For Quick Alerts
ALLOW NOTIFICATIONS  
For Daily Alerts

ನಿದ್ದೆಯಲ್ಲಿ ಕಂಡ ಕನಸು ಏಕೆ ಮರೆತು ಹೋಗುತ್ತದೆ? ಏನಿದರ ರಹಸ್ಯ?

ಒಮ್ಮೊಮ್ಮೆ ನಮಗೆ ಬಿದ್ದ ಕನಸು ಅರೆಬರೆಯಾಗಿ ನಮ್ಮ ಮೆದುಳಿನಲ್ಲಿ ಉಳಿಯುತ್ತದೆ. ಆದರೆ ಅದರ ಸರಿಯಾದ ಚಿತ್ರಣ ಲಭ್ಯವಾಗುವುದೇ ಇಲ್ಲ..

By Jaya Subramanya
|

ನೀವು ಸಹಿಯಾದ ನಿದ್ದೆಯಲ್ಲಿರುವಾಗ ನಿಮಗೆ ಬೀಳುವ ಕನಸು ಮುಂಜಾನೆ ನೆನಪಿರುವುದಿಲ್ಲ ಇದು ಏಕೆ ಎಂಬುದು ನಿಮಗೆ ಗೊತ್ತೇ? ಹೌದು ಈ ಕನಸುಗಳನ್ನು ನಾವು ಎಷ್ಟು ನೆನಪು ಮಾಡಿಕೊಂಡರೂ ಅದು ನಮಗೆ ನೆನಪಿಗೆ ಬರುವುದೇ ಇಲ್ಲ. ನಮ್ಮ ಕನಸುಗಳು ಮರೆತು ಹೋಗುವುದು ಏಕೆ ಎಂಬುದನ್ನು ಕುರಿತು ಇಂದಿನ ಲೇಖನದಲ್ಲಿ ನಾವು ವಿವರವಾಗಿ ತಿಳಿಸಲಿದ್ದೇವೆ. ನಿದ್ದೆಯೆಂಬ ಅಮೂಲ್ಯ ವರಕ್ಕಿರುವ ಕರಾಮತ್ತೇನು?

ನಮಗೆ ಹೆಚ್ಚು ಆಯಾಸವಾಗಿದ್ದು ನಾವು ಒಳ್ಳೆಯ ನಿದ್ದೆಯಲ್ಲಿರುವ ಸಂದರ್ಭದಲ್ಲಿ ಬೀಳುವ ಕನಸುಗಳು ನಮಗೆ ನೆನಪಿಗೆ ಬರುವುದೇ ಇಲ್ಲ. ಈ ಕನಸುಗಳು ಒಳ್ಳೆಯದೂ ಆಗಿರಬಹುದು ಅಥವಾ ಕೆಟ್ಟದ್ದೂ ಆಗಿರಬಹುದು. ಇನ್ನು ಮುಂಜಾನೆ ಬಿದ್ದ ಕನಸು ಫಲಿಸುತ್ತದೆ ಎಂಬ ಮಾತೂ ಇದೆ. ಒಮ್ಮೊಮ್ಮೆ ನಮಗೆ ಬಿದ್ದ ಕನಸು ಅರೆಬರೆಯಾಗಿ ನಮ್ಮ ಮೆದುಳಿನಲ್ಲಿ ಉಳಿಯುತ್ತದೆ. ಆದರೆ ಅದರ ಸರಿಯಾದ ಚಿತ್ರಣ ಲಭ್ಯವಾಗುವುದೇ ಇಲ್ಲ.. ಹತ್ತು ಸಾಮಾನ್ಯ ಕನಸುಗಳು ಮತ್ತು ಅವುಗಳ ಅರ್ಥ

ಇಂದಿನ ಲೇಖನದಲ್ಲಿ ಕನಸುಗಳು ನಮಗೆ ಏಕೆ ಮರೆತು ಹೋಗುತ್ತದೆ ಎಂಬುದರ ಕುರಿತು ವಿವರವಾದ ಮಾಹಿತಿಯನ್ನು ತಿಳಿಸಲಿದ್ದೇವೆ. ಈ ಕನಸುಗಳು ನಮಗೆ ಏಕೆ ಜ್ಞಾಪಕಕ್ಕೆ ಬರುವುದಿಲ್ಲ ಎಂಬುದರ ವಿವರ ಮಾಹಿತಿ ಇಲ್ಲಿದ್ದು ಇದನ್ನು ಅರಿತುಕೊಳ್ಳಿ.

interesting facts

ಕನಸಿನಲ್ಲಿ ನಾವು ಕಣ್ಣುಗಳನ್ನು ತಿರುಗಿಸುತ್ತೇವೆ
ನಾವು ನಿದ್ರಿಸುತ್ತಿರುವಾಗ ನಮ್ಮ ಕಣ್ಣುಗಳನ್ನು ನಾವು ತಿರುಗಿಸುತ್ತೇವೆ. ನಾವು ನಿದ್ದೆಯ ಆಳದಲ್ಲಿದ್ದಾಗ ಇದು ಸಂಭವಿಸುತ್ತದೆ. ಇದನ್ನು "ಕ್ಷಿಪ್ರ ಕಣ್ಣಿನ ಚಲನೆ" ಎಂಬುದಾಗಿ ಕೂಡ ಕರೆಯಲಾಗುತ್ತದೆ.

ಈ ಸಮಯದಲ್ಲೇ ಹೆಚ್ಚು ಕನಸುಗಳು ಬೀಳುತ್ತವೆ
ಈ ಹಂತದಲ್ಲೇ ಹೆಚ್ಚಿನ ಕನಸುಗಳು ಬೀಳುತ್ತವೆ ಎಂಬುದಾಗಿ ಸಂಶೋಧಕರು ಅಭಿಪ್ರಾಯಿಸುತ್ತಾರೆ. ಆದರೆ ನಂತರ ಈ ಅಭಿಪ್ರಾಯ ಸುಳ್ಳಾಗಿದೆ. ನಿದ್ದೆಯ ಯಾವುದೇ ಹಂತದಲ್ಲಿ ಕೂಡ ಕನಸುಗಳು ಬೀಳುತ್ತವೆ ಎಂಬುದು ನಂತರ ಅಧ್ಯಯನಗಳಿಂದ ಸಾಬೀತಾಗಿದೆ.

ಕನಸುಗಳ ನಿಗೂಢವಾದ ಲೋಕ
ಕನಸುಗಳನ್ನು ನಾವು ಏಕೆ ಮರೆಯುತ್ತೇವೆ ಎಂಬುದಾಗಿ ಇಂದಿಗೂ ವಿಜ್ಞಾನಿಗಳು ಸಂಶೋಧನೆಯನ್ನು ನಡೆಸುತ್ತಿದ್ದು ಇದು ಅವರಿಗೆ ಬಿಡಿಸಲಾಗದ ರಹಸ್ಯವಾಗಿ ಉಳಿದಿದೆ. ಆದರೆ ಇದುವರೆಗೆ ಈ ತನಿಖೆಯನ್ನು ಸಾಬೀತುಪಡಿಸಲು ಅವರಿಂದ ಆಗಿಲ್ಲ.

ಕೆಲವೊಂದು ನಂಬಿಕೆ ಏನೆಂದರೆ
ಸಮಸ್ಯೆಯನ್ನು ಬಗೆಹರಿಸುವ ವಿಧಾನವಾಗಿ ವಿಜ್ಞಾನಿಗಳು ಕನಸನ್ನು ಕರೆದಿದ್ದಾರೆ. ಆದರೆ ಇತರರು ಇದನ್ನು ದೇಹದ ಒಂದು ಕ್ರಿಯೆ ಎಂಬುದಾಗಿ ಕೂಡ ಕರೆದಿದ್ದಾರೆ. ಆದರೆ ನಾವೆಲ್ಲರೂ ಕಂಡುಕೊಂಡಿರುವ ಒಂದು ಅಂಶವೆಂದರೆ ನಾವೆಲ್ಲರೂ ಕನಸು ಕಾಣುತ್ತೇವೆ ಎಂದಾಗಿದೆ.

ನಮ್ಮ ನಿದ್ದೆಯ ಗುಣಮಟ್ಟ ಇದರಲ್ಲಡಗಿದೆ
ನಮ್ಮ ನಿದ್ದೆಯ ಗುಣಮಟ್ಟವನ್ನು ಅರಿತುಕೊಂಡು ಕನಸನ್ನು ನಾವು ಜ್ಞಾಪಿಸಿಕೊಳ್ಳುತ್ತೇವೋ ಇಲ್ಲವೋ ಎಂಬುದು ಮನದಟ್ಟಾಗುತ್ತದೆ. ಇದನ್ನು ಅನುಸರಿಸಿಯೇ ಕೆಲವೊಂದು ಕನಸನ್ನು ನಾವು ಜ್ಞಾಪಿಸಿಕೊಳ್ಳುತ್ತೇವೆ ಮತ್ತೆ ಕೆಲವು ಕನಸನ್ನು ನಾವು ಮರೆತುಬಿಡುತ್ತೇವೆ.

English summary

Ever Wondered Why We Usually Forget Our Dreams?

When you have a sound sleep and wake up after a long time and try to recall the dreams, then we may not be able to recall them. It confuses us, as we tend to forget what we'd dreamt about. Have you ever wondered why we forget our dreams?Here, in this article, we are about to share some of the reasons as to why we humans tend to forget their dreams.
X
Desktop Bottom Promotion