For Quick Alerts
ALLOW NOTIFICATIONS  
For Daily Alerts

  ಮೇ 2018 ರಲ್ಲಿ ಈ ರಾಶಿಯವರ ಲವ್‌ಲೈಫ್ ಸಕ್ಸಸ್ ಆಗುತ್ತಂತೆ?

  By Sushma Charhra
  |

  ಮೇ ತಿಂಗಳ ಪ್ರೀತಿಯ ಲೆಕ್ಕಾಚಾರದ ಪ್ರಕಾರ, ಪ್ರಮುಖ 4 ರಾಶಿಯವರು ಈ ವರ್ಷದ ಪ್ರೀತಿಯ ಅತ್ಯಮೂಲ್ಯ ಕ್ಷಣಗಳಿಗಾಗಿ ಈ ಮೇ ತಿಂಗಳನ್ನು ಕಾಯಬಹುದು. ಅವರ ಜೀವನದ ಪ್ರೀತಿಯ ಕ್ಷಣಗಳು ಈ ತಿಂಗಳಲ್ಲಿ ಅವರಿಗೆ ದೊರೆಯಲಿದೆ. ಅವರ ಜೀವನದಲ್ಲಿ ಯಾವುದೇ ನೋವನ್ನು ಅವರು ಈ ತಿಂಗಳಲ್ಲಿ ಕಾಣುವುದಿಲ್ಲ. ಪ್ರೀತಿಯ ಅಧ್ಬುತ ಘಳಿಗೆಗಳು ಅವರನ್ನು ಆವರಿಸಲಿದೆ. ಹಾಗಾದ್ರೆ ಆ ರಾಶಿಯವರು ಯಾರು ತಿಳಿಯಬೇಕಾ..

  ಲವ್ ಲೈಫ್ ಅಂದರೆ ಏನಾಗುತ್ತೆ. ಏನೆಲ್ಲ ಘಟನೆಗಳು ನಿಮ್ಮ ಜೀವನದಲ್ಲಿ ನಡೆಯಬಹುದು. ಮೇ ತಿಂಗಳ ಆ ಅಧ್ಬುತ ಕ್ಷಣಗಳು ಯಾರ್ಯಾರಿಗೆ ದೊರೆಯಲಿದೆ ಅನ್ನುವುದರ ವಿವರ ಇಲ್ಲಿದೆ ನೋಡಿ.

  ಮೇ ತಿಂಗಳ 2018 ರಲ್ಲಿ ಬೇರೆ ರಾಶಿಯವರಿಗೆ ಹೋಲಿಸಿದರೆ ಪ್ರಮುಖ 4 ರಾಶಿಯವರು ತಮ್ಮ ಪ್ರೀತಿಯ ಅತ್ಯದ್ಭುತ ದಿನಗಳನ್ನು ಕಳೆಯಲಿದ್ದಾರೆ. ಅವರು ಪ್ರೀತಿಯ ವಿಚಾರದಲ್ಲಿ ಬಹಳ ಅದೃಷ್ಟಶಾಲಿಗಳು. ಅವರಿಗೆ ಬಹಳ ಖುಷಿಯ ದಿನಗಳು ಕಾದಿರಲಿವೆ. ಹಾಗಾದ್ರೆ ಆ ರಾಶಿಯವರು ಯಾರು ಅನ್ನೋ ವಿವರವನ್ನು ನಾವಿವತ್ತು ನಿಮ್ಮ ಮುಂದಿಡುತ್ತೀವಿ. ನೀವು ಅವರಲ್ಲಿ ಒಬ್ಬರಾ ಎಂದು ಪರೀಕ್ಷಿಸಿಕೊಳ್ಳಿ.

  ರಾಶಿಗನುಗುಣವಾಗಿ ಪ್ರೀತಿಯ ಜೀವನ

  ವೃಷಭ ರಾಶಿ( ಎಪ್ರಿಲ್ 20 - ಮೇ 20)

  ನೀವು ಈ ತಿಂಗಳನ್ನು ನೀವೆಂದುಕೊಂಡಿದ್ದೆಲ್ಲ ಎಸ್ ಎಂದು ಆಗುವ ತಿಂಗಳೆಂದೇ ಪರಿಗಣಿಸಬಹುದು. ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, ಈ ರಾಶಿಯಲ್ಲಿ ಹುಟ್ಟಿದವರು ತಮ್ಮನ್ನು ತಾವು ಅದೃಷ್ಟವಂತರೆಂದೇ ಭಾವಿಸಿಕೊಳ್ಳಬಹುದು ಮತ್ತು ಪ್ರೀತಿಯ ವಿಷಯದಲ್ಲಿ ನಿಮ್ಮದು ಈ ಬಾರಿ ಗೆಲುವಿನ ಸಾಕ್ಷಾತ್ಕಾರವಾಗಲಿದೆ. ನೀವು ನಿಮ್ಮ ಸಂಗಾತಿಯನ್ನು ಭೇಟಿ ಆಗುವ ಸಾಧ್ಯತೆಗಳಿರುತ್ತೆ ಮತ್ತು ಅವರು ನಿಮ್ಮನ್ನು ನೋಡಿ ಪರವಶರಾಗುವ ಸಂಭವವಿದೆ. ಈ ತಿಂಗಳಲ್ಲಿ ನೀವು ನಂಬಿಕೆ ಅನ್ನುವ ಗಟ್ಟಿ ತಳಹದಿಯ ಜೊತೆಗೆ ಬದುಕಬೇಕಾಗುತ್ತದೆ. ಸರಳ ಸಲಹೆಗಳು - ನೀವು ನಿಮ್ಮ ಪ್ರೀತಿಯನ್ನು ಪಡೆಯಲು ಎಲ್ಲದಕ್ಕೂ ಎಸ್ ಎಂದು ಹೇಳುವುದನ್ನು ಈ ತಿಂಗಳಲ್ಲಿ ಮಾಡಬೇಕಾಗುತ್ತದೆ.

  ರಾಶಿಗನುಗುಣವಾಗಿ ಪ್ರೀತಿಯ ಜೀವನ

  ಸಿಂಹ ರಾಶಿ ( ಜುಲೈ 23 - ಅಗಸ್ಟ್ 23)

  ಸಿಂಹ ರಾಶಿಯವರಿಗೆ ತಮ್ಮ ರೊಮ್ಯಾಂಟಿಕ್ ಸಂಗಾತಿಯೊಡನೆ ಜೀವನ ಪೂರ್ತಿ ಬದುಕುವ ಅವಕಾಶ ಈ ತಿಂಗಳಲ್ಲಿ ಲಭ್ಯವಾಗಲಿದೆ. ಅಷ್ಟೇ ಅಲ್ಲ, ಕೆಲವು ವಿಚಾರದಲ್ಲಿ ಆಶ್ಚರ್ಯಕರವಾದಂತ ಬದಲಾವಣೆಗಳಾಗುವ ಸಂಭವವಿರುತ್ತೆ. ಗೊಂದಲದಲ್ಲಿರುವ ಸಂಬಂಧಗಳು ಕಳಚಿಹೋಗಿ, ಅಧ್ಬುತವಾದ ಹೊಸ ಅವಕಾಶಗಳು ನಿಮಗೆ ತೆರೆದುಕೊಳ್ಳುವ ಸಾಧ್ಯತೆಯಿದೆ. ಅಂದರೆ ನಿಮ್ಮ ಸಂಗಾತಿ ನಿಮ್ಮ ಗೆಳೆಯ ಗೆಳತಿಯೇ ಆಗಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

  ರಾಶಿಗನುಗುಣವಾಗಿ ಪ್ರೀತಿಯ ಜೀವನ

  ವೃಶ್ಚಿಕ ರಾಶಿ (ಅಕ್ಟೋಬರ್ 23 - ನವೆಂಬರ್ 21)

  ಈ ಮೇ ತಿಂಗಳಲ್ಲಿ ಹೊಸತನಕ್ಕೆ ನಿಮ್ಮನ್ನು ನೀವು ತೆರೆದುಕೊಳ್ಳುತ್ತೀರಿ ಮತ್ತು ಹೊಸ ಅನುಭವವನ್ನು ನಿಮ್ಮ ಜೀವನದಲ್ಲಿ ಪಡೆಯುವಂತಾಗುತ್ತೆ. ಪ್ರೀತಿಯ ವಿಚಾರದಲ್ಲಿ ಮುಂದಿನ ಏಳು ವರ್ಷಗಳ ಕಾಲ ನಿಮ್ಮ ಸಂಗಾತಿಯೊಡನೆ ನೀವು ಬಹಳ ಸುಖವಾಗಿ ಇರುತ್ತೀರಿ. ನೀವು ಆಲೋಚಿಸಿರದ ಸಂಬಂಧವೊಂದು ನಿಮ್ಮ ಮುಂದೆ ತೆರೆದುಕೊಳ್ಳುವ ಸಾಧ್ಯತೆಯಿದೆ ಮತ್ತು ಅದು ಬಹಳ ದಿನಗಳವರೆಗಿನ ಪ್ರೀತಿಗೆ ಕಾರಣವಾಗುತ್ತೆ. ಆದರೆ ನೀವು ತಿಳಿದಿರಬೇಕಾದ ಅಂಶವೇನೆಂದರೆ, ನಿಮ್ಮ ಆಲೋಚನೆ ಬಹಳ ತಾಳ್ಮೆಯಿಂದಿರಬೇಕು ಮತ್ತು ದೊಡ್ಡ ದೊಡ್ಡ ಗುರಿಯನ್ನು ಹೊಂದಿರಬೇಕು..

  ಕುಂಭ ರಾಶಿ (ಜನವರಿ 20 -ಫೆಬ್ರವರಿ 18)

  ಕುಂಭರಾಶಿಯವರೂ ಕೂಡ ಈ ತಿಂಗಳಲ್ಲಿ ಅತ್ಯುತ್ತಮ ಅನುಭವವನ್ನು ಪಡೆಯಲಿದ್ದಾರೆ. ಜಾತಕದ ಪ್ರಕಾರ ಇವರು ಈ ತಿಂಗಳಲ್ಲಿ ತುಂಬಾ ದಿನಗಳಿಂದ ಪರಿಚಿತವಿರುವ ವ್ಯಕ್ತಿಯ ಬಗ್ಗೆ ತಮಗೆ ಪ್ರೀತಿ ಇದೆ, ಒಲವಿದೆ ಅನ್ನುವುದನ್ನು ಅಚಾನಕ್ ಆಗಿ ಅರ್ಥೈಸಿಕೊಂಡು ಬಿಡುತ್ತಾರೆ. ಇದೇ ಕಾರಣದಿಂದ ಅವರು ತಮ್ಮನ್ನು ತಾವು ಅವರ ಮುಂದೆ ತೆರೆದಿಟ್ಟುಕೊಂಡು ಹೊಸ ಸಂಬಂಧಕ್ಕೆ ಮುನ್ನುಡಿ ಬರೆಯಲಿದ್ದಾರೆ.

  ಒಟ್ಟಿನಲ್ಲಿ ಮೇ ತಿಂಗಳು ಹಲವರ ಜೀವನದಲ್ಲಿ ಪ್ರೀತಿಪ್ರೇಮ ಪ್ರಣಯಕ್ಕೆ ಸಾಕ್ಷಿಯಾಗಲಿದೆ.

  English summary

  LOVE LIFE PREDICTION BASED ON ZODIAC SIGNS

  In astrology, each zodiac sign has its own impact. From date of birth to time of birth, all these minute details help in understanding a few future aspects in a better way. Life predictions based on your zodiac sign can reveal a lot about your personality. In other words, with the help of zodiac signs, a lot can be revealed about your life.
  Story first published: Wednesday, May 9, 2018, 16:30 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more