For Quick Alerts
ALLOW NOTIFICATIONS  
For Daily Alerts

2022 ವರ್ಷದ ಮೊದಲ ಸೂರ್ಯಗ್ರಹಣ ಯಾವಾಗ? ಎಲ್ಲೆಲ್ಲಿ ಗೋಚರಿಸಲಿದೆ?

|

ನಭೋಮಂಡಲದಲ್ಲಿ ನಡೆಯುವ ಕೌತುಕಗಳಲ್ಲಿ ಗ್ರಹಣವೂ ಕೂಡ ಆಗಿದೆ. ಗ್ರಹಣದಲ್ಲಿ ಸೂರ್ಯ ಗ್ರಹಣ ಹಾಗೂ ಚಂದ್ರಗ್ರಹಣ ನಡೆಯುತ್ತೆ. ಈ ಗ್ರಹಣವನ್ನು ವಿಜ್ಞಾನ ವೈಜ್ಞಾನಿಕ ದೃಷ್ಟಿಯಿಂದ ನೋಡಿದರೆ ಜ್ಯೋತಿಷ್ಯ ವೈದಿಕ ಶಾಸ್ತ್ರದ ದೃಷ್ಟಿಯಿಂದ ನೋಡುತ್ತೆ. ಈ ಏಪ್ರಿಲ್ ತಿಂಗಳಿನಲ್ಲಿ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದೆ.

ಸೂರ್ಯಗ್ರಹಣ ಎಂದರೇನು?

ಸೂರ್ಯ ಮತ್ತು ಭೂಮಿ ನಡುವೆ ಚಂದ್ರ ಬಂದಾಗ, ಚಂದ್ರನ ನೆರಳು ಭೂಮಿ ಮೇಲೆ ಬಿದ್ದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಕೆಲವು ಕಡೆ ಭಾಗಶಃ ಸೂರ್ಯ ಗ್ರಹಣ ಉಂಟಾದರೆ ಇನ್ನು ಕೆಲವು ಕಡೆ ಪೂರ್ಣ ಸೂರ್ಯಗ್ರಹಣ ಉಂಟಾಗುತ್ತದೆ.

ಸೂರ್ಯ ಗ್ರಹಣ ಯಾವಾಗ, ಎಷ್ಟು ಗಂಟೆ ಇರಲಿದೆ, ಭಾರತದಲ್ಲಿ ಎಲ್ಲೆಲ್ಲಿ ಗೋಚರಿಸಲಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ:

ಸೂರ್ಯ ಗ್ರಹಣ ಯಾವಾಗ? ಎಷ್ಟು ಗಂಟೆ ಗೋಚರಿಸಲಿದೆ?

ಸೂರ್ಯ ಗ್ರಹಣ ಯಾವಾಗ? ಎಷ್ಟು ಗಂಟೆ ಗೋಚರಿಸಲಿದೆ?

2022ರ ಮೊದಲ ಸೂರ್ಯಗ್ರಹಣ ಏಪ್ರಿಲ್‌ 30ಕ್ಕೆ ಸಂಭವಿಸಲಿದೆ.

ಭಾರತದ ಸಮಯ ಪ್ರಕಾರ ಸೂರ್ಯ ಗ್ರಹಣ

ಮಧ್ಯರಾತ್ರಿ 12:15ರಿಂದಮುಂಜಾನೆ 4:07ರವರೆಗೆ

ಭಾರತದಲ್ಲಿ ಗೋಚರಿಸಲಿದೆಯೇ? ಎಲ್ಲೆಲ್ಲಿ ಕಂಡು ಬರಲಿದೆ?

ಭಾರತದಲ್ಲಿ ಗೋಚರಿಸಲಿದೆಯೇ? ಎಲ್ಲೆಲ್ಲಿ ಕಂಡು ಬರಲಿದೆ?

ಈ ಭಾರಿ ಭಾರತದಲ್ಲಿ ಈ ಸೂರ್ಯಗ್ರಹಣ ಕಂಡು ಬರುವುದಿಲ್ಲ.

ಪಶ್ಚಿಮ-ದಕ್ಷಿಣ ಅಮೆರಿಕ, ಪೆಸಿಫಿಕ್‌ ಸಾಗರ, ಅಟ್ಲಾಂಟಿಕ್ ಖಂಡ, ಅಂಟಾರ್ಕ್ಟಿಕ ಸಾಗರ ಈ ಭಾಗಗಳಲ್ಲಿ ಕಂಡು ಬರಲಿದೆ.

ಈ ಬಾರಿ ಸಂಭವಿಸಲಿರುವುದು ಭಾಗಶಃ ಸೂರ್ಯಗ್ರಹಣ

ಈ ಬಾರಿ ಸಂಭವಿಸಲಿರುವುದು ಭಾಗಶಃ ಸೂರ್ಯಗ್ರಹಣ

ವರ್ಷದಲ್ಲಿ ಹೆಚ್ಚೆಂದರೆ 5 ಸೂರ್ಯಗ್ರಹಣ ಸಂಭವಿಸುತ್ತದೆ. ಈ ವರ್ಷ 2 ಸೂರ್ಯಗ್ರಹಣವಿದೆ, ಎರಡೂ ಕೂಡ ಭಾಗಶಃ ಸೂರ್ಯ ಗ್ರಹಣವಾಗಿದೆ. 2022ರ ಮೊದಲನೆಯ ಸೂರ್ಯಗ್ರಣ ಏಪ್ರಿಲ್ 30ಕ್ಕೆ ಸಂಭವಿಸಿದರೆ ಮತ್ತೊಂದು ಅಕ್ಟೋಬರ್‌ 25ಕ್ಕೆ ಸಂಭವಿಸಲಿದೆ.

ಸೂರ್ಯಗ್ರಹಣ ವೀಕ್ಷಣೆ ಮಾಡುವುದು ಹೇಗೆ?

ಸೂರ್ಯಗ್ರಹಣ ವೀಕ್ಷಣೆ ಮಾಡುವುದು ಹೇಗೆ?

* ಸೂರ್ಯಗ್ರಹಣವನ್ನು ಬರಿಗಣ್ಣಿನಲ್ಲಿ ನೋಡಿದರೆ ಅಪಾಯ.

* ಸೋಲಾರ್ ಫಿಲ್ಟರ್ ಅಥವಾ ಸೌರ ಕನ್ನಡಕಗಳನ್ನು ಬಳಸಿ ಸೂರ್ಯಗ್ರಹಣ ವೀಕ್ಷಿಸಬಹುದು

* ಸೂರ್ಯಗ್ರಹಣ ವೀಕ್ಷಿಸಲು ಕೆಲವು ಕಡೆ ವೈಜ್ಞಾನಿಕವಾಗಿ ವ್ಯವಸ್ಥೆ ಮಾಡಲಾಗಿರುತ್ತದೆ, ಅಲ್ಲಿ ಹೋಗಿ ಸ್ವಲ್ಪ ಹೊತ್ತು ವೀಕ್ಷಿಸಬಹುದು.

* ಸೋಲಾರ್‌ ಫಿಲ್ಟರ್‌ಗಳನ್ನು ಬಳಸಿ ನೋಡುವಾಗ ಫಿಲ್ಟರ್‌ಗಳ ಫಿಲ್ಮ್‌ ಭಾಗ ಮುಟ್ಟಬೇಡಿ ಹಾಗೂ ಅದು ಮಡಚಿರಬಾರದು.

ಈ ಬಾರಿ ಭಾರತದಲ್ಲಿ ಕಾಣಿಸುವುದಿಲ್ಲ ಆದ್ದರಿಂದ ಸೂರ್ಯಗ್ರಹಣ ನೋಡಲು ವ್ಯವಸ್ಥೆಯೇನೂ ಮಾಡಬೇಕಾಗಿಲ್ಲ.

English summary

Solar Eclipse 2022 in April : Know Date, Time and First Surya Grahan Visibility in India in Kannada

Solar Eclipse 2022: The first Surya Grahan of the year 2022 will occur on April 30, Saturday. Know Date, Time and First Surya Grahan Visibility in India in Kannada,
X
Desktop Bottom Promotion