For Quick Alerts
ALLOW NOTIFICATIONS  
For Daily Alerts

ಸತ್ತು ಸ್ವರ್ಗಕ್ಕೆ ಹೋಗಿ ಮತ್ತೆ ಬದುಕಿ ಬಂದ ಪೆರ್ರಿ ಎಂಬ ವ್ಯಕ್ತಿಯ ಕತೆ, ಅಚ್ಚರಿಯಾದರೂ ಇದು ಸತ್ಯ

|

ಸತ್ತ ಮೇಲೆ ಸ್ವರ್ಗಕ್ಕೆ ಹೋಗುತ್ತೇವೆ ಎಂಬುವುದು ನಂಬಿಕೆ, ಆದರೆ ಸತ್ತ ಮೇಲೆ ಬೇರೊಂದು ಲೋಕ ಇದೆಯೇ, ನಮ್ಮ ಕಲ್ಪನೆಯಲ್ಲಿ ಇರುವಂತೆ ಅಲ್ಲಿ ಸ್ವರ್ಗ , ನರಕವಿದೆಯೇ ಎಂಬುವುದು ಗೊತ್ತಿಲ್ಲ, ಆತ್ಮ ಎಂಬುವುದಿದೆ ಎಂಬುವುದು ಸತ್ಯ, ಆತ್ಮ ಶರೀರದಿಂದ ಹೊರಟಾಗ ಸಾವು ಸಂಭವಿಸುವುದು.

ಆದರೆ ನಮ್ಮ ಆತ್ಮ ಸ್ವರ್ಗವನ್ನು ತಲುಪುವುದಾಗಿ ಸತ್ತು ಸ್ವರ್ಗಕ್ಕೆ ಹೋಗಿ, ಮತ್ತೆ ಕಾಕತಾಳೀಯ ಎಂಬಂತೆ ಬದುಕಿದ ವೈದ್ಯರೊಬ್ಬರು ಹೇಳಿದ್ದಾರೆ.

ನಿಮಗೆ ಅಚ್ಚರಿ ಅನಿಸಿದರೂ ಇದು. ನಾವು ಸತ್ತು ಬದುಕಿದರು ಅಂತ ಇನ್ನೇನು ಸತ್ತೇ ಹೋಗುತ್ತಾರೆ ಎಂದು ಭಾವಿಸಿ ಬದುಕಿ ಬಂದವರಿಗೆ ಹೇಳುತ್ತೇವೆ, ಆದರೆ ಅವರು ಸತ್ತಿರುವುದಿಲ್ಲ, ಅವರಲ್ಲಿ ತುಣುಕು ಜೀವವಿರುತ್ತದೆ, ಪವಾಡವೆಂಬಂತೆ ಬದುಕಿ ಬರುತ್ತಾರೆ.

ಆದರೆ ಈ ವ್ಯಕ್ತಿ ಹಾಗಲ್ಲ, ನಿಜವಾಗಲೂ ಸತ್ತೇ ಹೋಗಿದ್ದರು, ಆದರೆ ಸ್ವಲ್ಪ ಸಮಯದ ಬಳಿಕ ಜೀವ ಪಡೆದರು. ಆತನ ಹೆಸರು ಡೇರ್ರಿಯಲ್ ಪೆರ್ರಿ. ಇವರು ಸ್ವರ್ಗದ ಅನುಭವದ ಬಗ್ಗೆ ಪುಸ್ತಕಗಳನ್ನು ಬರೆದಿದ್ದಾರೆ, ಅವುಗಳೆಂದರೆ ...

Book 1: Heavenly Encounters
Book 2: Messages from Heaven
Book 3: Transformed by Heaven
Book 4: A Love Beyond Words
Book 5: A Choir of Angels
Book 6: Scenes from Heaven
Book 7: A Joy Like No Other
Book 8: A Glorious Light

ಈ ವ್ಯಕ್ತಿಯ ಸಾವು- ಬದುಕಿನ ಕತೆ ಕೇಳಿದರೆ ರೋಮಾಂಚನವಾಗುತ್ತೆ, ಅವರು ಹೇಳಿದ ಸ್ವರ್ಗದ ಆಸಕ್ತಿಕರ ವಿಷಯದ ಬಗ್ಗೆ ಇಲ್ಲಿ ಹೇಳಲಾಗಿದೆ.

ಡೇರ್ರಿಯಲ್ ಪೆರ್ರಿಯ ಸ್ವರ್ಗದ ಕತೆ

ಡೇರ್ರಿಯಲ್ ಪೆರ್ರಿಯ ಸ್ವರ್ಗದ ಕತೆ

ಪೆರ್ರಿ ಅವತ್ತು ಗುರುವಾರ ಸಮಯ ಮುಂಜಾನೆ 4 ಗಂಟೆ, ದಿನಾಂಕ ಮಾರ್ಚ್‌ 15, 2007ರಂದು ಈ ವ್ಯಕ್ತಿ ಸಾವನ್ನಪ್ಪುತ್ತಾನೆ. ಯೂನಿವರ್ಸಿಟಿ ಆಫ್‌ ಫ್ಲೋರಿಡಾದಲ್ಲಿ ಫೈನಾನ್ಷಿಯಲ್ ಅಡ್ವೈಸರ್ ಆಗಿ ಕೆಲಸ ಮಾಡುತ್ತಿರುತ್ತರೆ. ಪೆರ್ರಿ ಸೂಮವಾರದಿಂದ ಶನಿವಾರದವರೆಗೆ 16 ಗಂಟೆ ಕೆಲಸ ಮಾಡುತ್ತಾರೆ. ಅವರಿಗೆ 3 ಮಕ್ಕಳು, ಕೆಲಸದಿಂದ ಮರಳಿದ ಮೇಲೆ ಮಗನಿಗೆ ಬೇಸ್‌ಬಾಲ್‌ ಆಟ ಹೇಳಿಕೊಡುತ್ತಾರೆ. ಪೆರ್ರಿ ತುಂಬಾ ಆಧ್ಯಾತ್ಮಿಕ ಒಲವು ಇರುವ ವ್ಯಕ್ತಿ. ಪ್ರತಿದಿನ 4 ಗಂಟೆಗೆ ಎದ್ದೇಳುತ್ತಿದ್ದರು. ಅವರಿಗೆ ಸಾಯುವಾಗ 43 ವರ್ಷ, ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಸಾವನ್ನಪ್ಪುತ್ತಾರೆ.

6 ತಿಂಗಳ ಮೊದಲೇ ಸಾವಿನ ಸೂಚನೆ ಕೊಟ್ಟಿದ್ದ ದೇವರು

6 ತಿಂಗಳ ಮೊದಲೇ ಸಾವಿನ ಸೂಚನೆ ಕೊಟ್ಟಿದ್ದ ದೇವರು

ಒಮ್ಮೆ ಎಂದಿನಂತೆ ಪೆರ್ರಿ 4 ಗಂಟೆಗೆ ಎದ್ದು ದೇವರನ್ನು ಪ್ರಾರ್ಥಿಸುತ್ತಿದ್ದಾಗ ನೀನು ನನಗಾಗಿ ಸಾಯುತ್ತೀಯ ಎಂದು ಹೇಳಿದಂತೆ ಅನಿಸುವುದು. ಯಾರೋ ಮೈ ಮುಟ್ಟಿ ಹೇಳಿದಂತೆ ಅನಿಸುತ್ತದೆ. ಆ ಕೋಣೆಯಲ್ಲಿ ಪೆರ್ರಿ ಮಾತ್ರ ಇರುತ್ತಾರೆ, ಯಾರು, ಯಾರು ಇದ್ದೀರಾ? ಎಂದು ಕೇಳಿದಾಗ ಉತ್ತರವಿರಲ್ಲ. ನಂತರ ಪೆರ್ರಿ ಆ ಘಟನೆ ಮರೆತು ಬಿಡುತ್ತಾರೆ. ಹೆಂಡತಿ, ಮೂರು ಮಕ್ಕಳ ಜೊತೆ ಖುಷಿಯಾಗಿರುತ್ತಾರೆ.

ಸಾಯುವ ಮುಂಚೆ ದಿನ ಅದೇ ಧ್ವನಿ ಕೇಳಿಸುತ್ತೆ

ಸಾಯುವ ಮುಂಚೆ ದಿನ ಅದೇ ಧ್ವನಿ ಕೇಳಿಸುತ್ತೆ

ಪೆರ್ರಿಗೆ ತಾನು ಸಾಯುವ ಮುಂಚೆ ದಿನ ಕೂಡ ಅದೇ ಧ್ವನಿ ಕಳಿಸುತ್ತೆ, 'ಮಗನೇ ಸಮಯವಾಯಿತು' ಎಂದಂತೆ ಕೇಳಿಸುವುದು, ಆತ ಟ್ರಕ್‌ನಲ್ಲಿ ತನ್ನ ಮಕ್ಕಳ ಶಾಲಾ ಮುಂದೆ ಹೋಗಿ ಅರ್ಧ ಗಂಟೆ ಅಳುತ್ತಾನೆ, ಅವರನ್ನು ಬಿಟಟ್ಉ ಹೋಗಲು ಆತನಿಗೆ ಮನಸ್ಸಿರುವುದಿಲ್ಲ.

 ಬೆಳಗ್ಗೆ ವಿಚಿತ್ರ ಶಬ್ದ ಕೇಳಿ ಎದ್ದೇಳುವ ಪೆರ್ರಿ ಪತ್ನಿ

ಬೆಳಗ್ಗೆ ವಿಚಿತ್ರ ಶಬ್ದ ಕೇಳಿ ಎದ್ದೇಳುವ ಪೆರ್ರಿ ಪತ್ನಿ

ಪೆರ್ರಿ ಪತ್ನಿಗೆ ವಿಚಿತ್ರ ಗೊರಕೆ ಶಬ್ದ ಕೇಳುವುದು, ನೋಡಿದರೆ ಗಂಡ ಉಸಿರಾಡಲು ಸಾಧ್ಯವಾಗದೇ ಒದ್ದಾಡುತ್ತಿರುತ್ತಾರೆ, ಆಕೆ ಬಾಯಿಗೆ ಬಾಯಿಟ್ಟು ಊದಿ ಉಳಿಸಲು ನೋಡುತ್ತಾಳೆ, ನಂತರ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುವುದು.

ಸ್ವರ್ಗ ಲೋಕದಲ್ಲಿ ಬೆರ್ರಿ

ಸ್ವರ್ಗ ಲೋಕದಲ್ಲಿ ಬೆರ್ರಿ

ಪೆರ್ರಿಗೆ ತನ್ನ ಬೆಡ್‌ರೂಂನಿಂದ ಸ್ವರ್ಗಕ್ಕೆ ಹೇಗೆ ಬಂದೆ ಎಂಬುವುದು ನೆನಪಿಲ್ಲ, ನಂತರ ನೋಡಿದರೆ ತಾನಿರುವ ಜಾಗದಲ್ಲಿ ಪ್ರಕಾಶಮಾನವಾದ ಬೆಳಕು ಹಾಗೂ ಸುಂದರವಾದ ಬಣ್ಣಗಳಿರುತ್ತದೆ. ದೇವರು ಈತನನ್ನು ಕರೆದುಕೊಂಡು ಬರಲು ಗ್ಯಾಂಬ್ರೈಯಲ್ ಎಂದು ಬೃಹದಾಕಾರದ ವ್ಯಕ್ತಿಯನ್ನು ಕಳಿಸಿರುತ್ತಾರೆ. ಗ್ಯಾಂಬ್ರೈಯಲ್ ಪೆರ್ರಿ ನೋಡಿ ಒಂದಕ್ಷರವೂ ಮಾತನಾಡಲ್ಲ, ಬೆನ್ನ ಹಿಂದೆ ಕೂರುವಂತೆ ಸೂಚಿಸುತ್ತಾರೆ, ಪೆರ್ರಿಗೆ ಭಯವಾಗಲ್ಲ, ಆತನ ಬೆನ್ನ ಮೇಲೇರಿದಾಗ ಆತ ಹಾರುತ್ತಾ ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಾನೆ.

ಸ್ವರ್ಗದಲ್ಲಿ ಪೂರ್ವಜರು

ಸ್ವರ್ಗದಲ್ಲಿ ನೋಡಿದರೆ ಆತನ ಅಂಕಲ್, ಅಜ್ಜ, ಆತನ ಹೆಂಡತಿಯ ಅಜ್ಜಿ ಎಲ್ಲರೂ ಇರುತ್ತಾರೆ. ಆತನಿಗೆ ಆ ಪ್ರದೇಶ ತುಂಬಾ ಶಾಂತವಾಗಿರುವಂತೆ ಅನಿಸುತ್ತದೆ. ಅಲ್ಲಿ ಪ್ರಕಾಶಮಾನವಾದ ಬೆಳಕು ತುಂಬಾನೇ ಇಷ್ಟವಾಗುವುದು.

ಭೂಲೋಕದಲ್ಲಿ

ಭೂಲೋಕದಲ್ಲಿ

ಇತ್ತ ನೋಡಿದರೆ ಆತನ ದೇಹ ಆಸ್ಪತ್ರೆಯಲ್ಲಿರುತ್ತದೆ, ವೈದ್ಯರು ಇನ್ನೇನು ಕೆಲವೇ ನಿಮಿಷದಲ್ಲಿ ಸಾಯುತ್ತಾನೆ, ಹೆಚ್ಚೆಂದರೆ 4-6 ನಿಮಿಷ ಬದುಕಬಹುದು, ಆತನ ಮೆದುಳು ಸಾಯುತ್ತಿದೆ ಎಂದು ಹೆಳುತ್ತಾರೆ. ವೈದ್ಯರು ಆತನನ್ನು ವೆಂಟಿಲೇಟರ್‌ನಿಂದ ತೆಗೆಯಲಾಗುವುದು ಎಂದು ಆತನ ಪತ್ನಿಗೆ ಹೇಳುತ್ತಾರೆ.

ದೇವರ ಮುಂದೆ ಪೆರ್ರಿ

ದೇವರ ಮುಂದೆ ನಿಂತಿರುವ ಪೆರ್ರಿಗೆ ಯಾವುದೇ ಭಯವಿರುವುದಿಲ್ಲ, ಕೋಪ ಇರುವುದಿಲ್ಲ, ತುಂಬಾನೇ ಪ್ರಶಾಂತವಾಗಿ ನಿಂತಿರುತ್ತಾನೆ. ಆಗ ದೇವರು 'ಜನರು ನನ್ನ ಶಕ್ತಿ ಮರೆತಿದ್ದಾರೆ' ಎಂದು ಹೇಳುತ್ತಾ 'ಗನೇ ನೀನು ಮರಳಿ ಹೋಗು' ಎಂದು ಹೇಳುತ್ತಾನೆ. ಪರ್ರಿಗೆ ತಾನು ಕೇಳುತ್ತಿರುವುದು ನಿಜವೇ ಎಂದು ನಂಬಲು ಸಾಧ್ಯವಾಗಲ್ಲ. ಪೆರ್ರಿ ಇಲ್ಲ ಎಂದು ಹೇಳಿದಾಗ ದೇವರು ಭೂಮಿ ಹಾಗೂ ದೇವಲೋಕದ ನಡುವಿನ ಪರದೆ ಸರಿಸುತ್ತಾನೆ, ಆಗ ತನ್ನ ಕುಟುಂಬವರನ್ನು ನೋಡಿ ಮರಳಲು ಒಪ್ಪುತ್ತಾರೆ.

11 ದಿನ ಕೋಮಾದಲ್ಲಿದ್ದ ಪೆರ್ರಿ

ಮಾರ್ಚ್‌ 17ಕ್ಕೆ ಪೆರ್ರಿಗೆ ಹೃದಯಾಘಾತವಾಗಿದ್ದು, ಮಾರ್ಚ್ 27ರವರೆಗೆ ವೆಂಟಿಲೇಟರ್‌ನಲ್ಲಿ ಇಡಲಾಗಿತ್ತು. ಡಾ. ಗಾಡಮ್ಯಾನ್ ಬಂದು ಪರೀಕ್ಷಿಸಿದಾಗ ಪೆರ್ರಿ ದೇಹದಲ್ಲಿ ಯಾವುದೇ ಚಲನೆ ಇರಲ್ಲ. ಆದರೂ ಡಾ. ನಿನ್ನ ಕಣ್ಣುಗಳನ್ನು ತೆರಿ ಎಂದು ಹೇಳುತ್ತಾರೆ, ಆಗ ಕಾಕತಾಳೀಯ ಎಂಬಂತೆ ಪೆರ್ರಿ ಕಣ್ಣು ತೆಗೆಯುತ್ತಾರೆ.

ಜ್ಞಾಪಕ ಶಕ್ತಿ ಕಳೆದು ಹೋಗಬಹುದು ಎಂದಿದ್ದ ವೈದ್ಯರು

ಜ್ಞಾಪಕ ಶಕ್ತಿ ಕಳೆದು ಹೋಗಬಹುದು ಎಂದಿದ್ದ ವೈದ್ಯರು

ಪೆರ್ರಿ ಕಣ್ಣು ತೆಗೆದರೂ ಆತನಿಗೆ ಜ್ಞಾಪಕ ಶಕ್ತಿ ಇರಲ್ಲ, ನಡೆದಾಡಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದರು, ಆದರೆ ಅಲ್ಲಿಯೂ ಅಚ್ಚರಿ ಕಾದಿತ್ತು. ಅಲ್ಲಿ ಮಿಸ್ಸಿ ಎಂಬ ನರ್ಸ್ ಇದ್ದರು, ಆ ನರ್ಸ್ ಪೆರ್ರಿ ಬಳಿ ನಾನು ಹೇಳಿದ್ದು ಕೇಳಿಸುತ್ತಿದೆಯೇ ಎಂದು ಕೇಳಿದಾಗ ಪೆರ್ರಿ ಯೆಸ್ ಮಿಸ್ಸಿ ಎಂದು ಉತ್ತರಿಸುತ್ತಾರೆ, ನಂತರ ಅಲ್ಲಿದ್ದ ಮಹಿಳೆ ತೋರಿಸಿ, ಯಾರದು ಸುಂದರ ಮಹಿಳೆ? ಎಂದು ಕೇಳಿದಾಗ ಪೆರ್ರಿ ನನ್ನ ಹೆಂಡತಿ ಎಂದು ಉತ್ತರಿಸುತ್ತಾರೆ.

ನಂತರ ತಮ್ಮ ಸ್ವರ್ಗದ ಪ್ರಯಾಣದ ಬಗ್ಗೆ ಬುಕ್ ಬರೆಯುತ್ತಾರೆ. ನಮ್ಮಲ್ಲಿಯೂ ಸತ್ತು ಹೋದ ಎಂದು ವೈದ್ಯರು ಹೇಳಿದ ವ್ಯಕ್ತಿ ಬದುಕಿರುವ ಹಲವು ಘಟನೆಗಳಿದೆಯಲ್ವಾ?

English summary

The Miracle Man Darryl Perry Who Went to Heaven and Came Back

Man went to Heaven: The Miracle Man Darryl Perry Who Went to Heaven and Came Back, read this story.
X
Desktop Bottom Promotion