For Quick Alerts
ALLOW NOTIFICATIONS  
For Daily Alerts

ನರೇಂದ್ರ ಮೋದಿ 70ನೇ ಹುಟ್ಟುಹಬ್ಬ: ಮೋದಿಯವರ ಟಾಪ್ 5 ತಿನಿಸುಗಳು!

By Lekhaka
|

ನಮ್ಮ ದೇಶವನ್ನು ಸಮರ್ಥವಾಗಿ ಕಟ್ಟುವ ಆಳುವ ಕನಸನ್ನು ಮೋದಿ ಕಂಡಿದ್ದವರು. 2020 ಸೆಪ್ಟೆಂಬರ್‌ 17ರಂದು ಮೋದಿ ಅವರು ತಮ್ಮ 70ನೇ ವರ್ಷದ ಜನ್ಮದಿನವನ್ನು ಆಚರಿಸುತ್ತಿದ್ದಾರೆ.

ಮಾದರಿ ಪ್ರಧಾನಿ ಎಂದೆನಿಸಿಕೊಂಡಿರುವ ಮೋದಿ ಭೋಜನಪ್ರಿಯರು ಎಂಬುದು ನಿಮಗೆ ತಿಳಿದಿದೆಯೇ? ಹೌದು ಅವರು ಇಷ್ಟಪಡುವ ಕೆಲವೊಂದು ವ್ಯಂಜನಗಳನ್ನು ಖಾದ್ಯಗಳ ಪಟ್ಟಿಯನ್ನು ನಾವಿಲ್ಲಿ ನೀಡಿದ್ದು ನಿಮಗೂ ಇದು ಸಂತಸವನ್ನು ಉಂಟುಮಾಡಬಹುದು.

ರಾಜಕೀಯದಲ್ಲಿ ಪೂರ್ತಿ ಬ್ಯುಸಿಯಾಗಿರುವ ಮೋದಿಯಂತಹ ಮೇರು ವ್ಯಕ್ತಿತ್ವ ಕೂಡ ಪೂರ್ಣ ಶಾಖಾಹಾರಿ ಆಹಾರವನ್ನು ತುಂಬಾ ಇಷ್ಟಪಡುತ್ತಾರೆ. ಗುಜರಾತಿ ಸಂಪ್ರದಾಯದ ಆಹಾರ ಪದ್ಧತಿಯನ್ನು ಬಹುವಾಗಿ ಮೆಚ್ಚಿಕೊಳ್ಳುವ ಅವರು ಸರಳ ಸಜ್ಜನರು.

ಮೋದಿ ಇಷ್ಟಪಡುವ ಆಹಾರದ ಕಡೆಗೆ ಇಂದಿನ ಬೋಲ್ಡ್ ಸ್ಕೈ ನೋಟ.

ಹುಡುಗಿಯರ 10 ಮನದಾಸೆಗಳೂ ನಿಮಗೂ ತಿಳಿಯಲಿ!

ಕಿಲಿ ಹುಯಿ ಕಿಚಡಿ:

ಕಿಲಿ ಹುಯಿ ಕಿಚಡಿ:

ಇದೊಂದು ಭಾರತೀಯ ಸಂಪ್ರದಾಯವುಳ್ಳ ಆಹಾರವಾಗಿದ್ದು, ಕಿಚಿಡಿ ಸಾಮಾನ್ಯವಾಗಿ ಭಾರತೀಯ ಮನೆಗಳಲ್ಲಿ ಸಾಮಾನ್ಯವಾಗಿದೆ. ಕಿಲಿ ಹುಯಿ ಕಿಚಡಿ ಅಂದರೆ ಅನ್ನದಿಂದ ಮಾಡುವ ಕಿಚಡಿಯಾಗಿದೆ. ಮೋದಿಯವರ ಮೆಚ್ಚಿನ ಡಿಶ್‌ಗಳಲ್ಲಿ ಇದೂ ಕೂಡ ಒಂದು. ಕಿಚಡಿ ಮಾಡುವ ವಿಧಾನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:

ರುಚಿಕರವಾದ ರೈಸ್ ಕಿಚಡಿ ರೆಸಿಪಿ

ಡೋಕ್ಲಾ:

ಡೋಕ್ಲಾ:

ಡೋಕ್ಲಾ ಗುಜರಾತಿ ಸಂಪ್ರದಾಯವುಳ್ಳ ಆಹಾರವಾಗಿದ್ದು ನಿಮ್ಮ ಬಾಯಲ್ಲಿ ನೀರೂರುವಂತೆ ಮಾಡುತ್ತದೆ. ಹೆಚ್ಚಿನ ಉತ್ತರ ಭಾರತೀಯ ಮನೆಗಳಲ್ಲಿ ಸಾಮಾನ್ಯವಾಗಿರುವ ಡೋಕ್ಲಾ ತುಂಬಾ ರುಚಿಕಟ್ಟಾದ ತಿನಿಸಾಗಿದೆ. ಮೋದಿಯವರ ಟಾಪ್ ಫೇವರೇಟ್ ಫುಡ್‌ನಲ್ಲಿ ಇದೂ ಕೂಡ ಒಂದು.

ಕಾಂಡ್ವಿ:

ಕಾಂಡ್ವಿ:

ಇದೊಂದು ಸಂಜೆಯ ಚಹಾ ವೇಳೆಯ ಸ್ನ್ಯಾಕ್ಸ್ ಆಗಿದೆ. ಸಾಸಿವೆಯ ಒಗ್ಗರಣೆಯೊಂದಿಗೆ ಅಲಂಕಾರಗೊಂಡಿರುವ ಕಾಂಡ್ವಿ ಕರಿಬೇವಿನ ಸುವಾಸನೆಯೊಂದಿಗೆ ತಾಜಾ ಆಗಿ ನಿಮ್ಮ ಮೈಮನವನ್ನು ಪುಳಕಿತಗೊಳಿಸುತ್ತದೆ.

ಮಾವಿನ ಚಟ್ನಿ:

ಮಾವಿನ ಚಟ್ನಿ:

ಸಿಹಿ ಮತ್ತು ಹುಳಿ ಮಿಶ್ರಿತ ಈ ಮಾವಿನ ಕಾಯಿ ಚಟ್ನಿಯನ್ನು ನೀವು ಬಹುಕಾಲದವರೆಗೆ ಬಾಟಲಿಯಲ್ಲಿ ಸಂಗ್ರಹಿಸಿಡಬಹುದು. ಮೋದಿಯವರ ಮೆಚ್ಚಿನ ಡಿಶ್‌ಗಳಲ್ಲಿ ಇದೂ ಕೂಡ ಒಂದು. ಸಮ್ಮರ್ ಸ್ಪೆಶಲ್ ರುಚಿಯಾದ ಮಾವಿನ ಕಾಯಿ ಚಟ್ನಿ

ಬಾದಾಮಿ ಪಿಸ್ತಾ ಶ್ರೀಖಂಡ:

ಬಾದಾಮಿ ಪಿಸ್ತಾ ಶ್ರೀಖಂಡ:

ಭಾರತೀಯ ಸಿಹಿ ಕಸ್ಟರ್ಡ್ ಎಂದು ಹೆಸರುವಾಸಿಯಾಗಿರುವ ಬಾದಾಮಿ ಪಿಸ್ತಾ ಶ್ರೀಖಂಡ್ ನಿಮ್ಮ ಬಾಯಲ್ಲಿ ಹಾಗೆಯೇ ಕರಗಿ ಹೋಗುತ್ತದೆ. ಗರಿಗರಿಯಾದ ಬಾದಾಮಿ ಮತ್ತು ಪಿಸ್ತಾದ ಮೇಲ್ಬಾಗದ ಅಲಂಕಾರ ನಿಮ್ಮ ಜಿಹ್ವಾ ಚಾಪಲ್ಯವನ್ನು ಹೆಚ್ಚಿಸುವುದು ಖಂಡಿತ. ಮೋದಿಯವರಿಗೂ ಈ ಶ್ರೀಖಂಡ ತುಂಬಾ ಇಷ್ಟವಾದ ತಿನಿಸಾಗಿದೆ. ಸಿಹಿ ತಿನಿಸುಗಳ ರಾಜ ಶ್ರೀಖಂಡ

English summary

PM Narendra Modi's Favourite Foods & Fitness Mantras

There are some favourite foods of Narendra Modi. Want to know some of the favourite foods of Modi, read on
X
Desktop Bottom Promotion