For Quick Alerts
ALLOW NOTIFICATIONS  
For Daily Alerts

ಶೋಕಿಗಾಗಿ ಅಂಕೆಯಿಲ್ಲದೆ ಖರ್ಚು ಮಾಡುವ ವ್ಯಕ್ತಿಗಳು ಇವರಾಗಿರುತ್ತಾರೆ.

|

ದುಡಿಯುವುದು, ಅಗತ್ಯಕ್ಕೆ ತಕ್ಕಂತೆ ಖರ್ಚು ಮಾಡುವುದು ಸಾಮಾನ್ಯವಾದದ್ದು. ದುಡಿಯುವುದೇ ನಮ್ಮ ಖರ್ಚಿಗೆ. ಭವಿಷ್ಯದ ದೃಷ್ಟಿಯಿಂದ ದುಡಿದ ಹಣದಲ್ಲಿ ಸ್ವಲ್ಪ ಉಳಿತಾಯ ಮಾಡಬೇಕು. ಇಲ್ಲವಾದರೆ ತುರ್ತು ಪರಿಸ್ಥಿತಿ ಎದುರಾದಾಗ ಇತರರ ಮುಂದೆ ಕೈ ಚಾಚ ಬೇಕಾಗುವ ಅನಿವಾರ್ಯತೆಗಳು ಎದುರಾಗುವುದು. ಆ ದೃಷ್ಟಿಯಿಂದಲೇ ಅನೇಕರು ತಾವು ದುಡಿದ ಹಣದಲ್ಲಿ ಅರ್ಧದಷ್ಟು ಹಣವನ್ನು ಉಳಿತಾಯಕ್ಕಾಗಿಯೇ ಮೀಸಲಿಟ್ಟಿರುತ್ತಾರೆ. ಇನ್ನೂ ಕೆಲವರು ಉಳಿತಾಯದ ಬಗ್ಗೆ ಕೊಂಚವೂ ಚಿಂತನೆಯನ್ನೇ ನಡೆಸುವುದಿಲ್ಲ.

ಹೌದು, ಕೆಲವರು ತಾವು ಏನು ದುಡಿಯುತ್ತೇವೆಯೋ ಆ ಹಣದಲ್ಲಿ ಮನಸ್ಸಿಗೆ ಇಷ್ಟವಾದದ್ದನ್ನು ಖರೀದಿಸುತ್ತಾರೆ. ಮನ ಬಯಸಿರುವುದಕ್ಕೆಲ್ಲಾ ಖರ್ಚು ಮಾಡುತ್ತಲೇ ಇರುತ್ತಾರೆ. ಭವಿಷ್ಯದ ಖರ್ಚು ವೆಚ್ಚಗಳ ಬಗ್ಗೆ ಕೊಂಚವೂ ಚಿಂತಿಸುವುದಿಲ್ಲ. ವ್ಯಕ್ತಿಯು ಹಣದ ಬಗ್ಗೆ ಹಾಗೂ ಅದರ ಖರ್ಚಿನ ಬಗ್ಗೆ ಹೆಚ್ಚಿನ ಚಿಂತನೆ ನಡೆಸದಿರುವುದಕ್ಕೆ ಅವರ ರಾಶಿ ಚಕ್ರಗಳ ಪ್ರಭಾವ ಹೆಚ್ಚಾಗಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ರಾಶಿಚಕ್ರದ ಚಿಹ್ನೆಗಳು

ಕೆಲವು ರಾಶಿಚಕ್ರದವರು ಸಾಮಾನ್ಯವಾಗಿ ಉಳಿತಾಯದ ಬಗ್ಗೆ ಅಷ್ಟಾಗಿ ಚಿಂತಿಸುವುದಿಲ್ಲ ಅವರು ದುಂದು ವೆಚ್ಚದವರೇ ಆಗಿರುತ್ತಾರೆ. ಅವರ ಖರ್ಚುಗಳು ಪ್ರಮುಖವಾಗಿ ಶೋಕಿಯ ವಿಚಾರದ್ದಾಗಿರುತ್ತದೆ ಎನ್ನಲಾಗುವುದು. ನಿಮಗೂ ನಿಮ್ಮ ರಾಶಿಚಕ್ರದ ಅನುಸಾರ ಯಾವ ಬಗೆಯ ಸ್ವಭಾವವನ್ನು ಹೊಂದಿದ್ದೀರಿ? ಎನ್ನುವುದನ್ನು ತಿಳಿಯುವ ಕುತೂಹಲವಿದ್ದರೆ ಈ ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

ತುಲಾ:

ತುಲಾ:

ತುಲಾ ರಾಶಿಯವರು ದುಂದುವೆಚ್ಚ ಮಾಡುವುದರಲ್ಲಿ ಮೊದಲ ಸ್ಥಾನ ಪಡೆದುಕೊಳ್ಳುತ್ತಾರೆ. ಇವರು ಸದಾ ಹೊಸ ತನ್ನು ಪಡೆಯುವುದು ಹಾಗೂ ಧರಿಸುವುದರಲ್ಲಿ ಹೆಚ್ಚು ಆಸಕ್ತರಾಗಿರುತ್ತಾರೆ. ಉದಾಹರಣೆಗೆ ದುಬಾರಿ ಬೆಲೆಯ ಡಿಸೈನರ್ ಶೂಗಳು, ಉಡುಗೆಗಳು, ಪಂಚತಾರ ಹೋಟೆಲ್‍ಗಳ ವಾಸ ಹೀಗೆ ಎಲ್ಲವೂ ದುಬಾರಿ ಬೆಲೆಯಲ್ಲಿ ಹಾಗೂ ಐಶಾರಾಮಿ ಜೀವನಕ್ಕಾಗಿಯೇ ಹಣವನ್ನು ವ್ಯಯಮಾಡುತ್ತಾರೆ.

ಕುಂಭ:

ಕುಂಭ:

ಈ ರಾಶಿಯವರು ತಮಗೆ ಬೇಕೆನಿಸಿದ್ದನ್ನು ಪಡೆಯದೆ ಬಿಡುವುದಿಲ್ಲ. ತಮ್ಮ ಖರ್ಚು ಅತಿಯಾಗಿ, ಸಾಲದ ಹಂತಕ್ಕೆ ತಲುಪದಿದ್ದರೂ ಬೇಕೆನಿಸಿದ್ದನ್ನು ತಕ್ಷಣದಲ್ಲಿಯೇ ಖರೀದಿಮಾಡುತ್ತಾರೆ. ಹಾಗೊಮ್ಮೆ ಬಯಸಿದ್ದು ತಕ್ಷಣಕ್ಕೆ ಪಡೆಯಲು ಸಾಧ್ಯವಾಗದಿದ್ದರೂ ನಂತರದ ಸಮಯದಲ್ಲಾದರೂ ಅದನ್ನು ಪಡೆದೇ ಪಡೆಯುತ್ತಾರೆ. ಹಣವನ್ನು ಖರ್ಚುಮಾಡುವುದರ ಮೂಲಕ ಹೆಚ್ಚು ಸಂತೋಷವನ್ನು ಪಡೆಯುತ್ತಾರೆ.

ಮಿಥುನ:

ಮಿಥುನ:

ಜೆಮಿನಿ ವ್ಯಕ್ತಿಗಳು ತಮ್ಮ ಜೀವನದಲ್ಲಿ ಮೇಲೆ ಬರಲು ಇಷ್ಟಪಡುತ್ತಾರೆ. ಜೀವನದಲ್ಲಿ ಮೇಲ್ಮಟ್ಟದಲ್ಲಿರುವಂತೆ ತೂರುವದಾದರೂ ಸರಿ. ಇವರಿಗೆ ಆದಷ್ಟು ಐಶಾರಾಮಿ ಜೀವನದಲ್ಲಿ ಇರಲು ಇಷ್ಟಪಡುವವರು. ಇವರು ಸದಾ ಇತರರು ಹೇಗೆ ಇರುತ್ತಾರೆ ಎನ್ನುವುದನ್ನು ನೋಡಿ ಅವರಂತೆ ಬದುಕಲು ಇಷ್ಟಪಡುವರು. ಇವರು ತಮಗೆ ಬೇಕಾದದ್ದನ್ನು ಪಡೆಯಲು ಇತರರ ಆದ್ಯತೆಯನ್ನು ಪರಿಗಣಿಸುವುದಿಲ್ಲ. ಮನ್ಸಸಿಗೆ ಬೇಕೆಂದಿದ್ದನ್ನು ಪಡೆದುಕೊಳ್ಳಲು ಚಿಂತೆಯಿಲ್ಲದೆ ಹಣವನ್ನು ವ್ಯಯಮಾಡುತ್ತಾರೆ.

ಸಿಂಹ:

ಸಿಂಹ:

ಈ ರಾಶಿಚಕ್ರದವರು ಸ್ವಲ್ಪ ಸೊಕ್ಕಿನ ಸ್ವಭಾವದವರಾಗಿರುತ್ತಾರೆ. ಇವರು ಸ್ವಲ್ಪ ಭಾವೋದ್ರಿಕ್ತ ರೀತಿಯಲ್ಲಿ ವರ್ತನೆ ತೋರುತ್ತಾರೆ. ಇವರು ತಮ್ಮದೇ ಆದ ಚಿತ್ರಣವನ್ನು ಇತರರಲ್ಲಿ ಮೂಡಿಸಲು ಸಾಕಷ್ಟು ಶೋಕಿ ಪ್ರವೃತ್ತಿಯನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ಜೊತೆಗೆ ತಮ್ಮ ಐಶಾರಾಮಿ ಜೀವನದ ಕಲ್ಪನೆಗಾಗಿ ಮನಬಂದಂತೆ ಹಣವನ್ನು ವ್ಯಯಿಸುವರು. ಇತರರ ಮುಂದೆ ತಮ್ಮದೊಂದು ಚಿತ್ರಣ ಬಿಂಬಿಸಲು ಮಾಡುವ ದುಂದು ವೆಚ್ಚವು ತಪ್ಪಲ್ಲ ಎನ್ನುವ ಭಾವ ಇವರದ್ದಾಗಿರುತ್ತದೆ.

ವೃಷಭ:

ವೃಷಭ:

ಇವರು ಅತಿಯಾದ ಚಿಂತನೆಗೆ ಎಂದಿಗೂ ಒಳಗಾಗುವುದಿಲ್ಲ. ತಮ್ಮ ಬಗ್ಗೆ ಯಾರೇನೇ ಅಂದುಕೊಂಡರೂ ತೊಂದರೆ ಇಲ್ಲ ಎನ್ನುವಂತೆ ಬದುಕುತ್ತಾರೆ. ಇವರು ಸ್ವಲ್ಪ ಮಟ್ಟಿಗೆ ಉಳಿತಾಯವನ್ನು ಮಾಡುತ್ತಾರೆಯಾದರೂ ಅದನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಪ್ರಯತ್ನ ಮಾಡುವುದಿಲ್ಲ. ಅವರದ್ದೇ ಆದ ಕೆಲವು ವಿಷಯಗಳಿಗೆ ಅಥವಾ ಅಭಿಲಾಷೆಗಳಿಗಾಗಿ ವ್ಯಯಮಾಡುತ್ತಾರೆ. ಇವರ ಕೆಲವು ವ್ಯಸನಗಳನ್ನು ಕಡಿಮೆ ಮಾಡಿದರೆ ಅಥವಾ ಹಿಡಿತದಲ್ಲಿಟ್ಟುಕೊಂಡರೆ ಕೊಂಚ ಹಣವನ್ನು ಉಳಿಸಬಹುದು.

ಧನು:

ಧನು:

ಈ ರಾಶಿಯವರು ಇತರ ರಾಶಿಯವರಂತೆ ದುಂದುವೆಚ್ಚ ಮಾಡದಿದ್ದರೂ ತಮ್ಮ ವೈಯಕ್ತಿಕ ವಿಚಾರಕ್ಕೆ ಬಂದಾಗ ಸಾಕಷ್ಟು ಹಣವನ್ನು ವ್ಯಯಿಸುವರು. ಇವರಿಗೆ ಇವರದ್ದೇ ಆದ ಕೆಲವು ಶೋಕಿಯ ಗುಣಗಳಿವೆ. ಅವುಗಳಿಗನುಗುಣವಾಗಿ ಹಣವನ್ನು ಖರ್ಚುಮಾಡುತ್ತಲಿರುತ್ತಾರೆ ಎನ್ನಲಾಗುವುದು. ಇವರು ಕೆಲವು ದೌರ್ಬಲ್ಯಗಳಿಗೆ ಹಠಾತ್ ಬದಲಾವಣೆ ಕಾಣುವ ಸಾಧ್ಯತೆಗಳು ಹೆಚ್ಚು.

Read more about: life
English summary

spoilt-zodiac-signs-that-will-spend-lavishly

spoilt-zodiac-signs-that-will-spend-lavishly
X
Desktop Bottom Promotion