For Quick Alerts
ALLOW NOTIFICATIONS  
For Daily Alerts

ಫೆ.15ಕ್ಕೆ ಮಾಘಿ ಗಣೇಶ ಜಯಂತಿ: ಇದರ ಮಹತ್ವ ಹಾಗೂ ವ್ರತ ಹೇಗಿರಬೇಕು?

|

ಭಗವಾನ್ ಶ್ರೀ ಗಣೇಶನ ಜನ್ಮದಿನ ಅಥವಾ ಜಯಂತಿಯು ಇನ್ನೇನು ಬಂದೇ ಬಿಟ್ಟಿತು! ಗಣೇಶನ ಹುಟ್ಟುಹಬ್ಬದ ಆಚರಣೆಗೆಂದು ಅಗತ್ಯ ತಯಾರಿಗಳು ಈಗಾಗಲೇ ಅಮಿತೋತ್ಸಾಹಗಳೊಂದಿಗೆ ಆರಂಭಗೊಂಡಾಗಿವೆ!!

ಭಗವಾನ್ ಶ್ರೀ ಗಣೇಶನ ಜನ್ಮದಿನವೆಂದು ಕರೆಯಲ್ಪಡುವ ಈ ದಿನಕ್ಕಿರುವ ಇನ್ನಿತರ ಹೆಸರುಗಳೆಂದರೆ ಅವು ಮಾಘೀ ಗಣೇಶ ಜಯಂತಿ, ಮಾಘ ಶುಕ್ಲ ಚತುರ್ಥಿ, ತಿಲ್ಕುಂಡ್ ಚತುರ್ಥಿ, ಹಾಗೂ ವರದ ಚತುರ್ಥಿಗಳೆಂದು. ಅತ್ಯಂತ ಭಾವಪೂರ್ಣವಾಗಿ ಹಾಗೂ ಅತ್ಯಂತ ಉಲ್ಲಾಸ ಹಾಗೂ ಸಂಭ್ರಮಗಳೊಂದಿಗೆ ಈ ಹಬ್ಬವನ್ನು ವಿಶೇಷವಾಗಿ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಲ್ಲಿ ಆಚರಿಸಲಾಗುತ್ತದೆ.

Maghi Ganesh Jayanti 2021 Date

ಬುದ್ಧಿಮತ್ತೆಗೆ ಅಧಿದೇವನಾಗಿರುವ ಗಣಪನ ಜನ್ಮದಿನವನ್ನಾಚರಿಸಲು, ಗಣಪನನ್ನು ಪೂಜಿಸಲು ಭಕ್ತಗಣವು ತುದಿಗಾಲಿನಲ್ಲಿ ಕಾಯುತ್ತಿರುತ್ತದೆ. ಇಸವಿ 2021 ರ ಗಣೇಶ ಜಯಂತಿಯು ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ, ಅಸಂಖ್ಯಾತ ಮಂದಿ ಈ ಬಾರಿ ಆ ದಿನವು ಯಾವ ದಿನಾಂಕದಂದು ಒದಗಿ ಬರುತ್ತದೆ ಎಂಬುದನ್ನು ಅರಿತುಕೊಳ್ಳಲು ತುಂಬಾ ಕಾತರರಾಗಿದ್ದಾರೆ.

ಇಸವಿ 2021 ರಲ್ಲಿ ಗಣೇಶನ ಜನ್ಮದಿನವು ಯಾವ ದಿನದಂದು, ಯಾವ ದಿನಾಂಕದಂದು ಆಚರಿಸಲ್ಪಡುವುದೆಂದು ಕುತೂಹಲದಿಂದ ಎದುರು ನೋಡುತ್ತಿರುವವರಿಗಾಗಿ, ಅದರ ಕುರಿತಂತೆ ಎಲ್ಲ ವಿವರಗಳೂ ಪ್ರಸ್ತುತ ಲೇಖನದಲ್ಲಿವೆ...

ಗಣೇಶ ಜಯಂತಿ

ಗಣೇಶ ಜಯಂತಿ

ಈ ಹಬ್ಬವನ್ನು ಶುಕ್ಲಪಕ್ಷದ ಚತುರ್ಥಿಯ ದಿನದಂದು ಅರ್ಥಾತ್ ಹಿಂದೂ ಕಾಲಗಣನೆಯ ಪ್ರಕಾರ, ಮಾಘ ಮಾಸದ ನಾಲ್ಕನೆಯ ದಿನದಂದು ಆಚರಿಸಲಾಗುತ್ತದೆ. ಇದು ಸಾಮಾನ್ಯವಾಗಿ ಗ್ರೆಗೋರಿಯನ್ ಕ್ಯಾಲೆಂಡರ್ ನ ಜನವರಿ ಇಲ್ಲವೇ ಫೆಬ್ರವರಿ ತಿಂಗಳಿನಲ್ಲಿ ಸಂಭವಿಸುತ್ತದೆ. ಈ ಬಾರಿಯ ಗಣೇಶ ಜಯಂತಿ ದಿನಾಂಕವು ಫ಼ೆಬ್ರವರಿ 15 ನೇ ತಾರೀಖು ಆಗಿರುತ್ತದೆ.

ಇಸವಿ 2021 ರ ಮಾಘಿ ಗಣೇಶ ಜಯಂತಿಯು ಸೋಮವಾರದಂದು ಆಚರಿಸಲ್ಪಡಲಿದೆ. ಭಗವಾನ್ ಶ್ರೀ ಗಣೇಶನನ್ನು ಸ್ತುತಿಸುತ್ತಾ ಹಾಗೂ ಪೂಜಿಸುತ್ತಾ ಹಾಗೂ ಸಂಬಂಧಪಟ್ಟ ವಿಧಿವಿಧಾನಗಳನ್ನು ನೆರವೇರಿಸುತ್ತಾ ಗಣೇಶನ ಜಯಂತಿ ಆಚರಿಸಲಾಗುವುದು

 ವ್ರತ ಮತ್ತು ಪೂಜಾ ಸಾಮಗ್ರಿ

ವ್ರತ ಮತ್ತು ಪೂಜಾ ಸಾಮಗ್ರಿ

ಈ ದಿನ ಉಪವಾಸವಿದ್ದು ಗಣೇಶನ ಜಯಂತಿ ಆಚರಿಸುವುದರಿಂದ ಬಯಸಿದ ಫಲ ಸಿಗುವುದು. ವರ್ಷದ ಮುಂದಿನ ಎಲ್ಲ ದಿನಗಳೂ ಶುಭಪ್ರದವೇ ಆಗಿರುತ್ತದೆ ಎಂಬ ನಂಬಿಕೆ ಇದೆ. ಗಣೇಶ ಜಯಂತಿಯ ಈ ಶುಭದಿನದಂದು ಭಗವಾನ್ ಶ್ರೀ ಗಣೇಶನಿಗೆ ಕೆಂಪು ವಸ್ತ್ರಗಳು, ಕೆಂಪು ಹೂವುಗಳು, ಕೆಂಪು ವರ್ಣದ ಸಿಹಿ ತಿನಿಸುಗಳು ಇತ್ಯಾದಿಗಳನ್ನು ಸಮರ್ಪಿಸಲಾಗುತ್ತದೆ.

 ಏನು ಮಾಡಬಾರದು?

ಏನು ಮಾಡಬಾರದು?

ಹಿಂದೂ ಪುರಾಣಶಾಸ್ತ್ರಗಳ ಪ್ರಕಾರ, ಗಣೇಶ ಜಯಂತಿಯಂದು ಚಂದ್ರನನ್ನು ನೋಡುವುದು ಅಶುಭಕರ. ಹಿಂದೆ ಗಣೇಶನು ಚಂದ್ರನಿಗೆ ಶಾಪವನ್ನಿತ್ತಿರುವುದೇ ಇದಕ್ಕೆ ಕಾರಣ. ಗಣೇಶ ಜಯಂತಿಯಂದು ಚಂದ್ರದರ್ಶನವನ್ನು ಮಾಡುವ ಯಾರೇ ಆಗಲೀ, ಅಂತಹವರು ಸುಳ್ಳು ಆಪಾದನೆಯ ಕಾರಣಗಳಿಂದ ಮಾನಸಿಕ ಒತ್ತಡವನ್ನೂ, ಹಿಂಸೆಯನ್ನೂ ಅನುಭವಿಸಬೇಕಾಗುತ್ತದೆ.

ಆಚರಣೆ

ಆಚರಣೆ

ಈ ಜಯಂತಿಯನ್ನು ಭಾರತದ ಎಲ್ಲಾ ಕಡೆ ಗಣೇಶನ ಭಕ್ತರು ಆಚರಿಸುತ್ತಾರೆ. ಮಹಾರಾಷ್ಟ್ರದಲ್ಲಿ ಅಸಂಖ್ಯಾತ ಮಂದಿ ಭಗವಾನ್ ಶ್ರೀ ಗಣೇಶನ ಪ್ರತಿಮೆಗಳನ್ನು ಮನೆಗೆ ಬರಮಾಡಿಕೊಳ್ಳುತ್ತಾರೆ ಹಾಗೂ ಪೂಜಿಸುತ್ತಾರೆ. ತಮ್ಮ ಪ್ರಾರ್ಥನೆಗಳ ಸಲ್ಲಿಕೆಗಾಗಿ ಅಂದಿನ ದಿನದಂದು ಜನರು ಗಣೇಶನ ದೇವಾಲಯಗಳಿಗೂ ಭೇಟಿ ನೀಡುತ್ತಾರೆ. ಅಷ್ಟವಿನಾಯಕ ದೇವಸ್ಥಾನ, ಸಿದ್ಧಿವಿನಾಯಕ ದೇವಸ್ಥಾನಗಳಂತಹ ಮುಂಬಯಿಯಲ್ಲಿರುವ ಅನೇಕ ಜನಪ್ರಿಯ ದೇವಸ್ಥಾನಗಳನ್ನು ಹಾಗೂ ಗಣಪತಿಪುಲೆ ದೇವಸ್ಥಾನವನ್ನು ಹಬ್ಬದಾಚರಣೆಯ ಭಾಗವಾಗಿ ವಿಶೇಷವಾಗಿ ಅಲಂಕರಿಸಲಾಗುತ್ತದೆ. ಜೊತೆಗೆ ಜನರು "ಇಸವಿ 2021 ರ ಗಣೇಶ ಜಯಂತಿ ಹಬ್ಬದ ಹಾರ್ದಿಕ ಶುಭಾಶಯಗಳು" ಎಂದು ಶುಭಹಾರೈಕೆಗಳನ್ನೂ, ಸಂದೇಶಗಳನ್ನೂ, ಹಾಗೂ ಭಗವಾನ್ ಶ್ರೀ ಗಣೇಶನ ಭಾವಚಿತ್ರಗಳನ್ನೂ ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಾರೆ.

English summary

Maghi Ganesh Jayanti 2021 Date, Time, Puja Vidhi, and Significance

Maghi Ganesh Jayanti 2021 Date, Time, Puja Vidhi, and Significance, Read on,
X
Desktop Bottom Promotion