ಶನಿವಾರದ ದಿನ ಭವಿಷ್ಯ

Posted By: Divya Pandit
Subscribe to Boldsky

ಶನಿ ಎಂಬ ಶಬ್ದ ಕೇಳುತ್ತಿದ್ದಂತೆ ಅನೇಕರು ಕೆಟ್ಟದ್ದು, ಅಶುಭ, ಕಪ್ಪು ಬಣ್ಣದ್ದು ಎನ್ನುವ ಭಾವವನ್ನು ತಳೆಯುತ್ತಾರೆ. ಶನಿ ಎಂದರೆ ಗ್ರಹಚಾರ. ಶನಿಯಿಂದ ಎಂದಿಗೂ ಕಷ್ಟ ಹಾಗೂ ದುಃಖವೇ ಹೊರತು ಖುಷಿ ಎನ್ನುವುದು ಇರುವುದಿಲ್ಲ ಎನ್ನುತ್ತಾರೆ. ಕೆಲವರು ಶನಿವಾರ ಹುಟ್ಟಿರುವ ವ್ಯಕ್ತಿಗಳು ಬದುಕಿನುದ್ದಕ್ಕೂ ಕಷ್ಟಗಳನ್ನು ಅನುಭವಿಸುತ್ತಿರುತ್ತಾರೆ ಎಂದೂ ಸಹ ಹೇಳುತ್ತಾರೆ. ಶನಿವಾರ ಎಂದರೆ ಅದು ಶುಭ ಕಾರ್ಯಗಳಿಗೆ ಸೂಕ್ತವಲ್ಲದ ದಿನೆಂದು ಪರಿಗಣಿಸುವವರು ಇದ್ದಾರೆ.

ಶನಿ ಎಂದರೆ ಕೇವಲ ಕಷ್ಟ ದುಃಖಗಳಿಗೆ ಮೀಸಲಾಗಿರುವುದು ಎಂದು ಅರ್ಥವಲ್ಲ. ಶನಿ ಎಂದರೆ ಸತ್ಯ ಹಾಗೂ ನಿಷ್ಟೆಯ ಜೀವನವನ್ನು ಹೇಗೆ ನಡೆಸಬೇಕು ಎನ್ನುವುದನ್ನು ತಿಳಿಸಿಕೊಡುವ ಗುರು ಶನಿ. ಕುಂಡಲಿಯಲ್ಲಿ ಶನಿ ಪ್ರವೇಶಿಸುವಾಗ ಕಷ್ಟವನ್ನು ತಂದುಕೊಟ್ಟರೆ ಹೋಗುವಾಗ ಸುಖವನ್ನು ನೀಡಿ ಹೋಗುತ್ತಾನೆ. ಬರುವಾಗ ಸುಖವನ್ನು ನೀಡಿದರೆ ಹೋಗುವಾಗ ಕಷ್ಟವನ್ನು ನೀಡುತ್ತಾನೆ ಎನ್ನಲಾಗುತ್ತದೆ. ಇದರ ಅರ್ಥ ಜೀವನದ ಸುಖ-ದುಃಖಗಳ ಅರಿವನ್ನು ಮೂಡಿಸಿ ಸಾರ್ಥಕ ಬದುಕಿನ ತಿಳಿವಳಿಕೆ ಮೂಡಿಸುವವನೆ ಶನಿ.

ಶನಿವಾರ ಎನ್ನುವ ಭಯಕ್ಕೆ ಒಳಗಾಗದೆ ನಿಮ್ಮ ಭವಿಷ್ಯದಲ್ಲಿ ಉಂಟಾಗುವ ಏರು ಪೇರುಗಳನ್ನು ಇಂದಿನ ಭವಿಷ್ಯ ನೋಡಿ ತಿಳಿದುಕೊಳ್ಳಿ. ಹಾಗೊಮ್ಮೆ ದೋಷಗಳು ಹಾಗೂ ಕಷ್ಟಗಳ ಸೂಚನೆಯಿದ್ದರೆ ಪರಿಹಾರಗಳನ್ನು ಕೈಗೊಳ್ಳುವ ಮೂಲಕ ಭವಿಷ್ಯದಲ್ಲಿ ಯಶಸ್ಸನ್ನು ಪಡೆಯಿರಿ.

ಮೇಷ:

ಮೇಷ:

ಇಂದು ನಿಮಗೆ ಶುಭದಿನ ಎಂದು ಹೇಳಬಹುದು. ನಿಮ್ಮನ್ನು ನಿಂದಿಸಿ ಅವಮಾನಕ್ಕೆ ಒಳಪಡಿಸಿದವರೇ ನಿಮ್ಮನ್ನು ಸತ್ಕರಿಸಿ ಸಮ್ಮಾನ ಮಾಡುವ ಸಾಧ್ಯತೆ ಇದೆ. ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಮೇಲಾಧಿಕಾರಿಗಳಿಂದ ಕಿರುಕುಳ ಉಂಟಾಗುವ ಸಾಧ್ಯತೆಗಳು ಕಂಡು ಬರುತ್ತಿದೆ. ವಿದ್ಯಾರ್ಥಿಗಳ ಶ್ರಮಕ್ಕೆ ಸೂಕ್ತ ಪ್ರತಿಫಲ ದೊರೆಯುವುದು. ನಿಮ್ಮ ನಿರೀಕ್ಷೆಯ ಮಟ್ಟಕ್ಕೆ ಸೂಕ್ತವಾಗಿಯೇ ಪ್ರತಿಫಲ ದೊರೆಯುವುದು. ಸಾರಿಗೆ ಉದ್ಯೋಗದಲ್ಲಿರುವವರಿಗೆ ಉತ್ತಮ ಲಾಭ ಹಾಗೂ ವ್ಯಾಪಾರ ವಹಿವಾಟು ನಡೆಸುವವರಿಗೆ ಮಧ್ಯಮ ಲಾಭ ಉಂಟಾಗುವ ಸಾಧ್ಯತೆ ಇದೆ. ಯಶಸ್ಸಿನ ಬದುಕಿಗಾಗಿ ಹನುಮಂತ ದೇವರ ಆರಾಧನೆ ಮಾಡುವುದು ಸೂಕ್ತ.

ವೃಷಭ:

ವೃಷಭ:

ಅಷ್ಟಮ ಶನಿ ಇರುವುದರಿಂದ ನೀವು ಅಂದುಕೊಂಡಷ್ಟು ಸಮಾಧಾನ ನಿಮಗೆ ಲಭಿಸದು. ಹಣಕಾಸು ವ್ಯವಹಾರದಲ್ಲಿ ನಷ್ಟ ಉಂಟಾಗುವುದು. ಬಂಧು ಮಿತ್ರರ ಸಹಕಾರ ಇಲ್ಲದಿರುವುದು. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಹಿನ್ನೆಡೆ ಉಂಟಾಗುವ ಸಾಧ್ಯತೆಗಳೇ ಹೆಚ್ಚು. ಸ್ತ್ರೀಯರಿಂದ ಅಪಮಾನ ಉಂಟಾಗುವುದು. ಮುಂದಿನ ಯಶಸ್ವಿ ಬದುಕಿಗಾಗಿ ಹನುಮಂತನ ಆರಾಧನೆ ಮಾಡುವುದು ಸೂಕ್ತ.

ಮಿಥುನ:

ಮಿಥುನ:

ಆದಷ್ಟು ಜಾಗೃತರಾಗಿರುವುದನ್ನು ಮರೆಯದಿರಿ. ಪ್ರಯಾಣದ ಸಂದರ್ಭದಲ್ಲಿ ಅಥವಾ ಇನ್ನಿತರ ಸಮಯದಲ್ಲಿ ನಿಮ್ಮ ವಸ್ತುಗಳು ಕಳ್ಳತನವಾಗುವ ಸಾಧ್ಯತೆ ಇರುವುದು. ಮಕ್ಕಳಲ್ಲಿ ಚಿಕ್ಕ ಪುಟ್ಟ ಆರೋಗ್ಯದ ಸಮಸ್ಯೆ, ದೊಡ್ಡವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕಾದಂತಹ ಸನ್ನಿವೇಶ ಒದಗಿ ಬರುವುದು. ಕೆಲವರಲ್ಲಿ ಚರ್ಮರೋಗ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇತರ ವ್ಯಕ್ತಿಗಳಿಂದ ದಾಂಪತ್ಯದಲ್ಲಿ ಕಲಹ ಉಂಟಾಗುವ ಸಾಧ್ಯತೆ ಇದೆ. ಆದಷ್ಟು ಎಚ್ಚರಿಕೆ ವಹಿಸುವುದು ಸೂಕ್ತ. ಉತ್ತಮ ಭವಿಷ್ಯಕ್ಕೆ ಶಿವ ಮತ್ತು ಹನುಮಂತನ ಆರಾಧನೆ ಮಾಡುವುದು ಸೂಕ್ತ.

ಕರ್ಕ:

ಕರ್ಕ:

ಇಂದು ಸಮಾದಾನದ ಬದುಕು ನಿಮ್ಮದಾಗುವುದು. ಆಮದು ಮತ್ತು ರಪ್ತು ವ್ಯವಹಾರದಲ್ಲಿ ಲಾಭ ಉಂಟಾಗುವುದು. ಸೌಂದರ್ಯ ವರ್ಧಕ ಉತ್ಪನ್ನಗಳ ಮಾರಾಟದಲ್ಲಿ ಅನುಕೂಲ ಉಂಟಾಗುವುದು. ಮನೆ ಅಥವಾ ಆಸ್ತಿ ಖರೀದಿ ಮಾಡುವ ಹವಣಿಕೆಯಲ್ಲಿದ್ದರೆ ಇಂದು ನಿಮಗೆ ಶುಭವಾಗುವುದು. ತಂದೆಯ ಆಶೀರ್ವಾದದಿಂದ ಉತ್ತಮ ಜೀವನ ನಡೆಸುವಿರಿ. ತಂತ್ರಜ್ಞಾನ ಮತ್ತು ವಿಜ್ಞಾನ ಕ್ಷೇತ್ರದಲ್ಲಿರುವವರಿಗೂ ಉತ್ತಮ ಲಾಭ ಉಂಟಾಗುವುದು. ಇನ್ನಷ್ಟು ಉನ್ನತ ಬದುಕಿಗಾಗಿ ಕುಲದೇವರ ಆರಾಧನೆ ಮಾಡಿ.

ಸಿಂಹ:

ಸಿಂಹ:

ಮಾನಸಿಕ ಕಿರಿಕಿರಿ ವಿಪರೀತವಾಗಿ ನಿಮ್ಮನ್ನು ಕಾಡುವುದು. ಕೆಲವರು ಬೆನ್ನುನೋವಿನ ಬಳಲಿಕೆಯಿಂದ ಶಸ್ತ್ರಚಿಕಿತ್ಸೆಗೂ ಒಳಗಾಗಬೇಕಾದಂತಹ ಪರಿಸ್ಥಿತಿ ಒದಗಿ ಬರುತ್ತದೆ. ಕೆಲವರು ಅಪಘಾತಕ್ಕೆ ಒಳಗಾಗಬೇಕಾದಂತಹ ಸಾಧ್ಯತೆ ಇದೆ. ಆದಷ್ಟು ಎಚ್ಚರಿಕೆ ವಹಿಸುವುದು ಉತ್ತಮ. ಯಾವುದೇ ಕಾರಣಕ್ಕೂ ಸ್ಥಿರಾಸ್ತಿಯನ್ನು ಮಾರಾಟ ಮಾಡುವ ಗೋಜಿಗೆ ಹೋಗದಿರಿ. ಅನೇಕ ಕುಟುಂಬ ಸಮಸ್ಯೆಯು ಎದುರಾಗಬಹುದು. ಉತ್ತಮ ಭವಿಷ್ಯಕ್ಕಾಗಿ ಶಿವ ಮತ್ತು ಆಂಜನೇಯನ ಆರಾಧನೆ ಮಾಡಬೇಕು.

ಕನ್ಯಾ:

ಕನ್ಯಾ:

ಇಂದು ನಿಮಗೆ ಖುಷಿಯ ವಾತಾವರಣ ಸಿಗಲಿದೆ. ಮನೆಯಲ್ಲಿ ಸಂತೋಷದ ವಾತಾವರಣ ಇರುವುದು. ತಂದೆ ತಾಯಿಯ ಆರೋಗ್ಯದಲ್ಲೂ ದೃಢತೆ ಇರುತ್ತದೆ. ಸ್ಥಿರಾಸ್ತಿಯಿಂದ ಲಾಭ ಉಂಟಾಗುವುದು. ಕಲಾವಿದರಿಗೆ ಅನುಕೂಲಕರವಾದ ದಿನ. ಉತ್ತಮ ಜೀವನಕ್ಕೆ ಆಂಜನೇಯನ ಉಪಾಸನೆ ಮಾಡುವುದು ಉತ್ತಮ.

ತುಲಾ:

ತುಲಾ:

ಇಂದು ಈ ರಾಶಿಯವರಿಗೆ ಕೆಲಸದಲ್ಲಿ ಶುಭ ಹಾಗೂ ಲಾಭ ದೊರೆಯುವುದು. ಮಾನಸಿಕವಾಗಿ ನೆಮ್ಮದಿ ಇರುತ್ತದೆ. ವೃತ್ತಿ ಕ್ಷೇತ್ರದಲ್ಲಿ ಸಮ್ಮಾನ ಹಾಗೂ ಬಡ್ತಿ ಸಿಗುವುದು. ನಿಮ್ಮ ನಿರೀಕ್ಷೆಯಂತೆ ಉನ್ನತ ಸ್ಥಾನ ಹಾಗೂ ಮಕ್ಕಳಿಗೆ ಜಯ ಲಭಿಸುವುದು. ಕ್ರಿಯಾತ್ಮಕ ಕೆಲಸದಲ್ಲಿ ಇರುವವರಿಗೆ ಉತ್ತಮವಾಗುವುದು. ನೆಮ್ಮದಿಯ ಬದುಕಿಗಾಗಿ ಗಣೇಶನ ಆರಾಧನೆ ಮಾಡಿ.

ವೃಶ್ಚಿಕ:

ವೃಶ್ಚಿಕ:

ಸಮಾಧಾನ ಪಡೆಯಲು ಸಾಧ್ಯವಾಗದು. ವಿಪರೀತ ಸಾಲ ಪಡೆಯುವುದು ಅಥವಾ ಕೊಡುವ ಗೋಜಿಗೆ ಹೋಗದಿರಿ. ಕಬ್ಬಿಣ, ಸಿಮೆಂಟ್ ಹಾಗೂ ತೈಲ ಉದ್ಯಮದಲ್ಲಿ ಇರುವವರಿಗೆ ಹಿನ್ನಡೆ ಉಂಟಾಗುವುದು. ಸಮೃದ್ಧಿ ಹಾಗೂ ಯಶಸ್ವಿ ಬದುಕಿಗಾಗಿ ಆಂಜನೇಯನ ಆರಾಧನೆ ಮಾಡಿ.

ಧನು:

ಧನು:

ಇಂದು ನಿಮಗೆ ಅಷ್ಟು ಅನುಕೂಲಕರವಾದ ದಿನವಲ್ಲ ಎಂದೇ ಹೇಳಬಹುದು. ವಿಪರೀತವಾದ ಮಾನಸಿಕ ಒತ್ತಡ ಕಾಡುವುದು. ದೇಹದಲ್ಲಿ ಆಯಾಸ ಹಾಗೂ ಹತ್ತಿರದವರಿಂದ ದ್ರೋಹ ಉಂಟಾಗುವ ಸಾಧ್ಯತೆ ಹೆಚ್ಚು. ಆಂತರಿಕ ವಿಚಾರವನ್ನು ಇತರರೊಂದಿಗೆ ಹಂಚಿಕೊಳ್ಳದಿರಿ. ಹಣ ಅಥವಾ ಆಭರಣವನ್ನು ಗಿರವಿ ಇಡದಿರಿ. ಸ್ತ್ರೀಯರಿಂದ ಅಪಮಾನ ಉಂಟಾಗುವುದು. ಉತ್ತಮ ಜೀವನಕ್ಕಾಗಿ ಆಂಜನೇಯ ಮತ್ತು ಶಿವನನ್ನು ಆರಾಧಿಸಿ.

ಮಕರ:

ಮಕರ:

ಇಂದು ನಿಮಗೆ ಅನಿರೀಕ್ಷಿತವಾಗಿ ಬಂಧು ಮಿತ್ರರ ಸಹಕಾರ ದೊರೆಯುವುದು. ಅನಿವಾರ್ಯ ಕಾರಣಕ್ಕಾಗಿ ದೂರದ ಪ್ರದೇಶಕ್ಕೆ ಪ್ರಯಾಣ ಮಾಡುವ ಸಾಧ್ಯತೆ ಇದೆ. ದೇಹದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವೃದ್ಧರಿಗೆ ವೀಳ್ಯದೆಲೆಯ ದಾನ, ಅನಾಥ ಮಕ್ಕಳಿಗೆ ಆಶ್ರಯ ನೀಡುವುದರ ಮೂಲಕ ಪುಣ್ಯವನ್ನು ಗಳಿಸಿ. ಯಶಸ್ವಿ ಬದುಕಿಗಾಗಿ ಹನುಮಂತ ದೇವರ ಆರಾಧನೆ ಮಾಡಿ.

ಕುಂಬ:

ಕುಂಬ:

ಸಮಾಧಾನದ ಬದುಕನ್ನು ಸ್ತ್ರೀಯರು ಪಡೆದುಕೊಳ್ಳುತ್ತಾರೆ. ಅನೇಕ ದಿನದಿಂದ ತೀರ್ಮಾನಗೊಳ್ಳದ ವಿಚಾರಗಳು ಇಂದು ನಿರ್ಣಯವನ್ನು ಪಡೆದುಕೊಳ್ಳುತ್ತದೆ. ಸಹೋದರರಿಂದ ಸಹಕಾರ ಹಾಗೂ ಆಸ್ತಿ ಖರೀದಿಸುವ ಸಾಧ್ಯತೆ ಇದೆ. ಉತ್ತಮ ಜೀವನಕ್ಕಾಗಿ ಆಂಜನೇಯನ ಆರಾಧನೆ ಮಾಡಿ.

ಮೀನ:

ಮೀನ:

ಇಂದು ನಿಮಗೆ ಶುಭಕರವಾದ ದಿನ ಎಂದು ಹೇಳಬಹುದು. ವ್ಯಾಪಾರ ವಹಿವಾಟುಗಳಲ್ಲಿ ಸಮೃದ್ಧಿ ಲಭಿಸುವುದು. ದೂರದ ಸಂಬಂಧಿಗಳು ಅಗಲಿದ ವಾರ್ತೆಯನ್ನು ಕೇಳುವ ಸಾಧ್ಯತೆ ಇದೆ. ವಾಹನಚಲಿಸುವಾಗ ಆದಷ್ಟು ಜಾಗೃತರಾಗಿರುವುದು ಸೂಕ್ತ. ಹೊಸ ಉದ್ಯೋಗದಲ್ಲಿ ಕೈ ಹಾಕಿದವರಿಗೆ ಒಳ್ಳೆಯ ಲಾಭ ದೊರೆಯುವುದು. ಯಶಸ್ವಿ ಜೀವನಕ್ಕಾಗಿ ಆಂಜನೇಯ ಹಾಗೂ ಶಿವನ ಆರಾಧನೆ ಮಾಡಿ.

Read more about: ಭವಿಷ್ಯ
English summary

rashi bhavishya november 4th

rashi bhavishya november 4th
Story first published: Saturday, November 4, 2017, 7:00 [IST]