For Quick Alerts
ALLOW NOTIFICATIONS  
For Daily Alerts

ಜಡೆ ಕತ್ತರಿಸಿಕೊಂಡ ತಂದೆಯ ಹೊಸ ಅವತಾರ ನೋಡಿ ಮಗಳ ಪ್ರತಿಕ್ರಿಯೆ

By Hemanth
|

ತಾಯಿಗಿಂತ ಹೆಚ್ಚು ಮಗಳ ಮೇಲೆ ತಂದೆಗೆ ಪ್ರೀತಿ ಎಂದು ಹೇಳುತ್ತಾರೆ. ಯಾಕೆಂದರೆ ಮಗಳ ಪ್ರತಿಯೊಂದು ಕಾರ್ಯದಲ್ಲೂ ತಂದೆಯು ಆಕೆಗೆ ಬೆಂಬಲವಾಗಿ ನಿಲ್ಲುತ್ತಾನೆ. ಇದು ತಂದೆ ಹಾಗೂ ಮಗಳ ನಡುವಿನ ಭಾಂದವ್ಯಕ್ಕೆ ಸಾಕ್ಷಿ. ಈ ವಿಡಿಯೋದಲ್ಲಿ ನೀವು ತಂದೆ ಮಗಳ ಪ್ರೀತಿಯನ್ನು ನೋಡಲಿದ್ದಾರೆ. ತಂದೆ ಡ್ರೆಡ್ಲಾಕ್(ಜಡೆ) ತೆಗೆದಿರುವುದು ಮತ್ತು ಹೊಸ ಅವತಾರದಲ್ಲಿ ಕಾಣಿಸಿಕೊಂಡಾಗ ಮಗಳ ಪ್ರತಿಕ್ರಿಯೆ ಹೇಗಿತ್ತು ಎನ್ನುವುದಕ್ಕೆ ಈ ವಿಡಿಯೋ ನೋಡಿ. ಈಗ ಡ್ರೆಡ್ಲಾಕ್ಸ್ ಎಂದರೆ ಏನು ಎನ್ನುವ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಇದು ಹಳೆಯ ಗ್ರೀಕ್, ಸೆನೆಗಲ್, ಬೌದ್ಧರು ಮತ್ತು ರಸ್ತಫಾರಿ ಸಮಾಜದಲ್ಲಿ ಡ್ರೆಡ್ಲಾಕ್ಸ್(ಜಡೆ) ನ್ನು ಇಡುವರು.

ಡ್ರೆಡ್ಲಾಕ್ಸ್ ಸಂಸ್ಕೃತಿಯು ಹೆಚ್ಚಾಗಿ ಆಫ್ರಿಕಾದಲ್ಲಿ ಕಂಡುಬರುವುದು. ಆದರೆ ವಿಶ್ವದ ಹೆಚ್ಚಿನ ಜನರು ಧರ್ಮ, ಜನಾಂಗ ಭೇದವಿಲ್ಲದೆ ಇದನ್ನು ಇಡುವರು. ಈ ವಿಡಿಯೋದಲ್ಲಿ ತಂದರೆ ತುಂಬಾ ಸಮಯದಿಂದ ಡ್ರೆಡ್ಲಾಕ್ಸ್ ನ್ನು ಧರಿಸುತ್ತಿದ್ದ ಮತ್ತು ಅದನ್ನು ಕತ್ತರಿಸಿದ ಬಳಿಕ ತನ್ನ ಮಗಳಿಗೆ ಸಪ್ರೈಸ್ ನೀಡಿದ್ದಾನೆ. ಆತ ಹಗ್ಗದಂತಹ ಕೂದಲನ್ನು ಧರಿಸಿದ್ದಾನೆ. ಇದನ್ನು ತೆಗೆದ ಬಳಿಕ ತನ್ನ ಸಣ್ಣ ಮಗಳ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ನೋಡುವ ಸಲುವಾಗಿ ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದಾನೆ. ತಂದೆಯು ಒಳಗೆ ಬಂದಾಗ ಏನೋ ಸ್ವಲ್ಪ ಭಿನ್ನವಾಗಿದೆ ಎಂದು ಮಗಳಿಗೆ ಅನಿಸಿದೆ ಮತ್ತು ಆತ ಹಠಾತ್ ಆಗಿ ಡ್ರೆಡ್ಲಾಕ್ಸ್ ನ್ನು ನೆಲದ ಮೇಲೆ ಹಾಕುತ್ತಾನೆ. ಇದರಿಂದ ಮಗಳಿಗೆ ಒಂದು ಕ್ಷಣ ಆಘಾತವಾಗುತ್ತದೆ.

Girl’s Reaction On Her Dad’s New Look

ವಿಡಿಯೋ ನೋಡಿ
ಮಗಳ ಕೈಯ ಮೇಲೆ ಡ್ರೆಡ್ಲಾಕ್ಸ್ ಬೀಳುವ ಮೊದಲು ತಂದೆಯು ತನ್ನ ಮಗಳನ್ನು ಉದ್ದೇಶಿಸಿ, ಈಗ ನಿನ್ನ ಕೂದಲು ನನ್ನ ಕೂದಲಿಗಿಂತ ಉದ್ದವಿದೆ' ಎಂದು ಹೇಳುತ್ತಾನೆ. ಕೂದಲು ಬೆಳೆಸುವಲ್ಲಿ ತಂದೆ ಮತ್ತು ಮಗಳ ಮಧ್ಯೆ ಆರೋಗ್ಯಕರ ಸ್ಪರ್ಧೆ ಇತ್ತು ಎನ್ನುವುದು ಇದರಿಂದ ತಿಳಿಯುತ್ತದೆ ಮತ್ತು ಅಂತಿಮವಾಗಿ ಮಗಳು ಗೆದ್ದಿದ್ದಾಳೆ. ಇದನ್ನು ನೋಡಿದ ಮಗಳು ಒಂದು ಕ್ಷಣ ದಂಗಾಗಿ ಅಲ್ಲೇ ನಿಂತು ಬಿಡುತ್ತಾಳೆ. ಇದರ ಬಳಿಕ ತಂದೆಯ ಹೊಸ ವಿನ್ಯಾಸ ನೋಡುವುದರಲ್ಲಿ ತಲ್ಲೀನಳಾಗುವಳು. ಮಗಳು ತಂದೆಯ ಕಡೆ ಕೈ ಮಾಡುತ್ತಾ ನಗುತ್ತಿರುವುದು ವಿಡಿಯೋದಲ್ಲಿರುವುದು ಆಕೆ ಯಾವ ರೀತಿಯಲ್ಲಿ ಅಚ್ಚರಿಗೊಳಗಾಗಿದ್ದಾಳೆ ಎನ್ನುವುದನ್ನು ತಿಳಿಸುತ್ತದೆ. ಇದು ತುಂಬಾ ಸುಂದರ ವಿಡಿಯೋ ಅಲ್ಲವೇ? ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಇದರ ಬಗ್ಗೆ ಕಮೆಂಟ್ ಬಾಕ್ಸ್ ನಲ್ಲಿ ನಮಗೆ ತಿಳಿಸಿ. ಇಂತಹ ಆಸಕ್ತಿಕರ ವಿಡಿಯೋ ಬೇಕಿದ್ದರೆ ಇದೇ ಸೆಕ್ಷನ್ ನಲ್ಲಿ ಹುಡುಕುತ್ತಿರಿ.

English summary

Girl’s Reaction On Her Dad’s New Look

Being daddy's girl is the best feeling for every girl! The dads are often seen protecting their baby girls, and they leave no tables unturned to make them feel special.This video is a perfect example where the father and daughter's close bond is seen as the little girl genuinely reacts to her dad's new look where he does not have dreadlocks anymore! Here are some of the details about 'Dreadlocks'. They have generally been associated with the old Greek, Aztec, Senegalese, Buddhist, and Rastafari societies.
Story first published: Thursday, August 2, 2018, 12:08 [IST]
X
Desktop Bottom Promotion