For Quick Alerts
ALLOW NOTIFICATIONS  
For Daily Alerts

ಮೆಹಂದಿಗೆ ಸಂಬಂಧಿಸಿದ ಕೆಲ ಮೂಢನಂಬಿಕೆಗಳು

|

ಎಲ್ಲಾ ಜಾತಿ- ಧರ್ಮದವರ ಮದುವೆಯಲ್ಲೂ ಮದರಂಗಿ ಹಾಕುವ ಪದ್ದತಿ ಇದ್ದೇ ಇರುತ್ತದೆ. ಮದುಮಗಳ ಕೈಯಲ್ಲಿ ಮದರಂಗಿಯ ಅಲಂಕಾರವಿದ್ದರೆ ಮಾತ್ರ ಮದುಮಗಳಲ್ಲಿ ಮದುವೆ ಕಳೆ ಹೆಚ್ಚುವುದು. ಕೆಲವು ಜಾತಿಗಳಲ್ಲಿ ಮದರಂಗಿಯನ್ನು ಮದುಮಗಳ ಅಂದ ಹೆಚ್ಚಿಸಲು ಹಾಕಿದರೆ, ಇನ್ನು ಕೆಲವು ಕೆಲವು ಜಾತಿಯಲ್ಲಿ ಮದರಂಗಿ ಹಾಕುವುದು ಶಾಸ್ತ್ರ. ಮದುಮಗನಿಗೂ ಮೆಹಂದಿ ಶಾಸ್ತ್ರವನ್ನು ಮಾಡಲಾಗುವುದು. ಮದುಮಗಳ ಕೈಗೆ ಮದುವೆ ದಿನಕ್ಕಿಂತ ಮುಂಚೆ ಮದರಂಗಿ ಹಾಕಿದರೆ ಮದುಮಗಳಿಗೆ ವೈವಾಹಿಕ ಜೀವನದಲ್ಲಿ ಸಮೃದ್ಧಿ, ಶುಭವನ್ನು ತರುತ್ತದೆ ಎಂಬ ನಂಬಿಕೆಯಲ್ಲಿ ಮೆಹಂದಿ ಶಾಸ್ತ್ರ ಮಾಡಲಾಗುವುದು.

ಆದರೆ ಮದುಮಗಳು ಹಾಕುವ ಮೆಹಂದಿ ಬಗ್ಗೆ ಅನೇಕ ಮೂಢನಂಬಿಕೆಗಳು (!) ನಮ್ಮಲ್ಲಿ ಇವೆ. ಆ ನಂಬಿಕೆಗಳ ಬಗ್ಗೆ ಕೇಳುವಾಗ ತಮಾಷೆ ಅನಿಸಿದರೂ ಆ ನಂಬಿಕೆಗಳ ಬಗ್ಗೆ ಹೇಳುತ್ತಾ ಮದುಮಗಳಿಗೆ ತಮಾಷೆ ಮಾಡುವುದನ್ನು ನಾವೆಲ್ಲಾ ಮಾಡುತ್ತೇವೆ. ಮದುಮಗಳು ಹಾಕಿದ ಮೆಹಂದಿಗೆ ಇರುವ ವಿಶೇಷತೆ ಏನು ಎಂದು ನೋಡೋಣವೇ?

Superstitions Related To Mehandi

ಮದುಮಗಳು ಹಚ್ಚಿದ ಮೆಹಂದಿ ಕಡು ಕೆಂಪಾದರೆ
ಮದುಮಗಳ ಕೈಗೆ ಹಾಕಿದ ಮೆಹಂದಿ ಬಣ್ಣ ಎಷ್ಟು ಕೆಂಪಾಗಿ ಬಂದಿದೆ ಎಂದು ನೋಡುವ ಕುತೂಹಲ ಅವಳ ಸುತ್ತ ಇರುವವರಿಗೆ ತುಂಬಾ ಇರುತ್ತದೆ. ಮದುಮಗಳಿಗೆ ಹಚ್ಚಿದ ಮೆಹಂದಿ ತುಂಬಾ ಕೆಂಪು ಬಣ್ಣಕ್ಕೆ ತಿರುಗಿದರೆ ಅತ್ತೆ-ಸೊಸೆಯಲ್ಲಿ ತುಂಬಾ ಹೊಂದಾಣಿಕೆ ಇರುತ್ತದೆ(ಹೌದಾ?) ಅನ್ನುತ್ತಾರೆ.

ಮೆಹಂದಿ ವಿನ್ಯಾಸದಲ್ಲಿ ಭಾವಿಗಂಡನ ಹೆಸರು
ಮೆಹಂದಿ ವಿನ್ಯಾಸ ಹಾಕುವಾಗ ಆ ವಿನ್ಯಾಸದಲ್ಲಿ ಭಾವಿ ಗಂಡನ ಹೆಸರು ಇರಬೇಕಂತೆ. ಇಲ್ಲದಿದ್ದರೆ "ಅಮ್ಮವರ ಗಂಡನಾಗಿ" ಗಂಡ ಇರುತ್ತಾನೆ ಎಂಬ ನಂಬಿಕೆ ಕೆಲವರಲ್ಲಿದೆ. ಆದ್ದರಿಂದ ಮದುಮಗಳ ಕೈಗೆ ಮೆಹಂದಿ ಹಾಕುವಾಗ ಮದುಮಗನ ಹೆಸರು ಬರೆಯುತ್ತಾರೆ.

ಮದುವೆಯಾಗದ ಹೆಣ್ಣು ಮಕ್ಕಳಿಗೆ ಕಂಕಣ ಭಾಗ್ಯ ತರುವ ಮೆಹಂದಿ

ಮದುಮಗಳ ಕೈಯಲ್ಲಿ ಮೆಹಂದಿ ಒಣಗಿದ ನಂತರ ಅವಳು ಅದನ್ನು ಕೆರೆದು ತೆಗೆಯುವಾಗ ಅಲ್ಲಿ ಮದುವೆಯಾಗದ ಹೆಣ್ಣು ಮಕ್ಕಳಿದ್ದರೆ ಅವರಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ ಎಂಬ ನಂಬಿಕೆಯೂ ಇದೆ.

ಒಟ್ಟಿನಲ್ಲಿ ಈ ಎಲ್ಲಾ ನಂಬಿಕೆಗಳು ಕೇಳಲು ತಮಾಷೆ ಅನಿಸಿದರೂ ಮೆಹಂದಿ ಹಾಕುವಾಗ ಅಲ್ಲಿಯ ವಾತಾವರಣದ ಸಂಭ್ರಮವನ್ನು ಹೆಚ್ಚಿಸುವುದಂತು ನಿಜ.

English summary

Superstitions Related To Mehandi

Mehandi became an integral part of Indian tradition. It is a symbol of prosperity and the bride is considered blessed if mehandi is put on her palms before the wedding. Apart from all of these facts, there are also a few superstitions related to mehandi.
 
X
Desktop Bottom Promotion