹಗುರವಾದ ಮೊಣಕಾಲ ಪ್ಯಾಡ್‪ಗಳನ್ನು ಸಚಿನ್ ರವರು ಹದಿನಾಲ್ಕು ವರ್ಷದವರಿದ್ದಾಗ ಉಡುಗೊರೆಯಾಗಿ ನೀಡಿದ್ದರು. ಆದರೆ ಕೆಲವು ದಿನಗಳ ಬಳಿಕ ಹದಿನೈದು ವರ್ಷದ ಕೆಳಗಿನವರ ತರಬೇತಿ ಕ್ಯಾಂಪ್‌ನಲ್ಲಿ ಈ ಪ್ಯಾಡ್‌ಗಳು ಕಳುವಾದವು.

ಹದಿನೈದನೇಯ ವಯಸ್ಸಿನಲ್ಲಿ ಉಡುಗೋರೆಯಾಗಿ ಸಿಕ್ಕಿದ ಮೊದಲ ಬ್ಯಾಟ್

ಹದಿನೈದನೇಯ ವಯಸ್ಸಿನಲ್ಲಿ ಉಡುಗೋರೆಯಾಗಿ ಸಿಕ್ಕಿದ ಮೊದಲ ಬ್ಯಾಟ್

ಹದಿನೈದು ವರ್ಷದ ಕೆಳಗಿನ ಮುಂಬೈ (ಅಂದಿನ ಬಾಂಬೆ) ತಂಡಕ್ಕೆ ಆಯ್ಕೆಯಾದ ಸಂತೋಷದಲ್ಲಿ ದಿಲಿಪ್ ವೆಂಗ್​ಸರ್ಕಾರ್ ರವರು ತಮ್ಮ ಜಿಎಂ ಬ್ಯಾಟ್ ಒಂದನ್ನು ಉಡುಗೊರೆಯಾಗಿ ನೀಡಿದ್ದರು.

ವೇಗದ ಬೌಲರ್‌ಗಳ ಪಟ್ಟಿಯಿಂದ ಔಟ್

ವೇಗದ ಬೌಲರ್‌ಗಳ ಪಟ್ಟಿಯಿಂದ ಔಟ್

ಎಂಆರ್ ಎಫ್ ಪೇಸ್ ಫೌಂಡೇಶನ್ ಒಂದರಲ್ಲಿ ಅತಿವೇಗದ ಬೌಲರ್‌ಗಳ ಪಟ್ಟಿಯಲ್ಲಿ ಆಯ್ಕೆಯಾಗಲು ಹಾಜರಾಗಿದ್ದ ತೆಂಡೂಲ್ಕರ್ ರವರನ್ನು ಅಂದಿನ ವೇಗದ ಬೌಲರ್ ಡೆನ್ನಿಸ್ ಲಿಲ್ಲಿ ಯವರು ತಿರಸ್ಕರಿಸಿದ್ದರು.

ಸೌರವ್ ಗಂಗೂಲಿಯ ಪ್ರಥಮ ಭೇಟಿ

ಸೌರವ್ ಗಂಗೂಲಿಯ ಪ್ರಥಮ ಭೇಟಿ

ಹದಿನೈದು ವರ್ಷದ ಕೆಳಗಿನವರ ತರಬೇತಿ ಕ್ಯಾಂಪ್ ಒಂದು ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆಯುತ್ತಿದ್ದಾಗ ಪ್ರಥಮ ಬಾರಿಗೆ ಸೌರವ್ ಗಂಗೂಲಿಯವರನ್ನು ಭೇಟಿಯಾದರು.

ಪ್ರಪ್ರಥಮ ಶತಕ

ಪ್ರಪ್ರಥಮ ಶತಕ

ಮುಂಬೈನ ಶಿವಾಜಿ ಪಾರ್ಕ್ ನಲ್ಲಿ ನಡೆದ ಹ್ಯಾರಿಸ್ ಶೀಲ್ಡ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ನಲ್ಲಿ ಶೃದ್ಧಾಶ್ರಮ ವಿದ್ಯಾಮಂದಿರ ತಂಡದ ಪರವಾಗಿ ಹಾಗೂ ಮಾಟುಂಗಾದ ಡಾನ್ ಬೋಸ್ಕೋ ಶಾಲೆಯ ವಿರುದ್ಧ ಆಡಿದ ಆಟದಲ್ಲಿ ತಮ್ಮ ಜೀವನದ ಪ್ರಪ್ರಥಮ ಶತಕವನ್ನು ದಾಖಲಿಸಿದರು.

ಡ್ರೆಸ್ಸಿಂಗ್ ಕೋಣೆ

ಡ್ರೆಸ್ಸಿಂಗ್ ಕೋಣೆ

ಡ್ರೆಸ್ಸಿಂಗ್ ಕೋಣೆಯನ್ನು ಬಳಸಲು ಕನಿಷ್ಟ ವಯಸ್ಸಿನ ನಿರ್ಬಂಧವನ್ನು ಹದಿನಾಲ್ಕು ವರ್ಷದ ಸಚಿನ್ ರವರಿಗಾಗಿ ಸಿಸಿಐ (ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ) ಸಡಿಲಗೊಳಿಸಿತ್ತು.

ರಣಜಿ ಟ್ರೋಫಿ

ರಣಜಿ ಟ್ರೋಫಿ

1987ರ ಮುಂಬೈ ರಣಜಿ ಟ್ರೋಫಿಯ ಸಂಭವನೀಯ ವ್ಯಕ್ತಿಗಳಲ್ಲಿ ಒಟ್ಟು ಮೂವತ್ತಾರು ಆಟಗಾರರನ್ನು ಆಯ್ಕೆ ಮಾಡಲಾಗಿದ್ದು ಅದರಲ್ಲಿ ಗಾವಸ್ಕರ್ ಮತ್ತು ಸಚಿನ್ ಪ್ರಮುಖರಾಗಿದ್ದರು.

ಬಾಲ್ ಬಾಯ್ ಆಗಿ ಕಾರ್ಯನಿರ್ವಹಿಸದರು!

ಬಾಲ್ ಬಾಯ್ ಆಗಿ ಕಾರ್ಯನಿರ್ವಹಿಸದರು!

1987ರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಸಚಿನ್ ಬೌಂಡರಿಯಾಚೆ ದಾಟಿದ ಬಾಲುಗಳನ್ನು ಹೆಕ್ಕಿ ಹಿಂದೆ ನೀಡುವ ಬಾಲ್ ಬಾಯ್ ಆಗಿ ಕಾರ್ಯನಿರ್ವಹಿಸಿದ್ದರು.

ಕರಾಚಿ ಟೆಸ್ಟ್

ಕರಾಚಿ ಟೆಸ್ಟ್

1989ರ ಕರಾಚಿ ಟೆಸ್ಟ್ ಪಂದ್ಯದಲ್ಲಿ ಸಚಿನ್ ಟೆಂಡೂಲ್ಕರ್, ವಖಾರ್ ಯೂನುಸ್, ಸಲೀಲ್ ಅಂಕೋಲಾ ಮತ್ತು ಶಾಹಿದ್ ಸಯೀದ್ ಈ ನಾಲ್ವರೂ ತಮ್ಮ ಪ್ರಪ್ರಥಮ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಪಾದರ್ಪಣೆ ಇಟ್ಟರು.

 ಪ್ರಪ್ರಥಮ ಏಕದಿನ ಪಂದ್ಯದಲ್ಲಿ ಜಿರೋ!

ಪ್ರಪ್ರಥಮ ಏಕದಿನ ಪಂದ್ಯದಲ್ಲಿ ಜಿರೋ!

ಪಾಕಿಸ್ತಾನದ ವಿರುದ್ಧ ಆಡಿದ ತಮ್ಮ ಪ್ರಪ್ರಥಮ ಏಕದಿನ ಪಂದ್ಯದಲ್ಲಿ ಅವರು ಸೊನ್ನೆಗೆ ಔಟಾಗಿ ಮರಳಿದರು. ಗುಜ್ರಾನ್ವಾಲಾ ದಲ್ಲಿ 1989ರ ಡಿ. 18ರಂದು ಆಡಿದ ಪಂದ್ಯದಲ್ಲಿ ವಖಾರ್ ಯೂನುಸ್ ರವರ ಎರಡನೇ ಬಾಲ್ ಗೆ ಔಟ್ ಆದರು (ಕ್ಯಾಚ್ ವಸೀಂ ಅಕ್ರಂ)

ಪ್ರಥಮ ಟೆಸ್ಟ್ ಶತಕ

ಪ್ರಥಮ ಟೆಸ್ಟ್ ಶತಕ

1990ರ ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಪ್ರಥಮ ಟೆಸ್ಟ್ ಶತಕ ದಾಖಲಿಸಿದರು.

ಕುಂಬ್ಳೆಯ ಹತ್ತೂ ವಿಕೆಟ್ ಗಳ ರಹಸ್ಯ

ಕುಂಬ್ಳೆಯ ಹತ್ತೂ ವಿಕೆಟ್ ಗಳ ರಹಸ್ಯ

ಪಾಕಿಸ್ತಾನದ ಕೋಟ್ಲಾ ಕ್ರೀಡಾಂಗಣದಲ್ಲಿ ಆಡುತ್ತಿದ್ದಾಗ ಅನಿಲ್ ಕುಂಬ್ಳೆಯವರ ಸ್ವೆಟರ್ ಮತ್ತು ಟೊಪ್ಪಿಯನ್ನು ಸಚಿನ್ ರವರು ಆಯಾ ಓವರ್ ಪ್ರಾರಂಭವಾಗುವ ಮೊದಲು ಅಂಪೈರ್ ರಿಗೆ ನೀಡುತ್ತಿದ್ದರು. ಯಾವ ಓವರ್ ನಲ್ಲಿ ಈ ಕ್ರಮ ಅನುಸರಿಸಿದ್ದರೋ ಆ ಓವರ್ ನಲ್ಲಿ ಅನಿಲ್ ಕುಂಬ್ಳೆ ವಿಕೆಟ್ ಪಡೆಯುತ್ತಿದ್ದರು. ನಂತರವೂ ಅನಿಲ್ ಕುಂಬ್ಳೆಯವರ ಪ್ರತಿ ಓವರ್ ಗೂ ಇದೇ ಕ್ರಮವನ್ನು ಸಚಿನ್ ಅನುಸರಿಸಿದರು. ಕಾಕಾತಾಳೀಯವೋ ಎಂಬಂತೆ ಆ ಪಂದ್ಯದ ಹತ್ತೂ ವಿಕೆಟ್ ಗಳನ್ನು ಕುಂಬ್ಳೆ ಕಬಳಿಸಿದರು.

 ಸ್ವದೇಶದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ

ಸ್ವದೇಶದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ

1990ರಲ್ಲಿ ಶ್ರೀಲಂಕಾದ ವಿರುದ್ಧ ನಡೆದ ಪಂದ್ಯದಲ್ಲಿ ಆಡುವ ಮೂಲಕ ಸ್ವದೇಶದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು.

ಮೂರನೆಯ ಅಂಪೈರ್ ವಿಧಾನದಲ್ಲಿ ಔಟ್ ಆದ ಪ್ರಪ್ರಥಮ ಆಟಗಾರ

ಮೂರನೆಯ ಅಂಪೈರ್ ವಿಧಾನದಲ್ಲಿ ಔಟ್ ಆದ ಪ್ರಪ್ರಥಮ ಆಟಗಾರ

ಮೂರನೆಯ ಅಂಪೈರ್ ವಿಧಾನದಲ್ಲಿ ಔಟ್ ಆದ ಪ್ರಪ್ರಥಮ ಆಟಗಾರ ಸಚಿನ್ ಆಗಿದ್ದಾರೆ. ದ.ಆಫ್ರಿಕಾ ವಿರುದ್ಧ ಡರ್ಬನ್ ನಲ್ಲಿ 1992ರಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಮೂರನೆಯ ಅಂಪೈರ್ ಆಗಿ ಕಾರ್ಲ್ ಲೀಬನ್ಬರ್ಗ್ ರವರು ಕಾರ್ಯನಿರ್ವಹಿಸುತ್ತಿದ್ದು ಎರಡನೆಯ ಆಟದಲ್ಲಿ ರನ್ ಔಟ್ ಎಂಬ ನಿರ್ಣಯವನ್ನು ದೂರದರ್ಶನದ ನಿಧಾನಗತಿಯ ರಿಪ್ಲೇಗಳ ಮೂಲಕ ಅವರು ಖಚಿತಪಡಿಸಿದರು. ಆ ಪಂದ್ಯದಲ್ಲಿ ಸಚಿನ್ ಹನ್ನೊಂದು ರನ್ ಪಡೆದಿದ್ದರು.

ಶಾಂಪೇನ್ ಬಾಟಲಿ ಉಡುಗೊರೆ

ಶಾಂಪೇನ್ ಬಾಟಲಿ ಉಡುಗೊರೆ

1990ರಲ್ಲಿ ಮ್ಯಾಂಚೆಸ್ಟರ್ ನಲ್ಲಿ ಬಾರಿಸಿದ ತಮ್ಮ ಪ್ರಥಮ ಶತಕದ ಶ್ಲಾಘನೆಯ ರೂಪದಲ್ಲಿ ಅವರು ಪ್ರತಿನಿಧಿಸಿದ್ದ ತಂಡ ಮ್ಯಾಗ್ನಮ್ ಶಾಂಪೇನ್ ಬಾಟಲಿಯೊಂದನ್ನು ಉಡುಗೊರೆಯಾಗಿ ನೀಡಿತ್ತು. ಆದರೆ ಬ್ರಿಟಿಷ್ ಕಾನೂನಿನ ಪ್ರಕಾರ ಹದಿನೆಂಟು ವರ್ಷದ ಕೆಳಗಿನ ಪ್ರಾಯದವರು ಶಾಂಪೇನ್ ತೆರೆಯುವಂತಿರಲಿಲ್ಲವಾದ್ದರಿಂದ ಅವರು ಅದನ್ನು ತೆರೆಯದೇ ಹಾಗೇ ಜತನದಿಂದ ಮನೆಗೆ ತೆಗೆದುಕೊಂಡು ಬಂದಿದ್ದರು. ಸುಮಾರು ಎಂಟು ವರ್ಷಗಳ ಬಳಿಕ ಅಂದರೆ 1998ರಲ್ಲಿ ತಮ್ಮ ಮಗಳು ಸಾರಾಳ ಪ್ರಥಮ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಈ ಬಾಟಲಿಯನ್ನು ಅವರು ಎಲ್ಲರೆದುರು ತೆರೆದು ನೊರೆಯುಕ್ಕಿಸಿ ಸಂಭ್ರಮಿಸಿದರು.

ಪ್ರಥಮ ದಾಂಡಿಗನಾಗಿ

ಪ್ರಥಮ ದಾಂಡಿಗನಾಗಿ

1989ರಲ್ಲಿ ಕ್ರಿಕೆಟ್ ಗೆ ಪಾದಾರ್ಪಣೆಯಾಗಿದ್ದರೂ ಪ್ರಥಮ ದಾಂಡಿಗನಾಗಿ ಅವರಿಗೆ 1994ರ ನ್ಯೂಜಿಲೆಂಡ್ ಪ್ರವಾಸದ ಎರಡನೇ ಏಕದಿನ ಪಂದ್ಯದಲ್ಲಿ ಅವಕಾಶ ದೊರೆಯಿತು.

ಭಾರತದ ನೆಲದಲ್ಲಿ ಪ್ರಥಮ ಟೆಸ್ಟ್ ಶತಕ

ಭಾರತದ ನೆಲದಲ್ಲಿ ಪ್ರಥಮ ಟೆಸ್ಟ್ ಶತಕ

1993ರಲ್ಲಿ ಚೆನ್ನೈ (ಅಂದಿನ ಮದ್ರಾಸ್) ನಗರದ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಬಾರಿಸಿದ ಶತಕ ಭಾರತದ ನೆಲದಲ್ಲಿ ಸಚಿನ್ ದಾಖಲಿಸಿದ ಪ್ರಥಮ ಟೆಸ್ಟ್ ಶತಕವಾಗಿದೆ.

English summary

Interesting facts about Sachin Tendulkar

These are an Amazing Collection of Sachin Tendulkar Facts He took up cricket at the age of eleven, made his Test debut on 15 November 1989 against Pakistan in Karachi at the age of sixteen, and went on to represent Mumbai domestically and India internationally for close to twenty-four years. These are an Amazing Collection of Sachin Tendulkar Facts have a look 
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X