For Quick Alerts
ALLOW NOTIFICATIONS  
For Daily Alerts

ಮರಣೋತ್ತರ ಪರೀಕ್ಷೆಯಿಂದ ತಿಳಿಯಿತು 8 ವರ್ಷ ದಾಂಪತ್ಯ ನಡೆಸಿದ ಪತ್ನಿ ಮಹಿಳೆಯಲ್ಲ ಪುರುಷ

|

ಸಲಿಂಗ ಪ್ರೇಮ, ಮದುವೆ ಇವುಗಳ ಬಗ್ಗೆ ಅನೇಕ ಸುದ್ದಿಗಳನ್ನು ಓದಿರುತ್ತೀರಿ. ಆದರೆ ಈ ಸುದ್ದಿ ಅದೇ ರೀತಿಯದ್ದು ಆದರೂ ಆ ಕತೆಗಳಿಗಿಂತ ಸಂಪೂರ್ಣ ಭಿನ್ನ. ಸಲಿಂಗಿಗಳು ಮದುವೆಯಾದ ಬಳಿಕ ಸಮಾಜದ ಮುಂದೆ ಅವರು ಸಲಿಂಗಿಗಳಂತೆಯೇ ಬಾಳುತ್ತಾರೆ. ಆದರೆ ಮಧ್ಯ ಪ್ರದೇಶದ ಒಂದು ಚಿಕ್ಕ ಪಟ್ಟಣವಾಗಿರುವ ಸೆಹೋರೆಯ ಸುದ್ದಿಯೊಂದು ಇದೀಗ ದೇಶದ ಗಮನ ಸೆಳೆದಿದೆ.

ಸತ್ತಿದ್ದು ಹೆಣ್ಣಲ್ಲ ಗಂಡು ಎಂದ ಪೋಸ್ಟ್‌ಮಾರ್ಟಂ ರಿಪೋರ್ಟ್
ಗಂಡ-ಹೆಂಡತಿ ನಡುವೆ ಏನೋ ಕಾರಣಕ್ಕೆ ಜಗಳವಾಗಿ ಅದು ವಿಕೋಪಕ್ಕೆ ತಿರುಗಿ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆದರೆ ಆಕೆಯ ಪೋಸ್ಟ್‌ಮಾರ್ಟಂ ರಿಪೋರ್ಟ್ ಸತ್ತಿದ್ದು ಹೆಣ್ಣಲ್ಲ,ಗಂಡು ಎಂದು ಹೇಳಿದಾಗ ನೆರೆಹೊರೆಯವರು ಹಾಗೂ ಮನೆಯವರು ಆಘಾತಕ್ಕೆ ಒಳಗಾಗಿದ್ದರು.

2012ರಲ್ಲಿ ಮದುವೆಯಾಗಿದ್ದ ಜೋಡಿ

2012ರಲ್ಲಿ ಮದುವೆಯಾಗಿದ್ದ ಜೋಡಿ

ಇವರಿಬ್ಬರು ಪ್ರೀತಿಸಿ 2012ರಲ್ಲಿ ಮದುವೆಯಾಗಿದ್ದರು. ಮನೆಯವರ ಮುಂದೆ ಹಾಗೂ ನೆರೆಹೊರೆಯವರ ಮುಂದೆ ಗಂಡ-ಹೆಂಡತಿಯಂತೆಯೇ ಬಿಂಬಿಸಿಕೊಂಡರು. ಮದುವೆಯಾದ ಎರಡು ವರ್ಷಗಳ ಬಳಿಕ ಒಂದು ಮಗುವನ್ನು ಕೂಡ ದತ್ತು ಸ್ವೀಕರಿಸಿದ್ದರು.

ಬೆಂಕಿ ಹಚ್ಚಿಕೊಂಡ ಹೆಂಡತಿ

ಬೆಂಕಿ ಹಚ್ಚಿಕೊಂಡ ಹೆಂಡತಿ

ಯಾವುದೋ ಕಾರಣಕ್ಕೆ ಆಗಸ್ಟ್ 11ರಂದು ಗಂಡ-ಹೆಂಡತಿ ನಡುವೆ ಜಗಳವಾಗಿತ್ತು. ಹೆಂಡತಿ ಮೈಗೆ ಬೆಂಕಿ ಹಚ್ಚಿಕೊಂಡಳು ಆಕೆಯನ್ನು ರಕ್ಷಿಸಲು ಹೋದ ಪತಿಗೂ ಬೆಂಕಿ ತಗುಲಿ ಗಂಡ-ಹೆಂಡತಿ ಇಬ್ಬರಿಗೂ ಗಂಭೀರ ಗಾಯವಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆ ಫಲಕಾರಿಯಾಗದೆ ಹೆಂಡತಿ ಆಗಸ್ಟ್ 12ಕ್ಕೆ ಮೃತಪಟ್ಟರೆ, ಗಂಡ ಆಗಸ್ಟ್ 16ಕ್ಕೆ ಮೃತಪಟ್ಟಿದ್ದ. ಈf ಅವರ ಮರಣೋತ್ತರ ವರದಿ ಬಂದಿದ್ದು ಅದರಲ್ಲಿ ಮೃತ ಪಟ್ಟ ಹೆಂಡತಿ ಮಹಿಳೆಯಲ್ಲ , ಪುರುಷ ಎಂಬುವುದು ಬಯಲಾಗಿದೆ.

LGBTಗೆ ಸಪೋರ್ಟ್ ಮಾಡುತ್ತಿದ್ದ

LGBTಗೆ ಸಪೋರ್ಟ್ ಮಾಡುತ್ತಿದ್ದ

ಮೃತ ವ್ಯಕ್ತಿಯ ಸಹೋದರ ಹೇಳುವ ಪ್ರಕಾರ ತಮ್ಮ LGBT ಸಮುದಾಯಕ್ಕೆ ಬೆಂಬಲ ನೀಡುತ್ತಿದ್ದ. ಕೇಳಿದರೆ ನನ್ನ ಸ್ನೇಹಿತ ಸಲಿಂಗಿ... ಅಂಥವರು ಭಯ ಮುಕ್ತರಾಗಿ ಬಾಳುವಂತರಾಗಬೇಕು ಎಂದು ಹೇಳುತ್ತಿದ್ದ ಎಂದಿದ್ದಾರೆ.

ಕಾಯ್ದೆ 377 ರದ್ದು ಬಳಿಕ ಸಲಿಂಗ ಕಾಮ ಅಪರಾಧವಲ್ಲ

ಕಾಯ್ದೆ 377 ರದ್ದು ಬಳಿಕ ಸಲಿಂಗ ಕಾಮ ಅಪರಾಧವಲ್ಲ

2018 ಸೆಪ್ಟೆಂಬರ್‌ನಲ್ಲಿ ಕಾಯ್ದೆ 377 ರದ್ದು ಮಾಡಲಾಗಿದೆ. ಇದರಿಂದಾಗಿ ಈಗ ಭಾರತದಲ್ಲಿ ಸಲಿಂಗಿಗಳ ಮದುವೆ ಅಥವಾ ಸಲಿಂಗ ಕಾಮ ಅಪರಾಧವಲ್ಲ. ಆದರೆ ಸಮಾಜ ಈಗಲೂ ಸಲಿಂಗಿಗಳನ್ನು ಸ್ವೀಕರಿಸಲು ಸಿದ್ಧವಿಲ್ಲ. ಇದರ ಪರಿಣಾಮ ಸಲಿಂಗಿಗಳು ಎಲ್ಲರಂತೆ ಬದುಕಲು ಸಾಧ್ಯವಾಗುತ್ತಿಲ್ಲ.

English summary

Autopsy Report Revealed Same Sex People Lived As Heterosexuals For 8 Years

Same-sex couple lived as heterosexuals for 8 years, reveals autopsy, read on...
X
Desktop Bottom Promotion