For Quick Alerts
ALLOW NOTIFICATIONS  
For Daily Alerts

ಲೂನಾರ್ ನ್ಯೂ ಇಯರ್ 2022: ಹುಲಿ ರಾಶಿಯ ಚೈನೀಸ್ ಹೊಸ ವರ್ಷ ತರಲಿದೆ ಅದೃಷ್ಟ

|

ಲೂನಾರ್ ನ್ಯೂ ಇಯರ್‌ ಅಂದ್ರೆ ಚೈನೀಸ್‌ ಹೊಸ ವರ್ಷ. ಫೆ.1ಕ್ಕೆ ಚೈನೀಸ್‌ಗಳಿಗೆ ಹೊಸ ವರ್ಷ. ಚೈನೀಸ್‌ ಹೊಸ ವರ್ಷ ಆಚರಣೆಯನ್ನು ಎರಡು ವಾರಗಳವರೆಗೆ ಆಚರಿಸಲಾಗುವುದು. ಎಲ್ಲೆಲ್ಲಿ ಚೀನಿಯರು ಇರುತ್ತಾರೋ ಅವರೆಲ್ಲಾ ಈ ಆಚರಣೆಯನ್ನು ಆಚರಿಸುತ್ತಾರೆ.

ಲೂನರ್‌ ನ್ಯೂ ಇಯರ್ ಇತಿಹಾಸ

ಚೈನೀಸ್ ಹೊಸ ವರ್ಷವನ್ನು ಕ್ರಿ.ಶ 14ನೇ ಶತಮಾನದಿಂದಲೂ ಆಚರಿಸುತ್ತಾ ಬರುತ್ತಿದೆ. ಪೌರಾಣಿಕ ಕತೆಯ ಪ್ರಕಾರ ನಿಯಾನ್ ಎಂಬ ರಾಕ್ಷಸ ಜನರಿಗೆ ತೊಂದರೆ ಕೊಡುತ್ತಿದ್ದ, ಅವನಿಗೆ ಕೆಂಪು ಬಣ್ಣ, ಬೆಂಕಿ ಅಂದ್ರೆ ಭಯ, ಜನರು ಕೆಂಪು, ಬಣ್ಣ ಹಾಗೂ ಪಟಾಕಿ ಬಳಸಿ ಹೆದರಿಸಿ ಓಡಿಸಿದರು, ಅಲ್ಲಿಂದ ಚೈನೀಸ್ ಹೊಸ ವರ್ಷ ಆಚರಣೆ ಬಂತು ಎಂದು ಹೇಳಲಾಗುತ್ತಿದೆ. ಚೈನೀಸ್ ಹೊಸ ವರ್ಷದ ಸಮಯದಲ್ಲಿ ಕೆಂಪು ಪ್ಯಾಕೆಟ್‌ಗಳನ್ನು ನೀಡಿ ಶುಭ ಕೋರಲಾಗುವುದು. ಹೀಗೆ ಮಾಡುವುದರಿಂದ ಶುಭ ಉಂಟಾಗುತ್ತದೆ ಎಂದು ನಂಬಲಾಗುತ್ತದೆ.

ಜನರವಿ 31 ಹಾಗೂ ಫೆಬ್ರವರಿ 1ಕ್ಕೆ ತುಂಬಾ ಅದ್ಧೂರಿಯಾಗಿ ಆಚರಿಸಲಾಗುವುದು. ಪ್ರತೀವರ್ಷ ಫೆಬ್ರವರಿ 1ರಂದು ಲೂನಾರ್ ನ್ಯೂ ಇಯರ್‌ ಆಚರಿಸಲಾಗುವುದು. ಗ್ರೆಗೋರಿಯನ್‌ ಕ್ಯಾಲೆಂಡರ್ ಪ್ರಕಾರ ಪ್ರತಿಯೊಂದು ವರ್ಷ ಒಂದೊಂದು ರಾಶಿಗೆ ಸಂಬಂಧಿಸಿದ್ದಾಗಿರುತ್ತದೆ. ಚೀನಾದದಲ್ಲಿ ಒಂದೊಂದು ರಾಶಿಯನ್ನು ಒಂದೊಂದು ಪ್ರಾಣಿಯಿಂದ ಗುರುತಿಸಲಾಗುವುದು. ಇಲಿ, ಗೂಳಿ, ಮೊಲ, ಡ್ರ್ಯಾಗನ್, ಹಾವು, ಕುದುರೆ, ಆಡು, ಮಂಗ, ಹೂಂಜ(ರೂಸ್ಟರ್), ನಾಯಿ, ಹಂದಿ, ಹುಲಿ ಪ್ರಾಣಿಗಳಿಂದ ಗುರುತಿಸಲಾಗುವುದು. ಈ ವರ್ಷ ಹುಲಿಯ ರಾಶಿಯದ್ದು ಆಗಿದೆ.

2022ರ ವರ್ಷ ನೀರು ಹುಲಿಯದ್ದು ಆಗಿದೆ. ಈ ರೀತಿ ನೀರು ಹುಲಿಯ 60 ವರ್ಷಕ್ಕೆ ಒಮ್ಮೆ ಬರುವಂಥದ್ದು. ಹುಲಿ ವರ್ಷ ಈ ಹಿಂದೆ 2010, 1998, 186, 1962, 1950 ... ರಲ್ಲಿ ಬಂದಿತ್ತು.

ಹುಲಿ ರಾಶಿ ಶಕ್ತಿಯ ಸಂಕೇತ, ಇದು ಧೈರ್ಯವನ್ನು ತೋರಿಸುತ್ತದೆ. ಚೀನಾದಲ್ಲಿ ಮಕ್ಕಳು ಟೈಗರ್ ಇಯರ್‌ನಲ್ಲಿ ಹುಲಿಯ ಚಿತ್ರವಿರುವ ಕ್ಯಾಪ್‌, ಶೂಗಳನ್ನು ಧರಿಸುತ್ತಾರೆ.

ಟೈಗರ್ ಇಯರ್ ಸಮೃದ್ಧಿಯನ್ನು ತರಲಿದೆ

ಚೈನೀಸ್‌ ಅವರ ನಂಬಿಕೆ ಪ್ರಕಾರ ವಾಟರ್ ಟೈಗರ್ ಅದೃಷ್ಟ, ಸಮೃದ್ಧಿಯನ್ನು ತರಲಿದೆ. ಏಕೆಂದರೆ ಇದು ಶಕ್ತಿ ಹಾಗೂ ಧೈರ್ಯದ ಸಂಕೇತವಾಗಿದೆ. ಈ ದಿನದಂದು ಸ್ನೇಹಿತರು ಹಾಗೂ ಕುಟುಂಬದವರಿಗೆ ಶುಭ ಕೋರಲಾಗುವುದು.

ಕೆಡಕು ಹೋಗಲಿ, ಒಳಿತು ಬರಲಿ ಎಂಬ ಆಶಯದಿಂದ ಲೂನರ್‌ ನ್ಯೂ ಇಯರ್‌ನಲ್ಲಿ ಮಕ್ಕಳು ಹಾಗೂ ದೊಡ್ಡವರಿಗೆ ಕೆಂಪು ಗಿಫ್ಟ್ ಪ್ಯಾಕೆಟ್ ನೀಡಲಾಗುವುದು.

English summary

Lunar New Year 2022: Date, history, significance of Chinese New Year in Kannada

Lunar New Year 2022: Know Chinese New Year Date, History and Significance in kannada
Story first published: Monday, January 31, 2022, 17:15 [IST]
X
Desktop Bottom Promotion