For Quick Alerts
ALLOW NOTIFICATIONS  
For Daily Alerts

ಸುಂದರ ನಗುವಿನಿಂದ ಕಷ್ಟ- ಸುಖದ ಜಗತ್ತನ್ನೇ ಗೆಲ್ಲಿರಿ!

|

ಪ್ರತಿಯೊಬ್ಬರ ಜೀವನದಲ್ಲೂ ಕಷ್ಟ - ಸುಖ ಇದ್ದೇ ಇರುತ್ತದೆ. ಇವೆರಡೂ ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಜೀವನದಲ್ಲಿ ಆಸೆ, ನೋವು, ನಲಿವು ಮತ್ತು ನೆನಪುಗಳು ಎಲ್ಲವೂ ಒಂದರ ಹಿಂದೆ ಒಂದು ಬಂದು ಹೋಗುತ್ತವೆ. ಆದರೆ ಇವೆಲ್ಲವೂ ನಾವಂದು ಕೊಂಡಂತೆ ಎಂದೂ ನಡೆಯುವುದಿಲ್ಲ. ಒಮ್ಮೊಮ್ಮೆ ಇದು ಸರಾಗವಾಗಿ ಸಾಗುತ್ತಿರುವಂತೆ ಕಂಡರು ಅದರ ಅಂತರಾತ್ಮದಲ್ಲಿ ನಮ್ಮಿಂದ ಮತ್ತೇನೋ ಬಯಸುತ್ತಿರುತ್ತದೆ.

ನಾವು ಜೀವನೋಪಾಯಕ್ಕಾಗಿ ಏನೆಲ್ಲ ಮಾಡಿದರು ಜೀವನವು ನಮ್ಮಿಂದ ಮತ್ತಷ್ಟು ಅಧಿಕ ಶ್ರಮ, ಸಾಮರ್ಥ್ಯ ಮತ್ತು ಬದ್ಧತೆಯನ್ನು ಬಯಸುತ್ತದೆ. ಜೀವನದ ಉದ್ದೇಶವೇನು ಎಂಬ ಪ್ರಶ್ನೆಗೆ ವಿವಿಧ ಉತ್ತರಗಳು ದೊರೆತರೂ ಅದರಲ್ಲಿ ಸಾಮಾನ್ಯವಾಗಿ ಅಂತಿಮವಾದ ಪದ 'ಸಂತೋಷ' ಅಥವಾ 'ಸುಖ'ವೇ ಆಗಿದೆ.

ಪ್ರತಿ ಧರ್ಮವೂ ಸಂತೋಷದಿಂದಿರಲು ಪಾಲಿಸಬೇಕಾದ ಸೂತ್ರಗಳನ್ನು ಬೋಧಿಸುತ್ತದೆ. ಆದರೆ ಸಂತೋಷವೆಂದರೇನು ಎಂಬ ಪ್ರಶ್ನೆಗೆ ಸೂಕ್ತವಾದ ವ್ಯಾಖ್ಯಾನ ಸಿಗುವುದಿಲ್ಲ. ಸಾಮಾನ್ಯವಾಗಿ ನಾವೆಲ್ಲರೂ ಹೆಚ್ಚು ಹಣವಿದ್ದವರು ಹೆಚ್ಚು ಸಂತೋಷಿಗಳು ಎಂಬ ಅಜ್ಜ ನೆಟ್ಟ ಆಲದಮರಕ್ಕೆ ನೇತುಹಾಕಿಕೊಂಡಿದ್ದೇವೆ. ಹಾಗಾಗಿ ಕಷ್ಟಗಳು ಬಂದಾಗ ಆತಂಕಗೊಳ್ಳುವುದನ್ನು ಬಿಟ್ಟು, ಇಂತಹ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸುವ ಬಗೆ ಹೇಗೆ ಎಂಬುದನ್ನು ಯೋಚಿಸುವುದು ಸೂಕ್ತ ಅಲ್ಲವೇ? ಖರ್ಚು ವೆಚ್ಚಗಳ ಮೇಲೆ ನಿಗಾ ವಹಿಸಿ ಜೀವನ ಸುಂದರವಾಗಿಸಿ!

ಇವೆಲ್ಲದಕ್ಕೂ ಒಂದೇ ಪರಿಹಾರ ನಗು. ಹೌದು ಕಷ್ಟದಲ್ಲಿರುವಾಗ ನಗುತ್ತಾ ಇರುವುದು ಕಷ್ಟದ ಕೆಲಸ ಆದರೂ ನಗು ನೋವನ್ನು ಬೇಗ ಮರೆಸುತ್ತದೆ ಎಂದು ತತ್ವಜ್ಞಾನಿಗಳು ಕೂಡ ಹೇಳುತ್ತಾರೆ. ನಗು ಹೇಗೆ ನಿಮ್ಮ ಜೀವನವನ್ನು ಸುಂದರವಾಗಿಸಬಲ್ಲದು ಎಂಬುದನ್ನು ತಿಳಿದಿರಬೇಕು. ನಗು ನಿಮಗೆ ಜೊತೆಗೆ ನಿಮ್ಮ ಜೊತೆಗಿರುವವರಿಗೆ ಕೂಡ ಹಿತವನ್ನು ನೀಡುತ್ತದೆ. ನಗುತ್ತಾ ಜೀವನವನ್ನು ಸಾಗಿದರೆ ಹೇಗೆ ಅದು ನಿಮಗೆ ಮತ್ತು ಇತರರಿಗೂ ಸಂತೋಷ ನೀಡುತ್ತದೆ ಎಂಬುದರ ಬಗ್ಗೆ ಇಲ್ಲಿ ಟಿಪ್ಸ್ ನೀಡಲಾಗಿದೆ.

How A Smile Can Change Life

ಧನಾತ್ಮಕ ಶಕ್ತಿ ಹೆಚ್ಚಿಸಲು ನಗು ಸಹಾಯಕ
ಸದಾ ದುಃಖ ಹೊಂದಿ ನೋವಿನಿಂದ ಇದ್ದರೆ ಅದು ಇನ್ನಷ್ಟು ಬೇಸರ ಹೆಚ್ಚಿಸುತ್ತದೆಯೇ ಹೊರತು ಸಂತೋಷ ನೀಡುವುದಿಲ್ಲ. ಕಷ್ಟವನ್ನು ಬದಿಗೊತ್ತಿ ನಗುತ್ತಾ ಇರುವುದನ್ನು ರೂಡಿ ಮಾಡಿಕೊಂಡರೆ ನೆಮ್ಮದಿಯನ್ನು ಹೆಚ್ಚಿಸಿ ಕಷ್ಟವನ್ನು ಎದುರಿಸುವ ಶಕ್ತಿ ದೊರೆಯುತ್ತದೆ. ಈ ಧನಾತ್ಮಕ ನಗುವಿನಿಂದ ಬೇರೆಯವರಿಗೂ ಕೂಡ ನಿಮ್ಮನ್ನು ನೋಡಿ ಸ್ಫೂರ್ತಿ ದೊರೆಯುತ್ತದೆ.

ನಗುತ್ತಾ ಇರಿ ಮತ್ತು ಬೇರೆಯವನ್ನು ನಗಿಸಿ
ನಗು ಸಂಕ್ರಾಮಿಕ ಎನ್ನಲಾಗುತ್ತದೆ. ನಿಮ್ಮ ಒಂದು ನಗು ನಿಮ್ಮ ಸುತ್ತಲಿನ ಜನರನ್ನು ಕೂಡ ನಗುತ್ತಾ ಕಾಲಕಳೆಯುವಂತೆ ಮಾಡಬಹುದು ಅಂತಹ ಶಕ್ತಿ ಈ ನಗುವಿಗಿದೆ. ನಿಮ್ಮ ನಗು ಮತ್ತು ನಗಿಸುವ ಗುಣ ಬೇಸರದ ಮುಖದ ಮೇಲೂ ನಗು ತರಿಸುತ್ತದೆ. ಆದ್ದರಿಂದ ನಗಲು ಮತ್ತು ನಗಿಸಲು ಜಿಪುಣರಾಗಬೇಡಿ. ನೀವು ಒಬ್ಬರನ್ನು ನಗಿಸುವಲ್ಲಿ ಸಫಲರಾದರೆ ಅದು ನಿಮ್ಮ ಆನಂದವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ನಕಾರಾತ್ಮಕ ಗುಣವನ್ನು ಹೋಗಲಾಡಿಸಿ


ನಕಾರಾತ್ಮಕ ಗುಣವನ್ನು ಹೊಂದಿದ್ದರೆ ಇದು ಜೀವನದಲ್ಲಿ ಹತಾಶೆಯನ್ನು ನೀಡುತ್ತದೆ. ಜೊತೆಗೆ ಬೇಸರದ ಭಾವನೆ ನಿಮಗೆ ಋಣಾತ್ಮಕ ಗುಣವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಆದ್ದರಿಂದ ನಗುವಿನ ಮೂಲಕ ಧಾನಾತ್ಮಕ ಭಾವನೆಗಳನ್ನು ಹೊಂದುವುದು ಸೂಕ್ತ. ನಗುತ್ತಾ ಬಾಳುವುದರಿಂದ ನಕಾರಾತ್ಮಕ ಗುಣವನ್ನು ಹೋಗಲಾಡಿಸಬಹುದು.
English summary

How A Smile Can Change Life

Both happiness and sorrow are a part and parcel of human life. You cannot find a single person around you who is blessed with happiness only. Everyone is destined to face the difficult situations and you are not an exception. Difficult situations bring anxieties and worries to human.
Story first published: Wednesday, May 27, 2015, 19:14 [IST]
X
Desktop Bottom Promotion