For Quick Alerts
ALLOW NOTIFICATIONS  
For Daily Alerts

ಅಮಾವಾಸ್ಯೆ ಸೂರ್ಯಗ್ರಹಣ ಯಾವ ರಾಶಿಯ ಮೇಲೆ ಹೇಗೆ ಪ್ರಭಾವ ಬೀರಲಿದೆ?

|

ಡಿಸೆಂಬರ್ 26ರಂದು ಸಂಭವಿಸಲಿರುವ ಸೂರ್ಯಗ್ರಹಣ ಅಪರೂಪದ ಸೂರ್ಯಗ್ರಹಣವಾಗಿದೆ ಇದು ಮಾರ್ಗಶಿರ ಅಮಾವಾಸ್ಯೆಯ ಗುರುವಾರದಂದು ಸಂಭವಿಸಲಿದ್ದು ಭಾರತದ ದಕ್ಷಿಣ ಕಂಕಣ ಸೂರ್ಯಗ್ರಹಣ ಗೋಚರಿಸಿದರೆ ಭಾರತದ ಉಳಿದ ಭಾಗದಲ್ಲಿ ಖಂಡಗ್ರಾಸವಾಗಿರುವುದು. ಇನ್ನು ಕೊಡಗಿನ ಕುಟ್ಟದಲ್ಲಿ ಸಂಪೂರ್ಣ ಸುರ್ಯಗ್ರಹಣ ಗೋಚರಿಸಿರುವುದರಿಂದ ಅಲ್ಲಿ ಸೂರ್ಯಗ್ರಹಣ ನೋಡಲು ಸಕಲ ವ್ಯವಸ್ಥೆ ಮಾಡಲಾಗುತ್ತಿದೆ.

ಸೂರ್ಯಗ್ರಹಣ ಏಕಾಗುತ್ತದೆ?

ಸೂರ್ಯ ಹಾಗೂ ಭೂಮಿಯ ನಡುವೆ ಚಂದ್ರ ಬಂದಾಗ, ಚಂದ್ರನ ನೆರಳು ಭೂಮಿಯ ಮೇಲೆ ಬಿದ್ದು ಸೂರ್ಯನು ಮರೆಯಾಗುವುದನ್ನು ಸೂರ್ಯಗ್ರಹಣ ಎಂದು ಕರೆಯುತ್ತಾರೆ. ಸೂರ್ಯನು ಸಂಪೂರ್ಣವಾಗಿ ಅಗೋಚರವಾಗಿದ್ದರೆ ಖಗ್ರಾಸ ಸೂರ್ಯಗ್ರಹಣವೆಂದು, ಸೂರ್ಯನ ಅರ್ಧದಷ್ಟು ಗೋಚರವಾಗಿದ್ದರೆ ಖಂಡಗ್ರಾಸ ಸೂರ್ಯಗ್ರಹಣ ಎಂದು, ಚಂದ್ರ ಮರೆ ಮಾಡಿದರೂ ಕೂಡ ಸೂರ್ಯನ ಅಂಚುಗಳು ಸುತ್ತಲೂ ಉಂಗುರಾಕಾರದಲ್ಲಿ ಗೋಚರಿಸಿದರೆ ಕಂಕಣ ಸೂರ್ಯಗ್ರಹಣ ಎಂದು ಕರೆಯುತ್ತಾರೆ. ದಕ್ಷಿಣ ಭಾರತದಲ್ಲಿ ಕಂಕಣ ಸೂರ್ಯಗ್ರಹಣ ಗೋಚರಿಸಲಿದೆ.

ವರ್ಷಾಂತ್ಯದಲ್ಲಿ ಅಮಾವಾಸ್ಯೆಯೆಂದು ಗೋಚರಿಸಲಿರುವ ಸುರ್ಯಗ್ರಹಣದ ಗ್ರಹಣ ಪರ್ವ ಹಾಗೂ ಈ ಸೂರ್ಯಗ್ರಹಣ ಯಾವ ರಾಶಿಗಳ ಮೇಲೆ ಹೇಗೆ ಪ್ರಭಾವ ಬೀರಲಿದೆ ಎಂದು ಪಂಚಾಂಗದ ಆಧಾರದಲ್ಲಿ ಹೇಳಲಾಗಿದೆ ನೋಡಿ:

ಗ್ರಹಣ ಪರ್ವ (ಗ್ರಹಣ ಶುರುವಾಗಿ ಮೋಕ್ಷದವರಗಿನ ಕಾಲಾವಧಿ)

ಗ್ರಹಣ ಪರ್ವ (ಗ್ರಹಣ ಶುರುವಾಗಿ ಮೋಕ್ಷದವರಗಿನ ಕಾಲಾವಧಿ)

ಗ್ರಹಣದ ಆರಂಭ: ಬೆಳಗ್ಗೆ 8.8ರಿಂದ ಪ್ರಾರಂಭವಾಗುತ್ತದೆ

ಪೂರ್ಣ ಪ್ರಮಾಣದ ಸೂರ್ಯಗ್ರಹಣ 9.31

ಗ್ರಹಣದ ಅಂತ್ಯ: ಬೆಳಗ್ಗೆ 11.8ಕ್ಕೆ

ಪರ್ವ ಎಂದರೆ ಪುಣ್ಯಕಾಲ ಎಂದರ್ಥ. ಈ ಸಮಯದಲ್ಲಿ ದೇವರನ್ನು ಸ್ಮರಿಸುವುದರಿಂದ ಅನೇಕ ಆಧ್ಯಾತ್ಮಿಕ ಲಾಭಗಳಾಗುತ್ತವೆ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ದೇವರ ಧ್ಯಾನ ಮಾಡುವುದು ಒಳ್ಳೆಯದು. ಆಹಾರ ಸೇವನೆ, ನೀರು ಕುಡಿಯುವುದು, ಮೂತ್ರ, ಮಲ ವಿಸರ್ಜನೆಗೆ ಹೋಗುವುದು, ಹೆಣ್ಣು-ಗಂಡು ಕೂಡುವುದು ಮಾಡಬಾರದು. ಗ್ರಹಣದ ನಂತರ ಆಹಾರವನ್ನು ಮಾಡಿ ಸೇವಿಸಬೇಕು. ಅದರ ಮೊದಲು ಮಾಡಿಟ್ಟ ಆಹಾರವನ್ನು ತಿನ್ನಬಾರದು, ಈ ಸಮಯದಲ್ಲಿ ವಾತಾವರಣ ಕೂಡ ಕಲುಷಿತವಾಗುವುದರಿಂದ ಗ್ರಹಣಕ್ಕೆ ಮುನ್ನ ಮಾಡಿಟ್ಟ ಆಹಾರ ಸೇವನೆ ಮಾಡಿದರೆ ಅನಾರೋಗ್ಯ ಉಂಟಾಗುತ್ತದೆ.

ಜ್ಯೋತಿಷ್ಯಶಾಸ್ತ್ರ ಏನು ಹೇಳುತ್ತದೆ?

ಜ್ಯೋತಿಷ್ಯಶಾಸ್ತ್ರ ಏನು ಹೇಳುತ್ತದೆ?

26 ಡಿಸೆಂಬರ್ 2019 ರಂದು ಸಂಭವಿಸಲಿರುವ ಷಷ್ಠಿ ಗ್ರಹ ಕೂಟ ಸೂರ್ಯ ಗ್ರಹಣ ದಿಂದ ಯಾವ ಯಾವ ರಾಶಿಯವರಿಗೆ ಶುಭ ಅಶುಭ ಫಲಗಳು ಲಭಿಸಲಿದೆ ಹಾಗೂ ಗ್ರಹಣದ ಸಮಯದಲ್ಲಿ ಪಾಲಿಸಬೇಕಾದ ನಿಯಮಗಳು ಏನು ಈ ಎಲ್ಲಾ ಮಾಹಿತಿಯನ್ನು ನೋಡೋಣ ಬನ್ನಿ.

ವಿಕಾರಿ ನಾಮ ಸಂವತ್ಸರ ಉತ್ತರಾಯಣ ಹೇಮಂತ ಋತು ಮಾರ್ಗಶಿರ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯ ದಿನ ಸೂರ್ಯಗ್ರಹಣ ಧನಸ್ಸು ರಾಶಿಯ ಮೂಲ ನಕ್ಷತ್ರದಲ್ಲಿ ಸಂಭವಿಸಲಿದೆ. ಈ ಸೂರ್ಯಗ್ರಹಣ ಕೆಲ ರಾಶಿಗಳಿಗೆ ಶುಭ ತಂದರೆ, ಮತ್ತೆ ಕೆಲ ರಾಶಿಗೆ ಅಷ್ಟು ಒಳ್ಳೆಯದಲ್ಲ, ಇನ್ನು ಕೆಲ ರಾಶಿಗಳಿಗೆ ಮಿಶ್ರಫಲ ನೀಡುವುದು. ಯಾವ ರಾಶಿಗೆ ಅಶುಭ ಉಂಟು ಮಾಡುತ್ತದೆಯೋ ಆ ರಾಶಿಯವರು ಸೂರ್ಯಗ್ರಹಣ ನೋಡಬಾರದು. ಅವರು ದೇವರ ಪ್ರಾರ್ಥನೆಯಲ್ಲಿ ಕಾಲ ಕಳೆದರೆ ಒಳ್ಳೆಯದೆಂದು ಜ್ಯೋತಿಷ್ಯಶಾಸ್ತ್ರ ಹೇಳಿದೆ.

ಯಾವ ರಾಶಿಗೆ ಒಳ್ಳೆಯದು

ಯಾವ ರಾಶಿಗೆ ಒಳ್ಳೆಯದು

ಕಟಕ ರಾಶಿ, ತುಲಾ ರಾಶಿ, ಮೀನಾ ರಾಶಿ ಮತ್ತು ಕುಂಭ ರಾಶಿ ಈ ರಾಶಿಗಳಿಗೆ ಹೆಚ್ಚಿನ ಶುಭ ಫಲಗಳು ಬೀರಲಿದೆ ಗ್ರಹಣದ ಪರ್ವ ಕಾಲದಲ್ಲಿ ಈ ನಾಲ್ಕು ರಾಶಿಯವರು ತಪ್ಪದೆ ಸೂರ್ಯ ಗ್ರಹಣದ ಶಾಂತಿ ಮಂತ್ರ ಜಪಿಸಿ ಹೆಚ್ಚಿನ ಶುಭ ಫಲ ಲಭಿಸುವುದು.

ಯಾವ ರಾಶಿಗೆ ಮಿಶ್ರಫಲ

ಯಾವ ರಾಶಿಗೆ ಮಿಶ್ರಫಲ

ಮೇಷ ರಾಶಿ, ಮಿಥುನ ರಾಶಿ, ಸಿಂಹ ರಾಶಿ ಮತ್ತು ವೃಶ್ಚಿಕ ರಾಶಿ ಈ ರಾಶಿಗಳಿಗೆ ಮಧ್ಯಮ ಅಂದರೆ ಸಮ್ಮಿಶ್ರ ಫಲಗಳು ಲಭಿಸುವುದು ಗ್ರಹಣದ ಪರ್ವ ಕಾಲದಲ್ಲಿ ಇವರು ಸಹಾ ಶಾಂತಿ ಮಂತ್ರವನ್ನು ಜಪಮಾಡಬೇಕು. ಫಲ ತಾಂಬೂಲ ದಕ್ಷಿಣ ಸಹಿತ ಗೋಧಿಯನ್ನು ಪೂಜ್ಯರಿಗೆ ದಾನ ಮಾಡಬೇಕು ಹೀಗೆ ಮಾಡಿದರೆ ದೋಷ ನಿವಾರಣೆ ಆಗುತ್ತದೆ.

ಯಾವ ರಾಶಿಗೆ ಒಳ್ಳೆಯದಲ್ಲ

ಯಾವ ರಾಶಿಗೆ ಒಳ್ಳೆಯದಲ್ಲ

ವೃಷಭ ರಾಶಿ, ಕನ್ಯಾ ರಾಶಿ, ಧನಸ್ಸು ರಾಶಿ ಮತ್ತು ಮಕರ ರಾಶಿ ಈ ರಾಶಿಗಳಿಗೆ ದುಷ್ಟ ಫಲಗಳು ಇದ್ದು ಈ ರಾಶಿಯವರು ತಪ್ಪದೆ ಸ್ನಾನವನ್ನು ಆಚರಿಸಿ ಸೂರ್ಯ ಗ್ರಹಣದ ಶಾಂತಿ ಮಂತ್ರವನ್ನು ಫಲ ತಾಂಬೂಲ ದಕ್ಷಿಣ ಸಹಿತ ಗೋಧಿಯನ್ನು

ಸೂರ್ಯಗ್ರಹಣದಲ್ಲಿ ಮಂತ್ರ ಪಠಣೆ ಮಾಡುವುದರಿಂದ ಸಿದ್ಧಿ ಉಂಟಾಗುತ್ತದೆ. ತುಪ್ಪದ ದೀಪ ಹಚ್ಚಿಟ್ಟು ದೇವರ ನಾಮ ಹೇಳುವುದು ಒಳ್ಳೆಯದು. ಗರ್ಭಿಣಿಯರು, ಮಕ್ಕಳು ಹಾಗೂ ರೋಗಸ್ಥರಿಗೆ ಹೆಚ್ಚಿನ ಕಟ್ಟುಪಾಡುಗಳಿಲ್ಲವೆಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ.

English summary

December 26 Solar Eclipse Effect On Zodiac Sign

If you believe in astrology here are December 26 solar eclipse effect on zodiac sign have a look.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X