Latest Updates
-
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ವಿದ್ಯುತ್ ಬಿಲ್ ಇಲ್ಲದೆ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ!
ವಿನಾಯಕ 2019: ಗಣೇಶೋತ್ಸವನ್ನು ಅದ್ಧೂರಿಯಾಗಿ ಆಚರಿಸುವ 9 ಸ್ಥಳಗಳು
ಈಗ ಎಲ್ಲೆಲ್ಲಿಯೂ ಗಣೇಶ ಹಬ್ಬದ ಸಡಗರ ಎದ್ದು ಕಾಣುತ್ತಿದೆ. ಕಲೆಗಾರರು ಗಣೇಶ ಮೂರ್ತಿಗಳ ತಯಾರಿಯಲ್ಲಿ ನಿರತರಾಗಿದ್ದಾರೆ. ಗಣೇಶ ಹಬ್ಬ ಆಚರಿಸುವಲ್ಲಿ ಯುವಕರಿಗೆ ಸ್ವಲ್ಪ ಹುರುಪು ಅಧಿಕವೇ ಎಂದು ಹೇಳಬಹುದು.

ಗಲ್ಲಿ-ಗಲ್ಲಿಗೂ ಒಂದೊಂದು ಯುವಕರ ಸಂಘವಿರುತ್ತದೆ. ಆ ಸಂಘದವರು ಈ ವರ್ಷ ಗಣೇಶೋತ್ಸವನ್ನು ಕಳೆದ ಸಾಲಿಗಿಂತ ಈ ಸಾರಿ ಹೆಚ್ಚು ವಿಜೃಂಭಣೆಯಿಂದ ಆಚರಿಸಬೇಕೆಂಬ ಹುರುಪಿನಲ್ಲಿ ಈಗಾಗಲೇ ಸಿದ್ಧತೆಯಲ್ಲಿ ತೊಡಗಿರುತ್ತೀರಿ.
ಈ ವರ್ಷದ ಗಣೇಶ ಚತುರ್ಥಿ ಸೆಪ್ಟೆಂಬರ್ 2ರಂದು ಸೋಮವಾರದಂದು ಅಚರಿಸಲಾಗುತ್ತಿದೆ ಆದರೂ, ಗಲ್ಲಿಗಳಲ್ಲಿ ಮಾಡುವ ಗಣೇಶೋತ್ಸವ ಆ ಮಾಸ ಪೂರ್ತಿ ಆಚರಿಸುತ್ತಾರೆ.
ಭಾರತದ ಮೂಲೆ-ಮೂಲೆಯಲ್ಲಿ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು, ಆದರೆ ಕೆಲವೊಂದು ಕಡೆಗಳಲ್ಲಿ ಮಾತ್ರ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು. ಆ ಸ್ಥಳಗಳಾವುವು ಎಂದು ನೋಡೋಣವೇ? ಈ ಸ್ಥಳಗಳಂತೆ ತುಂಬಾ ವಿಜೃಂಭನೆಯಿಂದ ನಿಮ್ಮ ಸ್ಥಳಗಳಲ್ಲಿಯೂ ಆಚರಿಸುವುದಾದರೆ ಆ ಸ್ಥಳದ ಹೆಸರನ್ನು ಬರೆದು ನಮಗೆ ಕಳುಹಿಸಬಹುದು.

ಲಾಲ್ ಬಾಗ್ ಚಾ ರಾಜ್ ( ಲಾಲ್ ಬಾಗ್ ನ ರಾಜ)
ಈ ಗಣೇಶೋತ್ಸದಲ್ಲಿ ಅತೀ ಎತ್ತರದ ಗಣೇಶನ ಮೂರ್ತಿಯನ್ನು ಕೂರಿಸಲಾಗುವುದು. ಬಾಲಿವುಡ್ ನ ಪ್ರಸಿದ್ಧ ಸೆಲೆಬ್ರಿಟಿಗಳಾದ ಅಮಿತಾ ಬಚ್ಚನ್, ಸಲ್ಮಾನ್ ಖಾನ್ ಮೊದಲಾದವರು ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.

ಮುಂಬಯಿಚಾ ರಾಜ:ಗಾಲಿ ಗಣೇಶ
ಮುಂಬಯಿಯ ಮತ್ತೊಂದು ವಿಜೃಂಭಣೆಯ ಗಣೇಶೋತ್ಸವೆಂದರೆ ಗಾಲಿ ಗಣೇಶ. 20 ಅಡಿಗಿಂತಲೂ ಎತ್ತರದ ಗಾಲಿ ಗಣೇಶನನ್ನು ನೋಡಲು ಲಕ್ಷಾಂತರ ಭಕ್ತಾಧಿಗಳು ಭಾಗವಹಿಸುತ್ತಾರೆ.

ಬೆಂಗಳೂರಿನಲ್ಲಿ- ಅವಿನ್ಯೂ ರೋಡ್ ನ ಗಣೇಶೋತ್ಸವ
ಬೆಂಗಳೂರಿನ ಅವಿನ್ಯೂ ರೋಡ್ ನ ಗಣೇಶೋತ್ಸವ ಬೆಂಗಳೂರಿನ ಅತ್ಯಂತ ವಿಜೃಂಭಣೆ ಯ ಗಣೇಶೋತ್ಸವಾಗಿದೆ.

ಎಪಿಎಸ್ ಕಾಲೇಜು ಗ್ರೌಂಡ್, ಬಸವನ ಗುಡಿ
ಇಲ್ಲಿ ಅನೇಕ ವರ್ಷಗಳಿಂದ ಗಣೇಶೋತ್ಸವನ್ನು ಆಚರಿಸುತ್ತಿದ್ದು, ಪ್ರತೀವರ್ಷವೂ ತುಂಬಾ ವಿಜೃಂಭಣೆಯಿಂದ ಆಚರಿಸುತ್ತಾ ಬಂದಿದ್ದಾರೆ.

ಗಿರ್ ಗಾವುಂಚಾ ರಾಜ
ಇಲ್ಲಿ ಗಣೇಶನನ್ನು ಜೇಡಿ ಮಣ್ಣು ಬಳಸಿ ಮಾಡಲಾಗುವುದು ಮತ್ತು ಯಾವುದೇ ಕೃತಕ ಬಣ್ಣ ಬಳಿಯದೇ eco friendly(ಪರಿಸರ ಸ್ನೇಹಿ) ಆಗಿ ಹಬ್ಬವನ್ನು ಆಚರಿಸಲಾಗುವುದು.

ದಾಗ್ ದೂಶಿತ್, ಪುಣೆ
ಚಿಕ್ಕದಾದ ಗಣೇಶ ದೇವಾಲಯವು ತುಂಬಾ ಪ್ರಸಿದ್ಧಿಯನ್ನು ಪಡೆದಂತಹ ದೇವಾಲಯವಾಗಿದ್ದು, ಇಲ್ಲಿಗೆ ಗಣೇಶೋತ್ಸವ ಸಮಯದಲ್ಲಿ ಪುಣೆಯಿಂದ ಮಾತ್ರವಲ್ಲ, ಭಾರತಾದ್ಯಂತದಿಂದ ಭಕ್ತರು ಬಂದು ದರ್ಶನ ಪಡೆಯುತ್ತಾರೆ.

ಭಾಂದ್ರಕರ್ಚಾ ರಾಜ
ಇಲ್ಲಿ ಗಣೇಶೋತ್ಸವಕ್ಕೆ ಸಾಕಷ್ಟು ಧಾನಿಗಳು ಧನ ಸಹಾಯ ಮಾಡುತ್ತಾರೆ. ಕಮ್ಮಿಯೆಂದರೂ 20,000ಕ್ಕೂ ಅಧಿಕ ಜನರಿಗೆ ಈ ಗಣೋತ್ಸವ ಸಮಯದಲ್ಲಿ ಅನ್ನದಾನ ಮಾಡಲಾಗುವುದು.

ಕೇತ್ ವಾಡಿಚಾ ಗಣರಾಜ
ಇಲ್ಲಿ 2000ನೇ ಇಸವಿಯಲ್ಲಿ 35 ಅಡಿಯ ಗಣೇಶ ಮೂರ್ತಿಯನ್ನು ಕೂರಿಸಿ, ಮುಂಬಯಿಯಲ್ಲಿಯೇ ಅತೀ ಎತ್ತರದ ಗಣಪನಮೂರ್ತಿಯನ್ನು ಕೂರಿಸಿ ಮಾಡಲಾದ ಗಣೇಶೋತ್ಸವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ರೆಕಾರ್ಡ್ ಅನ್ನು ಯಾರೂ ಇದುವರೆಗೆ ಮುರಿದಿಲ್ಲ ಅನ್ನುವುದೇ ಇಲ್ಲಿಯ ಮತ್ತೊಂದು ವಿಶೇಷತೆ.

GBS ಸಮಾಜ್ ಗಣೇಶೋತ್ಸವ್ ಅಥವಾ ಜಿಬಿಎಸ್ ಸಮಾಜ ಗಣೇಶೋತ್ಸವ
ಮುಂಬಯಿಯಲ್ಲಿ ಆಚರಿಸುವ ಅತ್ಯಂತ ವಿಜೃಂಭಣೆಯ ಗಣೇಶೋತ್ಸವೆಂದರೆ GBS ಸಮಾಜ್ ಗಣೇಶೋತ್ಸವ್. ಇಲ್ಲಿ 24 ಕ್ಯಾರೆಟ್ ಚಿನ್ನವನ್ನು ಬಳಸಿ ಮಾಡಲಾದ ಆಸನದಲ್ಲಿ ಗಣೇಶನನ್ನು ಕೂರಿಸಲಾಗುವುದು.



Click it and Unblock the Notifications
