For Quick Alerts
ALLOW NOTIFICATIONS  
For Daily Alerts

ಹತ್ತು ಸಾಮಾನ್ಯ ಕನಸುಗಳು ಮತ್ತು ಅವುಗಳ ಅರ್ಥ

By Poornima Heggade
|

ಕನಸು ಎಲ್ಲರಿಗೂ ಸಾಮಾನ್ಯವಾದದ್ದು. ಪ್ರತಿದಿನ ರಾತ್ರಿ ಕನಿಷ್ಟ ತೊಂಬತ್ತು ನಿಮಿಷಗಳು ಅಥವಾ ಎರಡು ಗಂಟೆಗಳ ಕಾಲ ಅಥವಾ ಅದಕ್ಕಿಂತ ಹೆಚ್ಚು ಸಮಯ ಭೂಮಿಯ ಮೇಲಿನ ಪ್ರತಿಯೊಬ್ಬರೂ ಕನಸಿಗೆ ಜಾರುತ್ತಾರೆ. ಕೆಲವೊಮ್ಮೆ, ಕನಸುಗಾರರು ಕಾಣುವ ಕನಸುಗಳ ಅರ್ಥವು ಸರಳವಾಗಿದ್ದು, ಕಳೆದು ಹೋದ ಸ್ನೇಹಿತ , ಉಷ್ಣವಲಯದ ಬೀಚ್ ನಲ್ಲಿ ಅಥವಾ ಜಾಕ್ಪಾಟ್ ವ್ಯಾಪ್ತಿಯೊಳಗೆ ಕಾಣಿಸಿಕೊಂಡಂತೆ ಭಾಸವಾಗುತ್ತವೆ!

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಹಾವಿನ ಕನಸ್ಸು ಬಿದ್ದರೆ ಏನಂತ ಅರ್ಥ?

ಆದರೆ ಕನಸುಗಳು ಯಾವಾಗಲೂ ಸರಳ ಕಥೆಯನ್ನು ಹೇಳುವುದಿಲ್ಲ. ವಿವಿಧ ಸಂಸ್ಕೃತಿಗಳ ಹಿನ್ನೆಲೆಯಲ್ಲಿ ಜನರು ಕಾಣುವ ಕನಸುಗಳೂ ವಿಭಿನ್ನವಾಗಿದ್ದು, ಅವುಗಳ ಬಗ್ಗೆ ಸಂಶೋಧನೆ ಮಾಡಿದಾಗ ಅವು ಇನ್ನಷ್ಟು ಆಕರ್ಷಕವೆನಿಸುತ್ತವೆ. ಇಲ್ಲಿ ಕೆಲವು ಸಾಮಾನ್ಯ ಕನಸುಗಳು ಮತ್ತು ಅವುಗಳ ಬಗ್ಗೆ ವ್ಯಾಖ್ಯಾನಗಳನ್ನು ನೀಡಲಾಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಕನಸ್ಸು ಮತ್ತು ಅವುಗಳ ಅರ್ಥ

ಫಾಲಿಂಗ್ (ಬೀಳುವುದು) :

ಫಾಲಿಂಗ್ (ಬೀಳುವುದು) :

ಲೊವೆನ್ ಬರ್ಗ್ (Loewenberg) " ನಮ್ಮ ಅಜಾಗೃತ ಮನಸ್ಸಿನ ಎಚ್ಚರಿಕೆ " ಎಂದು ಈ ಕನಸನ್ನು ಕರೆದಿದ್ದಾರೆ. ಅವರ ಪ್ರಕಾರ ಈ ಕನಸು, ಕೆಲಸದಲ್ಲಿ, ಸಂಬಂಧದಲ್ಲಿ ಅಥವಾ ಜೀವನದ ಇನ್ಯಾವುದೇ ವಿಚಾರದಲ್ಲಿ ಅಧಿಕ ಸಮಸ್ಯೆಗಳನ್ನು ಅನುಭವಿಸುತ್ತಿರುವ ಜನರು ಕಾಣುವ ಕನಸು ಎಂದು ಅಭಿಪ್ರಾಯ ಪಡುತ್ತಾರೆ.

ಶಾಲೆ ಅಥವಾ ಕೆಲಸದ ಕಡೆಯಲ್ಲಿ ವಿವಸ್ತ್ರರಾಗಿರುವುದು:

ಶಾಲೆ ಅಥವಾ ಕೆಲಸದ ಕಡೆಯಲ್ಲಿ ವಿವಸ್ತ್ರರಾಗಿರುವುದು:

ಈ ಕನಸು ನಮ್ಮಲ್ಲಿರುವ ಆತಂಕ ಮತ್ತು ಅಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಇಂತಹ ಕನಸುಗಳು ಬಡ್ತಿ ಹೊಂದಿದವರಿಗೆ, ಹೊಸ ಕೆಲಸಕ್ಕೆ ಸೇರಿಕೊಂಡವರಿಗೆ ಹಾಗೂ ಸಾಮಾಜಿಕ ಜೀವನಕ್ಕೆ ಕಾಲಿಡುವವರಿಗೆ ಸಾಮಾನ್ಯವಾಗಿದೆ.

ಪರೀಕ್ಷೆ ಬರೆಯುವುದು:

ಪರೀಕ್ಷೆ ಬರೆಯುವುದು:

ಈ ಕನಸು ದೊಡ್ಡವರಲ್ಲಿ ತಮ್ಮ ಕೆಲಸ ಮತ್ತು ಕಾಲೇಜು ಜೀವನದ ನಡುವಿನ ವ್ಯತ್ಯಾಸವನ್ನು ತೋರಿಸುತ್ತದೆ. ಎರಡು ಕಡೆ ಸಾಕಷ್ಟು ಒತ್ತಡ ಸಾಮಾನ್ಯ. ಲೋವನ್ ಬರ್ಗ್ ಈ ಕನಸನ್ನು ಕೆಲಸದ ಒತ್ತಡದೊಂದಿಗೆ ತಾಳೆ ಮಾಡುತ್ತಾರೆ.

 ಈ ಕನಸು ದೊಡ್ಡವರಲ್ಲಿ ತಮ್ಮ ಕೆಲಸ ಮತ್ತು ಕಾಲೇಜು ಜೀವನದ ನಡುವಿನ ವ್ಯತ್ಯಾಸವನ್ನು ತೋರಿಸುತ್ತದೆ. ಎರಡು ಕಡೆ ಸಾಕಷ್ಟು ಒತ್ತಡ ಸಾಮಾನ್ಯ. ಲೋವನ್ ಬರ್ಗ್ ಈ ಕನಸನ್ನು ಕೆಲಸದ ಒತ್ತಡದೊಂದಿಗೆ ತಾಳೆ ಮಾಡುತ್ತಾರೆ.

ಈ ಕನಸು ದೊಡ್ಡವರಲ್ಲಿ ತಮ್ಮ ಕೆಲಸ ಮತ್ತು ಕಾಲೇಜು ಜೀವನದ ನಡುವಿನ ವ್ಯತ್ಯಾಸವನ್ನು ತೋರಿಸುತ್ತದೆ. ಎರಡು ಕಡೆ ಸಾಕಷ್ಟು ಒತ್ತಡ ಸಾಮಾನ್ಯ. ಲೋವನ್ ಬರ್ಗ್ ಈ ಕನಸನ್ನು ಕೆಲಸದ ಒತ್ತಡದೊಂದಿಗೆ ತಾಳೆ ಮಾಡುತ್ತಾರೆ.

ಸಾವು ಒಳ್ಳೆಯ ಸೂಚನೆ ಅಲ್ಲದೇ ಇದ್ದರೂ ಸಾವಿನ ಕನಸು ಸಾಮಾನ್ಯವಾಗಿ ಕನಸು ಬಿದ್ದವನ ಜೀವನದಲ್ಲಿ ಆಗುವ ಮಹತ್ವದ ಬದಲಾವಣೆಗೆ ಸೂಚಕವಾಗಿದೆ. ಹೊಸತನ್ನು ಮಾಡಬೇಕಾದರೆ ಒಂದು ವಿಷಯದ ಕೊನೆಯಾಗಲೇಬೇಕು ಅಂತೆಯೇ ಈ ಸಾವು.

ಪಾರ್ಶ್ವ ವಾಯು:

ಪಾರ್ಶ್ವ ವಾಯು:

ಹೆಚ್ಚಿನ ಜನರಿಗೆ ತಿಳಿಯದಂತೆ ನಾವು ಕನಸು ಕಾಣುವಾಗ ನಮ್ಮ ದೇಹ ಒಂದು ಬಗೆಯ ಪಾರ್ಶ್ವ ವಾಯುವಿಗೆ ಸಿಲುಕಿದಂತೆಯೇ ಆಗುತ್ತದೆ. ಇದರಿಂದಾಗಿ ಕನಸು ಕಾಣುವ ವ್ಯಕ್ತಿ ದೈಹಿಕ ಚಲನೆಯನ್ನು ಮಾಡುತ್ತಿರುವುದಿಲ್ಲ. ಹೀಗೆ ಪಾರ್ಶ್ವ ವಾಯುವಿನ ಕನಸು ಎಂದರೆ ವ್ಯಕ್ತಿಯ REM (ರಾಪಿಡ್ ಐ ಮೂವ್ ಮೆಂಟ್) ಹಾಗೂ ನಿದ್ದೆಯಲ್ಲಿ ನಡೆಯುವ ಘಟನೆಗಳ ನಡುವಿನ ಸ್ಥಿತಿಯಾಗಿದೆ. ಇದರ ಅರ್ಥ ಕನಸು ಕಾಣುವ ವ್ಯಕ್ತಿ ತನ್ನ ಜೀವನದ ಬಗ್ಗೆ ನಿಯಂತ್ರಣ ಹೊಂದಿಲ್ಲ ಎಂದು ಸೂಚಿಸುವುದೂ ಆಗಿದೆ.

ತನ್ನನ್ನು ಬೆನ್ನಟ್ಟಿದ ಕನಸು:

ತನ್ನನ್ನು ಬೆನ್ನಟ್ಟಿದ ಕನಸು:

ಇದು ಬಹಳ ಸಾಮಾನ್ಯವಾದ ಕನಸು. ಈ ಕನಸು ಬಹಳ ಆತಂಕಭರಿತವಾದ ಕಾರಣ ಇದರ ನೆನಪು ಬಹಳ ಹೆಚ್ಚಿನ ಮಂದಿಗೆ ಇರುತ್ತದೆ. ಇದು ನಮಗೆ ಇರುವ ಭಯದ ಸೂಚನೆಯಲ್ಲ. ಯಾರಿಂದಾದರೂ ನಾವು ಹೆದರುತ್ತೇವೆ ಎಂಬುದೂ ಅಲ್ಲ. ನಾವು ಎದುರಿಸಲಾಗದ ಅಥವಾ ನಾವು ನಿಜ ಜೀವನದಲ್ಲಿ ಎದುರಿಸಲಾಗದ ವಿಷಯವನ್ನು ಸೂಚಿಸುತ್ತದೆ.

ಸಂಗಾತಿಯ ಮೋಸ:

ಸಂಗಾತಿಯ ಮೋಸ:

ಈ ಕನಸನ್ನು ಅತೀಂದ್ರೀಯ ಶಕ್ತಿಯೆಂದು ಪರಿಗಣಿಸಬಾರದು ಎಂದು ಬಹಳಷ್ಟು ಮಂದಿಯ ಸಲಹೆಯಾಗಿದೆ. ಇಂತಹ ಕನಸು ನಿಮ್ಮ ಸಂಗಾತಿ ನಿಮಗೆ ಸರಿಯಾಗಿ ಸಮಯ ಕೊಡದೇ ಇದ್ದಾಗ ಅಥವಾ ನಿಮಗೆ ಇಷ್ಟವಿಲ್ಲದ ವಿಷಯದಲಿ ಸಮಯ ಕಳೆದಾಗ ಬರುವ ಕನಸಾಗಿದೆ.

ತಡವಾಗಿ ವಿಷಯ ತಿಳಿಯುವುದು:

ತಡವಾಗಿ ವಿಷಯ ತಿಳಿಯುವುದು:

ಇದು ಯಾರದರೂ ನಿಮ್ಮ ವಿಷಯದಲ್ಲಿ ಬಹಳಷ್ಟು ಕೆಲಸ ಮಾಡುತ್ತಿದ್ದರೆ ಬೀಳುವ ಕನಸಾಗಿದೆ. ಗ್ರಾಂಟ್ ಈ ಕನಸನ್ನು ನಿಮ್ಮಿಂದ ಪೂರೈಸಲು ಸಾಧ್ಯವಾಗದ ಒಪ್ಪಂದವನ್ನು ಮಾಡಿಕೊಳ್ಳಬೇಡಿ ಎಂದು ಅರ್ಥೈಸುತ್ತಾರೆ.

ಹಾರುವುದು:

ಹಾರುವುದು:

ಈಗ ಮನಸ್ಸನ್ನು ಕೊರೆಯುತ್ತಿರುವ ಸಂಗತಿಗಳನ್ನು ಬಿಟ್ಟು ಅವುಗಳು ನಡೆದಂತೆ ನಡೆಯಲಿ ಹೆಚ್ಚಿನ ಕಾಳಜಿ ಬೇಡ ಎಂಬ ಸೂಚನೆ ಈ ಕನಸಿನದ್ದಾಗಿದೆ. ಗ್ರಾಂಟ್ ಈ ಕನಸು ಬಿದ್ದವರಿಗೆ ನಿಜ ಜೀವನದಲ್ಲಿ ನಿಯಂತ್ರಿಸಲಾಗದ ಒಂದು ಸನ್ನಿವೇಶ ಇದೆ ಎಂದು ತಿಳಿಯುತ್ತಾರೆ.

ಮಗು:

ಮಗು:

ಮಗುವಿನ ಬಗ್ಗೆ ಕನಸು ಎಂದರೆ ಹೊಸತನದ ಸೂಚನೆ. ಇದು ಹೊಸ ಯೋಚನೆಯ ಬಗ್ಗೆ ಇರಬಹುದು, ಹೊಸ ಪ್ರಾಜೆಕ್ಟ್ ನ ಬಗ್ಗೆ ಇರಬಹುದು ಅಥವಾ ಹೊಸ ಬೆಳವಣಿಗೆಯ ಬಗ್ಗೆ ಇರಬಹುದು ಒಟ್ಟಾರೆ ಇದು ಹೊಸ ಬೆಳವಣಿಗೆಯ ಸೂಚನೆ.

Read more about: life ಜೀವನ
English summary

10 Common Dreams and What They Supposedly Mean

Sometimes, the dreams are straightforward in their meaning to the dreamer: a long-lost friend reappears, a tropical beach beckons or the lottery jackpot is within reach.
Story first published: Saturday, March 29, 2014, 16:43 [IST]
X
Desktop Bottom Promotion