For Quick Alerts
ALLOW NOTIFICATIONS  
For Daily Alerts

ದೇವಸ್ಥಾನದ ಗಂಟೆಯ ನಿನಾದದ ಮಹತ್ವ ಅರಿಯಿರಿ

|

ಗಂಟೆಯ ನಿನಾದವನ್ನು ಪವಿತ್ರವೆಂದು ಹಲವಾರು ಧರ್ಮಗಳು ನಂಬುತ್ತವೆ. ಗಂಟೆಯ ನಿನಾದ ಹಿಂದುತ್ವದ ಸಂಕೇತ. ದೇವಸ್ಥಾನವನ್ನು ಪ್ರವೇಶಿಸುವಾಗ ಗಂಟೆಯನ್ನು ಬಡಿದು ಆವರಣವನ್ನು ಪ್ರವೇಶಿಸುತ್ತಾರೆ. ಆದ್ದರಿಂದ ಗಂಟೆಯ ನಿನಾದವನ್ನು ಪರಮ ಪಾವನವೆಂದು ಪರಿಗಣಿಸಲಾಗುತ್ತದೆ.

ಗಂಟೆಯ ಶಬ್ದದ ನಿನಾದವನ್ನು ಮೊಳಗಿಸುವುದು ಹಾಗೂ ಇತರ ಸಂಗೀತ ಉಪಕರಣಗಳಿಂದ ಸ್ವರ ಹೊರಡಿಸುವುದು ಹಿಂದೂ ಧರ್ಮದಲ್ಲಿ ಆಚರಣೆಯಾಗಿದೆ. ದೇವರನ್ನು ಪೂಜಿಸುವಾಗ, ಪೂಜೆಗಳನ್ನು ನಡೆಸುತ್ತಿರುವಾಗ ಧಾರ್ಮಿಕ ನಂಬಿಕೆಗೆ ಅನುಸಾರವಾಗಿ ಗಂಟೆ ಹಾಗೂ ಇತರ ಸಂಗೀತ ವಾದ್ಯಗಳ ಧ್ವನಿಯನ್ನು ಹೊರಡಿಸುತ್ತೇವೆ.

"ಓಂ" ಉಚ್ಛಾರವು ಇಡೀ ಜಗತ್ತಿಗೆ ಎಲ್ಲಾ ಸ್ವರಗಳ ಪ್ರಾರಂಭ ಎಂದು ಪರಿಗಣಿಸಲಾಗುತ್ತದೆ. ದೇವರ ಸ್ವರವಾಗಿ ಓಂಕಾರವನ್ನು ಹೊರಡಿಸಲಾಗುತ್ತದೆ. ಗಂಟೆಯ ನಿನಾದದ ಮಹತ್ವ ಏನೆಂಬುದನ್ನು ನಾವು ಅರಿತಿಲ್ಲ.

Significance Of Temple Bells

ಎಲ್ಲರೂ ಪಾಲಿಸುತ್ತಾರೆಂದು ನಾವೂ ಕೂಡ ಗಂಟೆಯನ್ನು ಬಡಿಯುತ್ತೇವೆ. ಆದರೆ ಅದಕ್ಕಿರುವ ಧಾರ್ಮಿಕ ಮೌಲ್ಯ ನಮಗೆ ತಿಳಿದಿಲ್ಲ. ಹಾಗಿದ್ದರೆ ಬನ್ನಿ ದೇವಲಯದ ಗಂಟೆಯ ಮಹತ್ವವನ್ನು ನಾವಿಂದು ಅರಿಯೋಣ.

ನಿಮ್ಮ ಆರೋಗ್ಯಕ್ಕೆ ಲಾಭದಾಯಕವಾಗಿರುವ 7 ಭಾರತೀಯ ಸಂಪ್ರದಾಯಗಳು

ಗಂಟೆಯ ನಿನಾದದ ಹಿಂದಿರುವ ವಿಜ್ಞಾನ:
ಗಂಟೆಯನ್ನು ಸಾಮಾನ್ಯ ಲೋಹದಿಂದ ತಯಾರಿಸುವುದಿಲ್ಲ. ಲೋಹಗಳಾದ ಕಾಡ್ಮಿಮಮ್, ಝಿಂಕ್, ಲೀಡ್, ನಿಕ್ಕಲ್, ಕ್ರೋಮಿಯಮ್ ಹಾಗೂ ಮ್ಯಾಂಗನೀಸ್‌ನ ಮಿಶ್ರಣದಿಂದ ಗಂಟೆಯನ್ನು ತಯಾರಿಸಲಾಗುತ್ತದೆ.

ಇದನ್ನು ತಯಾರಿಸಲು ಕಾರಣವೂ ಇದೆ. ಗಂಟೆಯಲ್ಲಿ ಬೆರೆತಿರುವ ಲೋಹವನ್ನು ಮಿಶ್ರ ಮಾಡಿರುವ ವಿಧಾನ ನಿಜಕ್ಕೂ ಅದ್ಭುತವಾಗಿದೆ. ಗಂಟೆಯನ್ನು ಬಡಿದಾಗ, ನಿಮ್ಮ ಮೆದುಳಿನ ಎಡ ಹಾಗೂ ಬಲ ಮಗ್ಗುಲಲ್ಲಿ ಒಂದು ಸ್ವರವನ್ನು ಹೊರಡಿಸುತ್ತದೆ.

ಆದ್ದರಿಂದಲೇ ನೀವು ಗಂಟೆಯನ್ನು ಹೊಡೆದ ಕ್ಷಣ ಏಳು ಸೆಕೆಂಡುಗಳಷ್ಟು ಕಾಲ ದೀರ್ಘ ಹಾಗೂ ಮೊನಚಾದ ಧ್ವನಿಯನ್ನು ಉತ್ಪಾದಿಸುತ್ತದೆ. ಇದರ ಪ್ರತಿ ಧ್ವನಿಯು ನಿಮ್ಮ ದೇಹದ ಚಕ್ರಗಳನ್ನು ಹೋಗಿ ತಲುಪುತ್ತದೆ. ಗಂಟೆಯನ್ನು ನೀವು ಬಡಿದಾಗ ನಿಮ್ಮ ಆತ್ಮವನ್ನು ಎಚ್ಚರಿಸಿದ ಅನುಭವ ನಿಮಗುಂಟಾಗುತ್ತದೆ.

ನಾವು ಸ್ನಾನ ಮಾಡುತ್ತಿರುವಾಗಲೇ ಏಕೆ ಒಳ್ಳೆಯ ಐಡಿಯಾಗಳು ಬರುತ್ತವೆ?

ದೇಹದಲ್ಲಿ ಪವಿತ್ರತೆಯನ್ನು ಕಾಪಾಡುತ್ತಾ ದುಷ್ಟ ಆಲೋಚನೆಗಳನ್ನು ಕೃತ್ಯಗಳನ್ನು ದೂರೀಕರಿಸುವ ಮನೋಭಾವ ಹಾಗೂ ದೈವ ಸಂಕಲ್ಪ ನಮ್ಮಲ್ಲುಂಟಾಗಲು ಪವಿತ್ರ ಗಂಟೆಯ ನಿನಾದ ಕಾರಣವಾಗುತ್ತದೆ. ಗಂಟೆಯನ್ನು ಬಡಿದ ಒಡನೆ ನಮ್ಮ ಒಳ ಮನಸ್ಸು ಜಾಗೃತಗೊಂಡು ದೇವರನ್ನು ಮಾತ್ರ ಸಾಕ್ಷಾತ್ಕರಿಸಿಕೊಳ್ಳುತ್ತದೆ. ಆದ್ದರಿಂದ ಗಂಟೆಯ ನಿನಾದಕ್ಕೆ ನಮ್ಮ ಆತ್ಮವನ್ನು ಎಚ್ಚರಿಸುವ ಶಕ್ತಿ ಇದೆ.

English summary

Significance Of Temple Bells

The sound of a bell is considered auspicious in many cultures around the world. Bells are also significant in Hinduism. It is a common practice among most people to enter the temple by ringing the bell.
Story first published: Tuesday, April 22, 2014, 12:07 [IST]
X
Desktop Bottom Promotion