For Quick Alerts
ALLOW NOTIFICATIONS  
For Daily Alerts

ಪುರುಷರು ಮಾಡಬಾರದ 10 ಫ್ಯಾಷನ್ ಮಿಸ್ಟೇಕ್ಸ್

|

ಪುರುಷ ಬಗ್ಗೆ ನಮ್ಮಲ್ಲಿ ಇರುವ ದೊಡ್ಡ ತಪ್ಪು ಕಲ್ಪನೆಯೆಂದರೆ ಅವರು ಫ್ಯಾಷನ್ ಪ್ರಿಯರಲ್ಲ! ಆದರೆ ಮಹಿಳೆಯರಂತೆಯೇ ಪುರುಷರು ಕೂಡ ಫ್ಯಾಷನ್ ಪ್ರಿಯರೇ. ಪುರುಷರಿಗೂ ಕೂಡ ಕಾಲಕ್ಕೆ ತಕ್ಕಂತೆ ಫ್ಯಾಷನ್ ಬದಲಾಗುತ್ತಿರುತ್ತದೆ. ತಮ್ಮ ದೇಹ ಸೌಂದರ್ಯ ಹೆಚ್ಚಿಸಕೊಳ್ಳು ಜಿಮ್, ವರ್ಕೌಟ್ ಅಂತ ಮಾಡುತ್ತಾರೆ. ನಾವು ಆಕರ್ಷಕವಾಗಿ ಕಾಣಲು ಕಟ್ಟು ಮಸ್ತಾದ ಇದ್ದರೆ ಮಾತ್ರ ಸಾಧ್ಯ ಎಂದು ಹೆಚ್ಚಿನ ಪುರುಷರು ಅಂದುಕೊಳ್ಳುತ್ತಾರೆ. ಆಕರ್ಷಕವಾಗಿ ಕಾಣಲು ಸಿಕ್ಸ್ ಪ್ಯಾಕೇ ಬೇಕೆಂದಿಲ್ಲ, ಡ್ರೆಸ್ಸಿಂಗ್ ಸರಿಯಾಗಿದ್ದರೆ ಸಾಕು ನಿಮ್ಮ ಲುಕ್ ಹೆಚ್ಚುವುದು.

ಆದರೆ ಹೆಚ್ಚಿನ ಪುರುಷರು ಡ್ರೆಸ್ಸಿಂಗ್ ತುಂಬಾ ಅಸಡ್ಡೆ ಮಾಡುತ್ತಾರೆ. ಪ್ಯಾಂಟ್, ಶರ್ಟ್ ಗೆ ಮ್ಯಾಚ್ ಇದೆಯೇ, ನಾನು ಧರಿಸಿದ ಬೆಲ್ಟ್ ಪ್ಯಾಂಟ್ ಮ್ಯಾಚ್ ಇದೆಯೇ, ಸಾಕ್ಸ್ ನನ್ನ ಡ್ರೆಸ್ಸಿಂಗ್ ಗೆ ಸರಿಯಾಗಿ ಇದೆಯೇ ಹೀಗೆ ಯಾವುದನ್ನು ಗಮನಿಸುವುದಿಲ್ಲ. ಇದರ ಬಗ್ಗೆ ನೀವು ಗಮನ ಹರಿಸಿದರೆ ಸೂಪರ್ ಲುಕ್ ನಿಮ್ಮದಾಗುವುದು.

ನಿಮ್ಮ ಲುಕ್ ಹೆಚ್ಚಿಸಬಯಸುವುದಾದರೆ ಈ ಕೆಳಗಿನ ತಪ್ಪುಗಳನ್ನಂತೂ ಮಾಡಲೇಬೇಡಿ:

1. ಜೋಲಾಡುವ ಪ್ಯಾಂಟ್ ಮತ್ತು ಇಳಿಬೀಳುವ ಶರ್ಟ್ ತೋಳುಗಳು

1. ಜೋಲಾಡುವ ಪ್ಯಾಂಟ್ ಮತ್ತು ಇಳಿಬೀಳುವ ಶರ್ಟ್ ತೋಳುಗಳು

ಹೆಚ್ಚಿನ ಪುರುಷರು ತಮಗೆ ಸರಿಯಾದ ಅಳತೆಗಿಂತ ಸ್ವಲ್ಪ ದೊಡ್ಡ ಇರುವ ಶರ್ಟ್ ತೊಡುತ್ತಾರೆ.ಸರಿಯಾದ ಫಿಟ್ ಇರುವುದನ್ನು ತೊಟ್ಟು ನೋಡಿ,ವ್ಯತ್ಯಾಸ ತಿಳಿಯುತ್ತದೆ.

ಜೋಲಾಡುವ ಪ್ಯಾಂಟ್ ಮತ್ತು ಇಳಿಬೀಳುವ ಶರ್ಟ್ ತೋಳುಗಳು ನೋಡಲು ಸುಂದರವೆನಿಸುವುದಿಲ್ಲ.ಒಂದು ವೇಳೆ ನಿಮ್ಮ ದೇಹ ಯಾವುದೇ ರೀತಿಯ ಶರ್ಟ್ ಗೆ ಸೂಕ್ತವಾಗುವುದಿಲ್ಲ ಎಂದೆನಿಸಿದರೆ ಟೈಲರ್ ಬಳಿ ಹೋಗಿ ಸರಿ ಮಾಡಿಸಿಕೊಂಡು ನಂತರ ಬಳಸಿ.

2. ಸರಿಯಿಲ್ಲದ ಪ್ಯಾಂಟ್ ಅಳತೆ

2. ಸರಿಯಿಲ್ಲದ ಪ್ಯಾಂಟ್ ಅಳತೆ

ಕೆಳಗೆ ಬಳಸುವ ಪ್ಯಾಂಟ್ ತುಂಬಾ ಉದ್ದವಾಗಿಯೂ ಇರಬಾರದು ಹಾಗೆಯೇ ಗಿಡ್ದವಾಗಿಯು ಇರಬಾರದು.ಕಾಕಿ ಅಥವಾ ಡೆನಿಮ್ ಬಳಸಿದರೆ ಅದು ಸರಿಯಾದ ಅಳತೆಯಲ್ಲಿರಲಿ.ಅದನ್ನು ಪದರವಾಗಿ ಮಡಿಕೆ ಮಾಡಿ ಬಳಸಬೇಡಿ.ಖಾಕಿ,ಡೆನಿಮ್ ಇವುಗಳೆಲ್ಲ ನಿಮ್ಮ ಶೂ ನ ಮೇಲ್ಭಾಗದವರೆಗೆ ಸರಿಯಾಗಿ ಬರಬೇಕು ಆದರೆ ನೆಲಕ್ಕೆ ಮುಟ್ಟುವಷ್ಟು ಉದ್ದ ಇದ್ದರೂ ಸರಿಯಾಗಿ ಕಾಣುವುದಿಲ್ಲ.

ಪ್ಯಾಂಟ್ ಅಥವಾ ಖಾಕಿ ತೊಟ್ಟಾಗ ಅದು ಕೇವಲ ಒಂದು ಅಥವಾ ಅರ್ಧ ಇಂಚಿನಷ್ಟು ಮೇಲೆ ಇರಬೇಕು.ತುಂಬಾ ಉದ್ದವಿದ್ದರೆ ಹಾಗೆ ಹಾಕಿಕೊಳ್ಳಬೇಡಿ ಇದು ಲುಕ್ ಅನ್ನು ಕೆಡಿಸಿಬಿದುತ್ತದೆ,ಟೈಲರ್ ಬಳಿ ಸರಿ ಮಾಡಿಸಿಕೊಂಡು ಹಾಕಿಕೊಳ್ಳಿ.

3. ಗಿಡ್ಡ ತೋಳಿನ ಶರ್ಟ್ ಧರಿಸಿ ಅದಕ್ಕೆ ಟೈ ಕಟ್ಟಬೇಡಿ

3. ಗಿಡ್ಡ ತೋಳಿನ ಶರ್ಟ್ ಧರಿಸಿ ಅದಕ್ಕೆ ಟೈ ಕಟ್ಟಬೇಡಿ

ಇದು ಫ್ಯಾಷನ್ ಗೆ ವಿರುದ್ಧವಾಗಿರುತ್ತದೆ.ಟೈ ಕಟ್ಟುವಾಗ ಯಾವಾಗಲೂ ಉದ್ದ ತೋಳಿನ ಶರ್ಟ್ ತೊಡಬೇಕು. ಬೇಕಿದ್ದಲ್ಲಿ ವಿರಾಮದ ವೇಳೆಯಲ್ಲಿ ತೋಳನ್ನು ನೀವು ಸ್ವಲ್ಪ ಮಡಿಚಬಹುದು.

4. ಹೊಂದಿಕೆಯಾಗದ ಸಾಕ್ಸ್ ಬಳಸುವುದು

4. ಹೊಂದಿಕೆಯಾಗದ ಸಾಕ್ಸ್ ಬಳಸುವುದು

ಸಾಮಾನ್ಯವಾಗಿ ಮಾಡುವ ಇನ್ನೊಂದು ತಪ್ಪು ಎಂದರೆ ಸರಿಯಾಗಿ ಹೊಂದಿಕೆಯಾಗದ ಸಾಕ್ಸ್ ಬಳಸುವುದು.ಯಾವಾಗಲು ಸಾಕ್ಸ್ ಶೂ ಬಣ್ಣಕ್ಕೆ ಹೊಂದಿಕೆಯಾಗಬೇಕೆಂದಿಲ್ಲ ಬದಲಿಗೆ ಪ್ಯಾಂಟ್ ಬಣ್ಣಕ್ಕೆ ಹೊಂದಿಕೆಯಾಗುವಂತಿರಬೇಕು.ಫಾರ್ಮಲ್ ತೊಟ್ಟಾಗಲು ಕೂಡ ಹಾಗೆ ಇರಬೇಕು.ಬಿಳಿ ಬಣ್ಣ ತೊಟ್ಟರೆ ಎಲ್ಲದಕ್ಕೂ ಹೊಂದಿಕೆಯಾಗುತ್ತದೆ.

5.ಸಮನ್ವಯ ಅಕ್ಸೆಸರಿಸ್

5.ಸಮನ್ವಯ ಅಕ್ಸೆಸರಿಸ್

ವಾಚ್ ಮತ್ತು ಬೆಲ್ಟ್ ಹೊಂದಾಣಿಕೆ ಆಗುವಂತಿರಬೇಕು.ವಾಚ್, ಪ್ಯಾಂಟ್ ಬೆಲ್ಟ್ ಮತ್ತು ಸಾಕ್ಸ್ ಇವು 3 ಒಂದೇ ಬಣ್ಣದವಾದರೆ ಇನ್ನೂ ಒಳ್ಳೆಯದು.ತುಂಬಾ ಬಣ್ಣದ ವ್ಯತ್ಯಾಸವಿದ್ದರೆ ಅದು ನೋಡಲು ಲುಕ್ ನೀಡುವುದಿಲ್ಲ ಆದರೆ ಸ್ವಲ್ಪ ಬೇರೆ ಶೇಡ್ ಹೊಂದಿದ್ದರೆ ಯಾವುದೇ ರೀತಿ ಅಭಾಸ ಎನಿಸುವುದಿಲ್ಲ.

ಕ್ಯಾಶುಯಲ್ ಶೂ ಧರಿಸಿದಾಗ ಬೆಲ್ಟ್ ಸ್ವಲ್ಪ ಅಗಲವಾಗಿರಲಿ.ಸಣ್ಣ ಬೆಲ್ಟ್ ಲುಕ್ ನೀಡುವುದಿಲ್ಲ.

6. ಸ್ಯಾಂಡಲ್ ಜೊತೆ ಸಾಕ್ಸ್

6. ಸ್ಯಾಂಡಲ್ ಜೊತೆ ಸಾಕ್ಸ್

ಇನ್ನು ಕೆಲವರು ಸ್ಲಿಪ್ಪರ್ ಹಾಕಿಕೊಂಡು ಅದಕ್ಕೆ ಸಾಕ್ಸ್ ಹಾಕುವುದನ್ನು ನೋಡಬಹುದು ಆದರೆ ಇದು ಖಂಡಿತ ಅಭಾಸ ಮೂಡಿಸುವ ರೀತಿ.ದಯವಿಟ್ಟು ಸ್ಯಾಂಡಲ್ ಜೊತೆ ಸಾಕ್ಸ್ ಬಳಸಬೇಡಿ.

7. ಮಿತಿ ಮೀರಿ ಆಭರಣ ಹಾಕುವುದು

7. ಮಿತಿ ಮೀರಿ ಆಭರಣ ಹಾಕುವುದು

ಪುರುಷರು ಮಾಡುವ ಇನ್ನೊಂದು ತಪ್ಪು ಎಂದರೆ ಎಲ್ಲಾ ಆಭರಣಗಳನ್ನು ಒಟ್ಟಿಗೆ ಹಾಕಿಕೊಳ್ಳುವುದು.ಪುರುಷರ ಆಭರಣಗಳು ಎಂದರೆ ವಾಚ್,ಉಂಗುರ,ಬ್ರೇಸ್ ಲೆಟ್,ಕಟ್ಟಿಗೆ ಒಂದು ಸಣ್ಣ ಸರ.ಆದರೆ ಇವೆಲ್ಲವುಗಳನ್ನು ಫಾರ್ಮಲ್ ಜೊತೆ ಹಾಕಿಕೊಳ್ಳುವುದು ಸೂಕ್ತವಲ್ಲ.ಆಭರಣಗಳನ್ನು ಹಾಕಿಕೊಳ್ಳುವಾಗ ಎಷ್ಟು ಹಾಕಿಕೊಳ್ಳಬೇಕು ಎಂಬುದರ ಬಗ್ಗೆ ಗಮನವಿರಲಿ.

8. ಟೈಯ ಉದ್ದ

8. ಟೈಯ ಉದ್ದ

ಟೈ ಕಟ್ಟುವಾಗ ಅದರ ಉದ್ದ ಕೂಡ ಮುಖ್ಯವಾಗುತ್ತದೆ.ಟೈ ಉದ್ದ ಎಷ್ಟಿರಬೇಕು ಎಂಬುದು ನಿಮಗೆ ತಿಳಿದಿರಲಿ.ಟೈ ಯಾವಾಗಲು ಮಧ್ಯದಲ್ಲಿಯೇ ಇರಬೇಕು ಮತ್ತು ಅದು ಬೆಲ್ಟ್ ಗಿಂತ ಸ್ವಲ್ಪ ಮೇಲಿನವರೆಗೆ ಇರಬೇಕು ಎಂಬುದರ ಬಗ್ಗೆ ಗಮನವಿರಲಿ.ಟೈ ನ ಅಗಲ ಫ್ಯಾಷನ್ ಗೆ ತಕ್ಕಂತೆ ಬದಲಾಗುತ್ತಿರುತ್ತದೆ.

9. ನೇತಾಡುವ ಬ್ಯಾಗ್

9. ನೇತಾಡುವ ಬ್ಯಾಗ್

ಫಾರ್ಮಲ್ ಧರಿಸಿದಾಗ ಅದರ ಜೊತೆ ಬೆನ್ನಿಗೆ ಅಂಟಿಕೊಂಡ ಬ್ಯಾಗ್ ಧರಿಸಿದರೆ ಓಕೆ. ಆದರೆ ಜೋಲಿ ಇರುವ ಕುತ್ತಿಗೆಯಿಂದ ನೇತಾಡುವ ಬ್ಯಾಗ್ ನಿಮ್ಮ ಜೊತೆಯಲ್ಲಿದ್ದರೆ ಅದು ಫಾರ್ಮಲ್ ಗೆ ಸುಂದರವಾಗಿ ಒಪ್ಪುತ್ತದೆ.

10. ವ್ಯಾಲೆಟ್ ತುಂಬಾ ವಸ್ತುಗಳನ್ನು ತುರಕಬೇಡಿ

10. ವ್ಯಾಲೆಟ್ ತುಂಬಾ ವಸ್ತುಗಳನ್ನು ತುರಕಬೇಡಿ

ಪ್ಯಾಂಟ್ ನ ಹಿಂದೆ ಮತ್ತು ಮುಂಭಾಗದ ಜೇಬಿನಲ್ಲಿ ಎಲ್ಲಾ ರೀತಿಯ ಬೇಡದ ವಸ್ತುಗಳನ್ನು ತುಂಬಿಕೊಳ್ಳಬೇಡಿ.ವ್ಯಾಲೆಟ್ ನಲ್ಲಿ ಬೇಡದ ವಸ್ತುಗಳನ್ನು ತೆಗೆದು ಬೇಕಾದನ್ನು ಮಾತ್ರ ಇಡಿ.ಇದರಿಂದ ಡಿಸೆಂಟ್ ಲುಕ್ ಬರುತ್ತದೆ.

ಫ್ಯಾಷನ್ ಗಾಗಿ ಸ್ವಲ್ಪ ಸಮಯ ಕೊಡಿ.ಮೇಲೆ ನೀಡಿದ ಎಲ್ಲಾ ಟಿಪ್ಸ್ ಗಮನದಲ್ಲಿಟ್ಟುಕೊಂಡು ಸ್ಮಾರ್ಟ್ ಆಗಿ ಕಾಣಿಸಿಕೊಳ್ಳಿ.

English summary

Top 10 Fashion Mistakes Men Make

The most common fashion faux pas made by men are so inbuilt in the daily routine and are so general / common that one does not even realize the impact of it. You can follow the tips provided here and save yourself from the embarrassment and look your best.
X
Desktop Bottom Promotion