For Quick Alerts
ALLOW NOTIFICATIONS  
For Daily Alerts

ಮಹಿಳೆಯರ ಆತ್ಮರಕ್ಷಣೆಗೆ ಕೆಲ ಸಲಹೆ

|

ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅತ್ಯಾಚಾರದ ಸುದ್ದಿಗಳನ್ನು ದಿನವೂ ನೋಡುತ್ತಿದ್ದೇವೆ ಕೇಳುತ್ತಿದ್ದೇವೆ. ಮಹಿಳೆ ತನ್ನ ಆತ್ಮರಕ್ಷಣೆಯ ದಾರಿಯನ್ನು ತಾನೇ ಕಂಡುಕೊಳ್ಳುವುದು ಉತ್ತಮ. ನಾವಿಂದು ನಿಮಗೆ ಒಬ್ಬಂಟಿಯಾಗಿದ್ದಾಗ ಮಹಿಳೆಯರು ಏನಾದರೂ ಅಪಾಯ ಎದುರಾದಲ್ಲಿ ಏನು ಮಾಡಬೇಕು ಎಂಬುದಕ್ಕೆ ಕೆಲವು ದಾರಿಗಳನ್ನು ಸೂಚಿಸುತ್ತೇವೆ.

ಈ ಉಪಾಯಗಳನ್ನು ತಿಳಿದಿದ್ದಲ್ಲಿ ಮಹಿಳೆಯರು ತಮ್ಮ ರಕ್ಷಣೆಯನ್ನು ಮಾಡಿಕೊಳ್ಳುವುದು ಸುಲಭವಾಗುತ್ತದೆ. ಪ್ರತಿನಿತ್ಯ ಅತ್ಯಾಚಾರದ ಸುದ್ದಿಗಳಲ್ಲಿ ನಾವು ಓದಿರುವಂತೆ ಹಲವು ಮಹಿಳೆಯರು ಅತ್ಯಾಚಾರ ಮತ್ತು ಹಲ್ಲೆಗೊಳಗಾಗಿ ಅಸುನೀಗುತ್ತಾರೆ.
ಅಂತಹ ಸಂದರ್ಭಗಳನ್ನು ನಿಭಾಯಿಸುವುದರಲ್ಲಿ ಸೋತ ಮಹಿಳೆಯರು ಈ ರೀತಿಯ ದುರಂತಕ್ಕೆ ಒಳಗಾಗುತ್ತಾರೆ.

Women Defence Tips To Keep You Safe
ಆದ್ದರಿಂದ ನಾವು ನಿಮಗೆ ಕೆಲವು ಆತ್ಮರಕ್ಷಣಾ ಉಪಾಯಗಳನ್ನು ಹೇಳಿಕೊಡುತ್ತೇವೆ. ಇವು ನಿಮಗೆ ಅಪಾಯದ ಸಂದರ್ಭಗಳಲ್ಲಿ ನೆರವು ನೀಡುತ್ತವೆ. ಈ ಕೆಳಗೆ ಹೇಳಿರುವ ಉಪಾಯಗಳನ್ನು ತಿಳಿದುಕೊಳ್ಳಿ.

1. ಮೊದಲಿಗೆ ಎಂತಹುದೇ ಪರಿಸ್ಥಿತಿಯಲ್ಲೂ ಉದ್ವಿಗ್ನರಾಗಬೇಡಿ. ಪಾರಗಲು ಏನು ಮಾಡಬೇಕು ಎಂದು ಯೋಚಿಸಿ. ಹೆದರಿದರೆ ಕೆಲಸ ಕೆಡುತ್ತದೆ. ಅನಿರೀಕ್ಷಿತ ಆಕ್ರಮಣದಿಂದ ಹೆದರಿಕೆಯಾಗುವುದು ಸಹಜ. ಆದರೆ ಅದರಿಂದ ಪಾರಾಗಬೇಕಾದರೆ ನೀವು ಉದ್ವಿಗ್ನರಾಗದೆ ಪಾರಾಗುವ ದಾರಿ ಕಂಡುಕೊಳ್ಳುವುದು ಅವಶ್ಯ.

2. ನೀವು ಎಲ್ಲಿರುತ್ತೀರೋ ಆ ಪ್ರದೇಶದ ಬಗ್ಗೆ ವಿವರಗಳು ತಿಳಿದಿರಲಿ. ಒಬ್ಬಂಟಿಯಾಗಿದ್ದಾಗ ಆದಷ್ಟು ಜನರ ನಡುವೆಯಿರಿ.

3. ನಿಮ್ಮ ಮೇಲೆ ಆಕ್ರಮಣವಾದ ತಕ್ಷಣ ಸಹಾಯಕ್ಕಾಗಿ ಕೂಗಿಕೊಳ್ಳುವ ಮೂಲಕ ಸುತ್ತಲಿನ ಜನರ ಗಮನಸೆಳೆಯಿರಿ.

4. ಆತ್ಮರಕ್ಷಣೆಗಾಗಿ ನೀವು ಹೋರಾಟಕ್ಕೆ ಸಿದ್ಧರಾಗಬೇಕು. ಕರಾಟೆ ಅಥವ ಕುಂಗ್ ಫೂನಂತಹದ್ದನ್ನು ಕಲಿಯುವುದು ಅತ್ಯವಶ್ಯಕ.

5. ರಕ್ಷಣೆಗಾಗಿ ಮೆಣಸಿನಪುಡಿ ಅಥವ ಡಿಯೊಡ್ರೆಂಟ್ ಬಾಟಲ್ ರೀತಿಯ ವಸ್ತುಗಳನ್ನು ಸದಾ ಜೊತೆಯಲ್ಲಿಟ್ಟುಕೊಂಡಿರಿ. ಇವುಗಳನ್ನು ಆಕ್ರಮಣ ಮಾಡಲು ಬಂದವರ ಕಣ್ಣಿಗೆ ಎರಚಿದರೆ ನಿಮಗೆ ತಪ್ಪಿಸಿಕೊಂಡು ಓಡಲು ಸ್ವಲ್ಪಹೊತ್ತಿನ ಮಟ್ಟಿಗೆ ಕಾಲಾವಕಾಶ ಸಿಗುತ್ತದೆ.

6. ಮತ್ತೊಂದು ವಿಧಾನವೆಂದರೆ ನೀಳವಾದ ಉಗುರುಗಳನ್ನು ಬೆಳೆಸಿಕೊಳ್ಳಿ. ಉಗುರುಗಳೇ ನಿಮ್ಮ ಆಯುಧಗಳಾಗಬಹುದು. ಮಹಿಳೆಯರು ತಮ್ಮ ಮೇಲೆ ಆಕ್ರಮಣ ಮಾಡಿದವರ ಕಣ್ಣುಗಳನ್ನೇ ಕಿತ್ತುಹಾಕುವಷ್ಟು ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಲಾಗುತ್ತದೆ.

7. ತನ್ನ ಮೇಲೆ ಆಕ್ರಮಣ ನಡೆದ ತಕ್ಷಣ ಆಕೆ ವ್ಯಗ್ರಳಾಗಿ ಪ್ರತ್ಯಾಕ್ರಮಣ ಮಾಡಬೇಕು. ಆಕ್ರಮಣ ಮಾಡಿದವನ ಮರ್ಮಾಂಗ ಅಥವ ಕುತ್ತಿಗೆಯ ಹಿಂಭಾಗಕ್ಕೆ ಬಲವಾದ ಪೆಟ್ಟು ಕೊಟ್ಟರೆ ಅವನು ನೋವಿನಿಂದ ಕೆಳಗೆ ಬೀಳುತ್ತಾನೆ.

8. ವಸ್ತುಗಳನ್ನು ತುಂಬಿದ ನಿಮ್ಮ ಚೀಲ ಕೂಡ ನಿಮ್ಮ ಆತ್ಮರಕ್ಷಣೆಯ ಆಯುಧವಾಗಬಹುದು. ಹಾಗಾಗಿ ನಿಮ್ಮ ಮೇಲೆ ಯಾರಾದರೂ ಹಲ್ಲೆ ಮಾಡಿದ ತಕ್ಷಣ ನಿಮ್ಮ ಚೀಲವನ್ನೇ ಬಳಸಿ ಅವರನ್ನು ಚಚ್ಚಿ.

ಈ ಉಪಾಯಗಳನ್ನು ನೆನಪಿನಲ್ಲಿಡಿ. ಅಪಾಯದ ಸಂದರ್ಭಗಳಲ್ಲಿ ಉಪಾಯದಿಂದ ಪಾರಾಗಿ.

English summary

Women Defence Tips To Keep You Safe

In our society, no woman seems to be safe anywhere. There are some women who have taken a keen interest to protecting themselves from predators like aggressive men who thrive in our society. Today, Boldsky gives you some of the ways in which a woman can now defend herself when she is alone and in trouble.
X
Desktop Bottom Promotion