For Quick Alerts
ALLOW NOTIFICATIONS  
For Daily Alerts

ಅಮ್ಮ ಎಂದರೆ ಏನೋ ಹರುಷವೂ ನಮ್ಮ ಪಾಲಿಗೆ ಆಕೆಯೇ ದೈವವು

By Jayasubramanya
|

ಅಮ್ಮ ಎಂದರೆ ಏನೋ ಹರುಷವೂ ನಮ್ಮ ಪಾಲಿಗೆ ಆಕೆಯೇ ದೈವವು ಎಂಬ ಜನಪ್ರಿಯ ಹಾಡಿನ ಸಾಲನ್ನು ನೀವು ಕೇಳಿರುತ್ತೀರಿ. ಅಮ್ಮ ಎಂದರೆ ಆಕೆ ಸರ್ವಸ್ವವನ್ನೂ ತಮ್ಮ ಮಕ್ಕಳ ಒಳಿತಿಗಾಗಿ ತ್ಯಾಗ ಮಾಡುವವರು. ತಮ್ಮ ಸಂತೋಷವನ್ನು ಮಕ್ಕಳ ಸುಖದಲ್ಲಿ ಕಾಣುವವರು. ಜಗತ್ತಿನಲ್ಲಿ ಕೆಟ್ಟ ಮಕ್ಕಳು ಇರುತ್ತಾರೆ ಆದರೆ ಕೆಟ್ಟ ತಾಯಿ ಖಂಡಿತ ಇರಲೂ ಸಾಧ್ಯವಿಲ್ಲ ಎಂಬ ಮಾತಿನಂತೆ ಯಾವುದೇ ತಾಯಿ ತನ್ನ ಮಕ್ಕಳಿಗೆ ಕೆಟ್ಟದಾಗಲಿ ಎಂದು ಎಂದಿಗೂ ಬಯಸಲಾರರು. ಅಮ್ಮಂದಿರ ದಿನ ವಿಶೇಷ: ನೆನಪಿರಲಿ 'ಸ್ತನ ಕ್ಯಾನ್ಸರ್'-ಬಹಳ ಡೇಂಜರ್!

ಆಕೆಗೆ ತನ್ನ ಪತಿ ಮತ್ತು ಮಕ್ಕಳೇ ಪ್ರಪಂಚ ಸರ್ವಸ್ವವಾಗಿರುತ್ತಾರೆ. ಆಕೆಗೆ ಇದರ ಮುಂದೆ ಬೇರೆಲ್ಲವೂ ನಗಣ್ಯವಾಗಿರುತ್ತದೆ. ಆಕೆ ಬೇರೆಯ ಅಂಶಗಳಿಗೆ ಬೆಲೆ ನೀಡುವುದೇ ಇಲ್ಲ ಮತ್ತು ಅದು ಅವರಿಗೆ ಬೇಕಾಗಿಯೂ ಇಲ್ಲ. ಅದಾಗ್ಯೂ ಅಮ್ಮಂದಿರ ದಿನವನ್ನು ಆಚರಿಸುವ ಮೂಲಕ ಆಕೆಯ ಸೇವೆಯನ್ನು ನಾವೆಲ್ಲರೂ ನೆನಪಿಸಿಕೊಂಡು ಆಕೆಗೆ ಇನ್ನಷ್ಟು ಹರುಷವನ್ನು ನೀಡಬಹುದಾಗಿದೆ. ಅಮ್ಮನೊಂದಿಗೂ ಸಮಯ ಕಳೆಯಿರಿ, ಆಕೆಗೂ ಖುಷಿ, ನಿಮಗೂ ನೆಮ್ಮದಿ

ನಿಜವಾಗಿ ಹೇಳಬೇಕೆಂದರೆ ಪ್ರತಿಯೊಂದು ದಿನವೂ ಅಮ್ಮಂದಿರ ದಿನವೇ. ಆಕೆಯ ತ್ಯಾಗ, ಪ್ರೀತಿ ಪ್ರೇಮಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಆದರೂ ಈ ಅಮ್ಮಂದಿರ ದಿನದಂದು ನೀವು ಏನಾದರೂ ವಿಶೇಷವಾಗಿರುವುದನ್ನು ಮಾಡಿ ಅಮ್ಮನನ್ನು ಖುಷಿ ಪಡಿಸಬೇಕು ಎಂದಿದ್ದಲ್ಲಿ ಕೆಲವೊಂದು ಅಂಶಗಳನ್ನು ಈ ಕೆಳಗೆ ನಾವು ನೀಡುತ್ತಿದ್ದೇವೆ. ಈ ಕೊಡುಗೆಗಳನ್ನು ಅಮ್ಮನಿಗೆ ನೀಡಿ ಅವರ ಸಂತಸದಲ್ಲಿ ನೀವು ಪಾಲ್ಗೊಳ್ಳಿ....

ಗಿಫ್ಟ್ ಬಾಸ್ಕೆಟ್

ಗಿಫ್ಟ್ ಬಾಸ್ಕೆಟ್

ತನಗಾಗಿ ಆಕೆ ಕೊಂಡುಕೊಳ್ಳಬೇಕು ಎಂದು ಬಯಸಿದ್ದ ಸೌಂದರ್ಯ ಪರಿಕರಗಳನ್ನು ನೀವೇ ಖರೀದಿಸಿ ಅದನ್ನು ಕೊಡುಗೆಯಾಗಿ ಅವರಿಗೆ ನೀಡಿ. ಇದರಿಂದ ಆಕೆಯೂ ತನ್ನ ಮಕ್ಕಳು ತನಗಾಗಿ ಖರೀದಿಸಿದ್ದು ಎಂಬುದಾಗಿ ಭಾವಿಸಿ ಅದವನ್ನು ತೊಟ್ಟುಕೊಳ್ಳುತ್ತಾರೆ.

ಪಾರ್ಟಿ ಸಿದ್ಧಪಡಿಸಿ

ಪಾರ್ಟಿ ಸಿದ್ಧಪಡಿಸಿ

ಆಕೆ ಎಷ್ಟೋ ಬಾರಿ ಭೇಟಿ ಮಾಡಬೇಕೆಂದು ಬಯಸಿದ್ದ ಸ್ನೇಹಿತರೆಲ್ಲರನ್ನೂ ಒಂದೆಡೆ ಬರಹೇಳಿ ಒಂದು ಸಣ್ಣ ಆಶ್ವರ್ಯಕರ ಪಾರ್ಟಿಯನ್ನು ಸಿದ್ಧಪಡಿಸಿ. ಆಕೆ ಸಂತೋಷಗೊಳ್ಳುವುದನ್ನು ನೋಡಿ ನೀವೇ ಕಣ್ತುಂಬಿಕೊಳ್ಳಬಹುದು.

ನಿಮ್ಮ ಸಮಯವನ್ನು ಆಕೆಗೆ ನೀಡಿ

ನಿಮ್ಮ ಸಮಯವನ್ನು ಆಕೆಗೆ ನೀಡಿ

ತಂದೆ ತಾಯಂದಿರಿಗೆ ವಯಸ್ಸಾಗುತ್ತಿದ್ದಂತೆ ಅವರನ್ನು ಇನ್ನಷ್ಟು ಕಾಳಜಿಯಿಂದ ನಾವು ನೋಡಿಕೊಳ್ಳಬೇಕು. ಆಕೆಯನ್ನು ಈ ವಿಶೇಷ ದಿನದಂದು ಹೊರಗೆ ಕರೆದುಕೊಂಡು ಹೋಗಿ ಶಾಪಿಂಗ್ ಮಾಡಿಸಿ. ಆಕೆಯ ಮೆಚ್ಚಿನ ತಿಂಡಿ ತಿನಿಸನ್ನು ಆಕೆಗೆ ಕೊಡಿಸಿ. ಅವರು ಮುಕ್ತರಾಗಿ ಪಾಲ್ಗೊಳ್ಳುವಂತೆ ಮಾಡಿ.

ಮನೆಕೆಲಸದಲ್ಲಿ ಆಕೆಗೆ ನೆರವಾಗಿ

ಮನೆಕೆಲಸದಲ್ಲಿ ಆಕೆಗೆ ನೆರವಾಗಿ

ನಿಮ್ಮ ಅಮನಿಗೆ ಕೈದೋಟ ಮಾಡುವುದು ಮತ್ತು ಮನೆಯನ್ನು ಅಲಂಕರಿಸಿಟ್ಟುಕೊಳ್ಳುವುದು ಹೆಚ್ಚು ಇಷ್ಟದ ಸಂಗತಿ ಎಂದಾದಲ್ಲಿ ಆಕೆಯೊಂದಿಗೆ ಇದಕ್ಕಾಗಿ ನೆರವಾಗಿ. ಆಕೆ ನಿಜಕ್ಕೂ ಸಂತೋಷಗೊಳ್ಳುತ್ತಾಳೆ.

ಆಕೆಯೊಂದಿಗೆ ಕೆಲಸದಲ್ಲಿ ಸಹಕರಿಸಿ

ಆಕೆಯೊಂದಿಗೆ ಕೆಲಸದಲ್ಲಿ ಸಹಕರಿಸಿ

ಮರುದಿನ ಮಾಡಬೇಕಾದ ಕೆಲಸದ ಪಟ್ಟಿಯನ್ನು ಅಮ್ಮಂದಿರು ಸಿದ್ಧಪಡಿಸಿಕೊಂಡಿರುತ್ತಾರೆ. ನಿಮ್ಮ ತಂದೆಯನ್ನು ಜತೆಗೂಡಿಸಿಕೊಂಡು ಅವರಿಗೆ ತಿಳಿಯುವ ಮುನ್ನವೇ ಆ ಕೆಲಸವನ್ನು ನೀವು ಮಾಡಿ. ಇದರಿಂದ ಅವರು ಸಂತೋಷಗೊಳ್ಳುವುದು ಮಾತ್ರವಲ್ಲದೆ ನಿಮ್ಮ ಕಾಳಜಿಯನ್ನು ಅವರು ಮೆಚ್ಚಿಕೊಳ್ಳುತ್ತಾರೆ.

ವಿಡಿಯೋ ಕರೆ ಮಾಡಿ

ವಿಡಿಯೋ ಕರೆ ಮಾಡಿ

ನೀವು ಆಕೆಯಿಂದ ದೂರ ಇದ್ದೀರಿ ಎಂದಾದಲ್ಲಿ ಆಕೆಗೆ ತಿಳಿಸದೆಯೇ ಆಕೆಯನ್ನು ಭೇಟಿಯಾಗಿ. ಹೀಗೆ ನಿಮಗೆ ಭೇಟಿ ನೀಡಲು ಸಾಧ್ಯವಾಗಿಲ್ಲ ಎಂದಾದಲ್ಲಿ ವೀಡಿಯೊ ಕರೆಗಳನ್ನು ಮಾಡಿ ಆಕೆಯನ್ನು ಸಂತೋಷಗೊಳಿಸಿ. ನಿಮ್ಮನ್ನು ಪ್ರತೀ ದಿನವೂ ನೋಡಬೇಕೆಂಬ ಹಂಬಲ ಆಕೆಗೆ ಇರುತ್ತದೆ ಎಂಬುದನ್ನು ಮಾತ್ರ ಮರೆಯಬೇಡಿ

English summary

How To Make Your Mum Feel Special On Mother's Day

These amazing things that you can do for your mom on Mother's day will surely make her feel very special. Check them out.
X
Desktop Bottom Promotion