For Quick Alerts
ALLOW NOTIFICATIONS  
For Daily Alerts

  ಮೇ 21 ರಿಂದ ಮೇ 27 ರ ವರೆಗಿನ ನಿಮ್ಮ ರಾಶಿಗನುಗುಣವಾದ ವಾರ ಭವಿಷ್ಯ ಹೀಗಿರಲಿದೆ

  By Sushma Charhra
  |

  ಸೋಮವಾರದ ಆರಂಭದ ದಿನ , ಈ ವಾರದ ಎಲ್ಲಾ ದಿನವೂ ಮಂಗಳಕರವಾಗಿರಲಿ ಎಂದು ಆಶಿಸೋಣ. ಆದರೂ ಏನಾಗುತ್ತೆ ಎಂದು ಹೇಳೋಕೆ ಆಗಲ್ಲ. ಆದರೂ ಈ ವಾರ ಏನೇನಾಗಬಹುದು ಎಂಬುದರ ಸೂಚನೆಯನ್ನು ನಿಮ್ಮ ರಾಶಿಗೆ ಅನುಗುಣವಾಗಿ ನಾವಿಲ್ಲಿ ನಿಮ್ಮ ಮುಂದೆ ತೆರೆದಿಡಲಿದ್ದೇವೆ. ಜ್ಯೋತಿಷ್ಯ ತಜ್ಞರು ವಿವರಿಸುವಂತೆ ಯಾವ ರಾಶಿಯವರಿಗೆ ಯಾವ ಫಲ ಈ ವಾರ ಇದೆ ಎಂಬುದರ ಮಾಹಿತಿಯ ಲೇಖನ ಇದು. ನಿಮ್ಮ ರಾಶಿ ಯಾವುದು ಮತ್ತು ಈ ವಾರ ನೀವು ಹೇಗಿರಬೇಕು ಎಂಬುದನ್ನು ಇಲ್ಲಿ ತಿಳಿದು ನೋಡಿಕೊಳ್ಳಿ.

  ಮೇಷ ( ಮೇ 21 – ಎಪ್ರಿಲ್ 19)

  ಮೇಷ ( ಮೇ 21 – ಎಪ್ರಿಲ್ 19)

  ಮೇಷ ರಾಶಿಯವರು ಈ ವಾರ ಸ್ವಲ್ಪ ಉಲ್ಲಾಸಭರಿತರಾಗಿರುತ್ತೀರಿ. ಬೇರೆಯವರಿಗೆ ಸಹಾಯ ಮಾಡುವ ಅವಕಾಶವನ್ನು ಒದಗಿಸಿ ಕೊಟ್ಟು ನಿಮಗೆ ನೀವು ಮಾಡಿದ ಕೆಲಸದ ಬಗ್ಗೆ ತೃಪ್ತಿ ನೀಡುವ ವಾರ ಇದು. ಸಹಾಯ ಪಡೆದವರು ನಿಮ್ಮನ್ನು ಒಂದು ರೀತಿ ದೇವತೆಗಳಂತೆ ಇಲ್ಲವೇ ದೇವರಂತೆ ಕಾಣುತ್ತಾರೆ. ಒಟ್ಟಾರೆಯಾಗಿ ನೀವು ಈ ವಾರ ಅಗತ್ಯವಿರುವಲ್ಲಿ ಸಹಾಯ ಮಾಡಿ ಸಂತೋಷ ಪಡುತ್ತೀರಿ.

  ವೃಷಭ (ಎಪ್ರಿಲ್ 20 – ಮೇ 20)

  ವೃಷಭ (ಎಪ್ರಿಲ್ 20 – ಮೇ 20)

  ವೃಷಭ ರಾಶಿಯವರಿಗೆ ಈ ವಾರ ತಮಾಷೆ ಮಾಡಲು ಅವಕಾಶವಿದೆ. ಆದರೆ ನೆನಪಿಡಿ., ವಾರದ ಪ್ರಾರಂಭದಲ್ಲಿ ಮಾಡಿದ ತಮಾಷೆ ವಾರಾಂತ್ಯದ ಹೊತ್ತಿಗೆ ಗಂಭೀರ ಸ್ವರೂಪ ಪಡೆದುಬಿಡಬಹುದು. ಯಾರು ಅತ್ಯಂತ ಹೆಚ್ಚು ತಮಾಷೆ ಮಾಡಿದ್ದಾರೋ, ಅವರಿಗೆ ಹೆಚ್ಚಿನ ಗಂಭೀರವಾದ ವಿಚಾರ ಕಾಡಿಬಿಡಬಹುದು. ಜೀವನದ ಕತ್ತಲಲ್ಲೂ ಖುಷಿಯನ್ನು ಅರಸುವ ಪರಿಸ್ಥಿತಿಯನ್ನು ನೀವಾಗೇ ತಂದುಕೊಳ್ಳಬೇಡಿ.

  ಮಿಥುನ ( ಮೇ 21 – ಜೂನ್ 20)

  ಮಿಥುನ ( ಮೇ 21 – ಜೂನ್ 20)

  ಆಧ್ಯಾತ್ಮಿಕ ಮತ್ತು ಕಲಾತ್ಮಕ ಕಾರ್ಯಕ್ರಮಗಳಿಗಾಗಿ ಹೆಚ್ಚಿನ ಹಣವನ್ನು ನೀಡುವ ನಿರ್ಧಾರವನ್ನು ಮಿಥುನ ರಾಶಿಯವರು ಈ ವಾರ ಕೈಗೊಳ್ಳಬಹುದು.ಈ ವಾರ ನಿಮಗೆ ಬಲವಾದ ಬೆಂಬಲ ನೀಡುವ ಮಾತುಗಳು, ತಾಳ್ಮೆಯ ನುಡಿಗಳು ಧನಾತ್ಮಕವಾಗಿ ನಿಮ್ಮನ್ನು ಹುರಿದುಂಬಿಸಿ ಯಶಸ್ಸಿನೆಡೆಗೆ ಕೊಂಡೊಯ್ಯಲಿದೆ.

  ಕರ್ಕಾಟಕ (ಜೂನ್ 21 – ಜುಲೈ 22)

  ಕರ್ಕಾಟಕ (ಜೂನ್ 21 – ಜುಲೈ 22)

  ಕರ್ಕಾಟಕ ರಾಶಿಯವರಿಗೆ ನೀಡಲಾಗಿರುವ ಕೆಲಸದ ಜಬಾವ್ದಾರಿಯನ್ನು ನೀವೇ ಹೊತ್ತುಕೊಂಡಿದ್ದು, ಹಿಂದೆಲ್ಲ ಪರಿಶ್ರಮ ವಹಿಸಿ ದುಡಿದಿದ್ದರೆ, ಆ ಕೆಲಸವು ಅಂತಿಮವಾಗಿ ಏಳಿಗೆಯಾಗಿ ಪೂರ್ಣಗೊಳ್ಳುವ ವಾರ ಇದು.ಕೆಲವು ವಿಚಾರಗಳಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ.ಆದರೆ ಜೀವನದ ಕೆಲವು ವಿಚಾರಗಳಿಗೆ ನಿಮ್ಮ ಕೆಲವು ತತ್ವಗಳಿಗೆ ಬದ್ಧರಾಗಿರುವುದು ಉತ್ತಮವೇ ಸರಿ.

  ಸಿಂಹ ( ಜುಲೈ 23- ಅಗಸ್ಟ್ 23)

  ಸಿಂಹ ( ಜುಲೈ 23- ಅಗಸ್ಟ್ 23)

  ಸಿಂಹ ರಾಶಿಯವರೇ ಆಕರ್ಷಣೆಯ ಕೇಂದ್ರಬಿಂದುವಾಗಿರುತ್ತೀರಿ ಮತ್ತು ನಿಮ್ಮ ಬಗ್ಗೆ ಹೊಟ್ಟೆಕಿಚ್ಚು ಪಡುವವರನ್ನು ಈ ವಾರ ನೀವು ಗಮನಿಸಬಹುದಾಗಿದೆ. ಕೆಲವರಿಗೆ ಕೆಲವರು ಖುಷಿಯಾಗಿರುವುದನ್ನು ನೋಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಅವರು ಹೊಟ್ಟೆಕಿಚ್ಚಿನಿಂದ ಅವರ ಕೆಡುಕನ್ನು ಬಯಸುತ್ತಾರೆ. ನಿಮ್ಮ ಕುಟುಂಬದ ಜೊತೆ, ಮಕ್ಕಳು ಮತ್ತು ಸಹಪಾಠಿಗಳ ಜೊತೆ ಈ ವಾರ ಉತ್ತಮ ಸಮಯವನ್ನು ಕಳೆಯುತ್ತೀರಿ.

  ಕನ್ಯಾ ( ಅಗಸ್ಟ್ 24- ಸೆಪ್ಟೆಂಬರ್ 23)

  ಕನ್ಯಾ ( ಅಗಸ್ಟ್ 24- ಸೆಪ್ಟೆಂಬರ್ 23)

  ಗಾಳಿಯಲ್ಲಿ ತೇಲುವಂತ ಪ್ರೀತಿಯ ಅನುಭವವನ್ನು ಕನ್ಯಾ ರಾಶಿಯವರು ಈ ವಾರ ಪಡೆಯುತ್ತೀರಿ. ಹಾಗಾಗಿ ನಿಮಗೆ ಅಂತಹ ಸಂತೋಷವನ್ನು ನೀಡುವ ವ್ಯಕ್ತಿಯ ಜೊತೆ ಸಮಯ ಕಳೆಯಲು ನೀವು ರೆಡಿಯಾಗಿರಬೇಕು. ನಿಮ್ಮ ಸಹಪಾಠಿಗಳಿಂದ ಸಿಗುವ ಸಹಕಾರ ಮತ್ತು ಪ್ರೊತ್ಸಾಹ ನಿಮಗೆ ಈ ವಾರ ಸ್ಪೂರ್ತಿಯಾಗಲಿದೆ.

  ತುಲಾ ( ಸೆಪ್ಟೆಂಬರ್ 24- ಅಕ್ಟೋಬರ್ 23)

  ತುಲಾ ( ಸೆಪ್ಟೆಂಬರ್ 24- ಅಕ್ಟೋಬರ್ 23)

  ತುಲಾ ರಾಶಿಯವರು ಈ ವಾರ ಭಾವೋದ್ರಿಕ್ತವಾಗಿರುತ್ತೀರಿ. ಒಂದು ರೀತಿಯ ಕ್ರಾಂತಿ ಎಂದೇ ಹೇಳಬಹುದು. ಯಾವುದೇ ವಿಚಾರಕ್ಕೂ ಹೆದರುವ ಅಗತ್ಯವಿಲ್ಲ. ಸಾಕಷ್ಟು ಉತ್ತಮ ಕಲ್ಪನೆಗಳಿಂದ ಕೂಡಿರುತ್ತೀರಿ. ನಿಮಗೊಂದು ಅಪರೂಪದ ಅವಕಾಶಗಳು ಈ ವಾರ ಲಭ್ಯವಾಗಲಿದೆ. ಜವಾಬ್ದಾರಿ ಮತ್ತು ಬದ್ಧತೆಗಳಿಗೆ ನೀವು ಈ ವಾರ ಹೆದರುವ ಅಗತ್ಯವಿಲ್ಲ.

  ವೃಶ್ಚಿಕ ( ಅಕ್ಟೋಬರ್ 24 ರಿಂದ ನವೆಂಬರ್ 22)

  ವೃಶ್ಚಿಕ ( ಅಕ್ಟೋಬರ್ 24 ರಿಂದ ನವೆಂಬರ್ 22)

  ವೃಶ್ಚಿಕ ರಾಶಿಯವರು ಈ ವಾರ ತಮ್ಮ ಪೋಷಕರ ಬಗ್ಗೆ ಅಥವಾ ತಮ್ಮ ಸಂಗಾತಿಯ ಬಗ್ಗೆ ಕನಸು ಕಾಣುತ್ತಿರುತ್ತಾರೆ. ಈ ವಾರ ನೀವು ಹೊಸ ಆವಿಷ್ಕಾರಗಳಿಗೆ ಸಾಕ್ಷಿಯಾಗುತ್ತೀರಿ ಮತ್ತು ಅದರ ಜೊತೆಗೆ ನೀವು ಸಾಗಬೇಕಾಗುತ್ತದೆ. ಕರಿಯರ್, ಕುಟುಂಬ, ಗೌರವ ಇತ್ಯಾದಿಗಳ ವಿಚಾರಕ್ಕಾಗಿ ನಿಮ್ಮ ನಿರ್ಧಾರಗಳು ಬಲವಾಗಿರಲಿವೆ., ವಾರಾಂತ್ಯದಲ್ಲಿ ನಿಮ್ಮ ಆಲೋಚನೆಗಳು ಹೊಸ ಗೆಳೆಯರ ಬಳಗವನ್ನು ಹುಟ್ಟುಹಾಕಬಹುದಾಗಿದೆ.

  ಧನು( ನವೆಂಬರ್ 23 – ಡಿಸೆಂಬರ್ 22)

  ಧನು( ನವೆಂಬರ್ 23 – ಡಿಸೆಂಬರ್ 22)

  ಧನು ರಾಶಿಯವರು ತಮ್ಮ ಮನಸ್ಸಿನ ಕೆಲಸಗಳಿಗಾಗಿ ಈ ವಾರ ಸ್ವಲ್ಪ ತಮ್ಮ ಸಮಯವನ್ನು ಮೀಸಲಿಡಬೇಕಾಗುತ್ತದೆ. ಹಿಂದೆ ನಡೆದ ಕೆಲಸದ ಬಗ್ಗೆ ವಿಮರ್ಷೆ ಮಾಡಿಕೊಂಡರೆ ಈ ವಾರದ ಭವಿಷ್ಯ ಉತ್ತಮವಾಗಿರಲಿದೆ. ಇದು ನಿಮ್ಮ ತಪ್ಪುಗಳನ್ನು ತಪ್ಪಿಸಿಕೊಳ್ಳಲು ಮಾಡಬೇಕಾಗಿರುವ ಕೆಲಸವಾಗಿದೆ. ವಿಶ್ರಾಂತಿ ತೆಗೆದುಕೊಳ್ಳಲು ಸಮಯ ನೀಡಬೇಕು,

  ಮಕರ ( ಡಿಸೆಂಬರ್ 23 – ಜನವರಿ 20)

  ಮಕರ ( ಡಿಸೆಂಬರ್ 23 – ಜನವರಿ 20)

  ಮಕರ ರಾಶಿಯವರು ತಮ್ಮ ವ್ಯಾಪಾರ ಮತ್ತು ಸಂತೋಷ ಒಟ್ಟುಗೂಡಿಸಬಹುದಾದ ವಾರ ಇದು. ಸಾಕಷ್ಟು ವಿಚಾರಗಳಿಗಾಗಿ ನೀವು ಈ ವಾರ ಕಾತುರರಾಗಿರುತ್ತೀರಿ. ಕೆಲಸದ ವಿಚಾರದಲ್ಲಿ ಮನಃಶಾಂತಿ ಇದೆ ಮತ್ತು ಜೀವನ ಸುಖಮಯವಾಗಿರಲಿದೆ.

  ಕುಂಭ ( ಜಲವರಿ 21- ಫೆಬ್ರವರಿ 18)

  ಕುಂಭ ( ಜಲವರಿ 21- ಫೆಬ್ರವರಿ 18)

  ಕುಂಭ ರಾಶಿಯವರಿಗೆ ಈ ವಾರದಲ್ಲಿ ಗೆಳೆತನ ಮತ್ತು ಪ್ರೀತಿಯ ನಡುವೆ ಒಂದು ಸಣ್ಣ ಪರದೆ ಇರಲಿದೆ. ಈ ವಾರ ಪ್ರಕಾಶಿಸುವಂತಹ ಹೊಸ ವ್ಯಕ್ತಿಯೊಬ್ಬರನ್ನು ನೀವು ಕಾಣುತ್ತೀರಿ . ಇದನ್ನು ಹೊರತು ಪಡಿಸಿದರೆ, ಯಾವುದು ನಿಮ್ಮ ದಾರಿಯಲ್ಲಿ ಬದಲಿದೆ ಎಂಬುದನ್ನು ನೋಡುತ್ತಿರಬೇಕು ಮತ್ತು ಪ್ರೀತಿಯೇ ಗೆಳೆತನವಾಗಿರಬಹುದು. ಅದು ಬೆಂಕಿಯಂತೆ ಪ್ರಜ್ವಲಿಸುತ್ತಲೂ ಇರಬಹುದು.

  ಮೀನ ( ಫೆಬ್ರವರಿ 19- ಮಾರ್ಚ್ 20)

  ಮೀನ ( ಫೆಬ್ರವರಿ 19- ಮಾರ್ಚ್ 20)

  ಈ ವಾರ ಮೀನ ರಾಶಿಯವರು ಸಾಮಾಜಿಕವಾಗಿ ಗುರುತಿಸಿಕೊಳ್ಳುತ್ತೀರಿ. ನೀವು ಏನು ಅಂದುಕೊಂಡಿರುತ್ತೀರೋ ಅದಕ್ಕಿಂತ ಹೆಚ್ಚೇ ಗುರುತಿಸಿಕೊಳ್ಳಲ್ಪಡುತ್ತೀರಿ. ಯಾವುದಾದರೂ ವಿಷಯವನ್ನು ಗುಟ್ಟಾಗಿ ಇಡಬೇಕು ಎಂದುಕೊಂಡಿದ್ದರೆ ಸಾಕಷ್ಟು ಜಾಗರೂಕತೆಯಿಂದ ನಿಮ್ಮ ಉತ್ತರಗಳನ್ನು ಇತರರಿಗೆ ನೀಡಬೇಕಾಗುತ್ತದೆ. ಇಲ್ಲದಿದ್ದರೆ ನಿಮ್ಮ ಗುಟ್ಟು ರಟ್ಟಾಗಿ ಬಿಡಬಹುದು. ಇದನ್ನು ಹೊರತು ಪಡಿಸಿದರೆ ಕೆಲವರಿಗೆ ಹಿಂಸೆ ಅನ್ನಿಸುವ ಮೇಲಾಧಿಕಾರಿಗಳಿಂದ ಕಿರಿಕಿರಿಯಾಗಬಹುದು., ಆದರೆ ಇನ್ನೂ ಕೆಲವರಿಗೆ ಈ ವಾರ ಗೌರವಾನ್ವಿತವಾಗಿರಬಹುದು..

  English summary

  these-are-your-weekly-predictions-for-21st-may-27th-ma

  these-are-your-weekly-predictions-for-21st-may-27th-ma
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more