For Quick Alerts
ALLOW NOTIFICATIONS  
For Daily Alerts

ಬರ್ಹಿಮುಖಿಗಳ ಕೆಲವೊಂದು ಅನುಕೂಲಗಳು

By Hemanth P
|

ಬರ್ಹಿಮುಖಿಗಳು ಯಾವುದೇ ಪಾರ್ಟಿ ಅಥವಾ ಸಾಮಾಜಿಕ ಕೂಟದ ಜೀವ. ಅವರು ತಮ್ಮ ಮಾತಿನ ಮೂಲಕವೇ ಸುತ್ತಲಿನ ಜನರನ್ನು ಮನರಂಜಿಸುತ್ತಾರೆ. ಬರ್ಹಿಮುಖಿಗಳು ತಾವಿರುವ ಸ್ಥಳಕ್ಕೆ ಲವಲವಿಕೆ ಮತ್ತು ಉತ್ಸಾಹ ತುಂಬಿ ಯಾವುದೇ ಪರಿಸ್ಥಿತಿಯಲ್ಲೂ ಶಕ್ತಿ ಇರುವಂತೆ ಮಾಡುತ್ತಾರೆ. ಬರ್ಹಿಮುಖಿಗಳ ಸಂವಹನ ಗುಣಗಳು ಅವರು ದೊಡ್ಡ ಅನುಕೂಲ.

ಬರ್ಹಿಮುಖಿಯಾಗಿರುವುದರಿಂದ ಹಲವಾರು ರೀತಿಯ ಅನುಕೂಲಗಳಿವೆ. ಹೊಸ ಜನರನ್ನು ಭೇಟಿಯಾಗುವುದು ಹಾಗೂ ಹಲವಾರು ಮಂದಿಯನ್ನು ಸ್ನೇಹಿತರಾಗಿ ಮಾಡಿಕೊಳ್ಳುವ ಜತೆಗೆ ಬರ್ಹಿಮುಖಿಗಳಿಗೆ ಹಲವಾರು ರೀತಿಯ ವೈಯಕ್ತಿಕ ಲಾಭಗಳಿವೆ. ಅವರಿಗೆ ಗಮನಸೆಳೆಯಲು ಏನಾದರೂ ವಿಶೇಷ ಮಾಡಬೇಕೆಂದಿಲ್ಲ. ಅವರ ಬಗ್ಗೆ ಯಾವಾಗಲೂ ಗಮನವಿದ್ದೇ ಇರುತ್ತದೆ.

ಬರ್ಹಿಮುಖಿಯಾಗಿರುವ ಕೆಲವೊಂದು ಲಾಭಗಳು ಇಲ್ಲಿವೆ

1. ಸಾಮಾಜಿಕ ಚಟುವಟಿಕೆ

1. ಸಾಮಾಜಿಕ ಚಟುವಟಿಕೆ

ಬರ್ಹಿಮುಖಿಗಳ ಮೂಲ ಅಗತ್ಯವೆಂದರೆ ಎಲ್ಲಾ ಸಮಯ ಅಥವಾ ಹೆಚ್ಚಿನ ಸಮಯದಲ್ಲಿ ಉತ್ಸಾಹದ ಚಿಲುಮೆಯಾಗಿರುವುದು. ಇದರಿಂದ ಅವರು ಯಾವಾಗಲೂ ವೈಯಕ್ತಿಕ ಅಥವಾ ವೆಬ್ ನಲ್ಲಿ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿರುತ್ತಾರೆ. ಇದರಿಂದ ಅವರು ಹೊಸ ಜನರ ಸಂಪರ್ಕ ಸಾಧಿಸುತ್ತಾರೆ ಮತ್ತು ಜೀವನದಲ್ಲಿ ಹಲವು ಹೊಸ ಅನುಭವ ಪಡೆಯುತ್ತಾರೆ. ಇದು ಬರ್ಹಿಮುಖಿಗಳ ಒಂದು ಅನುಕೂಲ, ಅವರು ಇತರರನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ ಮತ್ತು ಇತರರ ಮಧ್ಯೆ ಯಾವಾಗಲೂ ಗಮನಸೆಳೆಯುವವರಾಗಿರುತ್ತಾರೆ. ತಮ್ಮ ಮಾತನಾಡುವ ಗುಣದಿಂದಾಗಿ ಬರ್ಹಿಮುಖಿಗಳಿಗೆ ಜನರನ್ನು ಸೆಳೆಯಲು ಸಾಧ್ಯವಾಗುತ್ತದೆ.

2. ವೇಗದ ಬೆಳವಣಿಗೆ

2. ವೇಗದ ಬೆಳವಣಿಗೆ

ಇತರ ಜನರಿಗೆ ಹೋಲಿಸಿದರೆ ಬರ್ಹಿಮುಖಿಗಳು ತಮ್ಮ ವೃತ್ತಿ ಹಾಗೂ ವೈಯಕ್ತಿಕ ಜೀವನದಲ್ಲಿ ಇತರರಗಿಂತ ಹೆಚ್ಚು ಬೆಳವಣಿಗೆ ಹೊಂದುತ್ತಾರೆ. ಇದು ಯಾಕೆಂದರೆ ಅವರು ತಮ್ಮ ಆತ್ಮವಿಶ್ವಾಸದಿಂದ ಜನರನ್ನು ಸುಲಭವಾಗಿ ಸೆಳೆಯುತ್ತಾರೆ. ಬರ್ಹಿಮುಖಿಗಳು ಕಡಿಮೆ ಸಮಯದಲ್ಲಿ ಒಳ್ಳೆಯ ಸಂಪರ್ಕ ಬೆಳೆಸಿ ತಮ್ಮ ಗುರಿ ಬೇಗನೆ ತಲುಪುತ್ತಾರೆ. ವೇಗದ ಬೆಳವಣಿಗೆ ಮತ್ತು ವೃತ್ತಿಯಲ್ಲಿ ಅತ್ಯುತ್ತಮ ಫಲಿತಾಂಶ ಪಡೆಯುವುದು ಬರ್ಹಿಮುಖಿಗಳ ಒಳ್ಳೆಯ ಅನುಕೂಲ.

3. ವ್ಯಕ್ತಪಡಿಸುವಿಕೆ

3. ವ್ಯಕ್ತಪಡಿಸುವಿಕೆ

ಬರ್ಹಿಮುಖಿಗಳು ತಮ್ಮ ಭಾವನೆಗಳನ್ನು ಬೇಗನೆ ವ್ಯಕ್ತಪಡಿಸುತ್ತಾರೆ. ಅವರು ಪ್ರತಿಯೊಬ್ಬರೊಂದಿಗೆ ತಮ್ಮ ಹೃದಯವನ್ನು ತೆರೆದಿಡುತ್ತಾರೆ. ಇದು ಬರ್ಹಿಮುಖಿಗಳ ಅನುಕೂಲ. ವ್ಯಕ್ತಪಡಿಸುವ ಗುಣವು ಅವರಿಗೆ ಒಳ್ಳೆಯ ಭಾವನೆ ಹಾಗೂ ಆರಾಮವಾಗಿರಲು ನೆರವಾಗುತ್ತದೆ. ಇದರಿಂದ ಅವರ ಎಲ್ಲಾ ಒತ್ತಡ ದೂರವಾಗಿ ಹಗುರವಾದ ಭಾವನೆ ಉಂಟುಮಾಡುತ್ತದೆ. ಬರ್ಹಿಮುಖಿಗಳು ಇತರರ ಬಗ್ಗೆ ತಮಗಿರುವ ಭಾವನೆ ಬಗ್ಗೆ ಹೇಳುತ್ತಾರೆ. ಇದರಿಂದ ಅವರ ಸುತ್ತ ಒಳ್ಳೆಯ ಸ್ನೇಹಿತರು ಇರುತ್ತಾರೆ. ಆದರೆ ಕೆಲವೊಂದು ಸಲ ಇದು ಶತ್ರುಗಳನ್ನು ಕೂಡ ಸೃಷ್ಟಿಸಬಹುದು.

4. ಆರೋಗ್ಯ

4. ಆರೋಗ್ಯ

ತುಂಬಾ ಮಾತನಾಡುವುದು ಮತ್ತು ತಮ್ಮ ಭಾವನೆಗಳನ್ನು ಬೇಗನೆ ವ್ಯಕ್ತಪಡಿಸುವುದು ಬರ್ಹಿಮುಖಿಗಳ ಆರೋಗ್ಯಕ್ಕೆ ಲಾಭದಾಯಕ. ಈ ಎರಡು ಗುಣಗಳು ಮನಸ್ಸು ಮತ್ತು ಆತ್ಮವನ್ನು ಆರಾಮವಾಗಿಡುತ್ತದೆ. ಒತ್ತಡ ಕಡಿಮೆಯಾದರೆ ಅದು ದೇಹದ ಮೇಲೆ ಬೀರುವ ಕೆಟ್ಟ ಪರಿಣಾಮ ತಡೆಯುತ್ತದೆ. ಯಾವುದೇ ವಿಷಯವನ್ನು ತಮ್ಮೊಳಗೆ ಇಟ್ಟುಕೊಂಡು ಕೊರಗುವ ಮತ್ತು ಕಡಿಮೆ ಮಾತನಾಡದೆ ಅಥವಾ ನಗದೆ ಇರುವ ವ್ಯಕ್ತಿಗಳು, ತುಂಬಾ ಮಾತನಾಡುವ ಮತ್ತು ಸಂತೋಷವಾಗಿರುವ ವ್ಯಕ್ತಿಗಳಿಗಿಂತ ಹೆಚ್ಚು ಅನಾರೋಗ್ಯಕ್ಕೆ ಒಳಗಾಗುತ್ತಾರೆ.

5. ಮನೋರಂಜನೆ

5. ಮನೋರಂಜನೆ

ಬರ್ಹಿಮುಖಿಗಳಿಗೆ ಬೇಗನೆ ಬೋರ್ ಆಗದು. ಅವರಲ್ಲಿ ಏನಾದರೂ ಇರುತ್ತದೆ ಮತ್ತು ಅದನ್ನು ಅವರು ಇತರರೊಂದಿಗೆ ಹಂಚಿಕೊಳ್ಳುತ್ತಾರೆ. ಇದರಿಂದಾಗಿ ಅವರು ತಮ್ಮ ಸುತ್ತಲು ಇರುವವರನ್ನು ಮನರಂಜಿಸುತ್ತಾರೆ. ಬರ್ಹಿಮುಖಿಗಳು ನಗರದಲ್ಲಿ ಹೆಚ್ಚು ಜನಪ್ರಿಯರಾಗುವ ಕಾರಣ ಇದು ಅವರಿಗೆ ಒಂದು ಅನುಕೂಲ. ಅವರು ಯಾವಾಗಲೂ ಆಕರ್ಷಣೆಯ ಕೇಂದ್ರಬಿಂದುವಾಗಿರುವ ಕಾರಣ ಜನರು ಅವರೊಂದಿಗೆ ಇರಲು ಇಷ್ಟಪಡುತ್ತಾರೆ. ಅವರು ಯಾವಾಗಲೂ ಲವಲವಿಕೆಯಲ್ಲಿರುವ ಕಾರಣ ಪರಿಸ್ಥಿತಿಗೆ ಶಕ್ತಿ ತುಂಬುತ್ತಾರೆ. ಆದರೆ ಇಲ್ಲಿರುವ ಅನನುಕೂಲವೆಂದರೆ ಕೆಲವೊಂದು ಸಲ ಬರ್ಹಿಮುಖಿಗಳನ್ನು ಜೋಕರ್ ಗಳೆಂದು ಪರಿಗಣಿಸಲಾಗುತ್ತದೆ. ಮಿತಿಯನ್ನು ದಾಟದಿರಲು ಪ್ರಯತ್ನಿಸಿ ಮತ್ತು ಜನರನ್ನು ಮನರಂಜಿಸುವಾಗ ಒಂದು ಮಿತಿಯಲ್ಲಿ ಇರಿ.

English summary

Benefits of being an extrovert

Extroverts are a group of people who can be the life of any party or social gathering. They are the ones who can entertain people around them with their talks. Extroverts keep the place lively and their enthusiasm can bring energy to any situation.
X
Desktop Bottom Promotion