For Quick Alerts
ALLOW NOTIFICATIONS  
For Daily Alerts

ಸ್ತ್ರೀಯರಲ್ಲಿ ಮಾತ್ರ ಕಂಡು ಬರುವ ಸ್ವಭಾವಗಳಿವು!

|

ಕೆಲವೊಂದು ಮಹಿಳೆಯರ ಹವ್ಯಾಸಗಳು ಪುರುಷರಿಗೆ ಸದಾ ಉತ್ತರ ಸಿಗದ ಪ್ರಶ್ನೆಯಾಗಿಯೇ ಇರುತ್ತದೆ. ಏಕೆ ಹೀಗೆ ಎಂಬ ಅವರ ಕುತೂಹಲಕ್ಕೆ ಉತ್ತರ ದೊರಕುವುದೇ ಇಲ್ಲ. ಹೌದು ಮಹಿಳೆಯರ ಈ ಕೆಲವು ಗುಣಗಳು ಬಂದು ಬಿಟ್ಟಿರುತ್ತದೆ. ಅದರಿಂದ ಹೊರಬರುವುದು ಕಷ್ಟದ ಕೆಲಸ. ಈ ರೀತಿ ಚಟಗಳನ್ನು ನೋಡಿ ಪುರುಷರು ಅರ್ಥವಾಗದೆ ಗೊಂದಲಕ್ಕೆ ಒಳಗಾಗುವ ಕೆಲವು ವಿಷಯಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಮಹಿಳೆಯರು ತಾವು ಏನನ್ನು ಸಿದ್ಧತೆ ಮಾಡಿಕೊಳ್ಳದೆ ಕೂಡ ಸಂಪೂರ್ಣವಾಗಿ ತಯಾರಾಗಬಹುದು ಎಂದು ನಂಬುತ್ತಾರೆ. ಆದರೆ ಹಾಗೆ ಮಾಡಲು ಅವರಿಂದ ಸಾಧ್ಯವಿಲ್ಲ ಅನ್ನುವುದು ವಾಸ್ತವ. ಎಲ್ಲವೂ ಸಿದ್ಧವಾಗಿರಬೇಕು, ಮೊದಲೇ ಯೋಜನೆ ಮಾಡಿರಬೇಕು. ನಿರೀಕ್ಷೆ ಮಾಡಿರಬೇಕು, ಹೀಗೆ ಮಹಿಳೆಯರು ತಮ್ಮದೇ ಆದ ವಿಚಿತ್ರ ಸ್ವಭಾವವನ್ನು ಹೊಂದಿರುತ್ತಾರೆ.

ಅವುಗಳಿಂದ ಹೊರಬರುವುದು ಬಹಳ ಕಷ್ಟ ಮತ್ತು ಎಷ್ಟೇ ಪ್ರಯತ್ನ ಪಟ್ಟರೂ ಹೊರಬರಲಾರಳು. ಕೆಲವೊಮ್ಮೆ ಇವರ ಈ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲಾಗದೆ ಪುರುಷರು ಪರದಾಡುವಂತೆ ಆಗುತ್ತದೆ. ಅದರಲ್ಲೂ ಮಹಿಳೆಯರ ಈ ಕೆಳಗಿನ ಸ್ವಭಾವಗಳ ಬಗ್ಗೆಯಂತೂ ಪುರುಷರು ವಿಪರೀತ ತಲೆ ಕೆಡಿಸಿಕೊಳ್ಳುತ್ತಾರೆ.

1.ಲೇಡಿಸ್ ರೂಂ ಗೆ ಹೋಗುವಾಗ ಗುಂಪು ಕಟ್ಟಿಕೊಂಡೇ ಹೋಗುತ್ತಾರೆ:

1.ಲೇಡಿಸ್ ರೂಂ ಗೆ ಹೋಗುವಾಗ ಗುಂಪು ಕಟ್ಟಿಕೊಂಡೇ ಹೋಗುತ್ತಾರೆ:

ನಿಜವಾಗಿಯೂ ಅಲ್ಲಿ ಏನಿರುತ್ತದೆ? ಪ್ರತಿ ಭಾರಿ ಲೇಡೀಸ್ ರೂಂ ಗೆ ಹೋಗುವಾಗ ಯಾರಾದರೂ ಒಬ್ಬರೇ ಹೊಗುವುದನ್ನು ನೋಡಿದ್ದೀರಾ? ಜೊತೆಗೆ ಗುಂಪು ಕಟ್ಟಿಕೊಂಡು ಹೋಗುವುದು ಒಂದು ರೂಢಿ. ಇದನ್ನು ನೋಡುವಾಗ ಪುರುಷರು ಅಲ್ಲಿ ಏನಿರಬಹುದು ಎಂದು ಸಾಕಷ್ಟು ತಲೆ ಕೆಡಿಸಿಕೊಳ್ಳುತ್ತಾರೆ.

2.ಸ್ವಲ್ಪ ಪೌಡರ್ ಮತ್ತೆ ಲಿಪ್ ಸ್ಟಿಕ್

2.ಸ್ವಲ್ಪ ಪೌಡರ್ ಮತ್ತೆ ಲಿಪ್ ಸ್ಟಿಕ್

ಹೆಚ್ಚಿನ ಮಹಿಳೆಯರು ತಮ್ಮ ಬ್ಯಾಗ್ ನಲ್ಲಿ ಯಾವಾಗಲು ಸಣ್ಣದೊಂದು ಮೇಕಪ್ ಕಿಟ್ ಇಟ್ಟುಕೊಂಡಿರುತ್ತಾರೆ. ಪಾರ್ಟಿಗಳಿಗೆ ಹೋಗುವಾಗ ಮೇಕಪ್ ಗೋಸ್ಕರ ಸಮಯ ವ್ಯರ್ಥ ಮಾಡಿಕೊಂಡಿದ್ದರೂ 15 ನಿಮಿಷ ಕಾರಿನಲ್ಲಿ ಹೋಗಿ ಪಾರ್ಟಿ ಹಾಲ್ ಗೆ ಪ್ರವೇಶಿಸುವ ಮೊದಲು ಮತ್ತೊಮ್ಮೆ ಪೌಡರ್, ಲಿಪ್ ಸ್ಟಿಕ್ ಹಚ್ಚಿಕೊಳ್ಳುತ್ತಾರೆ. ಪುರುಷರಿಗೆ ಇದು ಆಶ್ಚರ್ಯ ನೀಡುತ್ತದೆ ಮನೆಯಿಂದ ಹೊರಡುವಾಗ 1 ಗಂಟೆ ಮೇಕಪ್ ಗೋಸ್ಕರ ಸಮಯ ನೀಡಿದ್ದು ಈಗ ಮತ್ತೇಕೆ ಎಂಬುದಕ್ಕೆ ಉತ್ತರ ಸಿಗಲಾರದು.

3.ಗಿಗ್ಲಿಂಗ್

3.ಗಿಗ್ಲಿಂಗ್

ಎಲ್ಲಾ ಮಹಿಳೆಯರು ಮುಸಿಮುಸಿ ನಗುತ್ತಾರೆ.ಮತ್ತು ಅವರು ಆ ರೀತಿ ನಗುವುದನ್ನು ಇಷ್ಟಪಡುತ್ತಾರೆ.ಅದರಲ್ಲೂ ರೋಮಾಂಚನ ಕಿಲಕಿಲ ನಗು, ನನ್ನೊಂದಿಗೆ ಒಂದು ಗುಟ್ಟು ಇದೆ ಎಂಬಂತೆ ನಗು ಹೀಗೆ ವಿವಿಧ ರೀತಿಯಲ್ಲಿರುತ್ತದೆ. ಮಹಿಳೆಯರು ಮುಸಿಮುಸಿ ನಗುವುದು ಒಂದು ಹವ್ಯಾಸ ಆದರೆ ಕಾರಣವಿಲ್ಲದೆ ನಗುವುದಿಲ್ಲ. ಆದರೆ ಅದರ ಹಿಂದಿರುವ ಕಾರಣ ತಿಳಿಯಲಾರದೆ ಪುರುಷರು ಗೊಂದಲಕ್ಕೊಳಗಾಗುತ್ತಾರೆ.

4.ನಾನು ದಪ್ಪಗಿದ್ದೀನಾ?

4.ನಾನು ದಪ್ಪಗಿದ್ದೀನಾ?

ಮಹಿಳೆಯರು ಇದನ್ನು ಸಾಕಷ್ಟು ಭಾರಿ ಕೇಳುತ್ತಾರೆ. ಮಹಿಳೆಯರು ತಮ್ಮ ತೂಕ ಮತ್ತು ಲುಕ್ ಬಗ್ಗೆ ಹೆಚ್ಚು ಆಸಕ್ತರಾಗಿರುತ್ತಾರೆ. ಆದರೆ ಸಾಕಷ್ಟು ಭಾರಿ ಇದು ಪುರುಷರಿಗೆ ಕಷ್ಟ ತಂದಿಡುತ್ತದೆ.ಆದ್ದರಿಂದ ಮುಂದಿನ ಭಾರಿ ಅವರು ಹೀಗೆ ಕೇಳಿದಾಗ ಏನು ಉತ್ತರಿಸಬೇಕು ಎಂದು ಮೊದಲೇ ಯೋಚಿಸಿಡಿ.

5.ಫೇಸ್ ಪ್ಯಾಕ್

5.ಫೇಸ್ ಪ್ಯಾಕ್

ಹೌದು ಮಹಿಳೆಯರಿಗೆ ಫೇಸ್ ಪ್ಯಾಕ್ ತುಂಬಾ ಅವಶ್ಯಕ ಇದು ಅವರ ಕಾಂತಿಯನ್ನು ಹೆಚ್ಚಿಸುತ್ತದೆ ಆದರೆ ಯಾವೊಬ್ಬ ಪುರುಷನು ಕೂಡ ಇದರ ಬಗ್ಗೆ ಗಮನ ಹರಿಸುವುದೆ ಇಲ್ಲ. ಏಕೆಂದು ಅರ್ಥ ಮಾಡಿಕೊಳ್ಳುವುದೇ ಇಲ್ಲ.

6. ಔಟ್ ಫಿಟ್ ಪ್ರಯತ್ನಿಸಿ ಕೊನೆಯಲ್ಲಿ ಬೇರೆಯದನ್ನೇ ಕೊಳ್ಳುತ್ತಾರೆ!

6. ಔಟ್ ಫಿಟ್ ಪ್ರಯತ್ನಿಸಿ ಕೊನೆಯಲ್ಲಿ ಬೇರೆಯದನ್ನೇ ಕೊಳ್ಳುತ್ತಾರೆ!

ಮಹಿಳೆಯರೇ ಹೀಗೆ.ತಮ್ಮ ಕಪಾಟಿನಲ್ಲಿ ಇರುವ ಎಲ್ಲಾ ಡ್ರೆಸ್ ಗಳನ್ನೂ ಹಾಕಿ ನೋಡುತ್ತಾರೆ ಕೊನೆಯಲ್ಲಿ ತಮ್ಮ ಜೊತೆ ಡ್ರೆಸ್ ಇಲ್ಲ ಎಂದು ತಕ್ಷಣ ಶಾಪಿಂಗ್ ಹೋಗಿ ಹೊಸದನ್ನು ಕೊಂಡುಕೊಳ್ಳಬೇಕು, ಅದಕ್ಕೆ ಮ್ಯಾಚಿಂಗ್ ಕೊಳ್ಳಬೇಕೆಂದು ಬಯಸುತ್ತಾರೆ.2 ಜೊತೆ ಶರ್ಟ್ ಮತ್ತು ಪ್ಯಾಂಟ್ ನಲ್ಲಿ ವಾರ ಪೂರ್ತಿ ಕಳೆಯುವ ಪುರುಷರಿಗೆ ಇದು ಆಶ್ಚರ್ಯವಾಗಿ ಕಾಣುತ್ತದೆ ಮತ್ತು ಅರ್ಥವಾಗುವುದೇ ಇಲ್ಲ.

7.ಕ್ಲಚ್ಚಸ್ (ಚಿಕ್ಕ ಪರ್ಸ್)

7.ಕ್ಲಚ್ಚಸ್ (ಚಿಕ್ಕ ಪರ್ಸ್)

ಕ್ಲಚ್ಚಸ್ ನಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುವುದು ಕೇವಲ ಲಿಪ್ ಸ್ಟಿಕ್ ಮತ್ತು ಕೀ ಉಳಿದ ಬಾಚಣಿಕೆ, ಫೋನ್, ಪೌಡರ್,ಟಿ ಶ್ಯೂ ಇವುಗಳನ್ನೆಲ್ಲ ಕಾರಿನಲ್ಲೋ ಅಥವಾ ಗಂಡನ ಬ್ಯಾಗಿನಲ್ಲೋ ಹಾಕಿಡುತ್ತಾರೆ.ಆದರೂ ಕ್ಲಚ್ಚಸ್ ಅನ್ನು ಕೈಬಿಡದಿರುವುದರ ಬಗ್ಗೆ ಪುರುಷರಿಗೆ ಕುತೂಹಲ.

 8.ದೊಡ್ಡದೊಂದು ಬ್ಯಾಗ್

8.ದೊಡ್ಡದೊಂದು ಬ್ಯಾಗ್

ಮಹಿಳೆಯರಿಗೆ ದೊಡ್ಡ ಚೀಲವೇ ಬೇಕು. ಆದರೆ ತಾಜ್ ಮಹಲ್ ಹಿಡಿಸುವಷ್ಟು ದೊಡ್ಡ ಬ್ಯಾಗ್ ಪ್ರತಿಭಾರಿ ಜೊತೆಗೆ ಬೇಕಾ? ಬಹುಷಃ ಅವಶ್ಯಕತೆ ಇಲ್ಲ.

9.ಪಾದ ಮತ್ತು ಉಗುರಿನ ಲೋಶನ್

9.ಪಾದ ಮತ್ತು ಉಗುರಿನ ಲೋಶನ್

ಮುಖಕ್ಕೆ, ಕೂದಲಿಗೆ ಕ್ರೀಂ ಬಳಸುವುದು ಸೂಕ್ತ ಆದರೆ ಪಾದಕ್ಕೆ,ಉಗುರಿಗೆ ಹೀಗೆ ಎಲ್ಲದಕ್ಕೂ ಪ್ರತ್ಯೇಕ ಕ್ರೀಂ ಬಳಸುವುದರ ಬಗ್ಗೆ ಪುರುಷರಿಗೆ ಅಸಮಾಧಾನ. ಪಾದ ಮತ್ತು ಉಗುರುಗಳು ದೇಹದ ಒಂದು ಭಾಗವಷ್ಟೇ ಅದಕ್ಕೆ ಏಕೆ ಪ್ರತ್ಯೇಕ ಕ್ರೀಂ ಎಂಬುದು ಪುರುಷರ ಪ್ರಶ್ನೆ.

10.ರಿಬ್ಬನ್

10.ರಿಬ್ಬನ್

ಮಹಿಳೆಯರಿಗೆ ರಿಬ್ಬನ್ ಎಂದರೆ ಬಹಳ ಇಷ್ಟ. ಅವರು ಅದನ್ನು ಪೇಪರ್ ಸುತ್ತಲು, ತಲೆಗೆ ಕಟ್ಟಲು, ಗಿಫ್ಟ್ ಪ್ಯಾಕ್ ಗಳಿಗೆ ಅಲಂಕರಿಸಲು, ಟೋಪಿ ಅಲಂಕರಿಸಲು ಎಲ್ಲದಕ್ಕೂ ಬಳಸುತ್ತಾರೆ. ಆದ್ದರಿಂದ ರಿಬ್ಬನ್ ಸಂಗ್ರಹಣೆ ಎಂದರೆ ಮಹಿಳೆಯರಿಗೆ ಅಚ್ಚುಮೆಚ್ಚು ಅದು ಅವರ ಚಟುವಟಿಕೆಗೆ ಸಹಕರಿಸುವುದು.

11.ಗ್ರೀಟಿಂಗ್ ಕಾರ್ಡ್

11.ಗ್ರೀಟಿಂಗ್ ಕಾರ್ಡ್

ಇದು ಇ-ಕಾರ್ಡ್ ಮತ್ತು ಮೆಸೇಜ್ ಗಳ ಕಾಲ. ಆದರೆ ಮಹಿಳೆಯರು ಗ್ರೀಟಿಂಗ್ ಕಾರ್ಡ್ ನಿಂದ ಹೊರಬರಲಾರರು. ಹುಟ್ಟಿದ ಹಬ್ಬ,ಬೇರೆ ಯಾವುದೇ ಹಬ್ಬವಾಗಲಿ ಗ್ರೀಟಿಂಗ್ ಕಾರ್ಡ್ ಜೊತೆಗಿರಬೇಕು ಯಾಕೆ ಎಂದು ಪುರುಷರಿಗೆ ಅರ್ಥವಾಗುವುದಿಲ್ಲ.

12.ಸ್ವಚ್ಚಗೊಳಿಸುವುದು

12.ಸ್ವಚ್ಚಗೊಳಿಸುವುದು

ಮಹಿಳೆಯರಿಗೆ ಸ್ವಚ್ಚಗೊಳಿಸುವುದು ಎಂದರೆ ಇಷ್ಟ ಸ್ವಚ್ಚಗೊಳಿಸಿ ನಂತರ ಎಲ್ಲವನ್ನು ವ್ಯವಸ್ಥಿತವಾಗಿ ಜೋಡಿಸಿಡುವುದು. ಒಮ್ಮೆ ಒರೆಸಿದ ಕನ್ನಡಿಯನ್ನು ಮತ್ತೆ ಒರೆಸುವುದು ಇದು ಪುರುಷರಿಗೆ ಏಕೆ ಎಂದು ಅರ್ಥವಾಗುವುದಿಲ್ಲ !

13.ಪಾತ್ರೆಗಳು ಮತ್ತು ಚಾಕುಕತ್ತರಿಗಳ ಸಕರಣೆಗಳು

13.ಪಾತ್ರೆಗಳು ಮತ್ತು ಚಾಕುಕತ್ತರಿಗಳ ಸಕರಣೆಗಳು

ಮಹಿಳೆಯರಿಗೆ ಅಡುಗೆ ಮನೆ ವಸ್ತುಗಳೆಂದರೆ ಬಹಳ ಇಷ್ಟ.ಚಾಕು, ಸಣ್ಣ ಪ್ಲೇಟ್ , ತರಕಾರಿ ಹೆಚ್ಚುವ ಸಲಕರಣೆಗಳು ಹೀಗೆ ಎಷ್ಟು ತುಂಬಿದರೂ ಸಾಲದು. ಪುರುಷ ಇದನ್ನು ನೋಡಿ ಯಾವ ಪ್ಲೇಟ್ ಯಾವ ಚಮಚ ಊಟಕ್ಕೆ ಬಳಸಲಿ ಎನ್ನುವಷ್ಟರಲ್ಲಿ ಹಸಿವು ನೀಗಿರುತ್ತದೆ.

14.ಬಟ್ಟೆ ಬದಲಾಯಿಸುವುದು

14.ಬಟ್ಟೆ ಬದಲಾಯಿಸುವುದು

ಮಹಿಳೆಯರು ಬಟ್ಟೆ ಬದಲಾಯಿಸುತ್ತಿರುವುದನ್ನು ಇಷ್ಟ ಪಡುತ್ತಾರೆ. ಪ್ರತಿದಿನದ ಜೀವನದಲ್ಲಿ ಸಾಧ್ಯವಾದರೆ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಹೀಗೆ ಬಟ್ಟೆ ಬದಲಾಯಿಸಿ ಹೊಸ ಲುಕ್ ನೀಡಲು ತಯಾರಿರುತ್ತಾರೆ. ಬಜೆಟ್ ಸಮಸ್ಯೆ ಇವುಗಳಿಂದ ಅವರನ್ನು ತಡೆದು ಹಿಡಿದಿರಬಹುದು.

15.ಹೌದು ಎಂದರೆ ಅಲ್ಲ.ಅಲ್ಲ ಎಂದರೆ ಹೌದು!

15.ಹೌದು ಎಂದರೆ ಅಲ್ಲ.ಅಲ್ಲ ಎಂದರೆ ಹೌದು!

ಪ್ರತಿಯೊಬ್ಬ ಮಹಿಳೆಯು ಹೀಗೆ ಹೌದು ಎಂಬಲ್ಲಿ ಇಲ್ಲ ಎಂದಿರುತ್ತಾರೆ.ಯಾವುದೋ ಕೆಲಸಕ್ಕೆ ಒಪ್ಪಿಗೆ ಸೂಚಿಸಿರುತ್ತಾರೆ ಆದರೆ ಅದರ ಒಳಾರ್ಥ ಬೇಡ ಎಂದಾಗಿರುತ್ತದೆ.ಇದು ಪುರುಷರಿಗೆ ಅರ್ಥವಾಗದ ವಿಷಯ.

16.ಫ್ರೆನಿಮೀಸ್

16.ಫ್ರೆನಿಮೀಸ್

ಹೀಗೆಂದರೆ ಏನು ಗೊತ್ತ? ಒಬ್ಬರನ್ನೊಬ್ಬರು ಭೇಟಿ ಆದಾಗ ಅಪ್ಪಿಕೊಳ್ಳುತ್ತಾರೆ ಆಚೆ ಹೋದ ನಂತರ ಅವರನ್ನು ತೆಗಳುತ್ತಾರೆ.ಇದು ಪುರುಷರಿಗೆ ಅರ್ಥವಾಗುವುದಿಲ್ಲ ಏಕೆಂದರೆ ಪುರುಷರಿಗೆ ಗೆಳೆಯನಾದರೆ ಗೆಳೆಯ ಇಲ್ಲದಿದ್ದರೆ ಇಲ್ಲ ಅಷ್ಟೇ ಅವರ ಸಂಬಂಧವಾಗಿರುತ್ತದೆ.

17.ಟ್ರಿಕ್ ಪ್ರಶ್ನೆಗಳು

17.ಟ್ರಿಕ್ ಪ್ರಶ್ನೆಗಳು

ನಿಮ್ಮವಳಿಗೆ ನೀವೆಂದರೆ ಇಷ್ಟವಾಗಿರುತ್ತೀರಿ ಅವಳು ಸದಾ ನೀವು ಅವಳನ್ನೇ ನೋಡಬೇಕು ಎಂದು ಬಯಸುತ್ತಾಳೆ ಆದರೂ ಬೇರೆಯವರನ್ನು ನೀವು ನೋಡಿದರೆ ಸಹಿಸಲಾರದೆ ಅವಳು ಚನ್ನಾಗಿದ್ದಾಳ ಎಂದು ಕೇಳುತ್ತಾಳೆ. ಇದು ಟ್ರಿಕ್ ಪ್ರಶ್ನೆ. ಕೊನೆಗೆ ನೀವು ಅವಳನ್ನು ನೋಡಿದ್ದರ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸುತ್ತಾಳೆ ಇದು ಗಂಡಸರಿಗೆ ಅರ್ಥವಾಗದ ಪ್ರಶ್ನೆಯಾಗುತ್ತದೆ.

18.ಶಾಪಿಂಗ್

18.ಶಾಪಿಂಗ್

ಇದು ಶತಮಾನಗಳಿಂದ ನಡೆದು ಬರುತ್ತಿರುವ ಕೆಲಸ ಶಾಪಿಂಗ್ ಎಂದರೆ ಮಹಿಳೆಯರಿಗೆ ಇಷ್ಟ ಎಂಬುದನ್ನು ಪುರುಷ ಈಗ ಒಪ್ಪಿಕೊಂಡು ಬಿಟ್ಟಿದ್ದಾನೆ.ಆದರು ನೀವು ಗಮನಿಸಿದರೆ ಪುರುಷರು ಮಹಿಳೆಯರಿಗೆ ಏಕಿಷ್ಟು ಶಾಪಿಂಗ್ ಹುಚ್ಚು ಎಂಬುದಕ್ಕೆ ಉತ್ತರ ಸಿಗದೇ ಕಂಗಾಲಾಗುತ್ತಾನೆ.

19.ಪ್ರಶ್ನೆ ಕೇಳುವುದು ಮತ್ತು ಉತ್ತರಕ್ಕಾಗಿ ಹುಡುಕುವುದು

19.ಪ್ರಶ್ನೆ ಕೇಳುವುದು ಮತ್ತು ಉತ್ತರಕ್ಕಾಗಿ ಹುಡುಕುವುದು

ಮಹಿಳೆಯರಿಗೆ ಪ್ರಶ್ನೆ ಕೇಳುವುದೆಂದರೆ ಇಷ್ಟ.ಅವರಿಗೆ ಉತ್ತರ ಗೊತ್ತಿದ್ದರೂ ಕೂಡ ಮತ್ತೆ ಮತ್ತೆ ಅದೇ ಪ್ರಶ್ನೆ ಕೇಳುತ್ತಾರೆ. ಉತ್ತರ ಹೇಳುವವರೆಗೂ ಬಿಡದೆ ಪೀಡಿಸುತ್ತಾರೆ. ಇದು ಮಹಿಳೆಯ ಮತ್ತೊಂದು ಹವ್ಯಾಸ.

20.ಗಾಸಿಪ್

20.ಗಾಸಿಪ್

ಪುರುಷರೂ ಗಾಸಿಪ್ ಮಾಡುತ್ತಾರೆ. ಆದರೆ ಅವರಿಗೆ ಮಹಿಳೆಯರ ಗಾಸಿಪ್ ಬಗ್ಗೆ ಬಹಳ ಆಶ್ಚರ್ಯವಾಗುತ್ತದೆ.24 ಗಂಟೆ,7 ದಿವಸಗಳೂ ಗಾಸಿಪ್ ಮಾಡಿಯೇ ಕಾಲ ಕಳೆಯುತ್ತಾರೆ.ಇದು ತಲತಲಾಂತರದಿಂದ ಬಂದ ಹವ್ಯಾಸ. ಇದೊಂದು ವಿಕಾಸಾತ್ಮಕ ಹವ್ಯಾಸ ಇದರ ಬಗ್ಗೆ ಪುರುಷರು ತಲೆಕೆಡಿಸಿಕೊಂಡು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಲಾರರು.

English summary

20 Habits of Women Men Don’t Get

Women like to believe and like you to believe that they can get along perfectly well without a plan. But the truth is they cannot. Everything has to be organised, arranged, expected, and planned.
X
Desktop Bottom Promotion