For Quick Alerts
ALLOW NOTIFICATIONS  
For Daily Alerts

ವ್ಯಕ್ತಿತ್ವ ವಿಕಸನಕ್ಕೆ ಇಲ್ಲಿದೆ ನೋಡಿ ಯಶಸ್ವಿ ಸೂತ್ರ

|

ಈ ಜಗತ್ತಿನಲ್ಲಿ ಕೋಟಿಗಟ್ಟಲೆ ಜನರು ವಾಸಿಸುತ್ತಿದ್ದಾರೆ. ಆದರೆ ಅವರಲ್ಲಿ ಕೆಲವರು ಮಾತ್ರ ಪ್ರಸಿದ್ಧಿಯನ್ನು ಪಡೆಯುತ್ತಾರೆ. ಅದರಲ್ಲೂ ಕೆಲವರ ವ್ಯಕ್ತಿತ್ವ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಅವರ ರೂಪ, ಐಶ್ವರ್ಯ, ಸೌಂದರ್ಯ ಅವರ ವ್ಯಕ್ತಿತ್ವ ಮನಸೆಳೆಯುತ್ತದೆ. ಉದಾಹರಣೆಗೆ ಡಾ. ಅಬ್ದುಲ್ ಕಲಾಂ. ನಾವೆಲ್ಲರೂ ಹಪಹಪಿಸುವ ಮೊದಲ ಮೂರೂ ಅವರಲ್ಲಿಲ್ಲ. ಆದರೂ ಅವರ ಹೆಸರು ಕೇಳುತ್ತಿದ್ದಂತೆಯೇ ಅವರ ಬಗ್ಗೆ ಗೌರವ, ಆದರ, ಹೆಮ್ಮೆ ಮೂಡುತ್ತವೆ. ಏಕೆಂದರೆ ಅವರ ವ್ಯಕ್ತಿತ್ವ ನಮ್ಮ ಮನಗೆದ್ದಿದೆ.

ಕೆನಡಾದ ಪ್ರಖ್ಯಾತ ವ್ಯಕ್ತಿತ್ವ ವಿಕಸನ ಭಾಷಣಕಾರರಾದ ಬ್ರಯಾನ್ ಟ್ರೇಸಿಯವರ ಪ್ರಕಾರ "you become what you think most of the time" ಅಂದರೆ ಬಹುತೇಕ ಸಂದರ್ಭಗಳಲ್ಲಿ ನೀವೇನು ಯೋಚಿಸುವೀರಾ ಅದೇ ಆಗುವಿರಿ. ಮೊದಲಿಗೆ ನಮ್ಮ ಕಾರ್ಯಕ್ಷೇತ್ರ ಯಾವುದು ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ಬಳಿಕ ಆ ಕಾರ್ಯಕ್ಷೇತ್ರದಲ್ಲಿ ಮುಂದುವರೆಯಬೇಕು ಎಂದು ಬ್ರಯಾನ್ ಟ್ರೇಸಿ ಹೇಳುತ್ತಾರೆ. ಯಾವುದೇ ವಿಷಯವನ್ನಾದರೂ ಪ್ರಾಥಮಿಕ ಹಂತದಿಂದ ಪ್ರಾರಂಭಿಸಿ ಬಳಿಕ ಉಳಿದ ಹಂತಗಳನ್ನು ದಾಟಿದರೆ ಆ ಮೂಲಕ ಪಡೆದ ವಿದ್ಯೆ ನಮ್ಮಲ್ಲಿ ಸದಾಕಾಲ ಉಳಿಯುತ್ತದೆ.

ವ್ಯಕ್ತಿತ್ವ ವಿಕಸನದ ವಿಷಯದಲ್ಲಿಯೂ ಈ ಕೆಳಗಿನ ಹಂತಗಳಲ್ಲಿ ನಮ್ಮನ್ನು ಮಾರ್ಪಾಡಿಸಿಕೊಳ್ಳುತ್ತಾ ನಡೆದಂತೆ ಕಾಲಕ್ರಮೇಣ ನಮ್ಮಲ್ಲಾಗುವ ಬದಲಾವಣೆ ಕಂಡು ನಾವೇ ಸೋಜಿಗಪಡುವಂತಾಗುತ್ತದೆ. ಈ ಲೇಖನದಲ್ಲಿ ಸುಲಭವಾದ ಆದರೆ ಪರಿಣಾಮಕಾರಿಯಾದ ವಿಧಾನಗಳನ್ನು ವಿವರಿಸಲಾಗಿದೆ, ಮುಂದೆ ಓದಿ.. ನಿಮ್ಮ ವಸ್ತುಗಳೇ ನಿಮ್ಮ ವ್ಯಕ್ತಿತ್ವ ಹೇಳುತ್ತದೆ, ಹುಷಾರ್!

How to Improve Your Personality

ಅಕ್ಕ ಪಕ್ಕದವರನ್ನು ಎಚ್ಚರಿಕೆಯಿಂದ ಗಮನಿಸಿ
ಸುತ್ತಮುತ್ತ ಇರುವವರನ್ನು ಎಚ್ಚರಿಕೆಯಿಂದ ಗಮನಿಸುತ್ತಿರಿ ಇದರರ್ಥ ಅಕ್ಕ ಪಕ್ಕ ಇರುವವರು ಏನು ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಿ ಎಂದಲ್ಲ, ನಿಮ್ಮ ಕಾರ್ಯಕ್ಷೇತ್ರದಲ್ಲಿ ಹೆಸರು ಮಾಡಿರುವ ವ್ಯಕ್ತಿಗಳು ಏನು ಮಾಡುತ್ತಿದ್ದಾರೆ, ಯಾವ ಕಾರ್ಯದಲ್ಲಿ ತಮ್ಮ ಸಮಯವನ್ನು ವಿನಿಯೋಗಿಸುತ್ತಿದ್ದಾರೆ, ಮುಂದಿನ ಅವರ ನಡೆ ಏನು ಎಂಬುದನ್ನು ಗಮನಿಸುತ್ತಿರಿ. ಅದರಲ್ಲೂ ಅವರಿಂದಾಗುವ ತಪ್ಪುಗಳನ್ನು ಅತಿ ಸೂಕ್ಷ್ಮವಾಗಿ ಗಮನಿಸಿ. ಆ ತಪ್ಪುಗಳನ್ನು ಮಾಡದೇ ಇರುವುದನ್ನು ಕಲಿಯಿರಿ.

ತಪ್ಪು ಮಾಡದ ಮಾನವರೇ ಇಲ್ಲ!
ಹೌದು, ತಪ್ಪು ಮಾಡದ ಮಾನವರೇ ಇಲ್ಲ. ಆದರೆ ಮಾಡಿದ ತಪ್ಪನ್ನು ಮತ್ತೆ ಮತ್ತೆ ಮಾಡುವುದು ಮಾತ್ರ ಮೂರ್ಖರ ಲಕ್ಷಣ. ಒಂದು ನಗೆಹನಿಯಲ್ಲಿ ಸರ್ದಾರ್ ರಸ್ತೆಯಲ್ಲಿ ಬಿದ್ದಿದ್ದ ಬಾಳೆಹಣ್ಣಿನ ಸಿಪ್ಪೆ ನೋಡಿ ಹೀಗೆ ಯೋಚಿಸಿದನಂತೆ-ಛೇ, ಇವತ್ತು ಕೂಡ ಜಾರಿ ಬೀಳಬೇಕಾಯ್ತಲ್ಲಾ. ಆದುದರಿಂದ ನಮ್ಮಿಂದಾದ ತಪ್ಪುಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಹಾಗೂ ಅದನ್ನು ಮತ್ತೆ ಪುನರಾವರ್ತನೆಯಾಗದಂತೆ ನೋಡಿಕೊಳ್ಳುವುದು ಅತಿ ಅಗತ್ಯ.

ಉಳಿತಾಯ ಮಾಡಿ, ಹೆಚ್ಚು ತೊಡಗಿಸಿ
ಖ್ಯಾತ ಅರ್ಥಶಾಸ್ತ್ರಜ್ಞ ಯು.ಪಿ.ಪುರಾಣಿಕ್ ರವರು ಸುಖಕರ ಜೀವನಕ್ಕೆ ಗಳಿಸಿದ ಹಣದಲ್ಲಿ ಕೊಂಚ ಉಳಿಸಿ, ಉಳಿಸಿದ್ದನ್ನು ತೊಡಗಿಸಿ ಎಂದು ಸಲಹೆ ನೀಡುತ್ತಾರೆ. ನಾವೆಲ್ಲರೂ ಉಳಿತಾಯವೆಂದರೆ ಖರ್ಚು ಮಾಡದೇ ಜಿಪುಣರಾಗಿರುವುದು ಎಂದು ತಪ್ಪಾಗಿ ತಿಳಿದುಕೊಂಡಿದ್ದೇವೆ. ಮೊದಲಿಗೆ ಉಳಿತಾಯವೆಂದರೆ ಏನು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ನಮಗೆ ಅಗತ್ಯತೆಗೆ ಅನುಗುಣವಾದ ಸಾಮಾಗ್ರಿ ಹಾಗೂ ಸೇವೆಗಳನ್ನು ಮಾತ್ರ ಪಡೆದುಕೊಳ್ಳುವುದು ಹಾಗೂ ಅನಗತ್ಯವಾದ ಖರ್ಚುಗಳನ್ನು ಮಾಡದೇ ಇರುವುದೇ ನಿಜವಾದ ಉಳಿತಾಯ. ವ್ಯಕ್ತಿತ್ವ ವಿಕಾಸವಾಗಬೇಕಾದರೆ ಓದಿ!

ಉದಾಹರಣೆಗೆ ಐವತ್ತು ಸಾವಿರ ರೂ ಬೆಲೆಬಾಳುವ ಮೊಬೈಲಿನಲ್ಲಿ ನಮಗೆ ಅನಗತ್ಯವಾದ ಎಷ್ಟೋ ವೈಶಿಷ್ಟ್ಯಗಳಿರುತ್ತವೆ. ಬೇಕಾಗಿದ್ದು ಕೆಲವು ಮಾತ್ರ. ಅಂದರೆ ನಮಗೆ ಅನಗತ್ಯವಾದ ವೈಶಿಷ್ಟ್ಯಕ್ಕೆ ನಾವು ಹಣಕೊಟ್ಟು ಅದನ್ನು ಉಪಯೋಗಿಸುತ್ತಿಲ್ಲ! ಬದಲಿಗೆ ನಮ್ಮ ಅಗತ್ಯಕ್ಕೆ ತಕ್ಕ ವೈಶಿಷ್ಟ್ಯಗಳುಳ್ಳ ಮೊಬೈಲ್ ಖರೀದಿಸಿ ಅದರ ಸಂಪೂರ್ಣ ಉಪಯೋಗ ಪಡೆಯುವುದು ಜಾಣತನ.

ಇಲ್ಲಿ ನಮ್ಮನ್ನು ಸೋಲಿಸುವ ಸರದಾರನೆಂದರೆ ನಮ್ಮ ಪ್ರತಿಷ್ಠೆ. ಕಡಿಮೆ ಬೆಲೆಯ ಮೊಬೈಲ್ ಖರೀದಿಸಿದರೆ ನಮ್ಮ ಅಂತಸ್ತಿಗೆ ಕಡಿಮೆ ಎಂಬ ಭಾವನೆಯಿಂದ ನಾವು ನಮ್ಮನ್ನೇ ವಂಚಿಸಿಕೊಳ್ಳುತ್ತೇವೆ. ಆ ಕಾಲ ಈಗ ಬದಲಾಗಿದೆ. ಆ ಅಹಮ್ಮಿಕೆಗೆ ಬಲಿಯಾಗದೇ ನಮ್ಮ ವೇತನದಲ್ಲಿ ಪ್ರತಿತಿಂಗಳೂ ಕೊಂಚ ಉಳಿಸಿ, ಉಳಿಸಿದ್ದನ್ನು ಸಮರ್ಪಕವಾಗಿ ಹೂಡುತ್ತಾ ಬಂದರೆ ಮುಂದಿನ ದಿನಗಳಲ್ಲಿ ಉತ್ತಮ ಜೀವನ ನಮ್ಮದಾಗುತ್ತದೆ.

English summary

How to Improve Your Personality

Your personality changes many times during your life. Although you may not notice it happening, as you grow older behaviors become ingrained. The key to improving your personality is changing behaviors to reinforce good personality traits and limit negative personality traits. Grab your pen and paper and get ready to be introspective.
Story first published: Friday, September 11, 2015, 17:32 [IST]
X
Desktop Bottom Promotion