For Quick Alerts
ALLOW NOTIFICATIONS  
For Daily Alerts

ತುಂಬಾ ಸಿಲ್ಲಿಯಾದ ಹಾಗೂ ವಿಚಿತ್ರವಾದ ಫೋಬಿಯಾಗಳು

|

ಭಯ ಪಡುವ ಕಾಯಿಲೆ ಬಗ್ಗೆ ಕೇಳಿರುತ್ತೀರಾ? ಕೆಲವೊಂದು ವಿಷಯಕ್ಕೆ ಭಯ ಪಡುವುದು ಒಳ್ಳೆಯದೆ. ಆದರೆ ಫೋಬಿಯಾ ಅಥವಾ ಭಯದ ಕಾಯಿಲೆ ಇದ್ದರೆ ಮಾತ್ರ ಜೀವನ ಕಷ್ಟವಾಗುವುದು. ಕೆಲವರಿಗೆ ಎತ್ತರದ ಪ್ರದೇಶದಿಂದ ಕೆಳಕ್ಕೆ ನೋಡಲು ಭಯ, ಇನ್ನು ಕೆಲವರಿಗೆ ಕತ್ತಲೆಂದರೆ ಭಯ, ಮತ್ತೆ ಕೆಲವರಿಗೆ ಕನ್ನಡಿಯನ್ನು ನೋಡಲು ಭಯ.

ಈ ರೀತಿಯ ಭಯಗಳು ತುಂಬಾ ಅಪಾಯಕಾರಿಯಾದದು, ಈ ಫೋಬಿಯಾ ಕಾಣಿಸಿದರೆ ವ್ಯಕ್ತಿಯಲ್ಲಿ ಖಿನ್ನತೆ ಕಾಣಿಸುವುದು. ಅವರಿಗೆ ನಾರ್ಮಲ್ ವ್ಯಕ್ತಿಯಂತೆ ಜೀವನ ನಡೆಸಲು ಸಾಧ್ಯವಾಗುವುದಿಲ್ಲ. ವಿಚಿತ್ರವಾದ ಸಂಕಟವನ್ನು ಅನುಭವಿಸುತ್ತಾರೆ. ಈ ಫೋಬಿಯಾ ಅನ್ನುವುದು ಮಾನಸಿಕ ಖಾಯಿಲೆ, ತಮ್ಮ ಜೀವನದಲ್ಲಿ ನಡೆದ ಕೆಲ ಘಟನೆಗಳು, ಕೇಳಿದ ವಿಷಯಗಳು ಅವರಲ್ಲಿ ಈ ರೀತಿಯ ಫೋಬಿಯಾ ಉಂಟು ಮಾಡಿರುತ್ತದೆ.

ಅದರಲ್ಲೂ ಈ ಕೆಳಗಿನ ಕಾಯಿಲೆಗಳಂತೂ ವಿಚಿತ್ರಗಳಲ್ಲಿ ತುಂಬಾ ವಿಚಿತ್ರವಾದದ್ದು:

 ಕೂರಲು ಭಯ

ಕೂರಲು ಭಯ

ಇದು ಕೆಲವರಲ್ಲಿ ಕಂಡು ಬರುವ ಅತ್ಯಂತ ಕೆಟ್ಟ ಭಯವಾಗಿದೆ. ಈ ರೀತಿಯ ಫೋಬಿಯಾ ಇರುವವರಿಗೆ ಬೇರೆ ವ್ಯಕ್ತಿಯ ಎದುರು ಕೂತು ಮಾತನಾಡಲು ಸಾಧ್ಯವಾಗುವುದಿಲ್ಲ. ಈ ಕಾಯಿಲೆಯ ಲಕ್ಷಣವೆಂದರೆ ಆ ವ್ಯಕ್ತಿ ವಿಪರೀತ ಬೆವರಿ, ಮಾತುಗಳಿಗಾಗಿ ತಡವರಿಸುತ್ತಾನೆ, ಮಾನಸಿಕ ಒತ್ತಡ ಅವನ/ಳ ಮುಖದಲ್ಲಿ ಎದ್ದು ಕಾಣುತ್ತದೆ. ಯಾರ ಜೊತೆ ಬೆರೆಯದೆ ಆದಷ್ಟು ಒಂಟಿಯಾಗಿರಲು ಪ್ರಯತ್ನಿಸುತ್ತಾರೆ. ಇದನ್ನು Cathisophobia ಎಂದು ಕರೆಯುತ್ತಾರೆ.

ಅತ್ತೆಯನ್ನು ಕಂಡರೆ ಭಯ

ಅತ್ತೆಯನ್ನು ಕಂಡರೆ ಭಯ

ಅತ್ತೆ-ಸೊಸೆಗೆ ಹೊಂದಾಣಿಕೆ ಇರುವುದು ಕಮ್ಮಿ ಅನ್ನುವುದು ಸಾರ್ವತ್ರಿಕವಾದ ವಿಷಯ. ಆದರೆ ಕೆಲವರಿಗೆ ಅತ್ತೆಯೆಂದರೆ ವಿಪರೀತ ಭಯ. ಅತ್ತೆಯ ಮುಖ ನೋಡಲೇ ಭಯ ಪಡುತ್ತಾರೆ. ಈ ರೀತಿ ಅತ್ತೆಯ ನಡುವಳಿಕೆ ಅಥವಾ ಇತರರು ಅತ್ತೆಯರ ಬಗ್ಗೆ ವರ್ಣಿಸಿದ್ದನ್ನು(!) ಕೇಳಿ ಬರುವ ಫೋಬಿಯಾ ಇದನ್ನು pentheraphobia ಎಂದು ಕರೆಯುತ್ತಾರೆ.

 ಅಗೋಚರ ಶಕ್ತಿಯನ್ನು ನಂಬಿ ಭಯ ಪಟ್ಟುಕೊಳ್ಳುವುದು

ಅಗೋಚರ ಶಕ್ತಿಯನ್ನು ನಂಬಿ ಭಯ ಪಟ್ಟುಕೊಳ್ಳುವುದು

ಈ ವ್ಯಕ್ತಿಗಳು ದುಷ್ಟಶಕ್ತಿ ಇದೆ, ಅದು ನಮಗೆ ತೊಂದರೆ ಕೊಡುತ್ತದೆ ಎಂದು ದೃಢವಾಗಿ ನಂಬಿರುತ್ತಾರೆ. ಸಿನಿಮಾ ನೋಡುವುದರಿಂದ, ಇದರ ಬಗ್ಗೆ ಇರುವ ಕತೆಗಳನ್ನು ಕೇಳುವುದರಿಂದ ಈ ರೀತಿಯ ಭಯ ಬೆಳೆಸಿಕೊಂಡಿರುತ್ತಾರೆ. ಈ ಕಾಯಿಲೆಯನ್ನು Demonophobia ಎಂದು ಕರೆಯುತ್ತಾರೆ. ಈ ಪೋಬಿಯಾ ಹೆಚ್ಚಿನವರಲ್ಲಿ ಕಂಡು ಬರುತ್ತದೆ. ಈ ಫೋಬಿಯಾ ತುಂಬಾ ಇರುವವರು ಒಂಟಿಯಾಗಿ ಇರುವುದೇ ಇಲ್ಲ, ಸದಾ ಯಾರಾದರೂ ಜೊತೆಗೆ ಇರಬೇಕು, ಇಲ್ಲದಿದ್ದರೆ ಭಯ ಪಟ್ಟು ಕಿರುಚಲು ಪ್ರಾರಂಭಿಸುತ್ತಾರೆ. ದೆವ್ವ, ಭೂತದ ಬಗ್ಗೆ ಸುಮ್ಮನೆ ಕಲ್ಪನೆ ಬೆಳೆಸಿಕೊಳ್ಳಬೇಡಿ, ಮನುಷ್ಯನೇ ಈ ದೆವ್ವಗಳಗಿಂತ ತುಂಬಾ ಭಯಾನಕವಾದ ಪ್ರಾಣಿ , ಏನಂತೀರಿ?

ಕನ್ನಡಿ ಕಂಡರೆ ಭಯ

ಕನ್ನಡಿ ಕಂಡರೆ ಭಯ

ಕೆಲವರಿಗೆ ಕನ್ನಡಿ ನೋಡುವುದೆಂದರೆ ವಿಪರೀತ ಭಯ, ಕನ್ನಡಿ ನಮಗೆ ಅಪಶಕುನ ತರುತ್ತದೆ ಎಂದೇ ನಂಬುತ್ತಾರೆ. ಇದನ್ನು Eisoptrophobia ಎಂದು ಕರೆಯುತ್ತಾರೆ. ಹುಡುಗಿಯರಿಗೆ ಈ ಕಾಯಿಲೆ ಬಂದರೆ ಕಷ್ಟ ಅಲ್ವಾ?

ಗೊಂಬೆಯನ್ನು ಕಂಡರೆ ಭಯ

ಗೊಂಬೆಯನ್ನು ಕಂಡರೆ ಭಯ

ಗೊಂಬೆಯನ್ನು ಕಂಡರೆ ಭಯ ಪಡುವವರು ಕೂಡ ಇದ್ದಾರೆ. ಈ ಗೊಂಬೆ ಜೀವ ತಾಳಿ ನಿಜ ಜೀವನದಲ್ಲಿ ಬರುತ್ತದೆ, ಗೊಂಬೆಯಲ್ಲಿ ಅಗೋಚರ ಶಕ್ತಿ ಇದೆ ಎಂದೆಲ್ಲಾ ನಂಬುತ್ತಾರೆ. ಇದನ್ನುPediophobia ಎಂದು ಕರೆಯುತ್ತಾರೆ. ಕೆಲವೊಂದು ಸಿನಿಮಾಗಳು ಇವರ ಈ ಭಯಕ್ಕೆ ಪುಷ್ಟಿ ನೀಡುತ್ತದೆ.

 ಊಟ ಮಾಡುವಾಗ ಮಾತನಾಡಲು ಭಯ

ಊಟ ಮಾಡುವಾಗ ಮಾತನಾಡಲು ಭಯ

ಊಟ ಮಾಡುವಾಗ ಮಾತನಾಡಲು ಭಯಪಡುವವರೂ ಇದ್ದಾರೆ. ಇದೊಂದು ಕಾಯಿಲೆಯಾಗಿದ್ದು ಇದನ್ನು Deipnophobia ಎಂದು ಕರೆಯುತ್ತಾರೆ. ಊಟ ಮಾಡುವಾಗ ಇವರೂ ಮಾತನಾಡುವುದಿಲ್ಲ, ಇತರರು ಮಾತನಾಡಿದರೆ ಊಟ ಮಾಡುವುದನ್ನು ತಕ್ಷಣ ನಿಲ್ಲಿಸಿ ಬಿಡುತ್ತಾರೆ.

ಅಡುಗೆ ಮಾಡಲು ಭಯ (mageirocophobia)

ಅಡುಗೆ ಮಾಡಲು ಭಯ (mageirocophobia)

ಈ ಭಯ ಕೆಲವರಲ್ಲಿ ಇದ್ದರೆ, ಮತ್ತೆ ಕೆಲವರು ಅಡುಗೆ ಮಾಡಲು ಭಯ ಪಡುವವರಂತೆ ನಟಿಸುತ್ತಾರೆ. ಆದರೆ ಈ ಕಾಯಿಲೆ ಇರುವವರು ಅಡುಗೆ ಮಾಡಲು ಮಾತ್ರ ಭಯ ಪಡುತ್ತಾರೆ, ಆದರೆ ಚೆನ್ನಾಗಿ ತಿನ್ನುತ್ತಾರೆ ಹಾಗೂ ಅಡುಗೆ ಚೆನ್ನಾಗಿ ಮಾಡುವವರ ಸ್ನೇಹ ಬೆಳೆಸುತ್ತಾರೆ.

ರೋಡ್ ದಾಟಲು ಭಯ

ರೋಡ್ ದಾಟಲು ಭಯ

ಕೆಲವರಿಗೆ ಯಾರಾದರೂ ಸಹಾಯವಿಲ್ಲದೆ ರೋಡ್ ದಾಟುವುದು ಎಂದರೆ ವಿಪರೀತ ಭಯ ಬೀಳುತ್ತಾರೆ. ಟ್ರಾಫಿಕ್ ನೋಡುತ್ತಿದ್ದಂತೆ ಅವರು ಹಾಗೇ ನಿಂತು ಬಿಡುತ್ತಾರೆ. ಇದನ್ನು Agyrophobic ಎಂದು ಕರೆಯುತ್ತಾರೆ.

English summary

The Weirdest and silliest Phobias

It is also a known fact that some lives are are virtually debilitated by their fears, which is not a good sign of living a healthy and normal life. These weird phobias in the world are unusual afflicting people in our society. Lets take a look at some of the weirdest and silliest Phobias.
 
X
Desktop Bottom Promotion