For Quick Alerts
ALLOW NOTIFICATIONS  
For Daily Alerts

Akshaya Tritiya 2021 : ಅಕ್ಷಯ ತೃತೀಯದಂದು ಚಿನ್ನವನ್ನು ಹೊರತುಪಡಿಸಿ, ನೀವು ಖರೀದಿಸಬಹುದಾದ ಇತರ ವಸ್ತುಗಳಿವು

|

ಹಿಂದೂಗಳ ಪ್ರಕಾರ ಅಕ್ಷಯ ತೃತೀಯವು ಒಂದು ಪ್ರಮುಖ ದಿನ. ಈ ಹಬ್ಬವನ್ನು ವಿಷ್ಣುವಿಗೆ ಅರ್ಪಿಸುತ್ತಾರೆ. ಏಕೆಂದರೆ ಈ ದಿನ ವಿಷ್ಣು ಅವತರಿಸಿದನು ಮತ್ತು ಭೂಮಿಯ ಮೇಲೆ ಜನ್ಮ ಪಡೆದನು ಎಂಬ ನಂಬಿಕೆಯಿದೆ. ಈ ದಿನ ಲಕ್ಷ್ಮಿ ದೇವಿಯನ್ನು ಪೂಜಿಸಲು ಉತ್ತಮ ದಿನ. ಇದರಿಂದ ಸಂಪತ್ತು ಹಾಗೂ ಅದೃಷ್ಟ ಎರಡೂ ವೃದ್ಧಿಯಾಗುತ್ತೆ ಎಂಬ ಭಾವನೆ.

ಅದಕ್ಕಾಗಿ ಅಕ್ಷಯ ತೃತೀಯದಂದು ಏನಾದರೂ ಹೊಸದನ್ನು ಖರೀದಿಸುತ್ತಾರೆ. ಮುಖ್ಯವಾಗಿ ಚಿನ್ನ. ಈ ದಿನ ಚಿನ್ನ ಕೊಂಡರೆ ಮನೆಗೆ ಶುಭ ಹಾಗೂ ಆ ಸಂಪತ್ತು ಎಂದಿಗೂ ಕಡಿಮೆಯಾಗುವುದಿಲ್ಲ ಎಂಬ ನಂಬಿಕೆ. ಹಾಗಾದರೆ ಅಕ್ಷಯ ತೃತೀಯದಂದು ಚಿನ್ನ ಮಾತ್ರ ಖರೀಸಬೇಕೇ? ಅದನ್ನು ಬಿಟ್ಟು ಬೇರೇನು ಕೊಳ್ಳಬಹುದು ಎಂದು ನೀವು ಯೋಚಿಸುತ್ತಿದ್ದರೆ ನಿಮಗಾಗಿ ಕೆಲವೊಂದು ವಸ್ತುಗಳು ಇಲ್ಲಿವೆ.

ಅಕ್ಷಯ ತೃತೀಯದಂದು ನೀವು ಖರೀದಿಸಬಹುದಾದ ವಸ್ತುಗಳು ಇಲ್ಲಿವೆ:

ಅಕ್ಷಯ ತೃತೀಯದಂದು ನೀವು ಖರೀದಿಸಬಹುದಾದ ವಸ್ತುಗಳು ಇಲ್ಲಿವೆ:

1. ಚಿನ್ನ:

'ಅಕ್ಷಯ' ಎಂಬ ಪದದ ಅರ್ಥ 'ಎಂದಿಗೂ ಕಡಿಮೆಯಾಗದಿರುವುದು' ಎಂದರ್ಥ. ಅಕ್ಷಯ ತೃತೀಯ ದಿನದಂದು ಚಿನ್ನವನ್ನು ಖರೀದಿಸುವುದರಿಂದ ಸಮೃದ್ಧಿ ಮತ್ತು ಸಂಪತ್ತು ಬರುತ್ತದೆ ಎಂದು ನಂಬಲಾಗುತ್ತದೆ. ಹೀಗಾಗಿ, ಸಾಂಪ್ರದಾಯಿಕವಾಗಿ, ಈ ಶುಭ ದಿನದಂದು ಅನೇಕ ಜನರು ಚಿನ್ನವನ್ನು ಖರೀದಿಸುತ್ತಾರೆ. ಈ ಹಳದಿ ಲೋಹವು ಹೆಚ್ಚು ಮೌಲ್ಯಯುತವಾಗಿದ್ದು, ನೀವು ಕಷ್ಟ ಪಟ್ಟು ಕೂಡಿಟ್ಟ ಹಣವನ್ನು ಇದರಲ್ಲಿ ಹೂಡಿಕೆ ಮಾಡುತ್ತಾರೆ. ಚಿನ್ನದ ಮೇಲೆ ಹೂಡಿಕೆ ಮಾಡಲು ವಿವಿಧ ಮಾರ್ಗಗಳಿವೆ - ಅದನ್ನು ಆಭರಣಗಳು, ನಾಣ್ಯಗಳು ಅಥವಾ ಬಾರ್‌ಗಳ ರೂಪದಲ್ಲಿ ಖರೀದಿಸಿ ಅಥವಾ ಗೋಲ್ಡ್ ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್ ಗಳಲ್ಲಿ (ಇಟಿಎಫ್) ಹೂಡಿಕೆ ಮಾಡುವ ಮೂಲಕ ಖರೀದಿಸಬಹುದು.

2. ಹೊಸ ವಾಹನ:

2. ಹೊಸ ವಾಹನ:

ಅಕ್ಷಯ ತೃತೀಯವು ಶುಭ ದಿನವೆಂದು ನಂಬಿರುವುದಿರಂದ ಈ ದಿನದಂದು ಹೊಸ ವಾಹನವನ್ನು ಸಹ ಖರೀದಿಸಬಹುದು. ಈ ದಿನ ಖರೀದಿಸಿದ ವಾಹನವು ಹೆಚ್ಚಿನ ದೀರ್ಘಾಯುಷ್ಯವನ್ನು ತರುತ್ತದೆ ಎಂದು ಜನರು ನಂಬುತ್ತಾರೆ. ಅಲ್ಲದೆ, ಅಕ್ಷಯ ತೃತೀಯದ ಸಂದರ್ಭದಲ್ಲಿ ನೀವು ಹೆಚ್ಚಿನ ರಿಯಾಯಿತಿಯನ್ನು ಸಹ ಪಡೆಯಬಹುದು.

3. ಹೊಸ ಮನೆ:

3. ಹೊಸ ಮನೆ:

ಈ ದಿನ ಶುಭ ದಿನವೆಂದು ಪರಿಗಣಿಸಲ್ಪಟ್ಟಿದ್ದರಿಂದ, ನಿಮ್ಮ ಕನಸಿನ ಮನೆ ಕೊಳ್ಳಲು ಇದಕ್ಕಿಂತ ಉತ್ತಮ ದಿನ ಬೇಕೇ? ಆದ್ದರಿಂದ ಈ ದಿನದಂದು ಮನೆ ಖರೀದಿಸಿ ಅಥವಾ ನಿಮ್ಮ ಮನೆ ಕಟ್ಟಲು ಅಡಿಗಲ್ಲು ಹಾಕಬಹುದು. ಇವುಗಳ ಜೊತೆಗೆ ಗೃಹಪ್ರವೇಶ ಮಾಡಿದರೂ ಸಹ ಈ ದಿನ ನಿಮಗೆ ಅದೃಷ್ಠ ತರುತ್ತದೆ.

4. ಮಕ್ಕಳ ಯೋಜನೆಯಲ್ಲಿ ಹೂಡಿಕೆ ಮಾಡಬಹುದು:

4. ಮಕ್ಕಳ ಯೋಜನೆಯಲ್ಲಿ ಹೂಡಿಕೆ ಮಾಡಬಹುದು:

ಮೇಲೆ ಹೇಳಿದಂತೆ, ಅಕ್ಷಯ ತೃತೀಯದ ದಿನದಂದು ಪ್ರಾರಂಭಿಸಿದ ಯಾವುದೇ ಉದ್ಯಮವು ಸಮೃದ್ಧಿಯನ್ನು ತರುತ್ತದೆ. ಆದ್ದರಿಂದ, ಪೋಷಕರಾಗಿರುವ ನೀವು, ನಿಮ್ಮ ಮಗುವಿನ ಉಜ್ವಲ ಭವಿಷ್ಯಕ್ಕಾಗಿ ಹಾಗೂ ಶಿಕ್ಷಣಕ್ಕೆ ಸಹಾಯವಾಗುವಂತಹ ಮಕ್ಕಳ ಯೋಜನೆಯಲ್ಲಿ ಹೂಡಿಕೆ ಮಾಡಿ. ಇದು ಮುಂದೆ ಮಗುವಿನ ಭವಿಷ್ಯಕ್ಕೆ ಸಹಾಯವಾಗುತ್ತದೆ. ಆದ್ದರಿಂದ ಈ ಸಲದ ಅಕ್ಷಯ ತೃತೀಯದಂದು ನಿಮ್ಮ ಮಗುವಿಗಾಗಿ ಕೆಲವೊಂದು ಯೋಜನೆಗಳಲ್ಲಿ ಹೂಡಿಕೆ ಮಾಡಿ.

English summary

Akshaya Tritiya 2021: Things To Buy This Akshaya Tritiya Other Than Gold

Here we talking about Akshaya Tritiya Things to buy this Akshaya Tritiya other than gold, read on
X
Desktop Bottom Promotion