For Quick Alerts
ALLOW NOTIFICATIONS  
For Daily Alerts

ಮೇ ತಿಂಗಳಿನಲ್ಲಿ ಹುಟ್ಟಿರುವವರಾ ನೀವು.. ಹಾಗಿದ್ದರೆ ನೀವು ಏನನ್ನು ತಿಳಿದುಕೊಳ್ಳಬೇಕು ಗೊತ್ತಾ..?

By Sushma Charhra
|

ನೀವು ಮೇ ತಿಂಗಳಲ್ಲಿ ಹುಟ್ಟಿದ್ದೀರಾ.. ಹಾಗಿದ್ದರೆ ನೀವು ಹುಟ್ಟಿದ ತಿಂಗಳ ಬಗ್ಗೆ ಜಾತಕ, ಜ್ಯೋತಿಷ್ಯ ಏನು ಹೇಳುತ್ತೆ ಅನ್ನುವುದನ್ನು ನೀವು ತಿಳಿದುಕೊಳ್ಳಲೇಬೇಕು. ಈ ಲೇಖನದಲ್ಲಿ ಮೇ ತಿಂಗಳ ಪ್ರತಿ ದಿನವೂ ಏನನ್ನು ಸೂಚಿಸುತ್ತೆ ಮತ್ತು ಆ ದಿನವನ್ನು ನೀವು ಹೇಗೆ ಆರಂಭಿಸಬೇಕು ಅನ್ನುವುದನ್ನ ತಿಳಿಸಿಕೊಡಲಿದೆ.ಇದು ನಿಮ್ಮ ಭವಿಷ್ಯ ಮತ್ತು ನಿಮ್ಮ ವ್ಯಕ್ತಿತ್ವ ಹೇಗಿರಲಿದೆ ಅನ್ನುವುದನ್ನು ಸೂಚಿಸುವ ಸಣ್ಣ ಪ್ರಯತ್ನ. ಇಲ್ಲಿ ನಾವು ಪ್ರತಿಯೊಂದು ರಾಶಿಯನ್ನೂ ಬರೆದಿದ್ದೇವೆ ಮತ್ತು ಆ ರಾಶಿಗೆ ಅನುಗುಣವಾಗಿ ವಿವರಗಳನ್ನು ನೀಡಲಿದ್ದೇವೆ. ಹಾಗಿದ್ದರೆ ನೀವು ಕೂಡ ಪರೀಕ್ಷೆ ಮಾಡಿಕೊಳ್ಳಿ ಮತ್ತು ನಿಮ್ಮ ಸ್ನೇಹಿತರೊಡನೆ ವಿವರಗಳನ್ನು ಹಂಚಿಕೊಳ್ಳಿ. ನಿಮ್ಮ ದೈನಂದಿನ ಮೇ ತಿಂಗಳ ದಿನಚರಿ ಮತ್ತು ವ್ಯಕ್ತಿತ್ವದ ವಿವರಗಳನ್ನು ರಾಶಿಯ ಲೆಕ್ಕಾಚಾರದಲ್ಲಿ ತಾಳೆ ಹಾಕಿ.

ನೀವು ಹುಟ್ಟಿದ್ದು ಮೇ 1 ನೇ ತಾರೀಖು

ನೀವು ಹುಟ್ಟಿದ್ದು ಮೇ 1 ನೇ ತಾರೀಖು

ಒಂದು ವೇಳೆ ನೀವು ಮೇ 1 ನೇ ತಾರೀಖಿನಂದು ಹುಟ್ಟಿದವರಾಗಿದ್ದರೆ, ನಿಮ್ಮನ್ನು ತುಂಬಾ ಕಠಿಣ ಮನಸ್ಸಿನ ವ್ಯಕ್ತಿತ್ವದವರೆಂದು ಅಂದಾಜಿಸಲಾಗುತ್ತೆ. ನೀವು ಬಹಳ ಗುರಿ ಹೊಂದಿರುತ್ತೀರಿ ಆದರೆ ಅದೇ ಸಮಯಕ್ಕೆ ನೀವು ಹಿಂಜರಿಕೆಯ ಮನೋಭಾವನೆಯನ್ನು ಹೊಂದಿರುತ್ತೀರಿ., ನಿಮ್ಮ ಶಕ್ತಿಯ ಪ್ರದರ್ಶನಕ್ಕೆ ಪ್ರಯತ್ನಿಸುತ್ತೀರಿ ಮತ್ತು ಇನ್ನೊಬ್ಬರ ಜೊತೆ ಹೊಂದಾಣಿಕೆ ಮಾಡಿಕೊಂಡು ನೋಡಿ ಅವರ ವಿರುದ್ಧ ನಿಮ್ಮ ಬಲಾಢ್ಯತನವನ್ನು ತೋರಿಸುತ್ತೀರಿ. ಅಷ್ಟೇ ಅಲ್ಲ ಬಹಳ ಹಠ ಸ್ವಭಾವನ್ನು ಹೊಂದಿರುತ್ತೀರಿ. ಬೇರೆಯವರು ಏನು ಯೋಚಿಸುತ್ತಾರೆ ಅನ್ನುವ ಕಾರಣಕ್ಕಾಗಿ ನೀವು ನಿಮ್ಮ ಶಕ್ತಿಯನ್ನು ಹಾಳು ಮಾಡಲು ಇಲ್ಲವೇ, ವೆಚ್ಚಗೊಳಿಸಲು ಬಯಸುವುದಿಲ್ಲ. ನೀವು ಸಂಗೀತಪ್ರಿಯರಾಗಿದ್ದು, ನಿಮ್ಮ ಕ್ರಿಯಾಶೀಲತೆ ಮತ್ತು ಹೊಳಪಿನಂತ ವ್ಯಕ್ತಿತ್ವ ನಿಮ್ಮನ್ನು ಶಕ್ತಿಯುತ ವ್ಯಕ್ತಿಯನ್ನಾಗಿ ರೂಪಿಸುತ್ತೆ.

ನೀವು ಹುಟ್ಟಿದ್ದು ಮೇ 2 ನೇ ತಾರೀಖು

ನೀವು ಹುಟ್ಟಿದ್ದು ಮೇ 2 ನೇ ತಾರೀಖು

ನೀವು ಮೇ 2 ರಂದು ಹುಟ್ಟಿದವರಾದರೆ ಭೂಮಿ ಪುತ್ರರು ಎಂದು ಹೇಳಬಹುದು. ಅಂದರೆ ರೈತರು ಎಂದಲ್ಲ ಬದಲಾಗಿ ನಂಬಿಕೆಗೆ ಅರ್ಹ ವ್ಯಕ್ತಿಗಳು. ಹೇಳಿದ ಕೆಲಸವನ್ನು ಮಾಡಿಯೇ ಮುಗಿಸುವವರು. ಬಹಳ ಜವಾಬ್ದಾರಿ ಹೊಂದಿರುವ ನೀವು, ಯಾವುದೇ ಕೆಲಸವನ್ನೇ ಆಗಲಿ ಬಹಳ ಶ್ರದ್ಧೆಯಿಂದ ಮತ್ತು ಭಕ್ತಿಯಿಂದ ಮಾಡುತ್ತೀರಿ. ಆದರೆ ಇನ್ನೊಂದು ಕಡೆ ನಿಮ್ಮ ಸಮಸ್ಯೆಯೇನೆಂದರೆ ನಿದ್ದೆ. ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುವುದರಿಂದಾಗಿ ಸಾಕಷ್ಟು ಪೌಷ್ಟಿಕಾಂಶ ಭರಿತ ಆಹಾರ ಸೇವನೆ ನಿಮ್ಮನ್ನು ಆರೋಗ್ಯವಾಗಿರಲು ಸಹಕರಿಸುತ್ತೆ. ಬಹಳ ಕನಸು ಕಾಣುತ್ತೀರಿ ಮತ್ತು ನಿಮ್ಮ ತಲೆಯಲ್ಲಿ ಬಹಳ ಉಪಾಯಗಳಿರುತ್ತೆ.

ನೀವು ಹುಟ್ಟಿದ್ದು ಮೇ 3 ನೇ ತಾರೀಖು

ನೀವು ಹುಟ್ಟಿದ್ದು ಮೇ 3 ನೇ ತಾರೀಖು

ನಿಮ್ಮ ಜನನ ದಿನಾಂಕ ಮೇ 3 ತಾರೀಖಾಗಿದ್ದರೆ ನೀವು ಬಹಳ ಅದೃಷ್ಟವಂತರು ಮತ್ತು ಮುಟ್ಟಿದ್ದೆಲ್ಲ ಚಿನ್ನವಾಗುವ ಭಾಗ್ಯಶಾಲಿಗಳು., ನೀವು ಬಹಳ ಚಿಂತನಶೀಲವಾಗಿರುವವರು ಮತ್ತು ನಿಮ್ಮ ಕಾರ್ಯದಲ್ಲಿ ಕಾರ್ಯೋನ್ಮುಖವಾಗಿ ತೊಡಗಿಕೊಂಡಿರುವವರು. ನಿಮ್ಮನ್ನು ನೀವು ಇನ್ನೊಬ್ಬರ ಮುಂದೆ ವ್ಯಕ್ತಪಡಿಸಿಕೊಳ್ಳುತ್ತೀರಿ ಮತ್ತು ಇನ್ನೊಬ್ಬರನ್ನು ಮೋಡಿ ಮಾಡಿ ಸೆಳೆದುಕೊಂಡು ಬಿಡುತ್ತೀರಿ. ನೀವು ಬಹಳ ಸಹಾನುಭೂತಿ ಉಳ್ಳವರು, ತಾಳ್ಮೆ ಹೊಂದಿರುವವರು, ಮತ್ತು ಸಮಸ್ಯೆಯನ್ನು ಇತ್ಯರ್ಥ್ಯಗೊಳಿಸುವ ತಾಕತ್ತು ನಿಮ್ಮಲ್ಲಿದೆ. ಇದೇ ಕಾರಣಕ್ಕೆ ಕೆಲವು ನಿಮ್ಮದಲ್ಲದ ವಿಚಾರಗಳು ನಿಮ್ಮಲ್ಲಿ ಬಂದು ಬಿದ್ದುಬಿಡುತ್ತೆ. ಅಷ್ಟೇ ಅಲ್ಲ ನೀವು ಬಹಳ ಬುದ್ಧಿ ಉಳ್ಳವರು ಮತ್ತು ಸಾಕ್ಷಾತ್ಕಾರ ಮನೋಭಾವದವರು. ಇದೆಲ್ಲದಕ್ಕಿಂತ ಮುಖ್ಯವಾಗಿ ನೀವು ಬಹಳ ರೋಮ್ಯಾಂಟಿಕ್ ಸ್ವಭಾವದವರು.

ನೀವು ಹುಟ್ಟಿದ್ದು ಮೇ 4 ನೇ ತಾರೀಖು

ನೀವು ಹುಟ್ಟಿದ್ದು ಮೇ 4 ನೇ ತಾರೀಖು

ಒಂದು ವೇಳೆ ನೀವು ಮೇ 4 ರಂದು ಹುಟ್ಟಿದವರಾಗಿದ್ದರೆ, ನೀವು ಬಹಳ ನಂಬಿಕಸ್ಥರು, ಪ್ರಾಮಾಣಿಕರು, ವಿಶ್ವಾಸ ಉಳ್ಳವರು ಮತ್ತು ನೀವು ನಿಮ್ಮ ಭಾವನೆಗಳನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಲು ಬಯಸುವುದಿಲ್ಲ. ನೀವು ಯಾರೋ ಹೇಳಿದ್ದನ್ನೆಲ್ಲ ನಂಬುವುದಿಲ್ಲ, ಕಣ್ಣಿಗೆ ಕಂಡರೂ ಪರಾಮರ್ಶಿಸಿ ನೋವು ಅನ್ನುವುದನ್ನು ಬಹಳ ನಂಬುತ್ತೀರಿ. ಸತ್ಯವಲ್ಲ ಅನ್ನಿಸಿದ ವಿಚಾರವನ್ನು ಒತ್ತಾಯಕ್ಕೆ ಮಣಿದು ನಂಬುವ ಸ್ವಭಾನ ನಿಮ್ಮದಲ್ಲ. ನಿಮ್ಮ ಸ್ವಂತ ಬಲದಿಂದ ಜಗತ್ತನ್ನು ಬದಲಿಸಬಹುದು ಅನ್ನುವ ಭಾವನೆ ನಿಮ್ಮದು ಮತ್ತು ಆ ನಿಟ್ಟಿನಲ್ಲಿ ನೀವು ನಿಮ್ಮ ಜೀವನಕ್ಕೆ ಒಂದು ಕ್ರಮಬದ್ಧವಾದ ನಿಯಮವನ್ನು ಹಾಕಿಕೊಂಡೇ ಜೀವಿಸುತ್ತೀರಿ.

ನೀವು ಹುಟ್ಟಿದ್ದು ಮೇ 5 ನೇ ತಾರೀಖು

ನೀವು ಹುಟ್ಟಿದ್ದು ಮೇ 5 ನೇ ತಾರೀಖು

ನೀವು ಹುಟ್ಟಿದ ದಿನಾಂಕ ಮೇ 5 ಆಗಿದ್ದರೆ ನಿಮ್ಮ ಜೀವನದಲ್ಲಿ ನಿಮ್ಮ ಕುಟುಂಬ ಮತ್ತು ಅದರ ಹಿನ್ನೆಲೆ ದೊಡ್ಡ ಪಾತ್ರ ವಹಿಸುತ್ತೆ. ನೀವು ಬಹಳ ಸ್ವತಂತ್ರವಾಗಿ ಆಲೋಚಿಸುತ್ತೀರಿ ಮತ್ತು ನಿಮ್ಮ ಆಸಕ್ತಿ ಬಹಳ ಏಕರೂಪದಲ್ಲಿರುತ್ತೆ ಹಾಗಾಗಿ ನೀವು ನಿಮ್ಮ ಜೀವನದ ಉದ್ದಕ್ಕೂ ನಿಮ್ಮದೇ ಶೈಲಿಯಲ್ಲಿ ಆಲೋಚಿಸುತ್ತೀರಿ.ನಿಮ್ಮ ಜೀವನದಲ್ಲಿ ಯಶಸ್ಸು ಬಹಳ ಸುಲಭ ಮತ್ತು ನಿಮ್ಮಿಂದ ಆಗದೇ ಇರುವುದು ಅನ್ನುವುದು ಯಾವುದೂ ಇಲ್ಲ. ಆದರೆ ನಿಮ್ಮನ್ನ ಹೊಸ ಮತ್ತು ಆಸಕ್ತಿಕರ ವಿಚಾರಗಳ ಆಗಾಗ ಸೆಳೆಯುತ್ತಲೇ ಇರುತ್ತೆ. ಅದು ನಿಮ್ಮನ್ನು ಬಹಳ ಮುಂದಕ್ಕೆ ಕರೆದೊಯ್ಯುತ್ತೆ. ಬುದ್ಧಿವಂತ, ಕುತೂಹಲಕಾರಿ ವ್ಯಕ್ತಿತ್ವದವರು ನೀವಾಗಿದ್ದು,ಯಾವಾಗಲೂ ಎಲ್ಲರಿಂದಲೂ ಅಧ್ಬುತವೆಂದು ಅನ್ನಿಸಿಕೊಳ್ಳುತ್ತೀರಿ

ನೀವು ಹುಟ್ಟಿದ್ದು ಮೇ 6 ನೇ ತಾರೀಖು

ನೀವು ಹುಟ್ಟಿದ್ದು ಮೇ 6 ನೇ ತಾರೀಖು

ಮೇ 6 ರಂದು ನಿಮ್ಮ ಜನನವಾಗಿದ್ದರೆ ನೀವು ಬಹಳ ಮೊಂಡು ಸ್ವಭಾವದವರು. ಆದರೆ ಸಿಕ್ಕಾಪಟ್ಟೆ ತಾಳ್ಮೆ ನಿಮ್ಮಲ್ಲಿದೆ.,ಅಷ್ಟೇ ಅಲ್ಲ ಭಾವನಾತ್ಮಕವಾಗಿರುತ್ತೀರಿ.ನೀವು ಪ್ರಣಯಾಸಕ್ತರು, ಕೂತೂಹಲವುಳ್ಳವರು, ಸೆಳೆಯುವ ವ್ಯಕ್ತಿತ್ವ ಉಳ್ಳವರೂ ಆಗಿರುತ್ತೀರಿ. ನಿಮಗೆ ಬಹಳ ಹಸಿವಾಗುತ್ತಾ ಇರುತ್ತೆ. ಹಾಗಾಗಿ ಆದಷ್ಟು ನಿಮ್ಮ ಕ್ಯಾಲೋರಿ ಕಡಿಮೆ ಮಾಡಿಕೊಳ್ಳಲು ನೀವು ಪ್ರಯತ್ನಿಸಬೇಕಾಗುತ್ತದೆ. ನಿಮ್ಮ ಉತ್ಸಾಹಿ ಪ್ರವೃತ್ತಿಯಿಂದಾಗಿ ಇಡೀ ಜಗತ್ತನ್ನೇ ಸೆಳೆಯುವ ಸಾಮರ್ಥ್ಯ ನಿಮ್ಮಲ್ಲಿದೆ.

 ನೀವು ಹುಟ್ಟಿದ್ದು ಮೇ 7 ನೇ ತಾರೀಖು

ನೀವು ಹುಟ್ಟಿದ್ದು ಮೇ 7 ನೇ ತಾರೀಖು

ನೀವು ಮೇ 7 ರಂದು ಹುಟ್ಟಿದ್ದರೆ ಬಹಳ ಬಲಶಾಲಿಗಳಾಗಿರುತ್ತೀರಿ ಮತ್ತು ಪ್ರಾಬಲ್ಯವುಳ್ಳವರಾಗಿರುತ್ತೀರಿ. ನೀವು ಪ್ರಕೃತಿ ಚಿತ್ರಕಾರರು, ನೀವು ತ್ಯಾಗಕ್ಕೆ ಮತ್ತೊಂದು ಹೆಸರು ಎಂದು ಹೇಳಬಹುದು. ನಿಮ್ಮನ್ನು ನೀವು ಬಹಳ ಪ್ರೀತಿಸುತ್ತೀರಿ. ನಿಮ್ಮ ಸಂಗಾತಿಯೊಡನೆ ನಿಮಗೆ ಯಾವುದೇ ಮನಸ್ಥಾಪಗಳಿರುವುದಿಲ್ಲ. ನೀವು ನಿಮ್ಮ ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಕಟ್ಟುನಿಟ್ಟಾಗಿರಬೇಕು ಮತ್ತು ಕೆಲಸದ ಬಗ್ಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕಾಗುತ್ತದೆ.

ನೀವು ಹುಟ್ಟಿದ್ದು ಮೇ 8 ನೇ ತಾರೀಖು

ನೀವು ಹುಟ್ಟಿದ್ದು ಮೇ 8 ನೇ ತಾರೀಖು

ನೀವು ಮೇ 8 ರಂದು ಹುಟ್ಟಿದ್ದೀರಾ, ಹಾಗಿದ್ದರೆ ನೀವು ನಿಮ್ಮ ಕುಟುಂಬದ ಹಳೆಯ ಆತ್ಮಗಳು. ನೀವು ಕೈಕಟ್ಟಿ ಕುಳಿತು ನಿಮ್ಮ ಕನಸುಗಳಿಗಾಗಿ ಕಾಯುತ್ತೀರಿ ಮತ್ತು ಕೆಲವು ಕೆಟ್ಟ ಮೆಥೆಡ್ ಗಳಿಂದಾಗಿ ಸೋಲುತ್ತೀರಿ. ನೀವು ನಿಮ್ಮ ಆರೋಗ್ಯದ ಬಗ್ಗೆ ಬಹಳ ಜಾಗರೂಕರಾಗಿರುತ್ತೀರಿ. ಹಾಗಾಗಿ ಒಳ್ಳೆಯ ಆಹಾರ ಸೇವನೆ ಮತ್ತು ನಿತ್ಯ ವ್ಯಾಯಾಮವನ್ನು ರೂಢಿಸಿಕೊಂಡಿರುತ್ತೀರಿ.

ನೀವು ಹುಟ್ಟಿದ್ದು ಮೇ 9 ನೇ ತಾರೀಖು

ನೀವು ಹುಟ್ಟಿದ್ದು ಮೇ 9 ನೇ ತಾರೀಖು

ನೀವು ಮೇ 9 ಕ್ಕೆ ಹುಟ್ಟಿದ್ದರೆ, ನಿಮ್ಮ ಮುಖಕ್ಕೆ ಹೊಡೆದು ಮಾತನಾಡುವ ಪ್ರವೃತ್ತಿ ಅಂದರೆ ಕೆಚ್ಚೆದೆಯ ದಿಟ್ಟ ಉತ್ತರಗಳು ನಿಮ್ಮನ್ನು ಸವಾಲುಗಳಿಗೆ ಒಡ್ಡುತ್ತೆ. ಕನಸನ್ನು ನನಸು ಮಾಡುವೆಡೆಗೆ ನಿಮ್ಮ ಪ್ರಯತ್ನವಿರುತ್ತೆ. ನೀವು ದೃಢ ಸ್ವಭಾವದವರು ಮತ್ತು ನಿಮ್ಮನ್ನು ಯಾರೂ ಸುಮ್ಮನೆ ತಳ್ಳಲು ಸಾಧ್ಯವಿಲ್ಲ.

ನೀವು ಹುಟ್ಟಿದ್ದು ಮೇ 10 ನೇ ತಾರೀಖು

ನೀವು ಹುಟ್ಟಿದ್ದು ಮೇ 10 ನೇ ತಾರೀಖು

ನೀವು ಚಾರ್ಮಿಂಗ್ ಉಳ್ಳವರು. ಆದರೆ ಮನೆಗೆ ಮಾರಿ ಊರಿಗೆ ಉಪಕಾರಿ ಅನ್ನೋ ಗಾದೆ ಕೇಳಿದ್ದೀರಲ್ಲ ಹಾಗೆ ಇರುವವರು. ಬಹಳ ತಾಳ್ಮೆ ಉಳ್ಳವರು, ತುಂಬಾ ಕೂಲ್ ಆಗಿ ಇರುತ್ತೀರಿ. ಆದರೆ ಮನೆಯ ಸದಸ್ಯರ ಜೊತೆಗಲ್ಲ ಬದಲಾಗಿ ಹೊರಗಿನವರ ಜೊತೆಗೆ ನೀವು ಬಹಳ ಒಳ್ಳೆಯವರು. ನಿಮಗೆ ನಿಮ್ಮ ಬಗ್ಗೆ ತುಂಬಾ ನಿರೀಕ್ಷೆಗಳಿರುತ್ತದೆ. ಸೋತಿರುವುದನ್ನು ಮತ್ತೆ ಗೆಲ್ಲಬೇಕು ಎಂದು ಆಲೋಚಿಸುತ್ತೀರಿ. ನೀವು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಆರೋಗ್ಯದ ದೃಷ್ಟಿಯಿಂದ ತಲೆನೋವು., ಒತ್ತಡ ನಿರ್ವಹಣೆ ಮಾಡುವುದು, ಜೀರ್ಣಕ್ರಿಯೆಗೆ ಸಂಬಂಧಿಸಿದ ಕಾಯಿಲೆಗಳು ನಿಮ್ಮನ್ನು ಆಗಾಗ ಬಾಧಿಸುತ್ತಲೇ ಇರುತ್ತೆ. ಯಾವುದೇ ಕಾರಣಕ್ಕೂ ಇವುಗಳ ಬಗ್ಗೆ ನಿರ್ಲಕ್ಷ್ಯ ತೋರಬೇಡಿ.

ನೀವು ಹುಟ್ಟಿದ್ದು ಮೇ 11 ನೇ ತಾರೀಖು

ನೀವು ಹುಟ್ಟಿದ್ದು ಮೇ 11 ನೇ ತಾರೀಖು

ನಿಮ್ಮನ್ನ ಸೂಕ್ಷ್ಮಮನಸ್ಸುಳ್ಳವರು ಎಂದು ನಂಬಲಾಗುತ್ತೆ. ನಂಬಿಕಸ್ತರು, ಪ್ರತ್ಯಕ್ಷಜನಿತರು. ನಿಮ್ಮ ಪ್ರಸಿದ್ಧಿಯನ್ನು ಮೀರಿ ಕೆಲವೊಮ್ಮೆ ತಾಳ್ಮೆ ಕಳೆದುಕೊಂಡು ಬಿಡುತ್ತೀರಿ. ನಿಮ್ಮನ್ನ ಬಲ್ಲವರಿಂದ ನೀವು ಸ್ವಾಮಿನಿಷ್ಟೆ ಮತ್ತು ಭಕ್ತಿಯನ್ನು ಬಯಸುತ್ತೀರಿ. ಈ ದಿನದಂದು ಹುಟ್ಟಿದವರನ್ನು ಕಲೆಗಾರರು ಎಂದು ಕರೆಯಲಾಗುತ್ತೆ. ಆರೋಗ್ಯದ ದೃಷ್ಟಿಯಿಂದ ಹೇಳುವುದಾದರೆ ಗಂಟಲಿನ ಸಮಸ್ಯೆ ಮತ್ತು ಅಸ್ತಮಾ ಕಾಯಿಲೆಗಳು ನಿಮ್ಮನ್ನ ಬಾಧಿಸುವ ಸಾಧ್ಯತೆಗಳಿರುತ್ತೆ. ಆಹಾರ ಕ್ರಮವನ್ನು ಶುದ್ಧವಾಗಿಟ್ಟುಕೊಳ್ಳಿ. ಆ ಮೂಲಕ ನೀವು ಆರೋಗ್ಯವಾಗಿರಲು ಸಾಧ್ಯ.

ನೀವು ಹುಟ್ಟಿದ್ದು ಮೇ 12 ನೇ ತಾರೀಖು

ನೀವು ಹುಟ್ಟಿದ್ದು ಮೇ 12 ನೇ ತಾರೀಖು

ಹುಟ್ಟಿನಿಂದಲೇ ನಾಯಕತ್ವದ ಗುಣವನ್ನು ಹೊಂದಿರುವವರು ಮೇ 12 ರಂದು ಹುಟ್ಟಿರುವವರು. ನೀವು ಯಾರನ್ನೂ ಒತ್ತಡಕ್ಕೆ ತಳ್ಳುವುದಿಲ್ಲ ಬದಲಾಗಿ ಜೀವನ ಅಂದರೆ ಏನು ಅನ್ನುವುದನ್ನು ನಿಮ್ಮದೇ ಆದ ದೃಷ್ಟಿಕೋನದಲ್ಲಿ ಮತ್ತೊಬ್ಬರಿಗೆ ತಿಳಿಸುವ ಪ್ರಯತ್ನ ಮಾಡುತ್ತೀರಿ. ಜೀವನದ ಪ್ರಮುಖ ವಿಚಾರಗಳಲ್ಲಿ ಬಹಳ ಸೀರಿಯಸ್ ಆಗಿರುತ್ತೀರಿ. ನಿಮ್ಮ ಜೀವನದಲ್ಲಿ ಸರಿಯಾದ ಕರಿಯರ್ ರೂಪಿಸಿಕೊಳ್ಳಬೇಕಾದರೆ ನೀವು ಹಲವು ದಾರಿಗಳಲ್ಲಿ ನಡೆಯಬೇಕಾಗುತ್ತದೆ. ನಿಮ್ಮ ಸರಿದಾರಿ ನಿಮಗೆ ಸಿಗಲು ಸಮಯ ಹಿಡಿಯುತ್ತೆ. ನೀವು ನಿರಾಶೆಗೊಳ್ಳಲು ಬಯಸುವುದಿಲ್ಲ . ನೀವು ಪ್ರೀತಿಸುವ ವ್ಯಕ್ತಿಯಿಂದ ಬಹಳ ಪ್ರೀತಿ ಮತ್ತು ಬೆಂಬಲವನ್ನು ಬಯಸುವ ನೀವು ಅವರ ಬೆಂಬಲದಿಂದ ಮುಂದೆ ಬರಲು ಪ್ರಯತ್ನಿಸುತ್ತೀರಿ

ನೀವು ಹುಟ್ಟಿದ್ದು ಮೇ 13 ನೇ ತಾರೀಖು

ನೀವು ಹುಟ್ಟಿದ್ದು ಮೇ 13 ನೇ ತಾರೀಖು

ನೀವು ಯಾವಾಗಲೂ ಪ್ರತ್ಯೇಕವಾಗಿರುತ್ತೀರಿ ಮತ್ತು ನಿಮ್ಮ ಕುಟುಂಬದಿಂದ ಯಾವಾಗಲೂ ಒಂದು ನಿರ್ದಿಷ್ಟ ದೂರವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತೀರಿ. ವ್ಯಕ್ತಿಗತವಾಗಿ ಹೇಳುವಾದದರೆ ನೀವು ಯಾವಾಗಲೂ ಗುಂಪಾಗಿ ಇರಲು ಇಚ್ಛಿಸುವುದಿಲ್ಲ. ನಿಮ್ಮ ಅಭಿಪ್ರಾಯಗಳು ಮತ್ತೊಬ್ಬರಿಗೆ ಅಷ್ಟೇನು ಹಿಡಿಸುವುದಿಲ್ಲ. ಆದರೆ ಇದು ನಿಮ್ಮನ್ನು ಯಾವತ್ತೂ ವಿಶ್ವಾಸವನ್ನು ಕುಂದಿಸುವುದಿಲ್ಲ. ನಿಮ್ಮ ಜೀವನದಿಂದ ನಿಮಗೆ ಏನು ಬೇಕು ಅನ್ನುವುದು ನಿಮಗೆ ಚೆನ್ನಾಗಿ ತಿಳಿದಿದೆ. ನೀವು ಬಹಳ ನಮ್ರತೆಯಿಂದ ಜೀವನ ನಡೆಸುತ್ತೀರಿ. ಕ್ರೀಯಾಶೀಲ ತಲೆಯುಳ್ಳವರು ನೀವಾಗಿದ್ದು, ನೀವೊಬ್ಬ ಸಂಶೋಧಕರೆನಿಸಲು ಅರ್ಹರು. ಮತ್ತೊಂದೆಡೆ ನಿಮ್ಮ ಗುರಿ ಸ್ಪಷ್ಟವಾಗಿರುತ್ತೆ, ನಿಮ್ಮ ಸೃಜನಶೀಲ ವ್ಯಕ್ತಿತ್ವವನ್ನು ಹೊರಗೆ ಹಾಕಲು ಉತ್ತಮ ದಾರಿಯನ್ನು ಹುಡುಕುತ್ತೀರಿ.

ನೀವು ಹುಟ್ಟಿದ್ದು ಮೇ 14 ನೇ ತಾರೀಖು

ನೀವು ಹುಟ್ಟಿದ್ದು ಮೇ 14 ನೇ ತಾರೀಖು

ನಿಮ್ಮ ಜನ್ಮದಿನಾಂಕ ಮೇ 14 ಆಗಿದ್ದರೆ ನೀವು ನಿರ್ಬಂಧನೆಗಳನ್ನು ಯಾವಾಗಲೂ ದ್ವೇಷಿಸುತ್ತೀರಿ. ಯಾವಾಗಲೂ ನಿಮ್ಮ ನಂಬಿಕೆಯುಳ್ಳ ದಾರಿಯಲ್ಲೇ ನೀವು ನಡೆಯುವುದು. ಅಂದರೆ ಆನೆ ನಡೆದದ್ದೇ ಹಾದಿ ಅನ್ನುವ ಸ್ವಭಾವ ನಿಮ್ಮದು. ನಿಮ್ಮ ಗೆಲುವನ್ನು ನೀವು ಬೇರೆಯವರೊಡನೆ ಹೋಲಿಕೆ ಮಾಡಲು ಬಯಸುವುದಿಲ್ಲ. ನಿಮ್ಮ ಕೆಲಸವನ್ನು ನೀವು ಮಾತ್ರ ಪೂರ್ಣಗೊಳಿಸಲು ಬಯಸುತ್ತೀರಿ. ನೀವು ಕೆಲಸ ಗಿಟ್ಟಿಸಿಕೊಳ್ಳಲು ನಿಮಗೆ ಹೆಚ್ಚು ಸಮಯ ಬೇಕಾಗುವುದಿಲ್ಲ. ಯಾಕೆಂದರೆ ನೀವು ಪ್ರತಿಭೆಯ ಮಹಾಪೂರ. ಆದರೆ ನಿಮಗೆ ಹಣದ ಬಗ್ಗೆ ಯಾವುದೇ ವ್ಯಾಮೋಹವಿಲ್ಲ. ಉಳಿತಾಯ, ಹೆಚ್ಚೆಚ್ಚು ಸಂಪಾದನೆ ಇದೆಲ್ಲ ನಿಮಗೆ ಬೇಕಾಗಿಲ್ಲ. ಒಂದು ಕೆಲಸ ನಿಮಗೆ ಖುಷಿ ಕೊಡಬೇಕು ಎಂದಷ್ಟೇ ಬಯಸುವ ನೀವು ಹಣದ ಬಗ್ಗೆ ಚಿಂತಿಸುವುದೇ ಇಲ್ಲ. ಅದೇ ಕಾರಣಕ್ಕೆ ನಿಮಗೆ ಹಣ ಬರುವಿಕೆ ಸ್ವಲ್ಪ ತಡ.

ನೀವು ಹುಟ್ಟಿದ್ದು ಮೇ 15 ನೇ ತಾರೀಖು

ನೀವು ಹುಟ್ಟಿದ್ದು ಮೇ 15 ನೇ ತಾರೀಖು

ಉತ್ತಮ ವಿಚಾರಗಳ ಬಗ್ಗೆ ನಿಮಗೆ ಆಸಕ್ತಿ ಹೆಚ್ಚು ಮತ್ತು ಕಲಾತ್ಮಕ ಹೃದಯ ನಿಮ್ಮದಾಗಿರುತ್ತೆ ಅಂದರೆ ನಿಮ್ಮ ಜನ್ಮ ದಿನಾಂಕ ಮೇ 15 ಆಗಿರುತ್ತೆ. ನಿಮ್ಮ ಸಾಧನೆಯ ಬಗ್ಗೆ ನಿಮಗೆ ಯಾವುದೇ ಹೊಗಳುವಿಕೆಯ ಅಗತ್ಯವಿಲ್ಲ. ನಿಮ್ಮ ಬಗ್ಗೆ ನೀವೇ ಹೆಚ್ಚು ಆತ್ಮವಿಶ್ವಾಸ ಹೊಂದಿರುತ್ತೀರಿ. ಮೊಂಡು ಸ್ವಭಾವ, ನಿರ್ಣಾಯಕ ಗುಣ,ಆದರ್ಶಾತ್ಮಕ ಸ್ವಭಾವ ನಿಮ್ಮದು. ನೀವು ಬೇಗನೆ ಒತ್ತಡಕ್ಕೆ ಒಳಗಾಗುತ್ತೀರಿ ಹಾಗಾಗಿ ನಿದ್ದೆಯ ಸಮಸ್ಯೆ ನಿಮ್ಮನ್ನ ಬಾಧಿಸುತ್ತೆ. ನೆನಪಿರಲಿ ನಿಮ್ಮ ಜೀವನದಿಂದ ಒತ್ತಡ ನಿವಾರಿಸಿಕೊಳ್ಳುವಂತ ಜೀವನಶೈಲಿಯನ್ನು ನೀವು ಅಳವಡಿಸಿಕೊಳ್ಳಬೇಕು. ನೀವು ಬಹಳ ಪ್ರತಿಭೆಯುಳ್ಳವರು ಅದೇ ಕಾರಣದಿಂದಾಗಿ ನಿಮಗೆ ಬೇಕಾಗ ಕರಿಯರ್ ರೂಪಿಸಿಕೊಳ್ಳಲು ನೀವು ಸಮಯ ತೆಗೆದುಕೊಳ್ಳಬೇಕಾಗುತ್ತದೆ.

ನೀವು ಹುಟ್ಟಿದ್ದು ಮೇ 16 ನೇ ತಾರೀಖು

ನೀವು ಹುಟ್ಟಿದ್ದು ಮೇ 16 ನೇ ತಾರೀಖು

ನಿಮ್ಮ ದೈಹಿಕ ಮತ್ತು ಭಾವನಾತ್ಮಕ ವಾತಾವರಣದಿಂದ ಪ್ರಭಾವಿತರಾಗುವವರು ಮೇ 16 ರಂದು ಹುಟ್ಟಿದವರು. ನಿಮ್ಮ ಜೀವನದ ಅನುಭವಗಳನ್ನು ಕಲಾತ್ಮಕವಾಗಿ ಅಥವಾ ಇತರೆ ನಿಮ್ಮ ಚಾಕಚಕ್ಯತೆಯಿಂದಾಗಿ ಇನ್ನೊಬ್ಬರಿಗೆ ತಿಳಿಸುವ ಸಾಮರ್ಥ್ಯ ನಿಮಗಿದೆ. ನಿಮಗೆ ರಾಜಿ ಮಾಡಿಕೊಳ್ಳುವುದು ಅಂದರೆ ಏನು ಅನ್ನುವುದೇ ತಿಳಿದಿಲ್ಲ. ನೀವು ಯಾರೊಡನೆಯೂ ರಾಜಿ ಮಾಡಿಕೊಳ್ಳಲು ಬಯಸುವುದಿಲ್ಲ. ದೇಹಕ್ಕೆ ವ್ಯಾಯಾಮವೇ ಇಲ್ಲದ ಕಾರಣ ಮತ್ತು ಆಹಾರದ ವಿಚಾರದಲ್ಲಿ ಬಹಳ ಚಪಲವುಳ್ಳರಾಗಿರುವುದರಿಂದಾಗಿ ಮೇ 16 ರಂದು ಹುಟ್ಟಿದವರು ಟೊಣಪು ಕಾಯದವರಾಗಿರುತ್ತಾರೆ. ಮತ್ತೆ ಅವರ ದೇಹಸ್ಥಿತಿ ತಹಬದಿಗೆ ಬರಬೇಕೆಂದರೆ ಬಹಳಷ್ಟು ವ್ಯಾಯಾಮದ ಅಗತ್ಯವಿರುತ್ತೆ. ಇನ್ನೊಬ್ಬರಿಂದ ಪ್ರೇರಣೆ ಇವರಿಗೆ ಬೇಕು. ಪ್ರೇರಣೆ ಇಲ್ಲದೇ ಇದ್ದರೆ ಮತ್ತೆ ಹಳೆಯ ಸ್ಥಿತಿಗೆ ತಲುಪುವುದು ಇವರ ಕೆಟ್ಟ ಗುಣ.

ನೀವು ಹುಟ್ಟಿದ್ದು ಮೇ 17 ನೇ ತಾರೀಖು

ನೀವು ಹುಟ್ಟಿದ್ದು ಮೇ 17 ನೇ ತಾರೀಖು

ಮೇ 17 ರಂದು ನಿಮ್ಮ ಜನನವಾಗಿದ್ದರೆ ನಿಮ್ಮದು ಬುದ್ಧಿವಂತಿಕೆಯ ಸ್ವಭಾವ. ನೀವು ಅಧಿಕಾರ ಇಲ್ಲದವರಾಗಿದ್ದರೂ ಕೂಡ ನಿಮಗೆ ಆ ಹಕ್ಕು ಬೇಕು ಎಂದು ಬಯಸುವವರು ನೀವು. ಹಣದ ವಿಚಾರದಲ್ಲಿ ಒಂದು ಕೆಜಿ ಭತ್ತವನ್ನು ಒಂದು ಕ್ವಿಂಟಾಲ್ ಮಾಡುವ ಸಾಮರ್ಥ್ಯ ನಿಮಗಿದೆ ಅಂದರೆ 10 ರುಪಾಯಿಯನ್ನು ನಿಮ್ಮ ಬುದ್ಧಿವಂತಿಕೆಯಿಂದ 100, 1000 ಹೀಗೆ ಹೆಚ್ಚಿಸುವ ಸಾಮರ್ಥ್ಯ ನಿಮಗಿದೆ. ನೀವು ಯಾವುದು ಬಲಿಷ್ಟ ಯಾವುದು ಬಲಿಷ್ಟವಲ್ಲ ಅನ್ನುವುದನ್ನು ಬಹಳ ಬೇಗ ಗುರುತಿಸುತ್ತೀರಿ.

ನೀವು ಹುಟ್ಟಿದ್ದು ಮೇ 18 ನೇ ತಾರೀಖು

ನೀವು ಹುಟ್ಟಿದ್ದು ಮೇ 18 ನೇ ತಾರೀಖು

ಮೇ 18 ರಂದು ಹುಟ್ಟಿದವರಿಗೆ ಅವರ ಬಗ್ಗೆ ಅವರಿಗೆ ಅಚ್ಚುಮೆಚ್ಚು. ತಮ್ಮನ್ನು ತಾವು ಬಹಳ ನೆಚ್ಚಿಕೊಳ್ಳುತ್ತಾರೆ, ಅಪ್ಪಿಕೊಳ್ಳುತ್ತಾರೆ. ನಿಮಗೆ ನಿಮ್ಮ ಗುರಿ ಸ್ಪಷ್ಟವಾಗಿರುತ್ತೆ ಮತ್ತು ಆ ಗುರಿಯ ವಿಚಾರದಲ್ಲಿ ನೀವು ದಿಟ್ಟ ನಿಲುವು ಹೊಂದಿರುತ್ತೀರಿ. ವ್ಯಯಕ್ತಿಯ ವಿಕಾಸದ ಬಗ್ಗೆ ನಿಮಗೆ ಬಹಳ ಒಲವು ಮತ್ತು ಇದು ನಿಮ್ಮ ಜೀವನದ ಸಾಧನೆಯ ಹಿತದೃಷ್ಟಿಯಿಂದ ಬಹಳ ಪ್ರಮುಖ ಪಾತ್ರ ವಹಿಸುತ್ತೆ. ನಿಮಗೆ ನಿಮ್ಮ ಸಂಗಾತಿಯಿಂದ ಏನು ಬೇಕು ಅನ್ನುವುದು ಸ್ಪಷ್ಟವಾಗಿದೆ. ನೀವು ಅದೇ ಕಾರಣಕ್ಕೆ ಕೂಡಲೇ ಮದುವೆಯಾಗಲು ಇಚ್ಛಿಸುವುದಿಲ್ಲ. ಅಷ್ಟೇ ಅಲ್ಲ, ಬಹಳ ಬೇಗನೆ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ನಿಮಗಿದೆ.

ನೀವು ಹುಟ್ಟಿದ್ದು ಮೇ 19 ನೇ ತಾರೀಖು

ನೀವು ಹುಟ್ಟಿದ್ದು ಮೇ 19 ನೇ ತಾರೀಖು

ನೀವು 19 ತಾರೀಕಿನ ಮೇ ತಿಂಗಳಲ್ಲಿ ಹುಟ್ಟಿದವರಾಗಿದ್ದರೆ ಬಹಳ ಬೇಗ ಉದ್ವೇಗಕ್ಕೆ ಒಳಗಾಗುತ್ತೀರಿ., ಪ್ರೀತಿಸುವ ವ್ಯಕ್ತಿತ್ವ ನಿಮ್ಮದು, ಕೆರಳಿಸುವ ಸ್ವಭಾವ ನಿಮ್ಮದು. ನಿಮ್ಮ ವಿರುದ್ಧ ನಡೆದುಕೊಳ್ಳುವುದು ಇತರರಿಗೆ ಬಹಳ ಕಠಿಣ. ಅತ್ಯಧ್ಬುತವಾದ ಕ್ರಿಯಾಶೀಲ ಕಲೆ ನಿಮ್ಮ ಶಕ್ತಿಯಾಗಿದೆ. ನೀವು ಗುಟ್ಟಿನಲ್ಲೇ ಗುರಿ ಹೊಂದಿರುತ್ತೀರಿ, ಮತ್ತು ದೊಡ್ಡ ದೊಡ್ಡ ಕನಸುಗಳನ್ನು ಕಾಣುತ್ತೀರಿ. ನೀವು ಮನುಷ್ಯತ್ವಕ್ಕೆ ಬೆಲೆ ನೀಡುತ್ತೀರೋ ಹೊರತು ಮನುಷ್ಯರ ಮನಿಗೆ ಹೆಚ್ಚು ಬೆಲೆ ಕೊಡುವವರಲ್ಲ.

ನೀವು ಹುಟ್ಟಿದ್ದು ಮೇ 20 ನೇ ತಾರೀಖು

ನೀವು ಹುಟ್ಟಿದ್ದು ಮೇ 20 ನೇ ತಾರೀಖು

ನೀವು ಎಷ್ಟು ಯಶಸ್ಸು ಹೊಂದಿದ್ದೀರಿ ಅನ್ನುವುದಲ್ಲ, ನಿಮ್ಮ ಯಶಸ್ಸಿನ ದಾರಿ ಯಾವುದು ಅನ್ನುವುದನ್ನು ನೀವು ಎಂದಿಗೂ ಮರೆಯುವುದಿಲ್ಲ ಮತ್ತು ಅದನ್ನು ಮತ್ತೊಬ್ಬರಿಗೆ ಮಾದರಿಯಾಗುವಂತೆ ತಿಳಿಸುತ್ತೀರಿ. ನೀವು ಮೇ 20 ರಂದು ಹುಟ್ಟಿದವರಾಗಿದ್ದರೆ,ವಿಶ್ವಾಸಾರ್ಹತೆಗೆ ಪ್ರಸಿದ್ಧಿ ಹೊಂದಿರುತ್ತೀರಿ ಮತ್ತು ಜವಾಬ್ದಾರಿಯನ್ನು ಹೊಂದಿರುತ್ತೀರಿ. ನಿಮ್ಮ ಇನ್ನೊಂದು ಪ್ರಮುಖ ಗುಣವೆಂದರೆ ನಿಮ್ಮ ಸಂಗಾತಿಯೊಡನೆ ನೀವು ಉತ್ತಮ ಬಾಂಧವ್ಯ ಹೊಂದಿರುತ್ತೀರಿ. ಇದಿಷ್ಟೇ ಇಲ್ಲ, ನೀವು ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದರಿಂದ ಆಗುವ ಲಾಭಗಳ ಬಗ್ಗೆ ಚೆನ್ನಾಗಿ ಅರಿತಿದ್ದೀರಿ.

ನೀವು ಹುಟ್ಟಿದ್ದು ಮೇ 21 ನೇ ತಾರೀಖು

ನೀವು ಹುಟ್ಟಿದ್ದು ಮೇ 21 ನೇ ತಾರೀಖು

ನೀವು ಮೇ 21ಕ್ಕೆ ಹುಟ್ಟಿದವರಾದರೆ ಯಾವಾಗಲೂ ಯಶಸ್ಸು ನಿಮ್ಮ ಬೆನ್ನಿಗೆ ಅಂಟಿಕೊಂಡೇ ಇರುತ್ತೆ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ನೀವು ಬಹಳ ತಲ್ಲೀನರಾಗಿರುತ್ತೀರಿ ಯಾಕಂದರೆ ನಿಮ್ಮ ಮಾತು ಇತರರಿಗೆ ಹಿತವೆನಿಸುತ್ತೆ ಮತ್ತು ಮಾತುಗಾರಿಕೆಯ ಕಲೆ ನಿಮಗೆ ದೇವರು ಕೊಡುವ ವರವಾಗಿದೆ. ಹುಟ್ಟಿನಿಂದಲೇ ನೀವು ಅತ್ಯದ್ಭುತ ಮಾತುಗಾರಿಕೆಯ ಕವಲೆ ಹೊಂದಿರುತ್ತೀರಿ. ಅದೇ ಕಾರಣಕ್ಕೆ ನೀವು ಯಾವುದೇ ಬ್ಯುಸಿನೆಸ್ ಗೆ ಕೈ ಹಾಕಿದರೂ ಜನ ನಿಮಗೆ ಮರುಳಾಗುತ್ತಾರೆ. ಪತ್ರಿಕೊದ್ಯಮ, ರಾಜಕೀಯ, ಬರಹಗಾರಿಕೆ ಇಂತಹ ಕ್ಷೇತ್ರಗಳಲ್ಲಿ ನೀವು ಬಹಳ ಪ್ರಸಿದ್ಧಿ ಹೊಂದುತ್ತೀರಿ.

ನೀವು ಹುಟ್ಟಿದ್ದು ಮೇ 22 ನೇ ತಾರೀಖು

ನೀವು ಹುಟ್ಟಿದ್ದು ಮೇ 22 ನೇ ತಾರೀಖು

ನೀವು ಮೇ 22 ರಂದು ಹುಟ್ಟಿದ್ದರೆ, ನಿಮ್ಮ ಸಮರ್ಪಣಾ ಮನೋಭಾವ ಮತ್ತು ಉದ್ದೇಶದ ಬಗ್ಗೆ ನಿಮಗಿರುವ ವಿವೇಚನೆಯಿಂದಾಗಿ ಇತರರಿಗೆ ನೀವು ನಿರ್ದಯಿಗಳಂತೆ ಭಾಸವಾಗುತ್ತೀರಿ. ನೀವು ಯಾವಾಗಲೂ ಮುನ್ನಡೆಯಲು ಬಯಸುತ್ತೀರಿ ಮತ್ತು ಆ ಮೂಲಕ ಹೊಸತನ್ನು ಕಲಿಯಲು ಇಚ್ಛಿಸುತ್ತೀರಿ. ಆಹಾರದ ವಿಚಾರದಲ್ಲಿ ನೀವು ಬಹಳ ಸಿಂಪಲ್. ಸೌಮ್ಯ ಆಹಾರಗಳೇ ನಿಮ್ಮ ಆಯ್ಕೆ. ಆದರೆ ನಿಮ್ಮ ಕ್ರಿಯೇಟೀವ್ ಆಗಿರುವ ಗುಣ ನಿಮ್ಮ ಕರಿಯರ್ ನಲ್ಲಿ ಅಷ್ಟೇನು ಸಹಾಯಕ್ಕೆ ಬರುವುದಿಲ್ಲ.

ನೀವು ಹುಟ್ಟಿದ್ದು ಮೇ 23 ನೇ ತಾರೀಖು

ನೀವು ಹುಟ್ಟಿದ್ದು ಮೇ 23 ನೇ ತಾರೀಖು

ಸಾಮಾನ್ಯವಾಗಿ ಮೇ 23 ರಂದು ಹುಟ್ಟಿದವರಿಗೆ ಒಂದು ದಿವ್ಯಶಕ್ತಿ ಇರುತ್ತೆ. ನಿಮಗೆ ಬೇರೆಯವರ ಗಮನವನ್ನು ನಿಮ್ಮೆಡೆಗೆ ಆಕರ್ಷಿಸುವ ಸಾಮರ್ಥ್ಯವಿದೆ.ನೀವು ತೀವ್ರ ಪ್ರಚಂಡರಾಗಿರುತ್ತೀರಿ ಮತ್ತು ಉದಾತ್ತ ಮನೋಭಾವದವರಾಗಿರುತ್ತೀರಿ. ನಿಮಗೆ ಆದ್ಯಾತ್ಮಿಕ ಆಸಕ್ತಿ ಇರುತ್ತೆ ಆದರೆ ಅದು ಹೆಚ್ಚಿನವರಿಗೆ ತಿಳಿದಿಲ್ಲ. ನಿಮ್ಮ ಬಳಿ ಹಲವು ಆಲೋಚನೆ ಮತ್ತು ಐಡಿಯಾಗಳಿರುತ್ತೆ ಅದರಲ್ಲೊಂದು ಉತ್ತಮ ಜೀವನ ನಡೆಸುವುದು. ನೀವು ನಿಮ್ಮನ್ನ ಪ್ರೀತಿಸುವವರನ್ನು ಬಹಳವಾಗಿ ಪ್ರೀತಿಸುತ್ತೀರಿ. ಚಾಲೆಂಜಿಂಗ್ ಸಂದರ್ಬವನ್ನು ಬಹಳ ನಾಜೂಕಾಗಿ ಎದುರಿಸುವ ಸಾಮರ್ಥ್ಯ ನಿಮ್ಮಲ್ಲಿದ್ದು, ನಿಮ್ಮವರನ್ನು ಬಹಳಷ್ಟು ಕೇರ್ ಫುಲ್ ಆಗಿ ನೀವು ನೋಡಿಕೊಳ್ಳುತ್ತೀರಿ.

ನೀವು ಹುಟ್ಟಿದ್ದು ಮೇ 24 ನೇ ತಾರೀಖು

ನೀವು ಹುಟ್ಟಿದ್ದು ಮೇ 24 ನೇ ತಾರೀಖು

ನೀವು ತುಂಬಾ ರೋಮ್ಯಾಂಟಿಕ್ ಆಗಿರುತ್ತೀರಿ ಮತ್ತು ಚಾರ್ಮಿಂಗ್ ಅಂದರೆ ಹೊಳಪಿನ ವ್ಯಕ್ತಿತ್ವ ಹೊಂದಿರುತ್ತೀರಿ. ನೀವು ಏಕಾಂಗಿಯಾಗಿ ಇರುವುದನ್ನು ದ್ವೇಷಿಸುತ್ತೀರಿ. ಆದರೆ ಇದೇ ಸಂದರ್ಭದಲ್ಲಿ ನೀವು ಬಹಳ ಒತ್ತಡಕ್ಕೆ ಒಳಗಾಗುತ್ತೀರಿ ಮತ್ತು ಆ ಒತ್ತಡದಿಂದ ಹೊರಬರಲು ಬಹಳ ಪ್ರಯತ್ನಿಸಬೇಕಾಗುತ್ತದೆ. ಅದರಲ್ಲೂ ಪ್ರಮುಖವಾಗಿ ನಿಮ್ಮ ಸಂಬಂಧದಲ್ಲಿ ನೀವು ಹೆಚ್ಚೆಚ್ಚು ಈ ಸಮಸ್ಯೆಯನ್ನು ಎದುರಿಸುತ್ತೀರಿ. ಆದ್ರೆ ನಿಮಗೊಂದು ಸ್ವತಂತ್ರ ವ್ಯಕ್ತಿತ್ವವಿದೆ. ಕ್ರಿಯೇಟೀವ್ ಐಡಿಯಾಗಳು ಮತ್ತು ಸಂಶೋಧನಾ ಐಡಿಯಾಗಳು ನಿಮ್ಮ ಬಳಿ ಬಹಳಷ್ಟಿರುತ್ತೆ.

ನೀವು ಹುಟ್ಟಿದ್ದು ಮೇ 25ನೇ ತಾರೀಖು

ನೀವು ಹುಟ್ಟಿದ್ದು ಮೇ 25ನೇ ತಾರೀಖು

ನೀವು ಬಹಳ ತಾಕತ್ತಿರುವವರಾಗಿರುತ್ತೀರಿ ಮತ್ತು ಗಮನ ಕೇಂದ್ರೀಕರಿಸುವಲ್ಲಿ ನಿಮ್ಮದು ಎತ್ತಿದ ಕೈ. ನೀವು ಜೀವನದಲ್ಲಿ ಬಹಳ ಖುಷಿಯಾಗಿರಲು ಇಚ್ಛಿಸುತ್ತೀರಿ. ನೀವು ನಿಮ್ಮ ಬಗ್ಗೆ ಮಾತ್ರ ಆಲೋಚಿಸುತ್ತೀರಿ ಮತ್ತು ನಿಮ್ಮದನ್ನು ನೀವು ನೋಡಿಕೊಂಡು ತಣ್ಣಗಿರುತ್ತೀರಿ. ನೀವು ನಿಮ್ಮ ಶಕ್ತಿಯನ್ನು ಬಹಳ ಕಡೆಗಳಲ್ಲಿ ವ್ಯಯಿಸಬೇಕಾಗುತ್ತದೆ . ಇವುಗಳ ಜೊತೆಗೆ ಯಶಸ್ಸಿಗೆ ಕಾರಣ ಕೇವಲ ಹಣ ಮಾತ್ರ ಅಲ್ಲ ಅನ್ನೋದನ್ನು ನೀವು ಭಾವಿಸುತ್ತೀರಿ. ಶ್ರಮಿಕ ಆಲೋಚನೆಗಳಿಂದಾಗಿ ನಿಮ್ಮ ಜೀವನ ಅತ್ಯುನ್ನತವಾಗಿರಲಿದೆ.

ನೀವು ಹುಟ್ಟಿದ್ದು ಮೇ 26 ನೇ ತಾರೀಖು

ನೀವು ಹುಟ್ಟಿದ್ದು ಮೇ 26 ನೇ ತಾರೀಖು

ನೀವು ಮೇ ತಿಂಗಳ 26 ನೇ ತಾರೀಖು ಹುಟ್ಟಿದ್ದರೆ ನಿಮ್ಮ ಬಾಯಿ ಬೊಂಬಾಯಿ ಎಂದು ಹೇಳಬಹುದು. ವಟವಟ ಅಂತ ಯಾವಾಗಲೂ ನಿಮಗೆ ಮಾತನಾಡುತ್ತಲೇ ಇರಬೇಕು, ನೀವು ಯಾವಾಗಲೂ ಜಾತ್ರೆಯಲ್ಲೇ ಇರಲು ಬಯಸುತ್ತೀರಿ ಅಂದರೆ ನಿಮ್ಮ ಸುತ್ತಮುತ್ತ ಜನಸಂದಣಿ ನಿಮಗೆ ಇರಲೇಬೇಕು. ಅವರ ಮಧ್ಯೆ ನಿಮ್ಮ ಮಾತು ನಡೆಯುತ್ತಲೇ ಸಾಗಬೇಕು. ಅಷ್ಟೇ ಅಲ್ಲೊಂದು ಕಾಲ್ಪನಿಕ ಲೋಕವನ್ನು ಸೃಷ್ಟಿಸಿ ಬಿಡುತ್ತೀರಿ ಅಂದರೆ ನಿಮ್ಮದು ಕಾಲ್ಪನಿಕತೆಗೆ ಹೆಚ್ಚು ಮಹತ್ವ ಇರುತ್ತೆ. ಆದರೆ ಹಣಕ್ಕೆ ನೀವು ಬಹಳ ಬೆಲೆ ಕೊಡುತ್ತೀರಿ. ಆದರೆ ಇದೇ ನಿಮಗೆ ಕೆಲವೊಮ್ಮೆ ಮತ್ತಷ್ಟು ಶ್ರಮ ಪಡುವಂತೆ ಮಾಡಿ ಬಿಡುತ್ತೆ. ಆದ್ರೆ ನಿಮಗೆ ಬೇಗನೆ ಸೆಟಲ್ ಆಗಬೇಕು ಅನ್ನುವ ಯಾವುದೇ ಆಲೋಚನೆಗಳಿರುವುದಿಲ್ಲ.

ನೀವು ಹುಟ್ಟಿದ್ದು ಮೇ 27 ನೇ ತಾರೀಖು

ನೀವು ಹುಟ್ಟಿದ್ದು ಮೇ 27 ನೇ ತಾರೀಖು

ನೀವು ಮೇ 27ನೇ ತಾರೀಖು ಜನಿಸಿದ್ದರೆ ನಿಮ್ಮ ಬಳಿ ಯಾರನ್ನೂ ಸುಳಿಯಲು ಬಿಡುವುದಿಲ್ಲ. ಅವರು ಎಷ್ಟೇ ಆಪ್ತರಿರಲಿ ಅವರನ್ನು ನೀವು ಸೇಫ್ ಡಿಸ್ಟೆನ್ಸ್ ನಲ್ಲಿ ಇಟ್ಟಿರುತ್ತೀರಿ. ನೀವು ನಿಮ್ಮ ಜೀವನದ ವಿಚಾರಗಳನ್ನು ಗುಟ್ಟಾಗಿ ಇಡಲು ಹೆಚ್ಚು ಇಚ್ಛಿಸುತ್ತೀರಿ. ನಿಮ್ಮ ದಾರಿ ನಿಮಗೆ ಸ್ಪಷ್ಟವಾಗಿರುತ್ತೆ. ಒಂದೇ ರೀತಿಯ ಕೆಲಸ, ವಿಚಾರ ಅಥವಾ ಯಾವುದೇ ಒಂದೇ ರೀತಿಯ ಸಂದರ್ಬಗಳು ನಿಮ್ಮನ್ನ ಬೇಗನೆ ಬೋರ್ ಆಗುವಂತೆ ಮಾಡುತ್ತೆ. ಆಗಾಗ ನಿಮ್ಮಲ್ಲಿ ಬದಲಾವಣೆಗಳನ್ನು ನೀವು ಬಯಸುತ್ತೀರಿ.

ನೀವು ಹುಟ್ಟಿದ್ದು ಮೇ 28 ನೇ ತಾರೀಖು

ನೀವು ಹುಟ್ಟಿದ್ದು ಮೇ 28 ನೇ ತಾರೀಖು

ನೀವು ಹುಟ್ಟಿದ್ದು ಮೇ 28 ನೇ ತಾರೀಖಾದರೆ, ನಿಮ್ಮದು ಸಭೆಯ ನಡುವೆ ನಿಮ್ಮನ್ನೇ ಎಲ್ಲರೂ ಗುರಿತಿಸುವಂತಾಗಬೇಕು ಅನ್ನುವ ವ್ಯಕ್ತಿತ್ವ., ನೀವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದನ್ನು ಬಹಳ ಇಷ್ಟಪಡುತ್ತೀರಿ. ನಾಜೂಕಾಗಿ ಮಾತನಾಡುವವರು ಮತ್ತು ಆಹಾರದ ಬಗ್ಗೆ ವಿವಿಧ ವಿಚಾರಗಳನ್ನು ತಿಳಿಸುವವರ ಬಗ್ಗೆ ನೀವು ಹೆಚ್ಚು ಆಸಕ್ತರಾಗಿರುತ್ತೀರಿ ಮತ್ತು ಅವರ ಜೊತೆ ಸ್ನೇಹಪೂರ್ವಕವಾಗಿ ಇರುತ್ತೀರಿ. ಬೆರಳಿನ ತುದಿಯಲ್ಲಿ ಕ್ರಿಯೇಟಿವಿಟಿ ಇರುವ ಜೀವನವನ್ನು ನೀವು ಆಯ್ದುಕೊಳ್ಳಲು ಬಯಸುತ್ತೀರಿ. ಹುಟ್ಟಿನಿಂದಲೇ ನೀವು ಕ್ರಿಯಾಶೀಲರಾಗಿರುತ್ತೀರಿ. ನೀವು ಬಹಳ ಫ್ರೀ ಆಗಿ ಎಲ್ಲರೊಡನೆ ಬೆರೆತು ಮಾತನಾಡುತ್ತೀರಿ. ಅಷ್ಟೇ ಅಲ್ಲ, ಕೌಟುಂಬಿಕವಾಗಿ ನೀವು ರೊಮ್ಯಾಂಟಿಕ್ ಆಗಿರುತ್ತೀರಿ., ನಂಬಿಕಸ್ಥ ಮತ್ತು ಆದ್ಮಾತ್ಮಿಕ ಮನೋಭಾವನೆ ಹೊಂದಿರುತ್ತೀರಿ. ನೀವು ಬೇರೆಯವರ ಬಗ್ಗೆ ಮನಸ್ಸಿನ ಆಳದಿಂದ ಜಾಗೃತೆ ವಹಿಸುತ್ತೀರಿ ಮತ್ತು ಬೇರೆಯವರಿಂದ ಬೇಗನೆ ಬೇಸರಗೊಂಡುಬಿಡುತ್ತೀರಿ. ಆರೋಗ್ಯದ ಬಗ್ಗೆ ಹೆಚ್ಚು ನಿಗಾ ವಹಿಸಿಕೊಳ್ಳಿ. ಅಸ್ತಮಾ, ಬ್ರಾಂಕೈಟೀಸ್ ನಂತ ಸಮಸ್ಯೆಗಳು ನಿಮ್ಮನ್ನು ಬಾಧಿಸುವ ಸಾಧ್ಯತೆಗಳಿರುತ್ತೆ.

ನೀವು ಹುಟ್ಟಿದ್ದು ಮೇ 29ನೇ ತಾರೀಖು

ನೀವು ಹುಟ್ಟಿದ್ದು ಮೇ 29ನೇ ತಾರೀಖು

ನೀವು ಹುಟ್ಟಿದ ದಿನಾಂಕ ಮೇ 29 ತಾರೀಖಾಗಿದ್ದರೆ, ನಿಮಗೆ ನಕ್ಷತ್ರದಂತೆ ಮಿನುಗುವ ಗುಣಗಳಿರುತ್ತೆ , ಇದು ಬೇರೆಯವರನ್ನು ಥಟ್ಟಂತ ಸೆಳೆದು ಬಿಡುತ್ತೆ. ಹೊಸತನ್ನು ಕಲಿಯಬೇಕು ಅನ್ನುವುದರ ಬಗ್ಗೆ ನಿಮಗೆ ಬಹಳ ಕುತೂಹಲ. ಕ್ಲಿಷ್ಟಕರವಾದ ಪ್ರವೃತ್ತಿಯನ್ನ ನೀವು ಹೊಂದಿರುತ್ತೀರಿ. ಹಾಗಾಗಿ ಬಹಳ ವಿಚಾರಗಳು ನಿಮ್ಮನ್ನ ಆಗಾಗ ಕಾಡುತ್ತವೆ ಅದೇ ಕಾರಣಕ್ಕೆ ಹೊಸ ವಿಚಾರ ನಿಮ್ಮ ಮುಂದೆ ತೆರೆದುಕೊಳ್ಳುತ್ತೆ. ಸಾಧನೆಗಾಗಿ ನೀವು ಬಹಳ ಪರಿಶ್ರಮ ಪಡಬೇಕು. ಒಂದು ಖುಷಿ ಪಡುವ ವಿಚಾರವೇನೆಂದರೆ, ನೀವು ಬೇಕಾದ್ದು, ಬೇಡದೆ ಇರೋದು ಏನೇ ತಿಂದರೂ ಸ್ಲಿಮ್ ಆಗಿ ತೆಳ್ಳಗೆ ಇರುತ್ತೀರಿ. ಹಾಗಾಗಿ ನಿಮ್ಮನ್ನ ನೋಡಿದವರು ಎಷ್ಟು ತೆಳು ಇದ್ದಾರೆ ಅಂತ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಾರೆ.

ನೀವು ಹುಟ್ಟಿದ್ದು ಮೇ 30 ನೇ ತಾರೀಖು

ನೀವು ಹುಟ್ಟಿದ್ದು ಮೇ 30 ನೇ ತಾರೀಖು

ಮೇ ತಿಂಗಳ ಕೊನೆಯಲ್ಲಿ ಅಂದರೆ 30 ನೇ ತಾರಿಕಿಗೆ ನೀವು ಹುಟ್ಟಿದ್ದರೆ ನಿಮ್ಮದು ಬಹಳ ಬುದ್ದಿವಂತಿಕೆಯ ಗುಣ,ತೊಂದರೆ ನಿಮ್ಮನ್ನ ಮೈ ಮೇಲೆ ಎಳೆದುಕೊಳ್ಳುವಂತೆ ಮಾಡುವ ಸಂದರ್ಬಗಳು ಹೆಚ್ಚು. ನೀವು ಹಣಗಳಿಸುವವರಲ್ಲ. ನಿಮಗೆ ಸಾಕಷ್ಟು ಹಣ ಗಳಿಸುವ ಅವಕಾಶಗಳು ಕೈಗೆಟುಕಿದರೂ ಅದನ್ನು ಉಪಯೋಗಿಸಿಕೊಳ್ಳದೆ ಹಣದ ವಿಚಾರದಲ್ಲಿ ನೀವು ಹಿಂದೇಟು ಹಾಕುತ್ತೀರಿ. ಇನ್ನೂ ಸಮಯವಿದೆ ಅನ್ನುವ ಮನಸ್ಥಿತಿ ನಿಮ್ಮದು. ಕಾಲವೇ ಎಲ್ಲವನ್ನೂ ನಿರ್ಧರಿಸುತ್ತೆ ಅಂತ ಬಿಟ್ಟುಬಿಡುತ್ತೇವಲ್ಲ ಹಾಗೆ, ಪ್ರತಿಯೊಂದನ್ನೂ ಕಾಲದ ನಿರ್ಣಯಕ್ಕೆ ಬಿಡುವ ಜಾಯಮಾನ ನಿಮ್ಮದು.,

ನೀವು ಹುಟ್ಟಿದ್ದು ಮೇ 31 ನೇ ತಾರೀಖು

ನೀವು ಹುಟ್ಟಿದ್ದು ಮೇ 31 ನೇ ತಾರೀಖು

ಒಂದು ವೇಳೆ ನೀವು ಮೇ 31 ರಂದು ಹುಟ್ಟಿದವರಾಗಿದ್ದರೆ ನಿಮ್ಮ ಬೀದಿಯಲ್ಲಿ ಇಲ್ಲವೇ ನಿಮ್ಮ ಜಾಗದಲ್ಲಿ ನೀವೇ ಪ್ರಸಿದ್ಧಿ ಪಡೆದವರು. ನಿಮ್ಮ ಸೌಂದರ್ಯ, ನಿಮ್ಮ ಟ್ಯಾಲೆಂಟ್, ನಿಮ್ಮ ಗುಣಗಳು, ನಿಮ್ಮ ವ್ಯಕ್ತಿತ್ವ ಇವೆಲ್ಲವೂ ನಿಮ್ಮನ್ನ ಪ್ರಸಿದ್ಧರಾಗುವಂತೆ ಮಾಡಿರುತ್ತೆ. ನೀವು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ನಿಮ್ಮ ಅಸಾಧಾರಣ ವ್ಯಕ್ತಿತ್ವ ನಿಮಗೆ ನೀವು ಭದ್ರರಾಗಿದ್ದೀರಿ ಅನ್ನುವ ಭಾವನೆಯನ್ನು ನೀಡುತ್ತಿರುತ್ತೆ. ನಿಮ್ಮ ಜೀವನ ಹೇಗೆ ಬರುತ್ತೋ ಹಾಗೆ ನಡೆಸಲು ನೀವು ಸಿದ್ಧರಿರುತ್ತೀರಿ. ಹಾಲಲ್ಲಾದರೂ ಹಾಕು ಶಿವ, ನೀರಲ್ಲಾದರೂ ಹಾಕು ಶಿವ, ಹಾಲಲ್ಲಿ ಹಾಲಾಗಿ, ನೀರಲ್ಲಿ ನೀರಾಗಿ ಬದುಕಿಬಿಡುವೆ ಶಿವ ಅನ್ನೋ ಮನೋಸ್ಥಿತಿಯವರು ನೀವು.

Read more about: life
English summary

your-birth-month-may-here-is-what-you-need-to-know

your-birth-month-may-here-is-what-you-need-to-know
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more