Just In
- 18 hrs ago
ವಾರ ಭವಿಷ್ಯ- ಡಿಸೆಂಬರ್ 8ರಿಂದ ಡಿಸೆಂಬರ್ 13ರ ತನಕ
- 20 hrs ago
ಭಾನುವಾರದ ದಿನ ಭವಿಷ್ಯ (08-12-2019)
- 1 day ago
ರುದ್ರಾಕ್ಷಿ ಮಾಲೆ ಧರಿಸುವವರು ಗಮನಿಸಲೇಬೇಕಾದ ಅಂಶಗಳಿವು
- 1 day ago
ಶನಿವಾರದ ದಿನ ಭವಿಷ್ಯ (07-12-2019)
Don't Miss
- News
Karnataka By-Election Results 2019 LIVE:ಎಲ್ಲರ ಚಿತ್ತ ಮತಎಣಿಕೆಯತ್ತ
- Sports
ಭಾರತ vs ವಿಂಡಿಸ್ ಟಿ20; ಚಾಂಪಿಯನ್ನರಿಗೆ ತಲೆಬಾಗಿದ ಟೀಮ್ ಇಂಡಿಯಾ
- Movies
26 ವರ್ಷ ವಯಸ್ಸಿನ ನವಾಜುದ್ದೀನ್ ಸಿದ್ಧಿಕಿ ಸಹೋದರಿ ನಿಧನ
- Finance
ಮಾರುತಿ ಸುಜುಕಿ ಉತ್ಪಾದನೆ ಒಂಬತ್ತು ತಿಂಗಳ ನಂತರ ಹೆಚ್ಚಳ
- Technology
ಏರ್ಟೆಲ್ V/S ಜಿಯೋ : ಯಾವುದು ಬೆಸ್ಟ್..? ಹೊಸ ಪ್ಲಾನ್ಗಳಲ್ಲಿ ಏನೇನಿದೆ..?
- Automobiles
ಟಾಟಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಲಾರಾದತ್ತಳ ಸೀರೆ ಸೊಬಗು
ಮಾಜಿ ವಿಶ್ವಸುಂದರಿ ಲಾರಾ ದತ್ತ ಚಾಬ್ರಾ 555ರೊಡಗೂಡಿ ಹೊಸ ಸೀರೆಗಳ ಕಲೆಕ್ಷನ್ ಬಿಡುಗಡೆಗೊಳಿಸಿದಳು. ಈಗ ಈಕೆ ಫ್ಯಾಷನ್ ಡಿಸೈನರ್ ಕೂಡ ಆಗಿದ್ದಾಳೆ. ದೆಹಲಿಯ ಚಾಬ್ರಾ 555ರೊಡಗೂಡಿ ಈಗ ಈಕೆ ತಾನು ವಿನ್ಯಾಸಗೊಳಿಸಿದ ಸೀರೆಗಳನ್ನು ಬಿಡುಗಡೆ ಮಾಡಿದ್ದಾಳೆ. ಈ ಸೀರೆಗಳ ಕಲೆಕ್ಷನ್ ಗೆ ಲಾರಾದತ್ತ-ಚಾಬ್ರಾ 555 ಎಂದು ಹೆಸರಿಡಲಾಗಿದೆ. ಈಕೆ ಹೀಗೆ ಫ್ಯಾಷನ್ ಡಿಸೈನರ್ ಆದ ಮೊದಲ ಸೆಲೆಬ್ರಿಟಿಯಲ್ಲ. ಈಕೆಗೂ ಮುಂಚೆ ಲಿಸಾ ರೈ ವಸ್ತ್ರ ವಿನ್ಯಾಸಕಿ ಸತ್ಯ ಪೌಲ್ ರೊಡಗೂಡಿ ಇಂತಹ ಪ್ರಯತ್ನ ಮಾಡಿದ್ದನ್ನು ಕಾಣಬಹುದು.
ಲಾರಾ ದತ್ತ ದೆಹಲಿಯಲ್ಲಿ ತಾನು ವಿನ್ಯಾಸಗೊಳಿಸಿದ ಸೀರೆಗಳ ಸಂಗ್ರಹವನ್ನು ಮೊದಲಿಗೆ ಅಕ್ಟೋಬರ್ ತಿಂಗಳಲ್ಲಿ ಭೋಪಾಲಿನಲ್ಲಿ ಪ್ರದರ್ಶಿಸಿದ್ದಳು. ಎರಡನೇ ಬಾರಿ ದೆಹಲಿಯಲ್ಲಿ ಚಾಬ್ರಾ 555 ರೊಡಗೂಡಿ ಪ್ರದರ್ಶಿಸಿದಳು. ಲಾರಾ ಹೇಳುವ ಪ್ರಕಾರ ಮೊದಲ ಬಾರಿಯ ಸೀರೆಗಳಿಗಿಂತ ಈ ಬಾರಿಯ ಸೀರೆಗಳು ಹೆಚ್ಚು ಸಾಂಪ್ರದಾಯಿಕವಾಗಿವೆ. ಈ ಪ್ರದರ್ಶನದಲ್ಲಿ ಲಾರಾ ತಾನೇ ವಿನ್ಯಾಸಗೊಳಿಸಿದ ಎರಡು ಬೇರೆ ಬೇರೆ ಸೀರೆಗಳನ್ನು ಉಟ್ಟು ಪ್ರದರ್ಶಿಸಿದಳು.
ನಾವಿಲ್ಲಿ ಲಾರಾ ಚರ್ಮದ ಬಣ್ಣದ ಕಾಟನ್ ಅಥವ ಟಸ್ಸರ್ ಸಿಲ್ಕ ಮಾದರಿಯ ಸೀರೆಯಲ್ಲಿ ದೆಹಲಿಯಲ್ಲಿ ಕಾಣಿಸಿಕೊಂಡಿದ್ದನ್ನು ಸೆರೆಹಿಡಿದಿದ್ದೇವೆ. ಈ ಸೀರೆ ಲಾರಾ ದತ್ತ-ಚಾಬ್ರಾ 555ರ ಸೀರೆಗಳ ಸಂಗ್ರಹದಲ್ಲಿದೆ. ಈ ಸೀರೆಯಲ್ಲಿನ ಕೆಂಪು ಅಂಚಿಗೆ ಚಿನ್ನದ ಬಣ್ಣದ ಕಸೂತಿ ಹಾಕಲಾಗಿತ್ತು. ಈ ಸೀರೆಗೆ ಆಕೆ ತೋಳಿಲ್ಲದ ರವಿಕೆ ತೊಟ್ಟಿದ್ದಳು. ಒಂದು ಪಕ್ಕಕ್ಕೆ ಇಳಿಬಿಟ್ಟಿದ್ದ ಫಿಶ್ ಟೈಲ್ ಕೇಶವಿನ್ಯಾಸ, ಮುತ್ತಿನ ಬಳೆಗಳು ಮತ್ತು ತೂಗಾಡುತ್ತಿದ್ದ ಜುಮುಕಿಗಳು ಆಕೆಯ ಅಲಂಕಾರಕ್ಕೆ ದೇಸಿ ಮೆರುಗನ್ನು ಕೊಟ್ಟಿತ್ತು.
ಭೋಪಾಲಿನಲ್ಲಿ ಆಕೆ ಮಸ್ಟರ್ಡ್ ಹಳದಿ ಮತ್ತು ಕೆಂಪು ಬಣ್ಣದ ಸೀರೆಯಲ್ಲಿ ಸುಂದರವಾಗಿ ಕಾಣುತ್ತಿದ್ದಳು. ಈ ಸೀರೆಯ ಕೊನೆಯಲ್ಲಿ ಮಸ್ಟರ್ಡ್ ಹಳದಿ ಬಣ್ಣದೊಂದಿಗೆ ಗೋಲಾಕಾರದ ಕಂದು ಬಣ್ಣದ ಪ್ರಿಂಟ್ ಗಳನ್ನು ಹೊಂದಿತ್ತು. ಗಾಢ ಕೆಂಪು ಬಣ್ಣದ ಸೆರಗಿಗೆ ನೆಟ್ ಡಿಸೈನ್ ಹೊಂದಿತ್ತು. ಇದರ ಮೇಲೆ ಚುಮ್ಕಿ ಕಸೂತಿ ಮಾಡಲಾಗಿತ್ತು. ಇದು ಸೀರೆಯನ್ನು ಮತ್ತಷ್ಟು ವರ್ಣಮಯವಾಗಿಸಿತ್ತು.
ಲಾರಾ ದತ್ತ ಕೆಂಪು ಮತ್ತು ಹಳದಿ ಬಣ್ಣದ ಸೀರೆಗೆ ಕಪ್ ಸ್ಲೀವ್ಸ್ ರವಿಕೆ ತೊಟ್ಟಿದ್ದಳು. ರವಿಕೆಯ ಕೊನೆಗೆ ಚುಮ್ಕಿ ಕಸೂತಿ ಮಾಡಲಾಗಿತ್ತು. ಬೈತಲೆ ತೆಗೆದ ಗುಂಗುರು ಕೂದಲನ್ನು ಸಡಿಲವಾಗಿ ಇಳಿಬಿಟ್ಟಿದ್ದಳು. ಇದಕ್ಕೆ ಮುತ್ತಿನ ಬಳೆಗಳನ್ನು ತೊಟ್ಟಿದ್ದಳು. ಇದರೊಂದಿಗೆ ಕೆಂಪು ಮತ್ತು ಚಿನ್ನದ ಬಣ್ಣದ ಕಿವಿಯೋಲೆಗಳನ್ನು ತೊಟ್ಟಿದ್ದಳು. ಇದು ಆಕೆಯ ಅಂದಕ್ಕೆ ಮೆರುಗು ನೀಡಿತ್ತು.
ಎರಡೂ ಸೀರೆಗಳಲ್ಲಿ ಲಾರಾ ದತ್ತ ಸುಂದರವಾಗಿ ಕಾಣುತ್ತಿದ್ದಳು. ಆದರೆ ದೆಹಲಿ ಮತ್ತು ಭೋಪಾಲ್ ಇವೆರಡನ್ನೂ ಹೋಲಿಸಿದಾಗ ನಮಗನ್ನಿಸಿತು ಲಾರಾ ದತ್ತ ತನ್ನ ಹೊಸ ಕಲೆಕ್ಷನ್ ನಲ್ಲಿ ಹೆಚ್ಚು ಸ್ಟೈಲಿಶ್ ಮತ್ತು ಸುಂದರವಾಗಿ ಕಾಣುತ್ತಿದ್ದಳು. ಚರ್ಮದ ಬಣ್ಣದ ಸೀರೆ ಕೆಂಪು ಅಂಚಿನೊಂದಿಗೆ ಹೆಚ್ಚು ಆಕರ್ಷಕ ಮತ್ತು ಸಮಕಾಲೀನ ಟ್ರೆಂಡ್ ಅನ್ನಿಸಿತು.