For Quick Alerts
ALLOW NOTIFICATIONS  
For Daily Alerts

India Gandhi: ದೇಶದ ಪ್ರಥಮ ಮಹಿಳಾ ಪ್ರಧಾನಿ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲದ ಸಂಗತಿಗಳು

|

ವಿವಿಧತೆಯಲ್ಲಿ ಏಕತೆಯನ್ನು ಕಂಡ ಭಾರತದಂಥ ದೇಶದ ಆಳ್ವಿಕೆ ನಡೆಸುವುದು ಅಷ್ಟು ಸುಲಭದ ಮಾತಲ್ಲ. ಇಂಥಾ ಸಾರ್ವಭೌಮ ದೇಶದ ಪ್ರಪ್ರಥಮ ಮಹಿಳಾ ಪ್ರಧಾನ ಮಂತ್ರಿ, ಅಷ್ಟೇ ಅಲ್ಲದೇ ತನ್ನ ತಂದೆಯ ನಂತರ ಅತಿಹೆಚ್ಚು ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಧೀಮಂತ ನಾಯಕಿ ಇಂದಿರಾ ಗಾಂಧಿ.

ಇಂದು ಹುಟ್ಟು ದೇಶಭಕ್ತೆ, ಹೋರಾಟಗಾರ್ತಿ, ದೇಶ ಕಂಡ ದಿಟ್ಟ ಮಹಿಳೆ ಇಂದಿರಾ ಪ್ರಿಯದರ್ಶಿನಿ ಗಾಂಧಿ ಅವರಿಗೆ 102ನೇ ಹುಟ್ಟುಹಬ್ಬದ ಸಂಭ್ರಮ. ನವೆಂಬರ್ 19ರ 1917ರಲ್ಲಿ ಜನಿಸಿದ ಇಂದಿರಾ ಅವರು ದೇಶ ಆಡಳಿತಕ್ಕೆ ಭದ್ರ ಬುನಾದಿ ಹಾಕುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ಈ ಹಿನ್ನಲೆ ಇಂದಿರಾ ಗಾಂಧಿ ಅವರ ಕುರಿತು ಈವರೆಗೂ ತಿಳಿದಿಲ್ಲದ ಕೆಲವು ಸಂಗತಿಗಳನ್ನು ಮುಂದೆ ಲೇಖನದಲ್ಲಿ ತಿಳಿಯೋಣ.

Prime Minister Indira Gandhi

* ಇಂದಿರಾ ಗಾಂಧಿ ಅವರ ಪೂರ್ಣ ಹೆಸರು ಹಾಗೂ ಬಾಲ್ಯದ ಹೆಸರು ಇಂದಿರಾ ಪ್ರಿಯದರ್ಶಿನಿ. ಈ ಹೆಸರನ್ನು ಅವರಿಗೆ ನಾಮಕರಣ ಮಾಡಿದ್ದು ಪ್ರಸಿದ್ಧ ಕವಿ ರವೀಂದ್ರ ನಾಥ್ ಟ್ಯಾಗೋರ್.

* ತನ್ನ ಬಾಲ್ಯದಲ್ಲೇ ದೇಶಭಕ್ತಿ, ಸ್ವದೇಶಿ ಚಿಂತನೆಗಳು ಎಷ್ಟು ಗಾಢವಾಗಿ ಇಂದಿರಾ ಅವರ ಮೇಲೆ ಪ್ರಭಾವ ಬೀರಿತ್ತೆಂದರೆ ವಿದೇಶಿ ಆಮದು ವಸ್ತುಗಳಿಂದ ಬ್ರಿಟಿಷರ ಆರ್ಥಿಕತೆ ಬಲಪಡಿಸುತ್ತಿವೆ ಎಂದು ಅರಿತ ಇಂದಿರಾ ಇದನ್ನು ಖಂಡಿಸಿ ತನ್ನ ಬಳಿ ಇದ್ದ ವಿದೇಶಿ ಗೊಂಬೆಗಳು ಮತ್ತು ಇತರ ಆಟಿಕೆಗಳನ್ನು ಸುಟ್ಟು ಹಾಕಿದ್ದರು.

* ಬಾಲ್ಯದಿಂದ ಬಹುತೇಕ ಅಧ್ಯಯನ ವಿದೇಶದಲ್ಲೇ ಮಾಡಿದ್ದ ಇಂದಿರಾ ಗಾಂಧಿ ಅವರು ಹೆಚ್ಚಾಗಿ ವಿದೇಶಿ ಜೀವನಶೈಲಿಗೆ ಒಗ್ಗಿಕೊಂಡಿದ್ದರು. ಆದರೆ ಭಾರತಕ್ಕೆ ಹಿಂದಿರುಗಿದ ನಂತರ ಅದರಲ್ಲೂ ರಾಜಕೀಯಕ್ಕೆ ಧುಮುಕಿದ ಇಂದಿರಾ ಅವರು ನಂತರ ಸಂಪೂರ್ಣವಾಗಿ ಭಾರತೀಯ ಸಂಪ್ರದಾಯವನ್ನು ಅನುಸರಿಸುತ್ತಿದ್ದರು ಹಾಗೂ ಇಲ್ಲಿನ ಅಪ್ಪಟ ಸ್ವದೇಶಿ ನಿರ್ಮಿತ ಖಾದಿ ಸೀರೆಗಳನ್ನು ಹೆಚ್ಚು ಇಷ್ಟಪಡುತ್ತಿದ್ದರು.

* ತಾನು ಎಷ್ಟೇ ಕಾರ್ಯನಿರತವಾಗಿದ್ದರೂ, ಎಷ್ಟೇ ಒತ್ತಡ ಇದ್ದರೂ ನಿತ್ಯ ಕನಿಷ್ಠ ಸಮಯವಾದರೂ ಓದುವ ಅಭ್ಯಾಸ ಇಟ್ಟುಕೊಂಡಿದ್ದರು.

* ಇಂದಿರಾ ಗಾಂಧಿ ಅವರು ದೀರ್ಘಕಾಲೀನ ಶ್ವಾಸಕೋಶ ಕಾಯಿಲೆಯಿಂದ ಬಳಲುತ್ತಿದ್ದರು ಹಾಗೂ ಇದರ ಚಿಕಿತ್ಸೆಗಾಗಿಯೇ 1940ರ ಆರಂಭದಲ್ಲಿ ಗುಣಮುಖರಾಗಲು ಸ್ವಿಡ್ಜರ್ಲೆಂಡ್ ನ ಮನೆಯೊಂದರಲ್ಲಿ ಕೆಲವು ದಿನ ನೆಲೆಸಿದ್ದರು.

* ಇಂದಿರಾ ಅವರ ಅನಾರೋಗ್ಯದ ಬಗ್ಗೆ ಸಂಪೂರ್ಣವಾಗಿ ಅರಿತಿದ್ದರೂ ಫಿರೋಜ್‌ ಅವರು ಇಂದಿರಾರನ್ನು ಬಹಳ ಇಷ್ಟಪಟ್ಟಿದ್ದರು, ಅಲ್ಲದೇ ಇಂದಿರಾ ಸಹ ಫಿರೋಜ್‌ ಅವರಲ್ಲಿದ್ದ ಮುಕ್ತ ಮನೋಭಾವ, ಹಾಸ್ಯ ಪ್ರಜ್ಞೆ ಮತ್ತು ಆತ್ಮ-ವಿಶ್ವಾಸವನ್ನು ಮೆಚ್ಚಿದ್ದರು.

* ಇಂದಿರಾ ಹಾಗೂ ಫಿರೋಜ್‌ ಅವರ ಪ್ರೇಮ ಅಥವಾ ವಿವಾಹ ನೆಹರೂ ಅವರಿಗೆ ಇಷ್ಟವಿರಲಿಲ್ಲ, ಅದರಲ್ಲೂ ಇಷ್ಟು ಚಿಕ್ಕ ವಯಸ್ಸಿಗೆ ವಿವಾಹ ಬೇಡ ಎಂದು ನೆಹರು ಖಂಡಿಸಿದ್ದರು. ಫಿರೋಜ್‌ ಗಾಂಧಿ ಮಹಾತ್ಮ ಗಾಂಧಿ ಅವರ ದತ್ತು ಪುತ್ರನಾಗಿದ್ದ ಕಾರಣ ಈ ವಿವಾಹವನ್ನು ಮುರಿಯಲು ಮಹಾತ್ಮ ಗಾಂಧಿ ಅವರ ನೆರವನ್ನು ಸಹ ನೆಹರು ಪಡೆದಿದ್ದರು.

* ಭಾರತದ ಪ್ರಥಮ ಪ್ರಧಾನ ಮಂತ್ರಿ ಲಾಲ್‌ ಬಹದ್ದೂರ್ ಶಾಸ್ತ್ರಿ ಅವರ ನಿಧನದ ನಂತರ ಇಂದಿರಾ ಗಾಂಧಿ ಅವರು 1966ರಲ್ಲಿ ಮೊದಲ ಮಹಿಳಾ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

* ಇಂದಿರಾ ಅವರ ಮತ್ತೊಂದು ಬಹುದೊಡ್ಡ ಸಾಧನೆ ಎಂದರೆ ಇವರ ಅಧಿಕಾರದ ಅವಧಿಯಲ್ಲಿ 1971ರಲ್ಲಿ ನಡೆದ ಭಾರತ-ಪಾಕಿಸ್ತಾನ ಯುದ್ದದಲ್ಲಿ ಭಾರತ ಗೆಲುವು ಸಾಧಿಸಿತ್ತು.

* 1975ರಲ್ಲಿ ಭಾರತದಲ್ಲಿ ತುರ್ತು ಪರಿಸ್ಥಿತಿ ಹೇರುವ ಮೂಲಕ ದೇಶಾದ್ಯಂತ ಟೀಕೆಗೆ ಗುರಿಯಾದರೂ, ಯಾವುದಕ್ಕೂ ಕುಗ್ಗದ ಬಲಿಷ್ಠ ನಾಯಕಿ ಇಂದಿರಾ ಗಾಂಧಿ.

* ತನ್ನ ತಂದೆಯ ನಂತರ ಪ್ರಧಾನ ಮಂತ್ರಿಯಾಗಿ ದೀರ್ಘ ಅವಧಿಯ ಕಾಲ ಸೇವೆ ಸಲ್ಲಿಸಿದ ಖ್ಯಾತಿ ಇಂದಿರಾ ಅವರಿಗೆ ಸಲ್ಲುತ್ತದೆ.

* ಅತಿ ಹೆಚ್ಚು ವಿದೇಶಗಳಿಗೆ ಭೇಟಿ ಕೊಟ್ಟ ಮೊದಲ ಪ್ರಧಾನಿ ಹಾಗೂ ಮೊದಲ ಮಹಿಳಾ ಪ್ರಧಾನಿಯಾಗಿರುವ ಕೀರ್ತಿ ಇಂದಿರಾ ಅವರದ್ದು.

* ಕಾಂಗ್ರೆಸ್‌ ಕಟ್ಟಾ ವಿರೋಧಿ ಮಾಜಿ ಪ್ರಧಾನಿ, ಪ್ರತಿಪಕ್ಷದ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರು ಇಂದಿರಾ ಅವರನ್ನು "ದೇವಿ ದುರ್ಗೆಯ ಅವತಾರ'' ಎಂದು ಬಣ್ಣಿಸಿದ್ದರು.

* ಇಂದಿರಾ ಗಾಂಧಿ ಅವರು ತಮ್ಮ ನೇರ, ದಿಟ್ಟ ಹಾಗೂ ವಿವಾದಾತ್ಮಕ ನಡೆಗಳಿಂದಲೇ ಖ್ಯಾತರಾದವರು. ಆದರೆ, ಆಪರೇಷನ್ ಬ್ಲೂಸ್ಟಾರ್ ನ ಪ್ರತೀಕಾರವಾಗಿ ಸ್ವತಃ ಇಂದಿರಾ ಅವರ ಇಬ್ಬರು ಸಿಖ್ಖ ಅಂಗರಕ್ಷಕರೇ ಅಕ್ಟೋಬರ್ 31ರ 1984ರಲ್ಲಿ ಮನೆಯ ಮುಂದೆಯೇ ಬರೋಬ್ಬರಿ 31 ಗುಂಡುಗಳನ್ನು ಹಾರಿಸಿ ಹತ್ಯೆಗೈದರು.

* ಇಂದಿರಾ ಗಾಂಧಿ ಅವರ ಸ್ಮರಣಾರ್ಥ ಅವರು ದೆಹಲಿಯಲ್ಲಿ ನೆಲೆಸಿದ್ದ ಅವರ ನಿವಾಸವನ್ನು ಇಂದಿರಾ ಗಾಂಧಿ ವಸ್ತು ಸಂಗ್ರಹಾಲಯವಾಗಿ ಮಾರ್ಪಡಿಸಲಾಗಿದ್ದು, ಸಾರ್ವಜನಿಕ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

English summary

Lesser Known Facts About Indian 1st Women Prime Minister Indira Gandhi

Today 102nd birth anniversary of Indira Gandhi, the First Female Prime Minister of India. She was the only daughter of Pandit Jawahar Lal Nehru and his wife Kamala Nehru. Born in the year 1917, she became the second-longest-serving Prime Minister of India after her father. So let us look at some unknown facts about her.
X
Desktop Bottom Promotion