For Quick Alerts
ALLOW NOTIFICATIONS  
For Daily Alerts

ದೇಹ ಹಾಗೂ ಸೆಲ್ಫ್‌ ಲವ್ ಬಗ್ಗೆ ಬೋನಿ ಕಪೂರ್ ಮಗಳ ಮಾತು ಪ್ರತಿಯೊಬ್ಬರಿಗೂ ಪ್ರೇರಕ

|

ಇತ್ತೀಚೆಗೆ ಬಾಲಿವುಡ್‌ ನಿರ್ಮಾಪಕ ಬೋನಿ ಕಪೂರ್ ಮಗಳು, ಬಾಲಿವುಡ್ ನಟ ಅರ್ಜುನ್ ಕಪೂರ್ ತಂಗಿ ಅನುಷ್ಲಾ ಕಪೂರ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದು, ಆ ಪೋಸ್ಟ್‌ ಪ್ರತಿಯೊಬ್ಬರಿಗೂ ಅನ್ವಯಿಸುವಂತಿದೆ, ಅಷ್ಟೊಂದು ಅರ್ಥಪೂರ್ಣವಾದ ಪೋಸ್ಟ್‌ ಆಗಿದೆ.

ತಮ್ಮ ದೇಹದ ಬಗ್ಗೆ ಅವರು ಹಾಕಿರುವ ಬರಹದ ಪ್ರತಿಯೊಂದು ಸಾಲುಗಳು ನಮ್ಮಲ್ಲಿ ಪಾಸಿಟಿವಿಟಿ ತುಂಬುವಂತಿದೆ. ತಮ್ಮದೇ ದೇಹದ ಬಗ್ಗೆ ಹೇಳುತ್ತಾ 'ಡಾರ್ಕ್ ಸರ್ಕಲ್, ಸ್ಟ್ರೆಚ್ ಮಾರ್ಕ್ಸ್, ಮೃದುವಾದ ಹೊಟ್ಟೆ, ಸಡಿಲವಾದ ತ್ವಚೆ, ಬಿಳಿ ಕೂದಲು, ನೆರಿಗೆ .. ಇವೆಲ್ಲಾವನ್ನೂ ಪ್ರೀತಿಸಲು ಕಲಿಯುತ್ತಿದ್ದೇನೆ' ಎಂಬ ಬರಹ ಹಾಕಿದ್ದಾರೆ.

ದಪ್ಪಗಿದ್ದೇನೆ ಎಂಬ ಕೀಳೆರಿಮೆ ಏಕೆ?

ದಪ್ಪಗಿದ್ದೇನೆ ಎಂಬ ಕೀಳೆರಿಮೆ ಏಕೆ?

30 ವರ್ಷ ಅನುಷ್ಲಾ ಕಪೂರ್‌ ಅವರು ಸ್ವಲ್ಪ ಗುಂಡಗಿನ ಹುಡುಗಿ, ಅವರ ಅಣ್ಣ ಅರ್ಜುನ್ ಕಪೂರ್ ಕೂಡ ಮೊದಲು ತುಂಬನೇ ದಪ್ಪವಿದ್ದರು, ನಂತರ ಫಿಟ್‌ ಆಗಿ ಬಾಲಿವುಡ್‌ಗೆ ನಟನಾಗಿ ಎಂಟ್ರಿ ಕೊಟ್ಟರು. ಅನುಷ್ಲಾ ಸ್ಲಿಮ್ ಆಗಿಲ್ಲ, ಈಗಲೂ ಗುಂಡಗಿನ ಮೈ ಮಾಟವನ್ನು ಹೊಂದಿದ್ದಾರೆ.

ನಮ್ಮಲ್ಲಿ ಹೆಚ್ಚಿನವರಿಗೆ ಒಂದು ತಪ್ಪು ಕಲ್ಪನೆ ಇದೆ ಫಿಟ್ ಆಗಿದ್ದರೆ ಮಾತ್ರ ಬ್ಯೂಟಿ ಎಂಬುವುದೇ ಆ ತಪ್ಪು ಕಲ್ಪನೆಯಾಗಿದೆ. ದಪ್ಪಗಿದ್ದವರು ಸಾಕಷ್ಟು ಬಾಡಿ ಶೇಮಿಂಗ್‌ಗೆ ಒಳಗಾಗುತ್ತಾರೆ. ದಪ್ಪಗಿದ್ದರೆ ಜನರಾಡುವ ಮಾತುಗಳಿಂದ ಆತ್ಮವಿಶ್ವಾಸ ಕೂಡ ಕುಗ್ಗುವುದು. ಎಷ್ಟೋ ಜನರಿಗೆ ತಮ್ಮ ದೇಹದ ಬಗ್ಗೆ ತಮಗೇ ಪ್ರೀತಿ ಇರುವುದಿಲ್ಲ, ಹೊಟ್ಟೆ ದಪ್ಪವಿದೆ, ಬೊಜ್ಜು ಅಧಿಕವಿದೆ ಹೀಗಾಗಿ ನಾನು ಚೆನ್ನಾಗಿ ಕಾಣುತ್ತಿಲ್ಲ ಎಂಬ ಕೊರಗಿರುತ್ತದೆ. ಆದರೆ ನಮ್ಮ ದೇಹವನ್ನು ನಾವೇ ಪ್ರೀತಿಸಲು ಪ್ರಾರಂಭಿಸಿದರೆ ನಮ್ಮಲ್ಲಿ ಒಂದು ಪಾಸಿಟಿವಿಟಿ ಇರುತ್ತದೆ, ನಮ್ಮ ಆತ್ಮವಿಶ್ವಾಸ ಹೆಚ್ಚುವುದು. ಅದೇ ಮಾತುಗಳನ್ನು ಅನುಷ್ಲಾ ಕಪೂರ್ ಹೇಳಿದ್ದಾರೆ.

ದೇಹದ ಬಗ್ಗೆ ಅನುಷ್ಲಾ ಪಾಸಿಟಿವ್ ಟಾಕ್

ದೇಹದ ಬಗ್ಗೆ ಅನುಷ್ಲಾ ಪಾಸಿಟಿವ್ ಟಾಕ್

30ರ ಪ್ರಾಯದ ಅನುಷ್ಲಾ ತಮ್ಮ ದೇಹದ ಬಗ್ಗೆ ಹೇಳುತ್ತಾ " ಅವಳು(ದೇಹ)30 ವರ್ಷ ಬದುಕಲು ಸಹಾಯ ಮಾಡಿದೆ, ನನಗೆ ಉಸಿರಾಡಲು ಸಹಾಯ ಮಾಡಿದೆ, ಕಾಯಿಲೆಯಾದಾಗ ಗುಣವಾಗಲು ಸಹಾಯ ಮಾಡಿದೆ, ಪ್ರೀತಿಯನ್ನು ತೋರಲು ಹಾಗೂ ಪ್ರೀತಿಯನ್ನು ಸ್ವೀಕರಿಸಲು ಸಹಾಯ ಮಾಡಿದೆ. ನನ್ನ ಜೀವನದ ದುಃಖ, ನೋವು, ಸಂತೋಷ ಹೀಗೆ ಎಲ್ಲದರಲ್ಲೂ ಜೊತೆಗಿದೆ.

ತುಂಬಾ ತಿನ್ನುತ್ತಿದ್ದಾಗ ಹಾಗೂ ಫೇಡ್ ಡಯಟ್ ಮಾಡಿದಾಗಲೂ ಅದು ಸಹಿಸಿಕೊಂಡಿದೆ. ಎಷ್ಟೋ ರಾತ್ರಿಗಳನ್ನು ನಿದ್ದೆಯಿಲ್ಲದೆ ಕಳೆದಾಗ ಕೂಡ ನನ್ನನ್ನು ಜೋಪಾನ ಮಾಡಿದೆ, ಅನೇಕ ರೀತಿಯಲ್ಲಿ ನಾನು ಸಂತೋಷವಾಗಿರಲು ಸಹಾಯ ಮಾಡುತ್ತಿದೆ.

ನಾನು ಅವಳ(ದೇಹದ) ಮೇಲೆ ದೈಹಿಕ ಹಾಗೂ ಮಾನಸಿಕ ಒತ್ತಡಗಳನ್ನು ಹಾಕಿದದ್ದೇನೆ, ಅವುಗಳನ್ನು ಸನರ್ಥವಾಗಿ ಎದುರಿಸಿದ್ದಾಳೆ ನನ್ನ ದೇಹಿಕ ಹಾಗೂ ಮಾನಸಿಕ ಬದಲಾವಣೆಗಳಲ್ಲಿ ಅವಳಿದ್ದಾಳೆ. ಅವಳ ಬಗ್ಗೆ ನಾನೇನು ಹೇಳಬಹುದು ಎಂದರೆ ಅವಳನ್ನು ಹೊಗಳಬೇಕಾಗಿದೆ, ಅವಳ ಒಳ್ಳೆಯದಿರಲಿ, ಕೆಟ್ಟದಿರಲಿ. ಇಷ್ಟು ದಿನ ಅವಳ ಬಗ್ಗೆ ಅಸಮಧಾನವಿತ್ತು, ಆದರೆ ಇನ್ನು ಮುಂದೆ ಅವಳನ್ನು ಪ್ರೀತಿಸುತ್ತೇನೆ, ಅವಳನ್ನು ಸ್ವೀಕರಿಸುತ್ತೇನೆ.

ಅವಳನ್ನು ಹೀಯಾಳಿಸಿದ್ದೆ, ನಿರ್ಲಕ್ಷ್ಯ ಮಾಡಿದ್ದೆ, ಆದರೆ ಇನ್ನು ಮುಂದೆ ಹಾಗೆ ಮಾಡಲ್ಲ, ಅವಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ, ಅವಳನ್ನು ಗೌರವಿಸುತ್ತೇನೆ, ಅವಳಿಂದಲೇ ನಾನು ನಾನಾಗಿದ್ದೇನೆ' ಎಂಬುವುದಾಗಿ ತಮ್ಮ ದೇಹದ ಬಗ್ಗೆ ಪಾಸಿಟಿವ್ ಆಗಿ ಮಾತನಾಡಿದ್ದಾರೆ.

ದೇಹದ ಬಗ್ಗೆ ಕೀಳೆರಿಮೆ

ದೇಹದ ಬಗ್ಗೆ ಕೀಳೆರಿಮೆ

ದಪ್ಪಗಿದ್ದರೆ ನಾನು ಚೆನ್ನಾಗಿ ಕಾಣುತ್ತಿಲ್ಲ ಎಂಬ ಕೀಳೆರಿಮೆ ಅನೇಕರಲ್ಲಿದೆ, ಆದರೆ ಒಂದು ಮಾತು ಹೇಳಲು ಇಷ್ಟಪಡುತ್ತೇನೆ, ನಮ್ಮ ದೇಹವನ್ನು ನಾವೇ ಪ್ರೀತಿಸದೆ ಬೇರೆಯವರು ಪ್ರೀತಿಸಬೇಕು, ಹೊಗಳಬೇಕು ಎಂದು ಬಯಸುವುದಾದರೂ ಏಕೆ? ನಾವು ತೆಳ್ಳಗಿರಲಿ, ದಪ್ಪಗಿರಲಿ ಮೊದಲಿಗೆ ನಮ್ಮ ದೇಹವನ್ನು ನಾವು ಪ್ರೀತಿಸಬೇಕು, ಆಗ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚುವುದು, ಆ ಆತ್ಮ ವಿಶ್ವಾಸ ಇತರರನ್ನು ಸೆಳೆಯುತ್ತದೆ.

ಆದ್ದರಿಂದ ನಿಮ್ಮ ದೇಹಕ್ಕೆ ಸರಿಯಾದ ಆಹಾರ ನೀಡದೆ ಅಥವಾ ಮಿತಿ ಮೀರಿ ತಿಂದು ದಂಡಿಸಬೇಡಿ, ಅದನ್ನು ನೀವು ಜೋಪಾನವಾಗಿ ನೀಡಿಕೊಳ್ಳಿ, ಅದು ನಿಮಗೆ ಆರೋಗ್ಯ, ಆತ್ಮವಿಶ್ವಾಸವನ್ನು ನೀಡುವುದು.

English summary

Anshula Kapoor Posts On Body Positivity And Self love

Anshula Kapoor posts on body positivity and self love, read on...
Story first published: Tuesday, January 11, 2022, 13:00 [IST]
X