For Quick Alerts
ALLOW NOTIFICATIONS  
For Daily Alerts

ಇಂಗ್ಲೀಷ್ ಮಾತನಾಡುವ ಟಾಪ್ 10 ರಾಷ್ಟ್ರಗಳು

By Super
|

ಇಂಗ್ಲೀಷ್ ಭಾಷೆ ವಿಶ್ವ ಭಾಷೆಯಾಗಿದೆ. ನಮ್ಮ ಮಾತೃ ಭಾಷೆಯ ಬಗ್ಗೆ ಅಭಿಮಾನ ಇರಬೇಕು, ಇಂಗ್ಲೀಷ್ ಭಾಷೆಯ ತಿಳಿವಳಿಕೆ ಇರಬೇಕು. ಕೆಲಸಕ್ಕಾಗಿ ಪ್ರಯತ್ನಿಸುವಾಗ ಇಂಗ್ಲೀಷ್ ಭಾಷೆ ಅನಿವಾರ್ಯವಾಗಿದೆ. ಇಂಗ್ಲೀಷ್ ಜ್ಞಾನ ಇಲ್ಲದಿದ್ದರೆ ದೊಡ್ಡ ಕಂಪನಿಗಳಲ್ಲಿ ಹುದ್ದೆ ಸಿಗುವುದು ಕಷ್ಟವಾಗಿದೆ.

ನಮ್ಮ ಭಾರತದಲ್ಲಿ ಅನೇಕ ಕಂಪನಿಗಳಿವೆ, ಅವುಗಳು ವಿದೇಶಕ್ಕೆ ಸೇವೆಯನ್ನು ಸಲ್ಲಿಸುತ್ತಿವೆ. ಈ ಕಂಪನಿಗೆ ಸೇರಿ ಕೈ ತುಂಬಾ ಪಡೆದುಕೊಳ್ಳ ಬೇಕೆಂದು ಬಯಸುವವರು ಇಂಗ್ಲೀಷ್ ಕಲಿಯುವುದು ಅನಿವಾರ್ಯವಾಗಿದೆ. ಭಾರತೀಯರಲ್ಲಿ ಹೆಚ್ಚಿನವರಿಗೆ ಇಂಗ್ಲೇಂಡ್ ನವರಿಗಿಂತ ಚೆನ್ನಾಗಿ ಇಂಗ್ಲೀಷ್ ಬರೆಯಲು, ಓದಲು ಬರುತ್ತದೆ, ಅದೇ ಭಾರತೀಯರಿಗೆ ವಿದೇಶಿ ಕಂಪನಿಗಳಲ್ಲಿ ಕೆಲಸಗಿಟ್ಟಿಸಿಕೊಳ್ಳಲು ಇರುವ ಪ್ಲಸ್ ಪಾಯಿಂಟ್.

ಅನೇಕ ರಾಷ್ಟ್ರಗಳಲ್ಲಿ ಇಂಗ್ಲೀಷ್ ಭಾಷೆ ಅಪರಿಚಿತ ಭಾಷೆಯಾಗಿರುತ್ತದೆ, ಇನ್ನು ಕೆಲವು ದೇಶಗಳಲ್ಲಿ ಇಂಗ್ಲೀಷ್ ಮಾತನಾಡುವವರು ಸಂಖ್ಯೆ ಅತ್ಯಧಿಕವಾಗಿರುತ್ತದೆ. ಇದರ ಬಗ್ಗೆ 2000ದಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಅದರ ಪ್ರಕಾರ ಇಂಗ್ಲೀಷ್ ಮಾತನಾಡುವವರ ಸಂಖ್ಯೆ ಅಧಿಕವಿರುವ ಟಾಪ್ 10 ರಾಷ್ಟ್ರಗಳ ಪಟ್ಟಿ ಈ ಕೆಳಗೆ ನೀಡಲಾಗಿದೆ ನೋಡಿ:

Top 10 English-speaking countries

1. ಅಮೇರಿಕ- ಇಲ್ಲಿ 251,388,301 ಜನರು ಇಂಗ್ಲೀಷ್ ಮಾತನಾಡುತ್ತಾರೆ.

2. ಭಾರತ- ನಮ್ಮ ದೇಶದಲ್ಲಿ ಅನೇಕ ಭಾಷೆಗಳಿದ್ದರೂ, ಎರಡನೇ ಭಾಷೆಯಾದ ಇಂಗ್ಲೀಷ್ ಅನ್ನು ಮಾತನಾಡುವವರ ಸಂಖ್ಯೆ 100,226,449ರಷ್ಟಿದ್ದು ಎರಡನೇ ಸ್ಥಾನದಲ್ಲಿದೆ.

3. ನೈಜೇರಿಯಾ- ಇಲ್ಲಿ 79,000,000 ಜನರು ಇಂಗ್ಲೀಷ್ ಮಾತನಾಡುತ್ತಾರೆ.

4. ಇಂಗ್ಲೇಂಡ್- ಇಂಗ್ಲೇಂಡ್ ನಲ್ಲಿ ಇಂಗ್ಲೀಷ್ ಮಾತನಾಡುವವರು ಸಂಖ್ಯೆ 59,600,000ರಷ್ಟಿದ್ದು 4ನೇ ಸ್ಥಾನದಲ್ಲಿದೆ!

5. ಫಿಲಿಫೈನ್ಸ್- ಫಿಲಿಫೈನ್ಸ್ ನಲ್ಲಿ 49,800,000 ಜನರಿಗೆ ಇಂಗ್ಲೀಷ್ ಭಾಷೆ ಬರುತ್ತದೆ.

6. ಜರ್ಮನಿ- ಜರ್ಮನಿಯಲ್ಲಿ ತುಂಬಾ ಕಮ್ಮಿ ಜನರಿಗೆ ಇಂಗ್ಲೀಷ್ ಗೊತ್ತಿದ್ದು, ಇಂಗ್ಲೀಷ್ ಮಾತನಾಡುವವರ ಸರಾಸರಿ 46,000,000 ಇದೆ.

7. ಕೆನಡಾ- ಕೆನಾಡದಲ್ಲಿ ಸುಮಾರು 25,246,220 ಜನರಿಗೆ ಮಾತ್ರ ಇಂಗ್ಲೀಷ್ ಬರುತ್ತದೆ.

8. ಫ್ರಾನ್ಸ್- ಫ್ರಾನ್ಸ್ ನಲ್ಲಿ ಸುಮಾರು 23,000,000 ಜನರಿಗಷ್ಟೇ ಇಂಗ್ಲೀಷ್ ಭಾಷೆ ಬರುತ್ತದೆ.

9. ಪಾಕಿಸ್ತಾನ- ಪಾಕಿಸ್ತಾನದಲ್ಲಿ ಇಂಗ್ಲೀಷ್ ಭಾಷೆ ಕಡಿಮೆ ಬಳಕೆಯಲ್ಲಿದ್ದು , ಇಂಗ್ಲೀಷ್ ಬಲ್ಲವರ ಸಂಖ್ಯೆ ಸುಮಾರು 18,000,000

10. ಆಸ್ಟ್ರೇಲಿಯಾ- ಆಸ್ಟ್ರೇಲಿಯಾದಲ್ಲಿ ಇಂಗ್ಲೀಷ್ ಮಾತನಾಡುವವರ ಸಂಖ್ಯೆ ಸುಮಾರು 17,357,833ರಷ್ಟಿದೆ.

English summary

Top 10 English-speaking countries | Life Style And Life | ಇಂಗ್ಲೀಷ್ ಮಾತನಾಡುವ ಟಾಪ್ 10 ರಾಷ್ಟ್ರಗಳು | ಜೀವನ ಶೈಲಿ ಮತ್ತು ಜೀವನ

This is the year 2000 list of countries of the world sorted by the total English-speaking population in that country. This includes both native speakers and second-language speakers of English.
X
Desktop Bottom Promotion