Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈಕೆಯ ಟೀ ರುಚಿಗೆ ಆಸ್ಟ್ರೇಲಿಯಾದ ಜನರೇ ಫಿದಾ ಆಗಿಬಿಟ್ಟರು!
ಈ ವರ್ಷದ ಪ್ರತಿಷ್ಠಿತ "Australia's Businesswoman Of The Year" ಪಟ್ಟವನ್ನು ಇಪ್ಪತ್ತಾರು ವರ್ಷ ವಯಸ್ಸಿನ ಭಾರತೀಯ ಸಂಜಾತೆಯಾಗಿರುವ ಉಪ್ಪಮಾ ವರ್ದಿಯವರು ಪಡೆದು ಸುದ್ದಿಯಾಗಿದ್ದಾರೆ. ತನ್ನ ಅಜ್ಜನಿಂದ ಆಯುರ್ವೇದೀಯ ಟೀ ತಯಾರಿಸುವ ಕಲೆಯನ್ನು ಕಲಿತ ಈಕೆ ಇದೇ ವಿದ್ಯೆಯ ಮೂಲಕ ಈ ಗರಿಮೆಯನ್ನು ಸಾಧಿಸಿದ್ದಾರೆ.
ಇವರು ಭಾರತೀಯ ಮೂಲಕ ವಕೀಲರಾಗಿದ್ದು ಆಸ್ಟ್ರೇಲಿಯಾದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ತಮ್ಮ ಅಜ್ಜನಿಂದ ಕಲಿತ ಟೀ ತಯಾರಿಸುವ ವಿದ್ಯೆಯನ್ನೇಕೆ ವಾಣಿಜ್ಯರೂಪದಲ್ಲಿ ಬಳಸಬಾರದು ಎಂಬ ಯೋಚನೆ ಬಂದಿತ್ತು.

Image Courtesy
ಎರಡು ವರ್ಷಗಳ ಹಿಂದೆ ಈಕೆ ಒಂದು ಟೀ ಅಂಗಡಿಯನ್ನು ಪ್ರಾರಂಭಿಸಿಯೇ ಬಿಟ್ಟರು. ಅಜ್ಜನಿಂದ ಕಲಿತ ಟೀ ಮಾಡುವ ವಿದ್ಯೆಯ ರುಚಿ ಆಸ್ಟ್ರೇಲಿಯನ್ನರ ನಾಲಿಗೆಗೆ ಹತ್ತಲು ಹೆಚ್ಚಿನ ಸಮಯ ಕಬಳಿಸಲಿಲ್ಲ. ಇದರ ಪರಿಣಾಮದಿಂದ ಈಕೆ ಇಂದು ವಿಶ್ವವಿಖ್ಯಾತಿ ಪಡೆದಿದ್ದಾಳೆ.
Image Courtesy
Image Courtesy
ತನ್ನ ಟೀ ಅಂಗಡಿಗೆ 'ಛಾಯ್ ವಾಲಿ' ಅಥವಾ ಟೀ ಮಾರುವವಳು ಎಂದೇ ಹೆಸರಿಟ್ಟಿರುವ ಈಕೆ ಬರೇ ಟೀ ಮಾರುತ್ತಾ ಸುಮ್ಮನಿರಲಿಲ್ಲ. ಬದಲಿಗೆ ತನ್ನಂತೆಯೇ ವ್ಯಾಪಾರ ಮಾಡುತ್ತಿರುವವರೊಂದಿಗೆ ಬೆರೆತು ತನ್ನ ಜನರ ಮತ್ತು ವಾಣಿಜ್ಯ ವ್ಯಕ್ತಿಗಳನ್ನು ಸಂಘಟಿಸಿ ನಾಯಕತ್ವವನ್ನೂ ವಹಿಸಿದಳು.
Image Courtesy
ಈ ಟೀಯಲ್ಲಿ ಭಾರತದ ಕೆಲವು ಅಮೂಲ್ಯ ಗಿಡಮೂಲಿಕೆಗಳಿದ್ದು ಇದರ ಸೇವನೆಯಿಂದ ಮನಸ್ಸಿಗೆ ನಿರಾಳ ಮಾತ್ರವಲ್ಲ, ಆರೋಗ್ಯವೂ ವೃದ್ಧಿಸುವುದನ್ನು ಗಮನಿಸಿದ ಜನರು ಈಕೆಯ ವ್ಯಾಪಾರವನ್ನು ಗಗನಕ್ಕೇರಿಸಿದರು. ಊರಿನಿಂದ ದೂರವಿರುವವರಿಗೂ ಈ ಟೀ ತಲುಪುವಂತೆ ಆಕೆ ಆನ್ಲೈನ್ ಮಾರಾಟವನ್ನು ಪ್ರಾರಂಭಿಸಿದ ಬಳಿಕವಂತೂ ಈ ವ್ಯಾಪಾರಕ್ಕೆ ಎಣೆಯೇ ಇಲ್ಲವಾಯಿತು.
Image Courtesy
ಈಕೆ ತನ್ನ ಟೀಯಲ್ಲಿ ಯಾವ ಯಾವ ಗಿಡಮೂಲಿಕೆಗಳನ್ನು ಎಷ್ಟು ಮತ್ತು ಹೇಗೆ ಬಳಸುತ್ತಿದ್ದಾರೆ ಎಂಬುದು ಇತರರಿಗೆ ಗೊತ್ತಾಗದ ಕಾರಣ ಇವರಿಗೆ ಪ್ರತಿಸ್ಪರ್ಧೆಯೇ ಇಲ್ಲವಾಯಿತು.
Image Courtesy
Image Courtesy
ಆದರೆ ಆಸಕ್ತರಿಗೆ ಈ ಟೀಯನ್ನು ತಯಾರಿಸುವುದು ಹೇಗೆ ಎಂಬುದನ್ನು ಮಾತ್ರ ಈಕೆ 'The Art of Chai' ಎಂಬ ಪಾಠ ಶಾಲೆಯಲ್ಲಿ ವಿವರಿಸುತ್ತಾರೆ. ಯಾರೇ ಆಗಲಿ, ತಮಗೆ ಅತ್ಯಂತ ಆಸಕ್ತಿ ಇರುವ ವಿಷಯದಲ್ಲಿ ಹೆಚ್ಚಿನದನ್ನು ಸಾಧಿಸುವುದು ಹೇಗೆ ಎಂಬುದನ್ನು ಈಕೆಯಿಂದ ಕಲಿಯಲು ಒಂದು ಮಾದರಿಯಾಗಿದ್ದಾರೆ.
Image Courtesy
ಈಕೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆಯುತ್ತಿರುವ ಹೆಮ್ಮೆಯ ಕ್ಷಣಗಳನ್ನು ಕೆಳಗಿನ ವೀಡಿಯೋ ಮೂಲಕ ನೋಡಿ ಭಾರತೀಯರಾದ ನಾವೆಲ್ಲರೂ ಆಕೆಯನ್ನು ಮುಕ್ತಕಂಠದಿಂದ ಅಭಿನಂದಿಸೋಣ.
Image Courtesy
A video posted by Chai Walli (@chai_walli) on



Click it and Unblock the Notifications








