Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಶಿಕ್ಷಕರ ದಿನಾಚರಣೆ 2020: ಇತಿಹಾಸದಲ್ಲಿ ನಾವು ಕಾಣುವ ಪ್ರಸಿದ್ಧ ಶಿಕ್ಷಕರು
ನಲ್ಮೆಯ ಗುರುಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
ಪ್ರತಿಯೊಬ್ಬ ವ್ಯಕ್ತಿಯ ಬದುಕಿನಲ್ಲಿ ಶಿಕ್ಷನ ಪಾತ್ರ ಮಹತ್ವವಾದದು. "ನನಗೆ ಯಾವುದೇ ಗುರುಗಳ ಮಾರ್ಗದರ್ಶವಿಲ್ಲದೆ ಬೆಳೆದೆ "ಎಂದು ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಗುರುಗಳು ಅಂದರೆ ಬರೀ ವಿದ್ಯೆ ಕಲಿಸಿದವರು ಮಾತ್ರವಲ್ಲ, ಕೆಲವೊಮ್ಮೆ ಯಾವುದೋ ವ್ಯಕ್ತಿ ನಮಗೆ ಜೀವನದಲ್ಲಿ ಮಾರ್ಗದರ್ಶನ ನೀಡುವುದರ ಮೂಲಕ ನಮ್ಮ ಬದುಕಿನ ದಿಕ್ಕೆನ್ನೇ ಬದಲಾಯಿಸಿ ಬಿಡುತ್ತಾರೆ. ಅಂತಹ ಗುರುಗಳ ಋಣವನ್ನು ತೀರಿಸಲು ಸಾಧ್ಯವೇ?
ನಮ್ಮ ಇತಿಹಾಸದಲ್ಲಿ ಅನೇಕ ಪ್ರಸಿದ್ಧ ಗುರುಗಳನ್ನು ನೋಡುತ್ತೇವೆ. ಆ ಗುರುಗಳು ತಮ್ಮ ವಿಶಿಷ್ಟ ವ್ಯಕ್ತಿತ್ವದಿಂದ ಕೆಲವೇ ವಿದ್ಯಾರ್ಥಿಗಳಿಗೆ ಗುರುಗಳಾಗಿ ಉಳಿಯದೇ, ಭಾಷೆ, ಎಲ್ಲೆಗಳನ್ನು ಮೀರಿ ಇತರರಿಗೂ ಮಾರ್ಗದರ್ಶಕರಾದರು. ಆದ್ದರಿಂದಲೇ ಇಂದಿಗೂ ನಾವು ಅವರನ್ನು ಸ್ಮರಿಸುತ್ತೇವೆ. ಇತಿಹಾಸದಲ್ಲಿ ನಾವು ಕಂಡ ಪ್ರಮುಖ ಗುರುಗಳ ಪರಿಚಯ ನೋಡಿ ಇಲ್ಲಿದೆ:

ಡಾ. ಸರ್ವಪಲ್ಲಿ ರಾಧಾಕೃಷ್ಣ
ಈ ಗುರುಗಳ ಜನ್ಮದಿನವನ್ನೇ ನಾವಿಂದು ಶಿಕ್ಷಕರ ದಿನವೆಂದು ಆಚರಿಸುತ್ತಿದ್ದೇವೆ. ಭಾರತದ ಎರಡನೆಯ ರಾಷ್ಟ್ರಪತಿಯಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಆದರ್ಶ ಶಿಕ್ಷಕ, ವಿಶ್ವ ವಿಖ್ಯಾತ ತತ್ವಜ್ಞಾನಿಯಾಗಿದ್ದರು.

ಅಲೆಕ್ಸಾಂಡರ್ ಗ್ರಾಹಂ ಬೆಲ್
ಟೆಲಿಫೋನ್ ಕಂಡು ಹಿಡಿದ ಅಲೆಕ್ಸಾಂಡರ್ ಗ್ರಾಹಂ ಬೆಲ್ ಕೂಡ ಇತಿಹಾಸ ಕಂಡಂತಹ ಅತ್ಯುತ್ತಮವಾದ ಶಿಕ್ಷಕ ಕೂಡ ಹೌದು.

ಪಂಡಿತ್ ರವಿ ಶಂಕರ್
ಭಾರತದ ಸುಪ್ರಸಿದ್ಧ ಸಿತಾರ್ ವಾದಕರು. ತಮ್ಮ ಸಂಗೀತವನ್ನು ಸಾಗರದಾಚೆ ದಾಟಿಸಿ ಶೋತೃಗಳನ್ನು ಹೆಚ್ಚಿಸಿ ಸಂಗೀತ ಪ್ರೇಮಿಗಳ ಮನಸ್ಸಿನಲ್ಲಿ ಶಾಶ್ವತವಾಗಿ ಗುರುವಿನ ಸ್ಥಾನವನ್ನು ಪಡೆದರು.

ಸ್ಟಿಂಗ್
ದೊಡ್ಡ ಸ್ಟಾರ್ ಆಗುವ ಮೊದಲು ಇವರು ಕೂಡ ಲಂಡನ್ ನ ಕ್ಯಾಥರೀನ್ ಶಾಲೆಯಲ್ಲಿ ಶಿಕ್ಷಕರಾಗಿದ್ದರು.

ರಾಬರ್ಟ್ ಫ್ರಾಸ್ಟ್
ಪ್ರಸಿದ್ಧ ಕವಿಯಾಗಿ ಗುರುಸಿಕೊಂಡಿರುವ ರಾಬರ್ಟ್ ಫ್ರಾಸ್ಟ್ ಶಿಕ್ಷಕರೂ ಆಗಿದ್ದರು.

ಸಿಲ್ವಿಸ್ಟರ್ ಸ್ಟಲ್ಲೋನ್
ಅಮೇರಿಕದ ಪ್ರಸಿದ್ಧ ನಟರಾಗಿರುವ ಸಿಲ್ವಿಸ್ಟರ್ ಸ್ಟಲ್ಲೋನ್ ನಟನಾಗುವ ಮೊದಲು ದೈಹಿಕ ಶಿಕ್ಷಕರಾಗಿ ಕೆಲಸ ಮಾಡಿದ್ದರು.

ಸ್ಟೀಫನ್ ಕಿಂಗ್
50ಕ್ಕೂ ಅಧಿಕ ಪುಸ್ತಕಗಳನ್ನು ಬರೆದು ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿರುವ ಸ್ಟೀಫನ್ ಕಿಂಗ್ ಪ್ರಭಾವಿ ಲೇಖಕ ಮಾತ್ರವಲ್ಲ, ಶಿಕ್ಷಕರೂ ಹೌದು.



Click it and Unblock the Notifications
